Pro Kabaddi 2022: ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಶುಭಾರಂಭ: ದಬಾಂಗ್ ಡೆಲ್ಲಿಗೂ ಜಯ

| Updated By: Vinay Bhat

Updated on: Oct 08, 2022 | 9:15 AM

ಕಂಠೀರವ ಒಳಾಂಗಣ ಸ್ಟೇಡಿಯಂ ಕೊನೆಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 34-29 ಅಂಕಗಳ ಅಂತರದಲ್ಲಿ ಗೆದ್ದು ಬೀಗಿತು.

Pro Kabaddi 2022: ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಶುಭಾರಂಭ: ದಬಾಂಗ್ ಡೆಲ್ಲಿಗೂ ಜಯ
Pro Kabaddi 2022
Follow us on

ವಿವೋ ಪ್ರೊ ಕಬಡ್ಡಿ ಲೀಗ್‌ (Pro Kabaddi 2022) 9ನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು ಮೊದಲ ದಿನ ನಡೆದ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಕಂಠೀರವ ಒಳಾಂಗಣ ಸ್ಟೇಡಿಯಂ ಕೊನೆಕ್ಷಣದವರೆಗೂ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 34-29 ಅಂಕಗಳ ಅಂತರದಲ್ಲಿ ಗೆದ್ದು ಬೀಗಿತು. ಬುಲ್ಸ್‌ ಪರ ನೀರಜ್ ನರ್ವಾಲ್ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದರೆ, ವಿಕಾಸ್ ಖಂಡೋಲಾ ಹಾಗೂ ಭರತ್ ತಲಾ 5 ಅಂಕಗಳನ್ನು ಗಳಿಸುವ ಮೂಲಕ ಬುಲ್ಸ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಟಾಸ್ ಗೆದ್ದ ಬೆಂಗಳೂರು ಬುಲ್ಸ್‌ ತಂಡದ ನಾಯಕ ಮಹೇಂದರ್ ಸಿಂಗ್ ಡಿಫೆನ್ಸ್‌ ಆಯ್ದುಕೊಂಡರು. ಟೈಟಾನ್ಸ್‌ ತಂಡಕ್ಕೆ ಮೊದಲ ನಿಮಿಷದಲ್ಲೇ ವಿನಯ್ ಟಚ್‌ ಪಾಯಿಂಟ್‌ ಮೂಲಕ ಅಂಕಗಳಿಸಿಕೊಟ್ಟರು. ಇದರ ಬೆನ್ನಲ್ಲೇ ಸಿದ್ದಾರ್ಥ್‌ ದೇಸಾಯಿ ಬೋನಸ್ ಪಾಯಿಂಟ್ ಗಳಿಸಿದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಟೈಟಾನ್ಸ್‌ ತಂಡದ ಡು ಆರ್ ಡೈ ರೈಡ್‌ನಲ್ಲಿ ಮೋನು ಗೋಯೆತ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಸೌರಭ್ ಯಶಸ್ವಿಯಾದರು. ಈ ಮೂಲಕ ಬುಲ್ಸ್‌ ಅಂಕಗಳ ಖಾತೆ ತೆರೆಯಿತು. ಟೈಟನ್ಸ್‌ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು.

ಪಂದ್ಯದ ಬಹುಭಾಗದಲ್ಲಿ ಉಭಯ ತಂಡಗಳು ಸಮಬಲ ಗಳಿಸುತ್ತಲೇ ಸಾಗಿದವು. ಆದರೆ ಒಟ್ಟು ಏಳು ಅಂಕ ಗಳಿಸಿ ಮಿಂಚಿದ ನೀರಜ್, ತಲಾ ಐದು ಅಂಕ ಗಳಿಸಿದ ಖಂಡೋಲಾ ಮತ್ತು ಭರತ್ ಬುಲ್ಸ್‌ ತಂಡಕ್ಕೆ ಬಲ ತುಂಬಿದರು. ಬಲಿಷ್ಠ ರಕ್ಷಣಾ ತಂತ್ರ ಹೆಣೆದ ಡಿಫೆಂಡರ್ ಮಹೇಂದರ್ ಕೂಡ ನಾಲ್ಕು ಅಂಕ ಗಳಿಸಿದರು. ಅವರಿಗೆ ಲೆಫ್ಟ್‌ ಕಾರ್ನರ್‌ ಡಿಫೆಂಡರ್ ಸೌರಭ್ ನಂದಾಲ್ (4) ಕೂಡ ಉತ್ತಮ ಜೊತೆ ನೀಡಿದರು. ಟೈಟನ್ಸ್‌ ಪರವಾಗಿ ರಜನೀಶ್ ಏಳು ಅಂಕ ಗಳಿಸಿದರು. ಪ್ರಥಮಾರ್ಧ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಪಂದ್ಯದ ಅಂತಿಮಯ ಹಂತದಲ್ಲಿ ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್‌ ವಿಫಲವಾಯಿತು. ಅಂತಿಮವಾಗಿ ಬೆಂಗಳೂರು ಜಯ ಸಾಧಿಸಿತು. ಆದರೆ, ಇತ್ತಂಡಗಳ ನಾಯಕರು ದ್ವಿತಿಯಾರ್ಧದಲ್ಲಿ ಒಂದೂ ಅಂಕಗಳ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ
INDW vs BANW: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಸವಾಲು: ಇಂದು ಇಂಡೋ-ಬಾಂಗ್ಲಾ ಕದನ
ಸಮಸ್ಯೆಗಳ ಮೂಟೆ ಹೊತ್ತು ಆಸ್ಟ್ರೇಲಿಯಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾಕ್ಕೆ ಈ 5 ಸವಾಲುಗಳದ್ದೇ ಚಿಂತೆ..!
T20 World Cup 2022: ಟೀಂ ಇಂಡಿಯಾಕ್ಕೆ ಬಿಗ್ ಶಾಕ್; ತಂಡದ ಮತ್ತೊಬ್ಬ ಸ್ಟಾರ್ ಬೌಲರ್​ಗೆ ಇಂಜುರಿ..!
BCCI: ಬಿಸಿಸಿಐ ಬಿಗ್​ಬಾಸ್ ಹುದ್ದೆಗೆ ಸ್ಪರ್ಧಿಸಲು ಗಂಗೂಲಿ ಹಿಂದೇಟು..! ಕನ್ನಡಿಗನಿಗೆ ಒಲಿಯುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ?

ಗೆದ್ದ ಡೆಲ್ಲಿ:

ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿತು. ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕ ನಾಯಕ ನವೀನ್‌ ಚುರುಕಿನ ದಾಳಿ ನಡೆಸಿದರು. ಅವರು 13 ಅಂಕಗಳನ್ನು ಗಳಿಸಿದರು. ನವೀನ್‌ ಲೀಗ್‌ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್‌ ಟೆನ್ ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು. ಇದರಲ್ಲಿ 11 ಟಚ್‌ ಪಾಯಿಂಟ್‌, 2 ಬೋನಸ್‌ ಪಾಯಿಂಟ್‌ ಸೇರಿತ್ತು. ದ್ವಿತೀಯಾರ್ಧದಲ್ಲೂ ಡೆಲ್ಲಿ ಇದೇ ಲಯದಲ್ಲಿ ಸಾಗಿತು. ಅಶು ಮಲಿಕ್‌ ಉತ್ತಮ ಪ್ರದರ್ಶನ ನೀಡಿ 7 ಅಂಕ ಗಳಿಸಿದರು. ಡಿಫೆಂಡರ್‌ಗಳಾದ ಸಂದೀಪ್‌ ಧುಲ್‌, ಕೃಶನ್‌, ವಿಶಾಲ್‌ ತಲಾ 4 ಅಂಕ ಸಂಪಾದಿಸಿದರು.

ಇಂದಿನ ಪಂದ್ಯಗಳು:

ಪಟ್ನಾ ಪೈರೆಟ್ಸ್-ಪುಣೇರಿ ಪಲ್ಟನ್

ಗುಜರಾತ್ ಜೈಂಟ್ಸ್-ತಮಿಳ್ ತಲೈವಾಸ್

ಬೆಂಗಾಲ್ ವಾರಿಯರ್ಸ್-ಹರಿಯಾಣ ಸ್ಟೀಲರ್ಸ್

ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಹಾಟ್‌ಸ್ಟಾರ್​ನಲ್ಲಿ ನೇರಪ್ರಸಾರ ಕಾಣಲಿದೆ.

Published On - 9:15 am, Sat, 8 October 22