ಮ್ಯಾಂಚೆಸ್ಟರ್ ಫುಟ್ಬಾಲ್ಗೆ ಭಾರತದಲ್ಲೇ ಶೇ. 38ರಷ್ಟು ಫ್ಯಾನ್ಸ್ ಇದ್ದಾರೆ: ಲೆಜೆಂಡ್ ಆಟಗಾರ ಗುನ್ನಾರ್ ಫುಲ್ ಖುಷ್!
Football Legend Ole Gunnar Solskjaer: ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ನ ಲೆಜೆಂಡ್ ಆಗಿರುವ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಕೋಚ್ ಗುನ್ನಾರ್ ಸೋಲ್ಸ್ಜೇರ್ ಬೆಂಗಳೂರಿಗೆ ಭೇಟಿ ನೀಡಿದ್ದು ಭಾರತದಲ್ಲಿ ಫುಟ್ಬಾಲ್ ಸಾಕಷ್ಟು ಬೆಳೆದಿದ್ದು, ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಲಿದ್ದಾರೆ ಎಂದಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ನ (Manchester United) ಲೆಜೆಂಡ್ ಆಗಿರುವ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಕೋಚ್ ಗುನ್ನಾರ್ ಸೋಲ್ಸ್ಜೇರ್ (Ole Gunnar Solskjaer) ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಗುನ್ನಾರ್ ಸೋಲ್ಸ್ಜೇರ್, ಭಾರತದ ಭೇಟಿ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಬೆಂಗಳೂರು (Bengaluru) ಸೇರಿದಂತೆ ಮುಂಬೈ ಹಾಗೂ ದೆಹಲಿಗೂ ಭೇಟಿ ನೀಡಲಿದ್ದು, ಫುಟ್ಬಾಲ್ ಅಭಿಮಾನಿಗಳನ್ನ (football fans) ಭೇಟಿಯಾಗಲಿದ್ದಾರೆ.
ಇನ್ನು, ಇದೇ ವೇಳೆ ಮಾತಾಡಿದ ಗುನ್ನಾರ್, ಭಾರತಕ್ಕೆ ಆಗಮಿಸಿರುವುದು ಬಹಳ ಸಂತೋಷ ನೀಡಿದೆ. ಮ್ಯಾಂಚೆಸ್ಟರ್ ಫುಟ್ಬಾಲ್ ಕ್ಲಬ್ಗೆ ಭಾರತದಲ್ಲೇ ಶೇಕಡ 38ರಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ಅವರನ್ನ ಭೇಟಿಯಾಗುತ್ತಿರುವುದು ನನ್ನ ಭಾಗ್ಯ ಅಂತಾ ತಿಳಿಸಿದ್ರು.
ಇದನ್ನೂ ಓದಿ: Cheteshwar Pujara: 62ನೇ ಶತಕ ಸಿಡಿಸಿ ದಾಖಲೆ ಬರೆದ ಚೇತೇಶ್ವರ ಪೂಜಾರ
ಅಲ್ಲದೇ ತಮ್ಮ ಫುಟ್ಬಾಲ್ ಆಟವನ್ನ ಕೂಡ ಮೆಲುಕು ಹಾಕಿದ್ರು. ಭಾರತದಲ್ಲಿ ಫುಟ್ಬಾಲ್ ಸಾಕಷ್ಟು ಬೆಳೆದಿದ್ದು, ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಲಿದ್ದಾರೆ ಅಂತಾ ತಿಳಿಸಿದ್ರು. ಇದೇ ವೇಳೆ ತಮ್ಮನ್ನ ಭಾರತಕ್ಕೆ ಕರೆ ತಂದ ಏಸ್ ಆಫ್ ಪಬ್ಸ್ ಸಂಸ್ಥೆಯ ಮಾಲೀಕ ತಿಲಕ್ ಅವರನ್ನು ಕೂಡ ಹಾಡಿಹೊಗಳಿದ್ದಾರೆ.