INDW vs BANW: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಸವಾಲು: ಇಂದು ಇಂಡೋ-ಬಾಂಗ್ಲಾ ಕದನ

Womens Asia Cup T20 2022: ಭಾರತ ಮಹಿಳಾ ತಂಡ ಶುಕ್ರವಾರ ಬದ್ಧವೈರಿ ಪಾಕಿಸ್ತಾನ (India Women vs Pakistan Women) ವಿರುದ್ಧ 13 ರನ್​ಗಳಿಂದ ಸೋಲು ಕಂಡಿತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಸೆಣೆಸಾಟಕ್ಕೆ ಹರ್ಮನ್​ಪ್ರೀತ್ (Harmanpreet Kaur) ಪಡೆ ಸಜ್ಜಾಗುತ್ತಿದೆ.

INDW vs BANW: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಸವಾಲು: ಇಂದು ಇಂಡೋ-ಬಾಂಗ್ಲಾ ಕದನ
INDW vs BANW
Follow us
TV9 Web
| Updated By: Vinay Bhat

Updated on:Oct 08, 2022 | 8:08 AM

2022ರ ಮಹಿಳಾ ಏಷ್ಯಾಕಪ್ (Womens Asia Cup 2022) ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದ ಭಾರತ ಮಹಿಳಾ ತಂಡ ಶುಕ್ರವಾರ ಬದ್ಧವೈರಿ ಪಾಕಿಸ್ತಾನ (India Women vs Pakistan Women) ವಿರುದ್ಧ 13 ರನ್​ಗಳಿಂದ ಸೋಲು ಕಂಡಿತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಸೆಣೆಸಾಟಕ್ಕೆ ಹರ್ಮನ್​ಪ್ರೀತ್ (Harmanpreet Kaur) ಪಡೆ ಸಜ್ಜಾಗುತ್ತಿದೆ. ಸೋಲಿನ ಆಘಾತದಿಂದ ಹೊರಬರುವ ಮುನ್ನವೇ ಭಾರತೀಯ ವನಿತೆಯರು ಇಂದು ಬಾಂಗ್ಲಾದೇಶ ಮಹಿಳಾ ತಂಡವನ್ನು ಎದುರಿಸುತ್ತಿದೆ. ಭಾರತ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತು ಒಟ್ಟು ಆರು ಅಂಕದೊಂದಿಗೆ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿದೆ. ಇತ್ತ ಬಾಂಗ್ಲಾ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಮೂರನೇ ಸ್ಥಾನದಲ್ಲಿದೆ.

ಆರಂಭದ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್​ನಲ್ಲಿ ಬೊಂಬಾಟ್ ಪ್ರದರ್ಶನ ತೋರಿದ್ದ ಭಾರತೀಯ ವನಿತೆಯರು ಪಾಕ್ ವಿರುದ್ಧ ಸಂಪೂರ್ಣ ವೈಫಲ್ಯ ಅನುಭವಿಸಿದರು. 138 ರನ್​ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ 124 ರನ್​ಗೆ ಆಲೌಟ್ ಆದರು. ಮೇಘನಾ ಜೊತೆ ಸ್ಮೃತಿ ಮಂದಾನ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಜಮಿಯಾ ರೋಡ್ರಿಗಸ್ ಹಿಂದಿನ ಲಯಕ್ಕೆ ಮರಳಬೇಕು. ಹೇಮಲತಾ ಬ್ಯಾಟ್​ನಿಂದ ಕೂಡ ರನ್ ಬರಬೇಕಿದೆ. ಹರ್ಮನ್​ಪ್ರೀತ್ ನಾಯಕಿಯ ಆಟ ಆಡುತ್ತಿದ್ದಾರೆ. ಪೂಜಾ ವಸ್ತ್ರಾಕರ್ ಕೂಡ ಅಬ್ಬರಿಸಬೇಕಿದೆ.

ಭಾರತದ ಬೌಲಿಂಗ್ ಬಲಿಷ್ಠವಾಗಿದೆ. ದೀಪ್ತಿ ಶರ್ಮಾ ಎದುರಾಳಿಗರಲ್ಲಿ ಭಯ ಹುಟ್ಟಿಸಿದ್ದಾರೆ. ಇವರಿಗೆ ರೇಣುಕಾ ಸಿಂಗ್, ರಾಧಾ ಯಾದವ್, ಪೂಜಾ, ರಾಜೇಶ್ವರಿ ಸಾಥ್ ನೀಡಬೇಕಿದೆ. ಈ ಪಂದ್ಯವನ್ನು ಗೆದ್ದರೆ, ಟೀಮ್ ಇಂಡಿಯಾ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಇತ್ತ ಬಾಂಗ್ಲಾದೇಶ ತಂಡವನ್ನು ಕಡೆಗಣಿಸುವಂತಿಲ್ಲ. ಶಮಿಮಾ ಸುಲ್ತಾನ್, ಮುರ್ಶಿದಾ, ಫರ್ಗನಾ, ನಿಗರ್ ಸುಲ್ತಾನ, ಥರಿಹಾ ತ್ರಿಸ್ನಾ, ಶಂಜಿದಾ ಅಖ್ತರ್​ರಂತಹ ಸ್ಟಾರ್ ಆಟಗಾರ್ತಿಯರು ತಂಡದಲ್ಲಿದ್ದಾರೆ.

ಇದನ್ನೂ ಓದಿ
Image
ಸಮಸ್ಯೆಗಳ ಮೂಟೆ ಹೊತ್ತು ಆಸ್ಟ್ರೇಲಿಯಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾಕ್ಕೆ ಈ 5 ಸವಾಲುಗಳದ್ದೇ ಚಿಂತೆ..!
Image
T20 World Cup 2022: ಟೀಂ ಇಂಡಿಯಾಕ್ಕೆ ಬಿಗ್ ಶಾಕ್; ತಂಡದ ಮತ್ತೊಬ್ಬ ಸ್ಟಾರ್ ಬೌಲರ್​ಗೆ ಇಂಜುರಿ..!
Image
BCCI: ಬಿಸಿಸಿಐ ಬಿಗ್​ಬಾಸ್ ಹುದ್ದೆಗೆ ಸ್ಪರ್ಧಿಸಲು ಗಂಗೂಲಿ ಹಿಂದೇಟು..! ಕನ್ನಡಿಗನಿಗೆ ಒಲಿಯುತ್ತಾ ಬಿಸಿಸಿಐ ಅಧ್ಯಕ್ಷ ಪಟ್ಟ?
Image
IND Vs PAK: 6 ವರ್ಷಗಳ ಬಳಿಕ ಪಂದ್ಯ ಸೋತರೂ ಪಾಕ್ ವಿರುದ್ಧದ ಪಂದ್ಯದಲ್ಲಿ ದಾಖಲೆ ಪುಡಿಗಟ್ಟಿದ ಹರ್ಮನ್‌ಪ್ರೀತ್ ಕೌರ್

ಈ ಪಂದ್ಯ ನಡೆಯಲಿರುವ ಬಾಂಗ್ಲಾದೇಶದ ಸಿಲ್ಹೆಟ್‌ ಅಂತರರಾಷ್ಟ್ರೀಯ ಮೈದಾನದ ಮೇಲ್ಮೈಯಲ್ಲಿ ರನ್ ಗಳಿಸುವುದು ಕಷ್ಟ. ಹೀಗಾಗಿ ಟಾಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಂಡಗಳು ಎದುರಾಳಿಗಳನ್ನು ಕಡಿಮೆ ಮೊತ್ತಕ್ಕೆ ನಿರ್ಬಂಧಿಸಲು ನೋಡುತ್ತವೆ ಮತ್ತು ನಂತರ ಅದನ್ನು ಸುಲಭವಾಗಿ ಬೆನ್ನಟ್ಟುತ್ತವೆ. ಇದು ಸ್ಪಿನ್ನರ್ ಸ್ನೇಹಿ ಟ್ರ್ಯಾಕ್ ಆಗಿದೆ. ಹೀಗಾಗಿ ಇಂದು ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಈ ಬಾರಿಯ ಏಷ್ಯಾ ಕಪ್ ಟೂರ್ನಿಯ 15ನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಅಕ್ಟೋಬರ್ 8, ಶನಿವಾರದಂದು ಈ ಪಂದ್ಯ ನಡೆಯಲಿದ್ದು ಬಾಂಗ್ಲಾದೇಶದ ಸಿಹ್ಲೆಟ್‌ನ ಸಿಹ್ಲೆಟ್ ಇಂಟರ್ನಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ. ಮಧ್ಯಾಹ್ನ 1 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

ಭಾರತ ಸಂಭಾವ್ಯ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ಸಿ), ರಿಚಾ ಘೋಷ್ (ವಾಕ್), ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಸ್ನೇಹ ರಾಣಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್/ ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಸಿಂಗ್

Published On - 8:08 am, Sat, 8 October 22

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್