ಕಬಡ್ಡಿ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೋ ಕಬಡ್ಡಿ ಲೀಗ್ (Pro Kabaddi League Season 8 ) ಸೀಸನ್ 8ಗೆ ವೇದಿಕೆ ಸಿದ್ದವಾಗುತ್ತಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಪಿಕೆಎಲ್ ಆಟಗಾರರ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ಅದರಂತೆ ಇದೇ ತಿಂಗಳ ಆಗಸ್ಟ್ 29 ರಿಂದ 31ರ ನಡುವೆ ಪ್ರೋ ಕಬಡ್ಡಿ ಲೀಗ್ (PKL 8) ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗಾಗಿ ಆಟಗಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ದೇಶೀಯ ಸ್ಟಾರ್ ಆಟಗಾರರು, ವಿದೇಶಿ ಮತ್ತು ಯುವ ಹಾಗೂ ಹೊಸ ಆಟಗಾರನ್ನು ಎ, ಬಿ, ಸಿ ಮತ್ತು ಡಿ ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಎ ಗುಂಪಿನಲ್ಲಿರುವ ಆಟಗಾರರ ಮೂಲ ಬೆಲೆ 30 ಲಕ್ಷ ರೂ, ಬಿ ಗುಂಪಿನಲ್ಲಿ ಆಟಗಾರರ ಮೂಲ ಬೆಲೆ 20 ಲಕ್ಷ ರೂ, ಸಿ ಗ್ರೂಪ್ ಆಟಗಾರರಿಗೆ 10 ಲಕ್ಷ ರೂ. ಮತ್ತು ಡಿ ಗುಂಪಿನಲ್ಲಿರುವ ಆಟಗಾರರಿಗೆ 6 ಲಕ್ಷ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಅದರಂತೆ ಮೂಲ ಬೆಲೆಯೊಂದಿಗೆ ಆಟಗಾರರ ಹರಾಜು ನಡೆಯಲಿದೆ.
ಪ್ರೋ ಕಬಡ್ಡಿ ಹರಾಜು ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿ 4.4 ಕೋಟಿ ರೂ. ನಲ್ಲಿ ಆಟಗಾರರನ್ನು ಖರೀದಿಸಬೇಕಾಗುತ್ತದೆ. ಈ ಬಾರಿ 500 ಕ್ಕೂ ಅಧಿಕ ಆಟಗಾರರು ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಹೆಚ್ಚಿನ ಹೊಸ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
2019ರ ಬಳಿಕ ಕೊರೋನಾ ಕಾರಣದಿಂದ ಪ್ರೋ ಕಬಡ್ಡಿ ಲೀಗ್ ನಡೆಸಲಾಗಿರಲಿಲ್ಲ. ಇದೀಗ 8ನೇ ಸೀಸನ್ಗೆ ವೇದಿಕೆ ರೂಪಿಸಲಾಗಿದ್ದು, ಅದರಂತೆ ಕಟ್ಟುನಿಟ್ಟಾದ ಸರ್ಕಾರಿ ನಿಯಮಗಳು ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಶಾಲ್ ಸ್ಪೋರ್ಟ್ಸ್ ಮತ್ತು ಲೀಗ್ ಆಯುಕ್ತ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.
ಕೆಲ ಮೂಲಗಳ ಪ್ರಕಾರ ಹರಾಜು ಪ್ರಕ್ರಿಯೆ ಬೆನ್ನಲ್ಲೇ ಪ್ರೋ ಕಬಡ್ಡಿ ಲೀಗ್ ಶುರುವಾಗಲಿದ್ದು, ಅದರಂತೆ ಸೆಪ್ಟೆಂಬರ್ 2ನೇ ವಾರದೊಳಗೆ ಲೀಗ್ಗೆ ( pro kabaddi league 2021 starting date ) ಚಾಲನೆ ಸಿಗುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ ಕಬಡ್ಡಿ ಅಂಗಳದ ಮದಗಜಗಳ ಕಾಳಗವನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಈ ಬಾರಿ ಪ್ರೋ ಕಬಡ್ಡಿ ಲೀಗ್ ನಡೆಯಲಿದೆ ಎಂಬ ಸಿಹಿ ಸುದ್ದಿ ನೀಡಿದ್ದಾರೆ ಪಿಕೆಎಲ್ ಆಯೋಜಕರು.
ಇದನ್ನೂ ಓದಿ:-
Tokyo Olympics: ಒಲಿಂಪಿಕ್ಸ್ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!
Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್ಪ್ರೈಸ್..!