AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shimron Hetmyer: ಮಿಸ್ ಆಯ್ತು ಫ್ಲೈಟ್: ಟಿ20 ವಿಶ್ವಕಪ್​ ತಂಡದಿಂದ ಹೊರಬಿದ್ದ ಸ್ಟಾರ್ ಬ್ಯಾಟರ್ ಶಿಮ್ರೋನ್ ಹೆಟ್ಮೇರ್

T20 World Cup 2022: ವೆಸ್ಟ್‌ ಇಂಡೀಸ್ ತಂಡದ ಸ್ಟಾರ್ ಬ್ಯಾಟರ್ ಶಿಮ್ರೋನ್ ಹೆಟ್ಮೇರ್ (Shimron Hetmyer) ಆಸ್ಟ್ರೇಲಿಯಾಕ್ಕೆ ತೆರಳಬೇಕಿದ್ದ ವಿಮಾನ ಕೈ ತಪ್ಪಿದ್ದರಿಂದ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ.

Shimron Hetmyer: ಮಿಸ್ ಆಯ್ತು ಫ್ಲೈಟ್: ಟಿ20 ವಿಶ್ವಕಪ್​ ತಂಡದಿಂದ ಹೊರಬಿದ್ದ ಸ್ಟಾರ್ ಬ್ಯಾಟರ್ ಶಿಮ್ರೋನ್ ಹೆಟ್ಮೇರ್
ವೆಸ್ಟ್ ಇಂಡೀಸ್- ಶಿಮ್ರಾನ್ ಹೆಟ್ಮಾಯರ್
TV9 Web
| Updated By: Vinay Bhat|

Updated on: Oct 04, 2022 | 11:39 AM

Share

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್​ಗಾಗಿ (T20 World Cup) ಆಸ್ಟ್ರೇಲಿಯಾನ್ನರ ನಾಡಿಗೆ ಹೊರಟ ವೆಸ್ಟ್ ಇಂಡೀಸ್ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಬ್ಯಾಟರ್ ಶಿಮ್ರೋನ್ ಹೆಟ್ಮೇರ್ (Shimron Hetmyer) ಆಸ್ಟ್ರೇಲಿಯಾಕ್ಕೆ ತೆರಳಬೇಕಿದ್ದ ವಿಮಾನ ಕೈ ತಪ್ಪಿದ್ದರಿಂದ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇದು ಕೆರಿಬಿಯನ್ ಪಡೆಗೆ ದೊಡ್ಡ ಹಿನ್ನಡೆಯಾಗಿದೆ. ಇದೀಗ ಹೆಟ್ಮೇರ್ ಜಾಗಕ್ಕೆ ಶರ್ಮಾಹ್ ಬ್ರೂಕ್ಸ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell) ಮತ್ತು ಸ್ಪಿನ್ನರ್ ಸುನಿಲ್ ನರೇನ್‌ ಅಲಭ್ಯತೆ ನಡುವೆ ಟಿ20 ವಿಶ್ವಕಪ್​ನಲ್ಲಿ ಆಡಲಿರುವ ವೆಸ್ಟ್ ಇಂಡೀಸ್​ಗೆ ಹೆಟ್ಮೇರ್ ಅನುಪಸ್ಥಿತಿ ದೊಡ್ಡ ಮಟ್ಟದಲ್ಲಿ ಕಾಡಲಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ತಂಡದ ಕೆಲ ಆಟಗಾರರು ಬೇರೆ ಬೇರೆ ಗುಂಪುಗಳಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಬೇಕಿತ್ತು. ಆದರೆ ಹೆಟ್ಮೇರ್​ಗೆ ನಿಗದಿಯಾದ ವಿಮಾನದಲ್ಲಿ ಆಸ್ಟ್ರೇಲಿಯಾಗೆ ಪ್ರಯಾಣಿಸದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ವಿಮಾನ ಮಿಸ್ ಮಾಡಿಕೊಂಡಿದ್ದರಿಂದ ಹೆಟ್ಮೇರ್​ಗೆ ಆಕ್ಟೋಬರ್ 3ರಂದು ಮತ್ತೆ ಬೇರೆ ವಿಮಾನದಲ್ಲಿ ಆಸನ ನಿಗದಿಪಡಿಸಿ ಸಮಯ ಬದಲಾವಣೆ ಮಾಡಿಕೊಡಲಾಗಿತ್ತು. ಆದರೆ ಆ ವಿಮಾನದಲ್ಲೂ ಪ್ರಯಾಣಿಸಲಿಲ್ಲ. ಹೀಗಾಗಿ ನಿಗದಿಯಾದ ವಿಮಾನದಲ್ಲಿ ಪ್ರಯಾಣಿಸದ ಕಾರಣ ಅವರನ್ನು ಟಿ20 ವಿಶ್ವಕಪ್ ತಂಡದಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ
Image
IND vs SA 3rd T20: ಅಂತಿಮ ಕದನಕ್ಕೆ ಸಜ್ಜು: ಟೀಮ್ ಇಂಡಿಯಾ ಆಟಗಾರರಿಂದ ಭರ್ಜರಿ ಅಭ್ಯಾಸ
Image
Happy Birthday Rishabh Pant: ರಿಷಭ್ ಪಂತ್​ಗೆ ಹುಟ್ಟುಹಬ್ಬದ ಸಂಭ್ರಮ: 25ನೇ ವರ್ಷಕ್ಕೆ ಕಾಲಿಟ್ಟ ಯಂಗ್ ವಿಕೆಟ್ ಕೀಪರ್​ನ ದಾಖಲೆಗಳು ನೋಡಿ
Image
IND vs SA: ಇಂದು ಮೂರನೇ ಟಿ20: ಇಂದೋರ್ ಪಿಚ್ ಹೇಗಿದೆ?, ಯಾರಿಗೆ ಹೆಚ್ಚು ಸಹಕಾರಿ?
Image
IND vs SA 3rd T20: ಹಿರಿಯರಿಗೆ ವಿಶ್ರಾಂತಿ: ರೋಚಕತೆ ಸೃಷ್ಟಿಸಿದೆ ಭಾರತ- ಆಫ್ರಿಕಾ ತೃತೀಯ ಟಿ20 ಕದನ

ವೆಸ್ಟ್ ಇಂಡೀಸ್ ತಂಡವನ್ನು ನಿಕೋಲಸ್ ಪೂರನ್ ಟಿ20 ವಿಶ್ವಕಪ್‌ನಲ್ಲಿ ಮುನ್ನಡೆಸಲಿದ್ದಾರೆ. ಇತ್ತೀಚಿಗೆ ಭಾರತ ಮತ್ತು ಬಾಂಗ್ಲಾದೇಶದಂತಹ ತಂಡಗಳ ವಿರುದ್ಧದ ಸರಣಿಯಲ್ಲಿ ವಿಂಡೀಸ್ ತಂಡದ ಭಾಗವಾಗಿದ್ದ ಹೆಚ್ಚಿನ ಆಟಗಾರರು ಸ್ಥಾನ ಪಡೆದಿದ್ದಾರೆ. ಸರಿಯಾಗಿ ಒಂದು ವರ್ಷದ ನಂತರ ಎವಿನ್ ಲೂಯಿಸ್ ತಂಡಕ್ಕೆ ಮರಳಿರುವುದು ಅಚ್ಚರಿಯ ಆಯ್ಕೆಯಾಗಿದೆ. ಲೆವಿಸ್ ತನ್ನ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್‌ ಪರ 2021 ರ ಟಿ20 ವಿಶ್ವಕಪ್‌ನಲ್ಲಿಯೇ ಆಡಿದ್ದರು. ಅಂದಿನಿಂದ, ಫಿಟ್‌ನೆಸ್‌ನಂತಹ ಸಮಸ್ಯೆಗಳಿಂದ ಅವರು ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಯಾನಿಕ್ ಕ್ಯಾರಿಯಾ ಮತ್ತು ರೇಮನ್ ರೈಫರ್‌ನಲ್ಲಿ ಇಬ್ಬರು ಹೊಸ ಆಟಗಾರರು ಕೂಡ ಪ್ರತಿಷ್ಠಿತ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ರಸೆಲ್-ನರೇನ್‌ಗೆ ಅವಕಾಶವಿಲ್ಲ

ವಿಂಡೀಸ್ ಆಯ್ಕೆದಾರರು ಟಿ20 ಕ್ರಿಕೆಟ್‌ನ ಇಬ್ಬರು ದೊಡ್ಡ ಸ್ಟಾರ್​ಗಳಾದ ಆಂಡ್ರೆ ರಸೆಲ್ ಮತ್ತು 2012 ಮತ್ತು 2014 ರಲ್ಲಿ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಸುನಿಲ್ ನರೇನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಕಳೆದ ವರ್ಷದ ಟಿ20 ವಿಶ್ವಕಪ್‌ನಿಂದ ವೆಸ್ಟ್ ಇಂಡೀಸ್‌ ಪರ ರಸೆಲ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇತ್ತ ನರೇನ್ 2019 ರಿಂದ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇವರಲ್ಲದೆ ಹಿರಿಯ ಸ್ಪಿನ್ನರ್ ಹೇಡನ್ ವಾಲ್ಷ್ ಜೂನಿಯರ್ ಮತ್ತು ಫ್ಯಾಬಿಯನ್ ಅಲೆನ್ ಕೂಡ ತಂಡಕ್ಕೆ ಆಯ್ಕೆಯಾಗಿಲ್ಲ. ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಸೂಪರ್-12 ಸುತ್ತಿನಲ್ಲಿ ಇತರ ತಂಡಗಳ ನಡುವೆ ಸ್ಥಾನ ಪಡೆಯಲು ಅರ್ಹತಾ ಪಂದ್ಯಗಳನ್ನು ಆಡಬೇಕಿದೆ.

ವೆಸ್ಟ್‌ ಇಂಡೀಸ್ ಆಟಗಾರರ ಪಟ್ಟಿ:

ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡನ್ ಕಾಟ್ರೆಲ್, ಶರ್ಮಾಹ್ ಬ್ರೂಕ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ರೇಮೊನ್ ಓಡನ್ ಸ್ಮಿತ್.

ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್​​ ವಿಡಿಯೋ
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಶಾಮನೂರು ನಿಧನ: ದೆಹಲಿಯಲ್ಲಿ ‘ಕೈ’ ಶಾಸಕರು, ಸಚಿವರು ವಿಮಾನದಲ್ಲಿ ಲಾಕ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ಸಂಸತ್ ಮೇಲಿನ ದಾಳಿ, ಅಫ್ಜಲ್​ ಗುರು ನಿರಪರಾಧಿ ಎಂದ ಅರುಂಧತಿ ರಾಯ್
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ