ರಾಷ್ಟ್ರೀಯ ಹಾಕಿ ತಂಡದ ಮಾಜಿ ಕೋಚ್ ಕನ್ನಡಿಗ ಮನೋಹರ್ ಎಸ್ ಕಟ್ಕೆ ನಿಧನ
ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಿವೃತ್ತಿಯ ಬಳಿಕವು ಇವರನ್ನು ಹಾಕಿ ಕೋಚ್ ಆಗಿ ಬಳಸಿಕೊಳ್ಳುತ್ತಿತ್ತು. ನಿವೃತ್ತಿ ಬಳಿಕ ಬಡ ಹಾಗೂ ಗ್ರಾಮೀಣ ಬಾಗದ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದರು.
ಭಾರತದ ರಾಷ್ಟ್ರೀಯ ಹಾಕಿ ತಂಡದ ತರಬೇತುದಾರರಾಗಿದ್ದ ಮನೋಹರ್ ಎಸ್ ಕಟ್ಕೆ (66 ವರ್ಷ) ಅವರು ತೀವ್ರ ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ (ಕಟ್ಕೆ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ). ಕರುಳಿಗೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದ ಕಟ್ಕೆ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಟ್ಕೆ ಅವರು ಇಂದು ವಿಧಿವಶರಾಗಿದ್ದಾರೆ.
ನಿವೃತ್ತಿಯ ಬಳಿಕವು ಸೇವೆ ಸಲ್ಲಿಸಿದ್ದಾರೆ ರಾಷ್ಟ್ರೀಯ ಹಾಕಿ ತಂಡಕ್ಕೆ ಕೋಚ್ ಆಗಿ ತಮ್ಮ ಸುದೀರ್ಘ ಸೇವೆ ಸಲ್ಲಿಸಿದ ನಂತರ 6 ವರ್ಷದ ಹಿಂದೆ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದರು. ಆದರೆ ಇವರ ಕಾರ್ಯವೈಖರಿಯನ್ನು ಗಮನಿಸಿದ್ದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಿವೃತ್ತಿಯ ಬಳಿಕವು ಇವರನ್ನು ಹಾಕಿ ಕೋಚ್ ಆಗಿ ಬಳಸಿಕೊಳ್ಳುತ್ತಿತ್ತು. ನಿವೃತ್ತಿ ಬಳಿಕ ಬಡ ಹಾಗೂ ಗ್ರಾಮೀಣ ಬಾಗದ ಪ್ರತಿಭಾವಂತ ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದರು.
ಕಟ್ಕೆ ಅವರು ಕೇವಲ ಹಾಕಿ ತಂಡದ ಕೋಚ್ ಮಾತ್ರವಲ್ಲದೆ, ಬೆಂಗಳೂರು ವಿಶ್ವವಿದ್ಯಾಲಯದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಇವರ ತರಬೇತಿಯಲ್ಲಿ ಬೆಂಗಳೂರು ದಕ್ವಿಣ ವಿಭಾಗವು ರಾಜ್ಯದ ಪರವಾಗಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿತ್ತು. ಜೊತೆಗೆ ಕರ್ನಾಟಕದಿಂದ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿರುವ ಹಲವು ಪ್ರಖ್ಯಾತ ಹಾಕಿ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಜೊತೆಗೆ ಇವರ ತರಬೇತಿಯಲ್ಲಿ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಮಾರು 20 ಆಟಗಾರರು ಭಾಗವಹಿಸಿದ್ದಾರೆ.
ಮನೋಹರ್ ಎಸ್ ಕಟ್ಕೆ ಗರಡಿಯಲ್ಲಿ ಪಳಗಿದವರು ಅರ್ಜುನ್ ಹಾಲಪ್ಪ, ರಘುನಾಥ್ ವಿ.ಆರ್ ಎಸ್.ಕೆ.ಉಥಪ್ಪ ವಿಕ್ರಮ್ ಕಾಂತ್ ವಿನಯ್
ಮನೋಹರ್ ಎಸ್ ಕಟ್ಕೆ ಅವರ ಜೀವಮಾನ ಸಾಧನೆಗಾಗಿ ಹಲವಾರು ಪ್ರಶಸ್ತಿಗಳು ಸಂಧಿವೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಸರ್ಕಾರದಲ್ಲಿ ಇವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಅನೇಕ ಅತ್ಯುತ್ತಮ ತರಬೇತುದಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ.