RCB Unbox: ಇಂದು ಆರ್ಸಿಬಿ ಹೊಸ ನಾಯಕನ ಘೋಷಣೆ: ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?
RCB New Captain, IPL 2022: ಆರ್ಸಿಬಿ ತಂಡದ ಸಾರಥಿಯ ಘೋಷಣೆ ಇನ್ನೂ ಆಗಿಲ್ಲ. ಇದಕ್ಕೆ ಇಂದು ಮುಹೂರ್ತ ಇಡಲಾಗಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಆರ್ಸಿಬಿ ಫ್ರಾಂಚೈಸಿ ಇಂದು ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದು ನೂತನ ನಾಯಕ ಹೆಸರು ಪ್ರಕಟಿಸಲಿದೆ.
ಬಹುನಿರೀಕ್ಷಿತ ಐಪಿಎಲ್ 2022 (IPL 2022) ಮಿಲಿಯನ್ ಡಾಲರ್ ಟೂರ್ನಿಗೆ ಚಾಲನೆ ಸಿಗಲು ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಉಳಿದಿವೆ. 10 ತಂಡಗಳನ್ನು ಹೊತ್ತ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 26 ರಿಂದ ಶುರುವಾಗಲಿದೆ. ಪ್ರತಿ ಬಾರಿ ಈ ಸಲ ಕಮ್ ನಮ್ದೆ ಎಂಬ ವಿಶ್ವಾಸದೊಂದಿಗೆ ಕಣಕ್ಕಿಳಿಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಈ ಬಾರಿ ಮತ್ತಷ್ಟು ಬಲಷ್ಠವಾಗಿದ್ದು ವಿಶ್ವಾಸ ಮೂಡಿಸಿದೆ. ಆದರೆ, ಆರ್ಸಿಬಿ ತಂಡದ ಸಾರಥಿಯ ಘೋಷಣೆ ಇನ್ನೂ ಆಗಿಲ್ಲ. ಇದಕ್ಕೆ ಇಂದು ಮುಹೂರ್ತ ಇಡಲಾಗಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಆರ್ಸಿಬಿ (RCB) ಫ್ರಾಂಚೈಸಿ ಇಂದು ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದು ನೂತನ ನಾಯಕ ಹೆಸರು ಪ್ರಕಟಿಸಲಿದೆ. ಇದರ ಜೊತೆಗೆ ಇನ್ನಷ್ಟು ಸರ್ಪ್ರೈಸ್ ನಿರೀಕ್ಷಿಸಲಾಗಿದೆ. ಹಾಗಾದ್ರೆ ಈ ಕಾರ್ಯಕ್ರಮ ಎಷ್ಟು ಗಂಟೆಗೆ ಆರಂಭ?, ನೇರಪ್ರಸಾರ ವೀಕ್ಷಿಸುವುದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.
ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಮ್ಯೂಸಿಯಂ ಕ್ರಾಸ್ ರೋಡ್‌ನಲ್ಲಿ ಆರ್ಸಿಬಿ ಫ್ರಾಂಚೈಸಿ ತನ್ನ 14 ವರ್ಷಗಳ ಪಯಣವನ್ನು ಆಚರಿಸಲಿದೆ. ಇದರಲ್ಲಿ ಹೊಸ ನಾಯಕನ ಹೊರತಾಗಿ ನೂತನ ಜೆರ್ಸಿ ಕೂಡ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದ್ದು ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಇದರ ನೇರಪ್ರಸಾರವನ್ನು ನೀವು ಆರ್ಸಿಬಿಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್, ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ನಲ್ಲಿ ವೀಕ್ಷಿಸಬಹುದು.
ಪ್ರತಿ ದಿನ ನೂತನ ನಾಯಕನಿಗೆ ಸಂಬಂಧ ಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ವಿಶೇಷ ಪೋಸ್ಟ್ ಹಾಕುತ್ತಿದೆ. ವಿರಾಟ್ ಕೊಹ್ಲಿ ಕೂಡ ಮಾತನಾಡಿರುವ ವಿಡಿಯೋ ಒಂದನ್ನು ಬೆಂಗಳೂರು ಫ್ರಾಂಚೈಸಿ ಹಂಚಿಕೊಂಡಿದೆ. “ಕೆಲವು ಅಪ್ಡೇಟ್ಗಳು ಸದ್ಯದಲ್ಲೇ ಎಲ್ಲರಿಗೂ ತಿಳಿಯಲಿದೆ. ಮತ್ತೊಂದು ಕುತೂಹಲದ ಐಪಿಎಲ್ ಅನ್ನು ಎದುರು ನೋಡುತ್ತಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ….,” ಎಂದು ಹೇಳಿ ಅರ್ಧದಲ್ಲೇ ನಿಲ್ಲಿಸಿ ಕೊಹ್ಲಿ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ.
ಈಗಾಗಲೇ 2022 ಐಪಿಎಲ್ಗಾಗಿ ಎಲ್ಲಾ ತಂಡಗಳು ತಮ್ಮ ನಾಯಕರುಗಳನ್ನು ಬಹಿರಂಗಪಡಿಸಿದೆ. ಒಟ್ಟು 8 ಫ್ರಾಂಚೈಸಿಗಳು ಭಾರತೀಯರನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ ಆರ್ಸಿಬಿ ಮಾತ್ರ ಕೊಹ್ಲಿಯಿಂದ ತೆರವಾಗಿರುವ ಸ್ಥಾನಕ್ಕೆ ಇನ್ನೂ ಅಂತಿಮ ಹೆಸರನ್ನು ಪ್ರಕಟಿಸಿಲ್ಲ. ಆದರೆ ಇದಕ್ಕೆಲ್ಲಾ ಮಾರ್ಚ್ 12ರಂದು ಉತ್ತರ ಸಿಗಲಿದೆ ಎಂದು ಫ್ರಾಂಚೈಸಿ ತಿಳಿಸಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ನಾಯಕನಾಗಿ ನೇಮಕ ಮಾಡಬಹುದು ಎನ್ನಲಾಗುತ್ತಿದೆ. ನಾಯಕತ್ವ ಸ್ಥಾನಕ್ಕೆ ಫಾಫ್ ಡುಪ್ಲೆಸಿಸ್ ನೆಚ್ಚಿನ ಆಯ್ಕೆಯಾಗಿದ್ದರೂ ಕೂಡಾ ಫ್ರಾಂಚೈಸಿ ಮ್ಯಾಕ್ಸ್‌ವೆಲ್ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದೆ ಎನ್ನಲಾಗಿದೆ. ಇವರಲ್ಲದೆ ತಂಡದಲ್ಲಿ ದಿನೇಶ್ ಕಾರ್ತಿಕ್ ಹೆಸರು ಕೂಡ ಕೇಳಿಬರುತ್ತಿದೆ.
ಆದರೆ ಟೂರ್ನಿಯ ಆರಂಭದ ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಲಭ್ಯರಿಲ್ಲ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗುತ್ತಿದ್ದು ಅದೇ ಸಮಯಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾದಲ್ಲಿ ವಿವಾಹವಾಗುತ್ತಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಕೆಲ ಆರಂಭಿಕ ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯರಾಗಲಿದ್ದಾರೆ. ಹೀಗೆ ನಾಯಕತ್ವದ ವಿಚಾರದಲ್ಲಿ ಅನೇಕ ಗೊಂದಲಗಳಿದ್ದು, ಇದಕ್ಕೆಲ್ಲ ಎಂದು ತೆರೆಬೀಳಲಿದೆ.
IND vs WI: ಮಂದಾನ-ಕೌರ್ ಶತಕದಾಟಕ್ಕೆ ಬೆವರಿದ ವೆಸ್ಟ್ ಇಂಡೀಸ್: ಕೆರಿಬಿಯನ್ನರಿಗೆ 318 ರನ್ಗಳ ಟಾರ್ಗೆಟ್
IND vs SL: ಇಂದಿನಿಂದ ಭಾರತ-ಶ್ರೀಲಂಕಾ ದ್ವಿತೀಯ ಟೆಸ್ಟ್: ಪಿಂಕ್ ಬಾಲ್ ಕದನಕ್ಕೆ ಸಜ್ಜಾದ ಚಿನ್ನಸ್ವಾಮಿ