Paris Olympics 2024: ಫೈನಲ್​ನಲ್ಲಿ ಸ್ವಪ್ನಿಲ್: ಭಾರತದ ಇಂದಿನ ವೇಳಾಪಟ್ಟಿ ಹೀಗಿದೆ

|

Updated on: Aug 01, 2024 | 7:27 AM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಆಗಸ್ಟ್ 1 ರಂದು ಭಾರತೀಯರು ಮೂರು ಪದಕ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಶೂಟಿಂಗ್​ನಲ್ಲಿ ಸ್ವಪ್ನಿಲ್ ಫೈನಲ್​ನಲ್ಲಿದ್ದರೆ, ಅತ್ತ ರೇಸ್ ವಾಕಿಂಗ್​ನಲ್ಲಿ ಪರಮ್‌ಜೀತ್ ಸಿಂಗ್ ಬಿಶ್ತ್, ಆಕಾಶ್ ಸಿಂಗ್, ವಿಕಾಶ್ ಸಿಂಗ್, ಪ್ರಿಯಾಂಕಾ ಗೋಸ್ವಾಮಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಇಂದಿನ ಸ್ಪರ್ಧೆಗಳಲ್ಲಿ ಭಾರತವು ಪದಕವನ್ನು ಎದುರು ನೋಡಬಹುದು.

Paris Olympics 2024: ಫೈನಲ್​ನಲ್ಲಿ ಸ್ವಪ್ನಿಲ್: ಭಾರತದ ಇಂದಿನ ವೇಳಾಪಟ್ಟಿ ಹೀಗಿದೆ
Swapnil Kusale
Follow us on

ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ 50 ಮೀ ರೈಫಲ್ 3 ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಫೈನಲ್​ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಅದರಂತೆ ಇಂದು ನಡೆಯಲಿರುವ ಫೈನಲ್​ ಸುತ್ತಿನಲ್ಲಿ ಸ್ವಪ್ನಿಲ್ ಕುಸಾಲೆ ಕೂಡ ಕಣಕ್ಕಿಳಿಯುತ್ತಿದ್ದು, ಭಾರತವು ಮೂರನೇ ಪದಕವನ್ನು ನಿರೀಕ್ಷಿಸಬಹುದು.

ಇದಲ್ಲದೆ, ರೇಸ್‌ವಾಕಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್​, ಶೂಟಿಂಗ್ ಮತ್ತು ಹಾಕಿಯಲ್ಲೂ ಭಾರತೀಯರು ಕಣಕ್ಕಿಳಿಯಲಿದ್ದಾರೆ. ಇದರಲ್ಲಿ ಬಹುತೇಕ ಸ್ಪರ್ಧೆಗಳು ಕ್ವಾರ್ಟರ್ ಫೈನಲ್ ಆಗಿದ್ದು, ಹೀಗಾಗಿ ಮುಂದಿನ ಹಂತಕ್ಕೇರಲು ಇಂದಿನ ಸ್ಪರ್ಧೆಗಳು ನಿರ್ಣಾಯಕ. ಅದರಂತೆ ಭಾರತೀಯ ಕ್ರೀಡಾಪಟುಗಳು ಇಂದು ಕಣಕ್ಕಿಳಿಯಲಿರುವ ಸ್ಪರ್ಧೆಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಆಗಸ್ಟ್ 1 ರ ಭಾರತೀಯರ ವೇಳಾಪಟ್ಟಿ:

ಅಥ್ಲೆಟಿಕ್ಸ್:

  • 11 AM IST – ಪುರುಷರ ರೇಸ್‌ವಾಕಿಂಗ್ ಫೈನಲ್:  ಪರಮ್‌ಜೀತ್ ಸಿಂಗ್ ಬಿಶ್ತ್, ಆಕಾಶ್ ಸಿಂಗ್, ವಿಕಾಶ್ ಸಿಂಗ್ (ಪದಕ ಸ್ಪರ್ಧೆ)
  • 12:50 PM IST – ಮಹಿಳೆಯರ ರೇಸ್‌ವಾಕಿಂಗ್ ಫೈನಲ್:  ಪ್ರಿಯಾಂಕಾ ಗೋಸ್ವಾಮಿ (ಪದಕ ಸ್ಪರ್ಧೆ)

ಬ್ಯಾಡ್ಮಿಂಟನ್:

  • 4:30 PM IST- ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ vs ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ (ಮಲೇಷ್ಯಾ)
  • 5:40 PM IST – ಪುರುಷರ ಸಿಂಗಲ್ಸ್​:  ಲಕ್ಷ್ಯ ಸೇನ್ vs ಹೆಚ್​ಎಸ್​ ಪ್ರಣಯ್
  • 10 PM ರಿಂದ – ಮಹಿಳೆಯರ ಸಿಂಗಲ್ಸ್​: ಪಿವಿ ಸಿಂಧು vs ಹೆ ಬಿಂಗ್ ಜಿಯಾವೊ

ಇದನ್ನೂ ಓದಿ: Manu Bhaker: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಗಾಲ್ಫ್:

  • 12:30 PM IST – ಪುರುಷರ ವೈಯಕ್ತಿಕ ಸುತ್ತು- ಗಗನ್ಜೀತ್ ಭುಲ್ಲರ್ ಮತ್ತು ಶುಭಂಕರ್ ಶರ್ಮಾ

ಶೂಟಿಂಗ್:

  • 1 PM IST – ಪುರುಷರ 50 ಮೀ ರೈಫಲ್‌ ಫೈನಲ್- ಸ್ವಪ್ನಿಲ್ ಕುಸಾಲೆ
  • 3:30 PM IST – ಮಹಿಳೆಯರ 50 ಮೀ ರೈಫಲ್ ಅರ್ಹತಾ ಸುತ್ತು- ಸಿಫ್ಟ್ ಕೌರ್ ಸಮ್ರಾ ಮತ್ತು ಅಂಜುಮ್ ಮೌದ್ಗಿಲ್

ಹಾಕಿ:

  • 1:30 PM IST – ಭಾರತ vs ಬೆಲ್ಜಿಯಂ

ಬಾಕ್ಸಿಂಗ್:

  • 2:30 PM IST – ಮಹಿಳೆಯರ 50 ಕೆಜಿ: ನಿಖಾತ್ ಝರೀನ್ vs ವು ಯು (ಚೀನಾ)

ಬಿಲ್ಲುಗಾರಿಕೆ:

  • 2:31 PM IST – ಪುರುಷರ ರೌಂಡ್-16: ಪ್ರವೀಣ್ ಜಾಧವ್ vs ಕೈ ವೆಂಚಾವೊ (ಚೀನಾ)

ನೌಕಾಯಾನ:

  • 3:45 PM IST- ಪುರುಷರ ಡಿಂಗಿ ರೇಸ್ 1 – ವಿಷ್ಣು ಸರವಣನ್
  • 5:50 PM IST ಪುರುಷರ ಡಿಂಗಿ ರೇಸ್ 2 – ವಿಷ್ಣು ಸರವಣನ್
  • 7:05 PM IST ಮಹಿಳೆಯರ ಡಿಂಗಿ ಓಟ 1 – ನೇತ್ರಾ ಕುಮನನ್
  • 8:13 PM IST ಮಹಿಳೆಯರ ಡಿಂಗಿ ಓಟ 2 – ನೇತ್ರಾ ಕುಮನನ್