AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಚಾಂಪಿಯನ್​ಶಿಪ್ ಗೆದ್ದುಕೊಂಡ ಜೈನ್​ ವಿವಿ; ಅತಿ ಹೆಚ್ಚು ಪದಕ ಗೆದ್ದ ಶಿವ ಶ್ರೀಧರ್

Khelo India University Games: ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ ಇಂದು ಪುರುಷ ಮತ್ತು ಮಹಿಳಾ ಕಬಡ್ಡಿ ಫೈನಲ್‌ಗಳೊಂದಿಗೆ ಮುಕ್ತಾಯಗೊಂಡಿದೆ. ಈ ಮೂಲಕ 10 ದಿನಗಳ ಕಾಲ ನಡೆದ ವರ್ಣರಂಜಿತ ಕ್ರೀಡಾಕೂಟಕ್ಕೆ ತೆರಬಿದ್ದಿದೆ. ಆತಿಥೇಯ ಜೈನ್ ವಿಶ್ವವಿದ್ಯಾನಿಲಯವು 20 ಚಿನ್ನದ ಪದಕಗಳನ್ನು ಪಡೆದು ಮೊದಲ ಸ್ಥಾನ ಪಡೆಯಿತು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಚಾಂಪಿಯನ್​ಶಿಪ್ ಗೆದ್ದುಕೊಂಡ ಜೈನ್​ ವಿವಿ; ಅತಿ ಹೆಚ್ಚು ಪದಕ ಗೆದ್ದ ಶಿವ ಶ್ರೀಧರ್
‘ಖೇಲೋ ಇಂಡಿಯಾ’ ಪೋಸ್ಟರ್ (ಎಡ ಚಿತ್ರ), ಶಿವ ಶ್ರೀಧರ್ (ಬಲ ಚಿತ್ರ)
TV9 Web
| Updated By: shivaprasad.hs|

Updated on: May 03, 2022 | 9:31 PM

Share

‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021’ (Khelo India University Games) ಇಂದು (ಮೇ.3) ಪುರುಷ ಮತ್ತು ಮಹಿಳಾ ಕಬಡ್ಡಿ ಫೈನಲ್‌ಗಳೊಂದಿಗೆ ಮುಕ್ತಾಯಗೊಂಡಿದೆ. ಈ ಮೂಲಕ 10 ದಿನಗಳ ಕಾಲ ನಡೆದ ವರ್ಣರಂಜಿತ ಕ್ರೀಡಾಕೂಟಕ್ಕೆ ತೆರಬಿದ್ದಿದೆ. ಆತಿಥೇಯ ಜೈನ್ ವಿಶ್ವವಿದ್ಯಾನಿಲಯವು ಅತಿ ಹೆಚ್ಚು ಪದಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿದೆ. ಕ್ರೀಡಾಕೂಟದ ಕೊನೆಯ ದಿನ ಜೈನ್ ವಿವಿಯು ಟ್ರ್ಯಾಕ್‌ನಲ್ಲಿ ಒಂದು ಚಿನ್ನ ಮತ್ತು ಕರಾಟೆಯಲ್ಲಿ ಎರಡು ಚಿನ್ನಗಳೊಂದಿಗೆ ಒಟ್ಟು 20 ಚಿನ್ನಗಳನ್ನು ಪಡೆಯಿತು. ‘ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ’ 17 ಚಿನ್ನ, 15 ಬೆಳ್ಳಿ ಮತ್ತು 19 ಕಂಚುಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಅದಾಗ್ಯೂ ಅತಿ ಹೆಚ್ಚು ಪದಕ ಪಡೆದ ಪಟ್ಟಿಯಲ್ಲಿ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ ಮೊದಲ ಸ್ಥಾನ ಪಡೆಯಿತು. ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ವಿಶ್ವವಿದ್ಯಾಲಯವು 15 ಚಿನ್ನ, 9 ಬೆಳ್ಳಿ, 24 ಕಂಚುಗಳೊಂದಿಗೆ ಮೂರನೇ ಸ್ಥಾನ ಗಳಿಸಿತು.

ಈ ಬಾರಿಯ ಕ್ರೀಡಾಕೂಟವು ಹಲವು ಕಾರಣಗಳಿಗೆ ವಿಶೇಷವಾಗಿದೆ. ಕಳೆದ ಬಾರಿಯ ‘ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್’ನ ಒಟ್ಟು 97 ದಾಖಲೆಗಳು ಮುರಿದಿದ್ದು, ಹೊಸ ದಾಖಲೆಗಳು ನಿರ್ಮಾಣಗೊಂಡಿವೆ. ಇದರಲ್ಲಿ 42 ದಾಖಲೆಗಳು ವೇಟ್​ಲಿಫ್ಟಿಂಗ್ ವಿಭಾಗಕ್ಕೆ ಸೇರಿದ್ದರೆ, 28 ದಾಖಲೆಗಳು ಪೂಲ್​ನಲ್ಲಿ ಹಾಗೂ 23 ದಾಖಲೆಗಳು ಆಥ್ಲೆಟಿಕ್ಸ್​ನಲ್ಲಿ ದಾಖಲಾಗಿವೆ.

ಎರಡು ರಾಷ್ಟ್ರೀಯ ದಾಖಲೆಗಳು ನಿರ್ಮಾಣಗೊಂಡಿದ್ದು, ಶಿವ ಶ್ರೀಧರ್ ಪುರುಷರ 200 ಮೀಟರ್ ವೈಯಕ್ತಿಕ ಮೆಡ್ಲೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಮಹಿಳೆಯರ ವೇಟ್‌ಲಿಫ್ಟಿಂಗ್ +87 ಕೆಜಿ ವಿಭಾಗದಲ್ಲಿ ಎಂಟಿ ಆನ್ ಮರಿಯಾ ಕ್ಲೀನ್ ಹೊಸ ದಾಖಲೆ ಸ್ಥಾಪಿಸಿದ್ದಾರೆ.

ಈ ಬಾರಿಯ ಖೇಲೋ ಇಂಡಿಯಾ ವಿವಿ ಕ್ರೀಡಾಕೂಟದಲ್ಲಿ ಶ್ರೀಧರ್ ಅವರು 7 ಚಿನ್ನ ಮತ್ತು ಎರಡು ಬೆಳ್ಳಿ ಗೆದ್ದು ಹೆಚ್ಚಿನ ಪದಕ ಪಡೆದ ಸ್ಪರ್ಧಿ ಎನಿಸಿದರು. ಈಜುಗಾರ್ತಿ ಶೃಂಗಿ ಬಾಂದೇಕರ್ ​​ಅವರು ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿಯೊಂದಿಗೆ ಕ್ರೀಡಾಕೂಟದ ಅತ್ಯಂತ ಯಶಸ್ವಿ ಮಹಿಳಾ ಕ್ರೀಡಾಪಟು ಎನಿಸಿದರು. ಪ್ರಿಯಾ ಮೋಹನ್ ಅವರ 200 ಮೀ, 400 ಮೀ ಡಬಲ್ಸ್ ಟ್ರ್ಯಾಕ್‌ನಲ್ಲಿ ಅತ್ಯಂತ ಪ್ರಬಲ ಅಥ್ಲೀಟ್ ಆಗಿ ಗುರುತಿಸಿಕೊಂಡರು.

ಅಂತಿಮ ಫಲಿತಾಂಶಗಳು:

ಕಬಡ್ಡಿ: 

ಪುರುಷರು: ಫೈನಲ್: ಯೂನಿವರ್ಸಿಟಿ ಆಫ್ ಕೋಟಾವು 52-37 ಅಂಕಗಳಿಂದ ಸಿಎಚ್ ಬನ್ಸಿ ಲಾಲ್ ವಿಶ್ವವಿದ್ಯಾಲಯವನ್ನು ಮಣಿಸಿತು. ಕಂಚಿನ ಪದಕವನ್ನು ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಗುರುನಾನಕ್ ದೇವ್ ವಿಶ್ವವಿದ್ಯಾಲಯಗಳು ಪಡೆದವು.

ಮಹಿಳೆಯರು: ಫೈನಲ್: ಕುರುಕ್ಷೇತ್ರ ವಿಶ್ವವಿದ್ಯಾಲಯವು 46-19 ಅಂಕಗಳಿಂದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯವನ್ನು ಮಣಿಸಿತು. ಕಂಚಿನ ಪದಕಗಳನ್ನು ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ, ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯಗಳು ಪಡೆದುಕೊಂಡವು.

ಫುಟ್ಬಾಲ್:

ಪುರುಷರು: ಫೈನಲ್​ನಲ್ಲಿ MG ವಿಶ್ವವಿದ್ಯಾಲಯವು 2-0 ಅಂತರದಲ್ಲಿ ಯುನಿವರ್ಸಿಟಿ ಆಫ್ ಕೇರಳವನ್ನು ಮಣಿಸಿತು. ಕಂಚಿನ ಪದಕವನ್ನು ಕ್ಯಾಲಿಕಟ್ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯಗಳು ಪಡೆದವು.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ