Sushil Kumar: ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್​ರಿಂದ ಕೈದಿಗಳಿಗೆ ಫಿಟ್‌ನೆಸ್ ತರಬೇತಿ

ಸುಶೀಲ್ ಕುಮಾರ್ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು, ಸಹ ಕೈದಿಗಳಿಗೆ ಕುಸ್ತಿ ಮತ್ತು ಫಿಟ್ನೆಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಮಾರ್ ಅವರ ತರಗತಿಗಳಿಗೆ ಕನಿಷ್ಠ 10 ಮಂದಿ ಸಹ ಕೈದಿಗಳು ಸೇರಿದ್ದು, ಜೈಲು ಆವರಣದೊಳಗೆಯೇ ತರಬೇತಿ ನಡೆಯುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.

Sushil Kumar: ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್​ರಿಂದ ಕೈದಿಗಳಿಗೆ ಫಿಟ್‌ನೆಸ್ ತರಬೇತಿ
Sushil Kumar
Follow us
TV9 Web
| Updated By: Vinay Bhat

Updated on: Mar 12, 2022 | 11:12 AM

ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ (Sushil Kumar) ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದು (Tihar Jail), ಸಹ ಕೈದಿಗಳಿಗೆ ಕುಸ್ತಿ ಮತ್ತು ಫಿಟ್ನೆಸ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಮಾರ್ ಅವರ ತರಗತಿಗಳಿಗೆ ಕನಿಷ್ಠ 10 ಮಂದಿ ಸಹ ಕೈದಿಗಳು ಸೇರಿದ್ದು, ಜೈಲು ಆವರಣದೊಳಗೆಯೇ ತರಬೇತಿ ನಡೆಯುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರ ರಾಜಧಾನಿಯಾದ್ಯಂತ ಮತ್ತು ಜೈಲು ಆವರಣದೊಳಗೆ ಕೋವಿಡ್ (Covid) ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ. ದಕ್ಕೂ ಮುನ್ನ ಕುಮಾರ್ ಅವರಷ್ಟೇ ವ್ಯಾಯಾಮ ಮಾಡುತ್ತಿದ್ದು, ಜೆಎನ್‍ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರು ಇದೀಗ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.

ತಿಹಾರ್ ಜೈಲಿನ ಆಡಳಿತವು ಈ ಹಿಂದೆ ಸುಶೀಲ್ ಕುಮಾರ್ ಅವರನ್ನು ಜೈಲಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಿದ್ದರು. ಆದರೆ ದೆಹಲಿಯಲ್ಲಿ ಕೋವಿಡ್ ಮೂರನೇ ಅಲೆಯ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳನ್ನು ನಿಲ್ಲಿಸಬೇಕಾಯಿತು ಎಂದಿದ್ದಾರೆ.

“ನಾವು ಇದನ್ನು ಮೊದಲೇ ಅನುಮತಿಸಲು ನಿರ್ಧರಿಸಿದ್ದೇವೆ. ಆದರೆ ಕೋವಿಡ್‌ನ ಮೂರನೇ ಅಲೆಯ ದೃಷ್ಟಿಯಿಂದ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಜೈಲಿನ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಸಹ ಕೈದಿಗಳಿಗೆ ಕುಮಾರ್ ಅವರ ತರಗತಿ ಅಧಿಕೃತವಾಗಿ ಕಳೆದ ವಾರ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಜೈಲು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ.  ಈಗ, ಪರಿಸ್ಥಿತಿಯ ಸಹಜ ಸ್ಥಿತಿಗೆ ಬಂದಿದ್ದು, ಜೈಲುಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಪುನಃಸ್ಥಾಪಿಸಲಾಗುತ್ತಿದೆ. ಆದ್ದರಿಂದ, ನಾವು ಸುಶೀಲ್ ಕುಮಾರ್ ಅವರಿಗೆ ತರಬೇತಿ ನೀಡಲು ಅವಕಾಶ ನೀಡುತ್ತೇವೆ. ಆಸಕ್ತಿ ಇರುವ ಇತರ ಕೈದಿಗಳಿಗೆ ಕುಸ್ತಿ ಮತ್ತು ದೈಹಿಕ ಫಿಟ್ನೆಸ್ ಬಗ್ಗೆ ತರಬೇತಿ ನೀಡಲಿದ್ದಾರೆ,” ಎಂದು ಡೈರೆಕ್ಟರ್ ಜನರಲ್ (ದೆಹಲಿ ಕಾರಾಗೃಹ) ಸಂದೀಪ್ ಗೋಯೆಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ವರ್ಷ ಮೇ 4 ರಂದು ಮಧ್ಯಾಹ್ನ 12 ರ ಸುಮಾರಿಗೆ ಛತ್ರಾಸಲ್ ಕ್ರೀಡಾಂಗಣದಲ್ಲಿ ಕುಸ್ತಿಪಟುಗಳ ನಡುವೆ ಜಗಳದ ಸುದ್ದಿ ದೆಹಲಿ ಪೊಲೀಸರಿಗೆ ಸಿಕ್ಕಿತು. ಜಗಳದಲ್ಲಿ ಗಾಯಗೊಂಡಿದ್ದ ಕುಸ್ತಿಪಟು ಸಾಗರ್ ಅವರನ್ನು ಬಿಜೆಆರ್ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಆಪಘಾತ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಸಾಗರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದರೆ ಸುಶೀಲ್ ಕುಮಾರ್ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲೆಂದು ಹೇಳಿಕೊಂಡಿದ್ದರು.

RCB Unbox: ಇಂದು ಆರ್​​ಸಿಬಿ ಹೊಸ ನಾಯಕನ ಘೋಷಣೆ: ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?

IND vs WI: ಮಂದಾನ-ಕೌರ್ ಶತಕದಾಟಕ್ಕೆ ಬೆವರಿದ ವೆಸ್ಟ್ ಇಂಡೀಸ್​: ಕೆರಿಬಿಯನ್ನರಿಗೆ 318 ರನ್​ಗಳ ಟಾರ್ಗೆಟ್