ಲಂಡನ್‌ನ ವೆಂಬ್ಲಿ ಸ್ಟೇಡಿಯಂನಲ್ಲಿ ನಡೆದ ಫೈನಲಿಸಿಮಾದಲ್ಲಿ (Finalissima) ಬಲಿಷ್ಠ ಅರ್ಜೆಂಟಿನಾ ತಂಡವು, ಇಟಲಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಏಕಪಕ್ಷೀಯವಾಗಿ ಸೋಲಿಸಿದೆ. ಈ ಮೂಲಕ ಲಿಯೊನೆಲ್ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟಿನಾ ತಂಡವು ಫೈನಲಿಸಿಮಾ ಕಪ್ ಗೆದ್ದುಕೊಂಡಿತು. ಏಳು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿಗೆ ಇದು ಎರಡನೇ ಅಂತರರಾಷ್ಟ್ರೀಯ ಟ್ರೋಫಿ. ಈ ಮೂಲಕ ವಿಶೇಷ ಸಾಧನೆ ಮಾಡಿದರು. 11 ತಿಂಗಳುಗಳ ಅಂತರದಲ್ಲಿ ಅವರ ನಾಯಕತ್ವದಲ್ಲಿ ಅರ್ಜೆಂಟಿನಾ ತಂಡವು ಈ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೇ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ (FIFA World Cup) ಜಯಿಸುವತ್ತ 34 ವರ್ಷದ ಮೆಸ್ಸಿ ಚಿತ್ತ ನೆಟ್ಟಿದ್ದಾರೆ.
ಫೈನಲಿಸಿಮಾಗೂ ಮೊದಲು ಅರ್ಜೆಂಟೀನಾ ರಾಷ್ಟ್ರೀಯ ತಂಡ ಮೆಸ್ಸಿ ನೇತೃತ್ವದಲ್ಲಿ ಪ್ರತಿಷ್ಠಿತ ಕೋಪಾ ಅಮೇರಿಕಾ ಟೂರ್ನಿಯ ಚಾಂಪಿಯನ್ ಆಗಿ ಮೆರೆದಿತ್ತು. ಮತ್ತೊಂದೆಡೆ ಕಳೆದ ವರ್ಷ ಇದೇ ಮೈದಾನದಲ್ಲಿ ಜಾರ್ಜಿಯೊ ಚಿಲ್ಲಿನಿ ಸಾರಥ್ಯದಲ್ಲಿ ಇಟಲಿ, ಇಂಗ್ಲೆಂಡ್ ತಂಡವನ್ನು ಮಣಿಸಿ ಪ್ರತಿಷ್ಠಿತ ಯೂರೋಪ್ ಪ್ರಶಸ್ತಿ ಗೆದ್ದಿತ್ತು.
ENG vs NZ, 1st Test: ಲಾರ್ಡ್ನಲ್ಲಿ ವಿಕೆಟ್ಗಳ ಸುರಿಮಳೆ: ಮೊದಲ ದಿನವೇ ಪತನಗೊಂಡವು 17 ವಿಕೆಟ್ಸ್
?? The 2022 Finalissima Champions ??@Argentina ?? pic.twitter.com/Xfv3kD0du9
— Wembley Stadium (@wembleystadium) June 1, 2022
ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡಕ್ಕೆ 28ನೇ ನಿಮಿಷದಲ್ಲಿ ಲಾಟೆರೊ ಮಾರ್ಟಿನೇಜ್ ಮೊದಲ ಗೋಲು ಕಾಣಿಕೆ ನೀಡಿದರು. ಈ ಗೋಲು ಗಳಿಕೆಯಲ್ಲಿ ಮೆಸ್ಸಿ ಕಾಲ್ಚಳಕವೂ ಇತ್ತು. ಗೋಲ್ ಪೋಸ್ಟ್ ಸನಿಹ ಅವರು ಕೊಟ್ಟ ಚುರುಕಿನ ಪಾಸ್ ಪಡೆದ ಮಾರ್ಟಿನೇಜ್ ಮಿಂಚಿದರು. ಏಂಜೆಲ್ ಡಿ ಮಾರಿಯಾ (45+1ನಿ) ಮತ್ತು ಪಾಲೋ ದೈಬಲಾ (90+4) ಅವರು ತಲಾ ಒಂದು ಗೋಲು ಕಾಣಿಕೆ ನೀಡಿದರು.
ರಾಷ್ಟ್ರೀಯ ತಂಡದ ಪರ 161ನೇ ಪಂದ್ಯವನ್ನಾಡಿದ 34 ವರ್ಷದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ, 45ನೇ ಫೈನಲ್ ಪಂದ್ಯದಲ್ಲಿ 46 ಗೋಲಿನ ಕಾಣಿಕೆ ನೀಡಿದ್ದಾರೆ. 1993ರಲ್ಲಿ ದಿಗ್ಗಜ ಆಟಗಾರ ಮೆರಡೋನಾ ನಾಯಕತ್ವದಲ್ಲಿ ಅರ್ಜೆಂಟೀನಾ, ಕೊನೆಯದಾಗಿ ಫೈನಲಿಸಿಮಾ ಪ್ರಶಸ್ತಿ ಗೆದ್ದಿತ್ತು. ಅದಾದ ಬಳಿಕ ಮೆಸ್ಸಿ ನಾಯಕತ್ವದಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:14 am, Fri, 3 June 22