ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಇವರ ಜತೆಗೆ ಕಿಶೋರ್ ಜೆನಾ ಕೂಡ ಪಂದ್ಯಾದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಜಾವೆಲಿನ್ ಮಾಸ್ಟರ್ಗಳ ರಣರೋಚಕ ಪಂದ್ಯ ನಡೆಯಲಿದೆ. ಅಷ್ಟಕ್ಕೂ ಈ ಪಂದ್ಯ ಎಲ್ಲಿ? ಯಾವಾಗ? ನಡೆಯಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಭಾರತದ ಕ್ರೀಡಾ ಕ್ಷೇತ್ರದ ಶ್ರೇಷ್ಠೆಯನ್ನು ಹೆಚ್ಚಿಸಿದ ಬಂಗಾರದ ಹುಡುಗ ನೀರಜ್ ಚೋಪ್ರಾ, ಈ ಬಾರಿಯೂ ಚಿನ್ನ ಗೆಲ್ಲುತ್ತಾರೆ ಎಂಬ ಭರವಸೆಯನ್ನು ಭಾರತ ಇಟ್ಟುಕೊಂಡಿದೆ.
ರಿಲಯನ್ಸ್ ಮಾಲೀಕತ್ವದ Viacom18 2024 ರ ಪ್ಯಾರಿಸ್ ಗೇಮ್ಸ್ ಅನ್ನು ಪ್ರಸಾರ ಮಾಡಲಿದೆ. ಇನ್ನು Sports18 ನೆಟ್‌ವರ್ಕ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ JioCinema ಈವೆಂಟ್ನಲ್ಲೂ ಕೂಡ ಪ್ರಸಾರವಾಗಲಿದೆ.
Sports18 – 1 ತಮಿಳು ಮತ್ತು ತೆಲುಗು ಭಾಷೆಯ ಆಯ್ಕೆಗಳ ಜೊತೆಗೆ ಇಂಗ್ಲಿಷ್‌ನಲ್ಲಿ ಕ್ರೀಡಾಕೂಟಗಳನ್ನು ಪ್ರಸಾರ ಮಾಡುತ್ತದೆ. JioCinema – ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಇದೆ.
ಇದನ್ನೂ ಓದಿ: ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಭಾರತದ ಧ್ವಜಧಾರಿ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Tue, 6 August 24