ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿದೆ. ಶುಕ್ರವಾರ ತಡರಾತ್ರಿ ನಡೆದ ರೋಚಕ ಕ್ವಾರ್ಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ ಕ್ರೊವೇಷ್ಯಾ ತಂಡ ಐದು ಬಾರಿಯ ಚಾಂಪಿಯನ್ ಬ್ರೆಜಿಲ್ (Brazil) ತಂಡಕ್ಕೆ ಮರ್ಮಾಘಾತ ನೀಡಿತು. 120 ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಉಭಯ ತಂಡಗಳು 1-1ರ ಅಂತರದಲ್ಲಿ ಸಮಬಲ ಕಂಡಿತ್ತು. ಆದರೆ, ಫಲಿತಾಂಶ ಸಲುವಾಗಿ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-2 ಅಂತರದ ಗೆದ್ದ ಕ್ರೊವೇಷ್ಯಾ ಸೆಮೀಸ್ಗೆ ಲಗ್ಗೆಯಿಟ್ಟಿದೆ. ಇತ್ತ ಅರ್ಜೆಂಟೀನಾ (Argentina) ಕೂಡ ನೆದರ್ಲೆಂಡ್ಸ್ಗೆ ಮಣ್ಣುಮುಕ್ಕಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಇಲ್ಲುಕೂಡ ಉಭಯ ತಂಡಗಳಿ 2-2 ಅಂತರದ ಸಮಬಲ ಸಾಧಿಸಿದ ಕಾರಣ ಪೆನಾಲ್ಟಿ ಶೂಟ್ಔಟ್ ನಡೆಸಲಾಯಿತು. ಇದರಲ್ಲಿ ಅರ್ಜೆಂಟೀನಾ 4-3 ಗೋಲುಗಳಿಂದ ಗೆದ್ದು ಬೀಗಿತು.
ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊವೇಷ್ಯಾದ ನಿಕೊಲಾ ವ್ಲಾಸಿಚ್, ಲೊವ್ರೊ ಮಜೊವ್, ಲುಕಾ ಮಾಡ್ರಿಚ್ ಮತ್ತು ಮಿಸ್ಲಾವ್ ಒರ್ಸಿಚ್ ಅವರು ಗೋಲು ಗಳಿಸಿದರು. ಬ್ರೆಜಿಲ್ ಪರ ಕ್ಯಾಸೆಮಿರೊ ಮತ್ತು ಪೆಡ್ರೊ ಮಾತ್ರ ಚೆಂಡನ್ನು ಗುರಿ ಸೇರಿಸಿದರು. ರಾಡ್ರಿಗೊ ಅವರ ಮೊದಲ ಕಿಕ್ ಅನ್ನು ಕ್ರೊವೇಷ್ಯಾ ಗೋಲ್‌ಕೀಪರ್ ಡೊಮಿನಿಕ್ ಲಿವಕೊವಿಚ್ ಯಶಸ್ವಿಯಾಗಿ ತಡೆದರು. ನಾಲ್ಕನೇ ಕಿಕ್ ತೆಗೆದುಕೊಂಡ ಮಾರ್ಕಿನೋಸ್ ಅವರು ಒದ್ದ ಚೆಂಡು ಕ್ರಾಸ್‌ಬಾರ್‌ಗೆ ಬಡಿದು ವಾಪಾಸಾಯಿತು. ಇದಕ್ಕೂ ಮುನ್ನ ನಿಗದಿತ 90 ನಿಮಿಷದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗದಿದ್ದಾಗ 30 ನಿಮಿಷಗಳ ಹೆಚ್ಚುವರಿ ಆಟ ಆಡಿಸಲಾಯಿತು. ಸ್ಟಾರ್ ಪ್ಲೇಯರ್ ನೇಯ್ಮರ್ ಜೂನಿಯರ್ ಕಾಳ್ಚಳಕ ತೋರಿಸಿ 105 ನೇ ನಿಮಿಷದಲ್ಲಿ ಗೋಲು ಬಾರಿಸಿ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಇನ್ನೇನು ಬ್ರೆಜಿಲ್ ಸೆಮೀಸ್ ತಲುಪಿತು ಎಂಬುವಷ್ಟರಲ್ಲಿ ಕ್ರೊವೇಷ್ಯಾದ ಬ್ರುನೊ ಪೆಟ್ಕೊವಿಚ್ 116 ನಿಮಿಷದಲ್ಲಿ ಗೋಲು ಗಳಿಸಿ ಆಘಾತ ನೀಡಿದರು.
ಬ್ರೆಜಿಲ್ ಪರ ಸ್ಟಾರ್ ಆಟಗಾರ ನೆಯ್ಮಾರ್ ದಾಖಲಿಸಿದ ದಾಖಲೆಯ ಕೂಡ ಗೋಲ್ ವ್ಯರ್ಥವಾಯಿತು. ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಜಪಾನ್ ಎದುರು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಜಯ ದಕ್ಕಿಸಿಕೊಂಡಿದ್ದ ಕ್ರೊವೇಷ್ಯಾ ಇದೀಗ ಸತತ ಎರಡನೇ ಶೂಟ್‌ಔಟ್‌ನಲ್ಲಿ ಜಯ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ರೊವೇಷ್ಯಾ ತಂಡ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ಸವಾಲೆದುರಿಸಲಿದೆ.
INDvs BAN: ನಾಯಕ ಸೇರಿದಂತೆ ಮೂವರು ತಂಡದಿಂದ ಔಟ್! ಕೊನೆಯ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ
ಇತ್ತ ಅರ್ಜೆಂಟೀನಾ ಮತ್ತು ನೆದರ್ಲೆಂಡ್ಸ್ ಪಂದ್ಯ ಕೂಡ ರಣ ರೋಚಕವಾಗಿತ್ತು. ಲೂಸಿಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ತಂಡ ಪಂದ್ಯದ ಉತ್ತರಾರ್ಧದಲ್ಲಿ 2-0 ಗೋಲುಗಳಿಂದ ಮುಂದಿತ್ತು ಹಾಗೂ ಸೆಮಿಫೈನಲ್‍ಗೆ ಸುಲಭವಾಗಿ ಪ್ರವೇಶ ಪಡೆಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಬದಲಿ ಆಟಗಾರ ವೂಟ್ ವೆಗೋಸ್ಟ್ ಕೊನೆಕ್ಷಣದಲ್ಲಿ ಎರಡು ಗೋಲು ಗಳಿಸುವ ಮೂಲಕ ಪಂದ್ಯವನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಂತೆ ಮಾಡಿದರು. 30 ನಿಮಿಷಗಳ ಹೆಚ್ಚಿನ ಅವಧಿಯ ಬಳಿಕವೂ 2-2 ಸಮಬಲ ಮುಂದುವರಿಯಿತು. ಇದರಿಂದಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು.
ಪೆನಾಲ್ಟಿಯಲ್ಲಿ ಅರ್ಜೆಂಟೀನಾದ ಗೋಲ್‌ಕೀಪರ್ ಲೌಟಾರೊ ಮಾರ್ಟಿನೆಜ್ ಮೊದಲ ಗೋಲು ಗಳಿಸಲು ಬಂದ ನೆದರ್ಲ್ಯಾಂಡ್ಸ್ನ ವ್ಯಾನ್ ಡಿಜ್ಕ್ ಕಿಕ್ ಅನ್ನು ತಡೆದರು. ಬಳಿಕ ಮೆಸ್ಸಿ ಡಚ್ಚರ ಗೋಲಿಯನ್ನು ತಪ್ಪಿಸಿ ಗೋಲು ಬಾರಿಸಿದರು. ಸ್ಟೀವನ್ ಬರ್ಗುಯಿಸ್ ಗೋಲನ್ನೂ ಮಾರ್ಟಿನೆಜ್ ತಡೆದರು. ಲಿಯಾಂಡ್ರೊ ಪರೆಡೆಸ್ ಗೋಲು ಗಳಿಸುವುದರೊಂದಿಗೆ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತು. ಟೆನ್ ಕೂಪ್‌ಮೈನರ್ಸ್ ಡಚ್‌ನ ಮೂರನೇ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದರು. ಗೊಂಜಾಲೊ ಮೊಂಟಿಯೆಲ್ ಅರ್ಜೆಂಟೀನಾ ಪರ ಮೂರನೇ ನೇರ ಗೋಲು ಗಳಿಸಿ 3-1 ಅಂತರ ನೀಡಿದರು. ವೆಘೋರ್ಸ್ಟ್ ಮತ್ತೊಂದು ಗೋಲು ಹೊಡೆದರು. ಈ ವೇಳೆ ಎರಡೂ ತಂಡಗಳಿಗೆ ಕೊನೆಯ ಒಂದು ಪೆನಾಲ್ಟಿ ಬಾಕಿ ಇತ್ತು. ಡಚ್‌ನ ಡಿ ಜೊಂಗ್ ಅದ್ಭುತ ಗೋಲು ಗಳಿಸಿ 3-3 ರಲ್ಲಿ ಸಮಬಲ ಮಾಡಿದರು. ಗೆಲುವಿನ ನಿರ್ಣಾಯಕ ಕಿಕ್ ಅನ್ನು ಅರ್ಜೆಂಟೀನಾ ಗಳಿಸುವ ಮೂಲಕ 4-3 ರಲ್ಲಿ ಗೆದ್ದು ಸೆಮಿ ಫೈನಲ್ಗೆ ಲಗ್ಗೆಯಿಟ್ಟಿತು.
ಬ್ರೆಜಿಲ್ ತಂಡದ ಕೋಚ್ ರಾಜೀನಾಮೆಗೆ ನಿರ್ಧಾರ:
ವಿಶ್ವಕಪ್ ನಿಂದ ಬಲಿಷ್ಠ ಬ್ರೆಜಿಲ್ ತಂಡ ಔಟ್ ಆಗಿದ್ದು, ಬ್ರೆಜಿಲ್ ತಂಡದ ಕೋಚ್ ಟೈಟ್ ರಾಜೀನಾಮೆಗೆ ನಿರ್ಧರಿಸಿದ್ದಾರೆ. ಬ್ರೆಜಿಲ್ ಕೋಚ್ ಸ್ಥಾನದಿಂದ ನಿರ್ಗಮಿಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಸೋಲು ತುಂಬಾ ನೋವುಂಟು ಮಾಡಿದೆ. ಆದರೆ, ನಾನು ಶಾಂತಿಯಿಂದ ಕೋಚ್ ಸ್ಥಾನವನ್ನು ತ್ಯಜಿಸುತ್ತೇನೆ. ನಾನು ಗೆಲ್ಲಲು ಇಲ್ಲಿಗೆ ಬಂದಿಲ್ಲ, ನನ್ನನ್ನು ಬಲ್ಲವರಿಗೆ ಅದು ತಿಳಿದಿದೆ. ಈ ವಿಚಾರವನ್ನು ಒಂದೂವರೆ ವರ್ಷಗಳ ಹಿಂದೆಯೇ ನಾನು ಹೇಳಿದ್ದೇನೆ ಎಂಬುದು ಟೈಟ್ ಮಾತಾಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:23 am, Sat, 10 December 22