ಆಸ್ಟ್ರೇಲಿಯಾಕ್ಕೆ ಸಾಧ್ಯವಾಗದಿದ್ದನ್ನು ಭಾರತ ಮಾಡಿ ತೋರಿಸಿದೆ; ಪಾಕ್ ಮಾಜಿ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್
ಭಾರತ ಮತ್ತೊಂದು ತಂಡವನ್ನು ರಚಿಸುವ ಆಲೋಚನೆ ಅದ್ಭುತವಾಗಿದೆ. ಭಾರತ ಇಂದು ಏನು ಮಾಡಿದೆಯೋ, ಅದನ್ನು ಆಸ್ಟ್ರೇಲಿಯಾ ಕೂಡ ಕೆಲವು ವರ್ಷಗಳ ಹಿಂದೆ ಮಾಡಿದೆ, ಆದರೆ ಅವರು ಅದರಲ್ಲಿ ಯಶಸ್ಸನ್ನು ಗಳಿಸಲಿಲ್ಲ.
ಈ ವರ್ಷದ ಜುಲೈನಲ್ಲಿ ಟೀಮ್ ಇಂಡಿಯಾ ಎರಡು ವಿಭಿನ್ನ ದೇಶಗಳಲ್ಲಿ ಕ್ರಿಕೆಟ್ ಸರಣಿ ಆಡಲಿದೆ. ಎರಡು ವಿಭಿನ್ನ ದೇಶಗಳಲ್ಲಿ ಕ್ರಿಕೆಟ್ ಸರಣಿಯ ನೆಪದಲ್ಲಿ ಭಾರತದ ಆಟಗಾರರು ಒಂದೇ ಸಮಯದಲ್ಲಿ ಹಾಜರಾಗಲಿದ್ದಾರೆ. ಸಾಮಾನ್ಯವಾಗಿ, ಕ್ರಿಕೆಟ್ ಆಡುವ ದೇಶಗಳಿಗೆ ತಂಡವನ್ನು ಆಯ್ಕೆ ಮಾಡುವುದು ಕಷ್ಟಕರವಾಗುತ್ತದೆ. ಆದರೆ ಭಾರತವು ಎರಡು ತಂಡಗಳಾಗಿ ವಿಂಗಡಿಸಲಾದ ಆಟಗಾರರೊಂದಿಗೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಪ್ರವಾಸದಲ್ಲಿರಲಿದೆ. ವಾಸ್ತವವಾಗಿ, ಇದು ಟೀಮ್ ಇಂಡಿಯಾದ ಬೆಂಚ್ ಶಕ್ತಿ. ಭಾರತೀಯ ತಂಡದಲ್ಲಿ, ಒಬ್ಬ ಅಥವಾ ಇಬ್ಬರು ಆಟಗಾರರು ಗಾಯಕ್ಕೆ ತುತ್ತಾದರೆ ತಂಡಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಪ್ರತಿ ವಿಭಾಗಕ್ಕೂ ಒಂದು ಅಥವಾ ಎರಡು ಆಯ್ಕೆಗಳು ಭಾರತದಲ್ಲಿ ಲಭ್ಯವಿದೆ. ಭಾರತದ ಇದೇ ಬಲವನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೊಗಳಿ ಮಾತಾನಾಡಿದ್ದಾರೆ.
90 ಅಥವಾ 2000 ರ ದಶಕಗಳಲ್ಲಿ ಆಸ್ಟ್ರೇಲಿಯಾ ತನ್ನ ಆಟಗಾರರ ಆಯ್ಕೆಯಲ್ಲಿ ಸಾಧಿಸಲಾಗದದ್ದನ್ನು ಕ್ರಿಕೆಟ್‌ನಲ್ಲಿ ಭಾರತವು ಸಾಧಿಸಿದೆ ಎಂದು ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ. ಮಾಜಿ ಪಾಕ್ ನಾಯಕನ ಈ ಮಾತಿನ ಹಿಂದೆ ಭಾರತದ ಬೆಂಚ್ ಸಾಮರ್ಥ್ಯದ ಬಗ್ಗೆಗಿನ ಉತ್ತಮ ಅಭಿಪ್ರಾಯ ಹೊರಬಿದ್ದಿದೆ. ವಾಸ್ತವವಾಗಿ, ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತದ ಎ-ತಂಡ ಜೂನ್ 2 ರಂದು ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಿದೆ. ಅದೇ ಸಮಯದಲ್ಲಿ ಭಾರತದ ಬಿ-ತಂಡ ಕೂಡ ಜುಲೈನಲ್ಲಿ ಶ್ರೀಲಂಕಾಕ್ಕೆ ಹೋಗಲಿದೆ.
ಆಸ್ಟ್ರೇಲಿಯಾಕ್ಕೆ ಸಾಧ್ಯವಾಗದಿದ್ದನ್ನು ಭಾರತ ಮಾಡಿತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ತನ್ನ ವೀಡಿಯೊದಲ್ಲಿ ಇಂಜಮಾಮ್, ಭಾರತ ಮತ್ತೊಂದು ತಂಡವನ್ನು ರಚಿಸುವ ಆಲೋಚನೆ ಅದ್ಭುತವಾಗಿದೆ. ಭಾರತ ಇಂದು ಏನು ಮಾಡಿದೆಯೋ, ಅದನ್ನು ಆಸ್ಟ್ರೇಲಿಯಾ ಕೂಡ ಕೆಲವು ವರ್ಷಗಳ ಹಿಂದೆ ಮಾಡಿದೆ, ಆದರೆ ಅವರು ಅದರಲ್ಲಿ ಯಶಸ್ಸನ್ನು ಗಳಿಸಲಿಲ್ಲ. ಎರಡು ದೇಶಗಳಲ್ಲಿ ಸರಣಿಯನ್ನು ಆಡಲು ರಾಷ್ಟ್ರೀಯ ಕ್ರಿಕೆಟ್ ತಂಡವೊಂದು ಮೊದಲ ಬಾರಿಗೆ ಏಕಕಾಲದಲ್ಲಿ ಹಾಜರಾಗಲಿದೆ. ಆಸ್ಟ್ರೇಲಿಯಾಕ್ಕೆ ಇದೇ ರೀತಿಯ ಅವಕಾಶಗಳಿದ್ದಾಗ, ಅಂದರೆ 1995 ರಿಂದ 2005-2010ರವರೆಗೆ, ಅವರು ಈ ರೀತಿಯ ಎರಡು ತಂಡಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ. ಆದರೆ ಭಾರತ ಈಗ ಈ ಕೆಲಸವನ್ನು ಮಾಡಿದೆ.
ಬಿ-ಟೀಮ್ ಸಹ ಎ-ಟೀಮ್ನಂತೆ ಅದ್ಭುತವಾಗಿದೆ ಭಾರತದ ಹಿರಿಯ ಆಟಗಾರರು ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದರಿಂದ ಯುವ ಪ್ರತಿಭೆಗಳಿಗೆ ಶ್ರೀಲಂಕಾ ಪ್ರವಾಸಕ್ಕೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಭಾರತದ ಎರಡನೇ ತಂಡವು ಇಂಗ್ಲೆಂಡ್‌ಗೆ ಹೋದ ತಂಡದಷ್ಟೇ ಪ್ರಬಲವಾಗಿರುತ್ತದೆ ಎಂದು ಇಂಜಮಾಮ್ ಹೇಳಿದರು. ಈ ಕ್ರೆಡಿಟ್ ಐಪಿಎಲ್ಗೆ ಹೋಗುತ್ತದೆ. ಅಲ್ಲದೆ ಭಾರತ ತನ್ನ ಪ್ರಥಮ ದರ್ಜೆ ಕ್ರಿಕೆಟ್‌ನ ರಚನೆಯನ್ನು ಮೊದಲು ಸರಿಪಡಿಸಿದ್ದೆ ಇದಕ್ಕೆಲ್ಲ ಕಾರಣ. ತದನಂತರ ಎರಡನೇ ತಂಡವನ್ನು ರಚಿಸುವಲ್ಲಿ ಐಪಿಎಲ್ ದೊಡ್ಡ ಪಾತ್ರ ವಹಿಸಿದೆ. ಹಾಗೆಯೇ ರಾಷ್ಟ್ರೀಯ ತಂಡದೊಂದಿಗೆ ಆಡಲು ಸಿದ್ಧವಾಗಿರುವ ಇಂತಹ 50 ಆಟಗಾರರನ್ನು ಭಾರತ ಸಿದ್ಧಪಡಿಸಿದೆ ಎಂದು ಪಾಕ್ ಆಟಗಾರ ಭಾರತದ ಕ್ರಿಕೆಟ್ ತಂಡದ ಬಗ್ಗೆ ಹೋಗಳಿ ಮಾತಾನಾಡಿದ್ದಾರೆ.