FIFA World Cup 2022: ಸೆಮೀಸ್​ನಲ್ಲಿ ಮೊರಕ್ಕೊಗೆ ಸೋಲು: ಫಿಫಾ ಫೈನಲ್​ನಲ್ಲಿ ಫ್ರಾನ್ಸ್-ಅರ್ಜೆಂಟೀನಾ ಸೆಣೆಸಾಟ

France vs Morocco: ಅಂತಿಮ ಹಂತದಲ್ಲಿ ಮೊರಾಕ್ಕೊ ಎಷ್ಟೇ ಪ್ರಯತ್ನ ಪಟ್ಟರೂ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಫ್ರಾನ್ಸ್ 2-0 ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ.

FIFA World Cup 2022: ಸೆಮೀಸ್​ನಲ್ಲಿ ಮೊರಕ್ಕೊಗೆ ಸೋಲು: ಫಿಫಾ ಫೈನಲ್​ನಲ್ಲಿ ಫ್ರಾನ್ಸ್-ಅರ್ಜೆಂಟೀನಾ ಸೆಣೆಸಾಟ
france vs morocco
Follow us
TV9 Web
| Updated By: Vinay Bhat

Updated on:Dec 15, 2022 | 7:57 AM

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ (FIFA World Cup) ಅಂತಿಮ ಹಂತದತ್ತ ತಲುಪುತ್ತಿದೆ. ಬುಧವಾರ ಅಲ್​ ಬಯಾತ್ ಸ್ಟೇಡಿಂ​ನಲ್ಲಿ ನಡೆದ ದ್ವಿತೀಯ ಸೆಮಿ ಫೈನಲ್​ ಹಣಾಹಣಿಯಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲ್​ಗಳಿಂದ ಮಣಿಸಿದ ಫ್ರಾನ್ಸ್​ (France vs Morocco) ತಂಡ ಪ್ರಶಸ್ತಿ ಸುತ್ತಿಗೇರಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಜಯ ಸಾಧಿಸಿದ ಪರಿಣಾಮ ಫೈನಲ್​ನಲ್ಲಿ ಅರ್ಜೆಂಟೀನಾ (France vs Argentina) ವಿರುದ್ಧ ಕಪ್​ಗಾಗಿ ಹೋರಾಟ ನಡೆಸಲಿದೆ. ಸೆಮೀಸ್​ ಪಂದ್ಯದಲ್ಲಿ ಫ್ರಾನ್ಸ್ ಪರ ಥಿಯೊ ಹೆರ್ನಾಂಡೀಸ್ ಮತ್ತು ಬದಲಿ ಆಟಗಾರನಾಗಿ ಬಂದ ರಂಡಲ್ ಕೊಲೊ ಮೌನಿ ತಲಾ ಒಂದು ಗೋಲು ಸಿಡಿಸಿ ಗೆಲುವಿಗೆ ಕಾರಣರಾದರು.

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಫ್ರಾನ್ಸ್ ಪಂದ್ಯದ 5ನೇ ನಿಮಿಷದಲ್ಲೇ ಮೊದಲ ಗೋಲು ಗಳಿಸಿತು. ಫ್ರಾನ್ಸ್ ಪರ ಥಿಯೋ ಹೆರ್ನಾಂಡೆಜ್ ಮೊದಲು ಗೋಲು ಗಳಿಸಿದರು. ಬಳಿಕ ಮೊರಾಕ್ಕೊ ಸಾಕಷ್ಟು ಬಾರಿ ಗೋಲು ಗಳಿಸಿದರು ಪ್ರಯತ್ನಿಸಿದರೂ ಫ್ರಾನ್ಸ್ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ಮೊರಾಕ್ಕೊಗೆ ಗೋಲು ಗಳಿಸಲು ಅವಕಾಶ ನೀಡಲಿಲ್ಲ. ಪಂದ್ಯ 1-0 ಅಂತರದಲ್ಲಿ ಫ್ರಾನ್ಸ್ ಪರವಾಗಿಯೇ ಅಂತಿಮ ಹಂತದತ್ತ ಸಾಗುತ್ತಲೇ ಫ್ರಾನ್ಸ್ ಪರ ಪರ್ಯಾಯ ಆಟಗಾರನಾಗಿ ಕಣಕ್ಕಿಳಿದ ರಾಂಡಲ್ ಕೊಲೊ ಮುವಾನಿ ಗೋಲು ಗಳಿಸಿ ಫ್ರಾನ್ಸ್ ಗೆಲುವು ಸ್ಪಷ್ಟಪಡಿಸಿದರು.

IND vs BAN: 20 ಓವರ್ ಆಗುವಷ್ಟರಲ್ಲೇ ತಮ್ಮ ಇನ್ನಿಂಗ್ಸ್ ಮುಗಿಸಿದ ಗಿಲ್, ರಾಹುಲ್, ಕೊಹ್ಲಿ!

ಇದನ್ನೂ ಓದಿ
Image
Kane Williamson: ನ್ಯೂಜಿಲ್ಯಾಂಡ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಕೇನ್ ವಿಲಿಯಮ್ಸನ್
Image
ICC Rankings: ಐಸಿಸಿ ರ‍್ಯಾಂಕಿಂಗ್‌ನಲ್ಲಿ ಬರೋಬ್ಬರಿ 117 ಸ್ಥಾನ ಜಿಗಿದ ಇಶಾನ್ ಕಿಶನ್! ಕೊಹ್ಲಿಗೂ ಲಾಭ
Image
ಐಪಿಎಲ್​ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?
Image
IND vs BAN Day 1 Report: ಶತಕ ವಂಚಿತ ಪೂಜಾರ; ಶ್ರೇಯಸ್ ಮೇಲೆ ಭಾರತದ ಭರವಸೆ

ಅಂತಿಮ ಹಂತದಲ್ಲಿ ಮೊರಾಕ್ಕೊ ಎಷ್ಟೇ ಪ್ರಯತ್ನ ಪಟ್ಟರೂ ಗೋಲಿನ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಫ್ರಾನ್ಸ್ 2-0 ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಬಲಿಷ್ಠ ತಂಡಗಳಿಗೆ ಮಣ್ಣು ಮುಕ್ಕಿಸಿದ್ದ ಮೊರಾಕ್ಕೊ ತಂಡ ಸೆಮಿ ಫೈನಲ್​ ಹಣಾಹಣಿಯಲ್ಲಿ ಹೀನಾಯ ಸೋಲು ಅನುಭವಿಸಿತು. ಇದೀಗ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಲಿಯೋನಲ್ ಮೆಸ್ಸಿ ನೇತೃತ್ವದ ಬಲಿಷ್ಟ ತಂಡ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.

ಫೈನಲ್‌ ಪಂದ್ಯದ ಬಳಿಕ ಮೆಸ್ಸಿ ವಿದಾಯ:

ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್‌ ಮೆಸ್ಸಿ ಅವರು ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ನೀಡುವ ಬಗ್ಗೆ ಸೂಚನೆ ನೀಡಿದ್ದಾರೆ. ಭಾನುವಾರ ನಡೆಯುವ ಫೈನಲ್‌ ಪಂದ್ಯ ತಮ್ಮ ಪಾಲಿಗೆ ಕೊನೆಯದು ಎಂದು ಸ್ವತಃ ಮೆಸ್ಸಿ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ”ಅರ್ಜೆಂಟೀನಾ ತಂಡ ಫೈನಲ್‌ ತಲುಪಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಭಾನುವಾರ ಫೈನಲ್‌ ಪಂದ್ಯದ ಬಳಿಕ ತಮ್ಮ ಫಿಫಾ ವಿಶ್ವಕಪ್‌ ಟೂರ್ನಿಯ ಪಯಣ ಅಂತ್ಯವಾಗಲಿದೆ. ವಿಶ್ವಕಪ್‌ ಗೆಲ್ಲಲು ಈ ಬಾರಿ ನಮಗೆ ಅತ್ಯುತ್ತಮ ಅವಕಾಶವಿದೆ. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಗಳು ಒಳ್ಳೆಯ ಸಂಗತಿ. ಆದರೆ, ಒಂದು ಗುಂಪಾಗಿ ಈ ಟೂರ್ನಿಯಲ್ಲಿ ಸಾಧನೆ ಮಾಡುವುದು ತುಂಬಾ ಮುಖ್ಯ. ಇದು ಅತ್ಯಂತ ಅದ್ಭುತವಾದ ಸಂಗತಿಯಾಗಿರುತ್ತದೆ. ಪ್ರಶಸ್ತಿ ಗೆಲ್ಲಲು ನಮಗೆ ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಕಠಿಣ ಪೈಪೋಟಿ ನೀಡಿದ ಬಳಿಕ ನಮಗೆ ನಮ್ಮ ಕನಸು ನನಸು ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ ಸಿಕ್ಕಿದೆ,” ಎಂದು ಮೆಸ್ಸಿ ಹೇಳಿಕೊಂಡಿದ್ದಾರೆ.

ಲಿಯೊನೆಲ್ ಮೆಸ್ಸಿ ಪಾಲಿಗೆ ಇದು ಐದನೇ ಫಿಫಾ ವಿಶ್ವಕಪ್‌ ಟೂರ್ನಿ. ಆ ಮೂಲಕ ಅರ್ಜೆಂಟೀನಾ ಪರ ಅತಿ ಹೆಚ್ಚು ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಮೊದಲ ಆಟಗಾರ ಎಂಬ ಕೀರ್ತಿಗೆ ಮೆಸ್ಸಿ ಭಾಜನರಾಗಿದ್ದಾರೆ. ಇದರೊಂದಿಗೆ ಡಿಯಾಗೊ ಮಾರಡೋನಾ ಹಾಗೂ ಜೇವಿಯರ್‌ ಅವರನ್ನು ಅರ್ಜೆಂಟೀನಾ ನಾಯಕ ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ. ಇದೀಗ ಕೊನೆಯ ವಿಶ್ವಕಪ್​ನ ಫೈನಲ್ ಕಾದಾಟದಲ್ಲಿ ಮೆಸ್ಸಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಇಡೀ ವಿಶ್ವವೇ ತುದಿಗಾಲಿನಲ್ಲಿ ನಿಂತಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 am, Thu, 15 December 22

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ