IND vs BAN Day 1 Report: ಶತಕ ವಂಚಿತ ಪೂಜಾರ; ಶ್ರೇಯಸ್ ಮೇಲೆ ಭಾರತದ ಭರವಸೆ

IND vs BAN Day 1 Report: ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು 6 ವಿಕೆಟ್ ನಷ್ಟಕ್ಕೆ 278 ರನ್​ ಗಳಿಸುವುದರೊಂದಿಗೆ ಅಂತ್ಯಗೊಳಿಸಿದೆ.

IND vs BAN Day 1 Report: ಶತಕ ವಂಚಿತ ಪೂಜಾರ; ಶ್ರೇಯಸ್ ಮೇಲೆ ಭಾರತದ ಭರವಸೆ
Shreyas Iyer and Cheteshwar Pujara
Follow us
TV9 Web
| Updated By: ಪೃಥ್ವಿಶಂಕರ

Updated on:Dec 14, 2022 | 5:11 PM

ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ (Cheteshwar Pujara and Shreyas Iyer) ಅವರ ಅತ್ಯುತ್ತಮ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ಕ್ರಿಕೆಟ್ ತಂಡ, ಬಾಂಗ್ಲಾದೇಶ (India Vs Bangladesh) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟವನ್ನು 6 ವಿಕೆಟ್ ನಷ್ಟಕ್ಕೆ 278 ರನ್​ ಗಳಿಸುವುದರೊಂದಿಗೆ ಅಂತ್ಯಗೊಳಿಸಿದೆ. ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಹಂಗಾಮಿ ನಾಯಕ ಕೆಎಲ್ ರಾಹುಲ್ (KL Rahul) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ತಂಡಕ್ಕೆ ಬಯಸಿದ ಆರಂಭ ಸಿಗದಿದ್ದರೂ, ಅಯ್ಯರ್ ಮತ್ತು ಪೂಜಾರ ಅವರ ಶತಕದ ಜೊತೆಯಾಟದಿಂದ ಟೀಂ ಇಂಡಿಯಾ ಸಂಕಷ್ಟದಿಂದ ಪಾರಾಗಿದೆ. ಆದರೆ, ಬಾಂಗ್ಲಾದೇಶ 85 ಮತ್ತು 90ನೇ ಓವರ್‌ಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತವನ್ನು ಮತ್ತೆ ಒತ್ತಡಕ್ಕೆ ಸಿಲುಕಿಸಿದೆ.

2. ದಿನದಾಟ ಅಂತ್ಯ

ದಿನದಾಟದ ಅಂತ್ಯದವರೆಗೂ ಅಯ್ಯರ್ 82 ರನ್ ಗಳಿಸಿ ಆಡುತ್ತಿರುವುದು ತಂಡಕ್ಕೆ ಕೊಂಚ ನಿಟ್ಟುಸಿರು ಬಿಡುವಂತ್ತಾಗಿದೆ. ದಿನದ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ (14) ಅವರನ್ನು ಮೆಹೆದಿ ಹಸನ್ ಮಿರಾಜ್ ಔಟ್ ಮಾಡುವ ಮೂಲಕ ತಂಡಕ್ಕೆ ಆರನೇ ಆಘಾತ ನೀಡಿದರು. ಅಕ್ಷರ್ ಪಟೇಲ್​ಗೂ ಮುನ್ನ 90 ರನ್ ಗಳಿಸಿದ ಪೂಜಾರ ತೈಜುಲ್ ಇಸ್ಲಾಂಗೆ ಬಲಿಯಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 203 ಎಸೆತಗಳನ್ನು ಎದುರಿಸಿದ ಪೂಜಾರ 11 ಬೌಂಡರಿ ಸಹಿತ 90 ರನ್ ಬಾರಿಸಿದರು.ಪೂಜಾರ ಹೊರತುಪಡಿಸಿ ತಂಡದ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು.

IND vs BAN: 4000 ರನ್; ಸಿಕ್ಸರ್​ಗಳ ಅರ್ಧಶತಕ ಪೂರೈಸಿದ ರಿಷಬ್ ಪಂತ್..!

3. ಬೇಗನೆ ವಿಕೆಟ್ ಒಪ್ಪಿಸಿದ ಕ್ಯಾಪ್ಟನ್

ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ನೀಡಲಿಲ್ಲ. ತಂಡದ ಸ್ಕೋರ್ 41 ರನ್ ಆಗಿದ್ದಾಗ 20 ರನ್ ಗಳಿಸಿದ ಗಿಲ್, ತೈಜುಲ್ ಇಸ್ಲಾಂಗೆ ಬಲಿಯಾದರೆ, 22 ರನ್ ಗಳಿಸಿದ ರಾಹುಲ್ ಕಲೀದ್ ಅಹ್ಮದ್​ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ವಿಕೆಟ್ ಬಳಿಕ ಬಂದ ವಿರಾಟ್ ಕೊಹ್ಲಿ ಕೇವಲ ಒಂದು ರನ್​ ಗಳಿಸಿ ತೈಜುಲ್‌ಗೆ ಬಲಿಯಾದರು.

ಕೊಹ್ಲಿ ವಿಕೆಟ್ ಬಳಿಕ ನಾಲ್ಕನೇ ವಿಕೆಟ್​ಗೆ ಪೂಜಾರ ಜೊತೆಗೂಡಿದ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಪಂತ್​ಗೆ ಸಾಥ್ ನೀಡುವ ಸಲುವಾಗಿ ಪಾಜಾರ ತಾಳ್ಮೆಯ ಆಟಕ್ಕೆ ಮುಂದಾದರೆ, ಇತ್ತ ಪಂತ್ ಹೊಡಿಬಡಿ ಆಟಕ್ಕೆ ಮುಂದಾಗಿ ಅರ್ಧಶತಕದಂಚಿನಲ್ಲಿ ಎಡವಿದರು. ಈ ಇನ್ನಿಂಗ್ಸ್​ನಲ್ಲಿ 46 ಎಸೆತಗಳನ್ನು ಎದುರಿಸಿದ ಪಂತ್ 2 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 45 ರನ್ ಚಚ್ಚಿದರು.

4. ಪೂಜಾರ- ಅಯ್ಯರ್ ಶತಕದ ಜೊತೆಯಾಟ

ಪಂತ್ ವಿಕೆಟ್ ಬಳಿಕ ಜೊತೆಯಾದ ಅಯ್ಯರ್ ಮತ್ತು ಪೂಜಾರ ಶತಕದ ಜೊತೆಯಾಟವನ್ನಾಡಿದರು. ಇಬ್ಬರೂ ಬಾಂಗ್ಲಾದೇಶದ ಬೌಲರ್‌ಗಳ ಮುಂದೆ ತಾಳ್ಮೆಯಿಂದ ಬ್ಯಾಟ್ ಬೀಸಿ ಅರ್ಧಶತಕ ಪೂರೈಸಿದರು. ಇಬ್ಬರೂ 112 ರನ್‌ಗಳ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 261 ರನ್‌ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ 90 ರನ್ ಗಳಿಸಿ ಆಡುತ್ತಿದ್ದ ಪೂಜಾರ 2019 ರಿಂದ ಎದುರಿಸುತ್ತಿರುವ ಶತಕದ ಬರವನ್ನು ಕೊನೆಗೊಳಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ತೈಜುಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೂಜಾರ ಪೆವಿಲಿಯನ್​ಗೆ ಮರಳಿದರು. ಇದರೊಂದಿಗೆ ಅವರ 19 ನೇ ಟೆಸ್ಟ್ ಶತಕದ ಕಾಯುವಿಕೆಯೂ ಹೆಚ್ಚಾಗಿದೆ.

ಬಾಂಗ್ಲಾದೇಶ ಪರ ತೈಜುಲ್ ಮೂರು ವಿಕೆಟ್ ಪಡೆದರೆ, ಮೀರಜ್ 2 ವಿಕೆಟ್ ಪಡೆದರು. ಹಾಗೆಯೇ ಅಹ್ಮದ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇಬಾದತ್ ಹುಸೇನ್, ನಾಯಕ ಶಕೀಬ್ ಅಲ್ ಹಸನ್ ಮತ್ತು ಯಾಸಿರ್ ಅಲಿ ಒಂದೂ ವಿಕೆಟ್ ಪಡೆಯಲಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Wed, 14 December 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ