ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಅಂದರೆ ಜುಲೈನಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತದ 16 ಸದಸ್ಯರ ಹಾಕಿ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ 5 ಹೊಸ ಆಟಗಾರರು ಒಲಿಂಪಿಕ್ಸ್ಗೆ ಪದಾರ್ಪಣೆ ಮಾಡಲಿದ್ದಾರೆ. ಹರ್ಮನ್ಪ್ರೀತ್ ಸಿಂಗ್ ಮತ್ತೊಮ್ಮೆ ಟೀಂ ಇಂಡಿಯಾದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಜುಲೈ 26 ರಿಂದ ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಆಗಸ್ಟ್ 11 ರಂದು ತೆರೆ ಬೀಳಲಿದೆ. ಕಳೆದ ಬಾರಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಪ್ರಸ್ತುತ ಅಯ್ಕೆಯಾಗಿರುವ ಹಾಕಿ ತಂಡದಲ್ಲಿ ಪ್ರಮುಖವಾಗಿ ಐದು ಆಟಗಾರರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಆಡಲಿದ್ದಾರೆ. ಈ ಐವರಲ್ಲಿ ಜರ್ಮನ್ಪ್ರೀತ್ ಸಿಂಗ್, ಸಂಜಯ್, ರಾಜ್ ಕುಮಾರ್ ಪಾಲ್, ಅಭಿಷೇಕ್, ಸುಖಜಿತ್ ಸಿಂಗ್ ಸೇರಿದ್ದಾರೆ. ಇನ್ನು ತಂಡವನ್ನು ಪ್ರಕಟಿಸಿದ ಬಳಿಕ ಮಾತನಾಡಿದ ಭಾರತ ಹಾಕಿ ತಂಡದ ಕೋಚ್ ಕ್ರೇಗ್ ಫುಲ್ಟನ್, ‘ಪ್ಯಾರಿಸ್ ಒಲಿಂಪಿಕ್ಸ್ಗೆ ಆಟಗಾರರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಏಕೆಂದರೆ ನಮ್ಮಲ್ಲಿ ಪ್ರತಿಭಾವಂತ ಆಟಗಾರರ ಕೊರತೆಯಿಲ್ಲ. ತಂಡದಲ್ಲಿ ಆಯ್ಕೆಯಾಗಿರುವ ಎಲ್ಲ ಆಟಗಾರರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸವಿದೆ. ಈ ಬಾರಿ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ಉತ್ತಮ ಮಿಶ್ರಣವಿದೆ ಎಂದಿದ್ದಾರೆ.
ಭಾರತ ಹಾಕಿ ತಂಡ: ಹರ್ಮನ್ಪ್ರೀತ್ ಸಿಂಗ್ (ನಾಯಕ), ಹಾರ್ದಿಕ್ ಸಿಂಗ್ (ಉಪನಾಯಕ), ಪಿಆರ್ ಶ್ರೀಜೇಶ್ (ಗೋಲ್ಕೀಪರ್), ಮನ್ಪ್ರೀತ್ ಸಿಂಗ್ (ಮಿಡ್ಫೀಲ್ಡರ್), ಜರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಸುಮಿತ್ ಮತ್ತು ಸಂಜಯ್, ರಾಜ್ ಕುಮಾರ್ ಪಾಲ್, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್ ಮತ್ತು ಗುರ್ಜಂತ್ ಸಿಂಗ್.
ಮೀಸಲು ಆಟಗಾರರು: ಗೋಲ್ಕೀಪರ್ ಕೃಷ್ಣ ಬಹದ್ದೂರ್ ಪಾಠಕ್, ಮಿಡ್ಫೀಲ್ಡರ್ ನೀಲಕಾಂತ್ ಶರ್ಮಾ ಮತ್ತು ಡಿಫೆಂಡರ್ ಜುಗರಾಜ್ ಸಿಂಗ್.
Barely any surprises in India’s #hockey team for #ParisOlympics. Harman captain, Sreejesh in goal. No Hundal, who was impressive in the Europe leg of the Pro League. And Nilakanta, from the Tokyo squad, is in as a reserve. pic.twitter.com/6WfXFOb3rH
— Mihir Vasavda (@mihirsv) June 26, 2024
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತ ತಂಡ ಪೂಲ್-ಬಿಯಲ್ಲಿ ಸ್ಥಾನ ಪಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಡಲು ಅಗ್ರ ನಾಲ್ಕು ತಂಡಗಳಲ್ಲಿ ಸ್ಥಾನ ಪಡೆಯಬೇಕಾಗಿದೆ. ಉಳಿದಂತೆ ಭಾರತ ಯಾವ್ಯಾವ ತಂಡಗಳನ್ನು ಎದುರಿಸಲಿದೆ ಎಂಬುದರ ವಿವರ ಇಲ್ಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Wed, 26 June 24