ಗುಜರಾತ್ನ ಗಾಂಧಿನಗರದಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಧಾರವಾಡದ ಕುಸ್ತಿಪಟು ವಿಶೇಷ ಸಾಧನೆ ಮಾಡಿದ್ದಾರೆ. ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ರಫೀಕ್ ಹೋಳಿ (Raffeek Holi) ಗ್ರಿಕೋ ರೋಮನ್ ಕುಸ್ತಿ ಚಾಂಪಿಯನ್ ಶಿಪ್ (Wrestling Championship) 77 ಕೆಜಿ ವಿಭಾಗದಲ್ಲಿ ಬೆಳ್ಳಿಗೆ (Silver) ಮುತ್ತಿಟ್ಟಿದ್ದಾರೆ. ರಫೀಕ್ ಹೋಳಿ ಕುಸ್ತಿಯಲ್ಲಿ ಹಲವು ಮೈಲುಗಲ್ಲು ಸಾಧಿಸಿದ್ದು, ಗ್ರಾಮೀಣ ಭಾಗದ ಯುವ ಕುಸ್ತಿಪಟುಗಳಿಗೆ ಮಾದರಿಯಾಗಿದ್ದಾರೆ.
ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಫೀಕ್ ಹೋಳಿ ಅವರಿಗೆ ಮೊದಲಿನಿಂದಲೂ ಕುಸ್ತಿ ಎಂದರೆ ಪಂಚಪ್ರಾಣ. ತಂದೆ ರಾಜಾಸಾಬ ಮತ್ತು ತಾಯಿ ಫಾತಿಮಾ ಕೃಷಿ ಕೂಲಿ ಮಾಡಿ ಜೀವನ ಸಾಗಿಸಿದವರು. ಈ ದಂಪತಿಯ ಕೊನೆಯ ಮಗ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಶಾಲೆಯಲ್ಲಿ ಮುಗಿಸಿದ ರಫೀಕ್ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೆಳಗಾವಿಯಲ್ಲಿ ಮುಗಿಸಿದರು. ಬಳಿಕ ದಾವಣಗೇರಿಯಲ್ಲಿ ಪಿಯುಸಿ ಮುಗಿಸಿ ರಫೀಕ್ ಅಷ್ಟೊತ್ತಿಗೆ ಕುಸ್ತಿಯಲ್ಲಿ ಪರಿಣಿತಿಯನ್ನು ಹೊಂದಿದ್ದರು. ಇದೇ ವೇಳೆ ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಜ್ಯೂನಿಯರ್ ನ್ಯಾಷನಲ್ ರಸ್ಲಿಂಗ್ ಚಾಂಪಿಯನ್ ಶಿಪ್ ನಡೆದಿತ್ತು. ಅದರಲ್ಲಿ ಭಾಗವಹಿಸಿದ ರಫೀಕ್ ಚಿನ್ನದ ಪದಕವನ್ನು ಬೇಟೆಯಾಡಿದರು.
ರಫೀಕ್ ಹೋಳಿ ಅವರು ಕುಸ್ತಿ ತರಬೇತಿ ಪಡೆದಿದ್ದು ಮನೆಯಿಂದಲೇ. ಏಕೆಂದರೆ ಅವರ ತಂದೆ ರಾಜಾಸಾಬ್ ಒಳ್ಳೆಯ ಕುಸ್ತಿಪಟು ಆಗಿದ್ದರು. ಇನ್ನು ಇಬ್ಬರು ಅಣ್ಣಂದಿರು ಕೂಡ ಒಳ್ಳೆಯ ಕುಸ್ತಿಪಟುಗಳೇ. ಅಲ್ಲದೇ ಹುಟ್ಟಿದೂರು ಶಿಂಗನಹಳ್ಳಿ ಗ್ರಾಮದಲ್ಲಿ ಮನೆಗೊಬ್ಬರು ಪೈಲ್ವಾನರು ಇದ್ದಾರೆ. ಹೀಗಾಗಿ ಆರಂಭದಿಂದಲೂ ಕುಸ್ತಿಯಾಟ ರಫೀಕ್ ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇದೇ ವೇಳೆ ರಫೀಕ್ ಅಣ್ಣ ರೆಹಮಾನ್ ಹೊಳಿ ಸಹೋದರನಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ತರಬೇತಿಯಿಂದ ಹಿಡಿದು ಕುಸ್ತಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳ ವ್ಯವಸ್ಥೆ ಮಾಡಿದರು. ಇದರಿಂದಾಗಿ ರಫೀಕ್ ಹೊಳಿ ಅವರಿಗೆ ಕುಸ್ತಿಯಾಟದ ಮೇಲೆ ಸಾಕಷ್ಟು ಹಿಡಿತ ಬಂತು.
ರಫೀಕ್ ಹೋಳಿ 2015ರ ಅಮೆರಿಕಾದ ಲಾಸ್ ವೇಗಸ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದರು. ರಫೀಕ್ 2009ರಲ್ಲಿ ಫಿಲಿಫೈನ್ಸ್‌ನಲ್ಲಿ ನಡೆದ ಜೂನಿಯರ್ ಏಷಿಯನ್ ಚಾಂಪಿಧಿಯಧಿನ್‌ಧಿಷಿಪ್‌ನಲ್ಲಿ 66 ಕೆಜಿ ವಿಭಾಗದಲ್ಲಿ 5ನೇ ಸ್ಥಾನ ಪಡೆಧಿದರು. 2015ರಲ್ಲಿ ಕಜಕಿಸ್ತಾನದಲ್ಲಿ ನಡೆದ 71 ಕೆಜಿ ವಿಭಾಗದ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ 3ನೇ ಸ್ಥಾನ ಪಡೆದಿದ್ದರು. 2016ರಲ್ಲಿ ಸಿಂಗಾಪುರದಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಇಂಥ ರಫಿಕ್ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಯಾಗಿದೆ.
Published On - 12:03 pm, Tue, 4 October 22