India vs England Test Series: ರವೀಂದ್ರ ಜಡೇಜಾರ ಹೆಬ್ಬಟ್ಟಿನ ಗಾಯ ಮಾಯಲು ಎರಡು ತಿಂಗಳು ಬೇಕೇ; ಗಾವಸ್ಕರ್ ಪ್ರಶ್ನೆ

ಭಾರತ ಸ್ವದೇಶಕ್ಕೆ ವಾಪಸ್ಸಾದ ನಂತರ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್​ ಸರಣಿಗೆ ಜಡೇಜಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರದಿದ್ದ ಕಾರಣ ಒಬ್ಬ ಎಡಗೈ ಸ್ಪಿನ್ನರ್​ನ ಅವಶ್ಯಕತೆಯಿತ್ತು. ಹಾಗಾಗೇ, ಬರೋಡಾದ ನೀಳಕಾಯದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದರು

India vs England Test Series: ರವೀಂದ್ರ ಜಡೇಜಾರ ಹೆಬ್ಬಟ್ಟಿನ ಗಾಯ ಮಾಯಲು ಎರಡು ತಿಂಗಳು ಬೇಕೇ; ಗಾವಸ್ಕರ್ ಪ್ರಶ್ನೆ
ರವೀಂದ್ರ ಜಡೇಜಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 02, 2021 | 7:41 PM

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸಾಧಿಸಲು ಮತ್ತು ಸೀಮಿತ ಓವರುಗಳ ಸರಣಿಗಳಲ್ಲೂ ಭಾರತ ಉತ್ತಮ ಪ್ರದರ್ಶನಗಳನ್ನು ನೀಡಲು ರವೀಂದ್ರ ಜಡೇಜಾ ಉಳಿದವರಿಗಿಂತ ಸ್ವಲ್ಪ ಜಾಸ್ತಿಯೇ ಕೊಡುಗೆ ನೀಡಿದರು ಅಂತ ಹೇಳಿದರೆ ಉತ್ಪ್ರೇಕ್ಷೆಯೆನಿಸದು. ಬ್ಯಾಟಿಂಗ್ ಮತ್ತು ಬೌಲಿಂಗ್- ಎರಡಲ್ಲೂ ಅವರು ಮಿಂಚಿದರು. 2019ರ ಐಸಿಸಿ ವಿಶ್ವಕಪ್​ ನಂತರ ಅವರು ಟೀಮಿನ ಅವಿಭಾಜ್ಯ ಅಂಗವಾಗಿರುವುದು ಸುಳ್ಳಲ್ಲ. ಸಮಾರು ಎರಡು ತಿಂಗಳುಗಳಿಂದ ಅವರು ಹೆಬ್ಬಟ್ಟಿನ ಗಾಯದಿಂದಾಗಿ ಕ್ರಿಕೆಟ್ ಮೈದಾನದಿಂದ ದೂರವಿದ್ದರೂ ಐಸಿಸಿ ಬಿಡುಗಡೆ ಮಾಡಿರುವ ಅಲ್​ರೌಂಡರ್​ಗಳ ರ‍್ಯಾಕಿಂಗ್​ನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​ನಲ್ಲಿ ಹೆಬ್ಬಟ್ಟಿಗೆ ಮಾಡಿಕೊಂಡು ಟೀಮಿನಿಂದ ಹೊರಬಿದ್ದಾಗ ಅವರ ಸ್ಥಾನದಲ್ಲಿ ಯಾರನ್ನಾಡಿಸುವುದು, ಅವರಿಗೆ ಸಮನಾದ ಬದಲೀ ಆಟಗಾರ ಯಾರು ಸಿಕ್ಕಾರು ಅಂತ ಟೀಮ್ ಇಂಡಿಯಾ ಮತ್ತು ಭಾರತದ ಕ್ರಿಕೆಟ್​ ಪ್ರೇಮಿಗಳು ಆತಂಕಕ್ಕೊಳಗಾಗಿದ್ದರು.

ಆದರೆ, ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾದಲ್ಲಿ ಅಡಿದ ವಾಷಿಂಗ್ಟನ್ ಸುಂದರ್ ನಿರಾಶೆಗೊಳಿಸಲಿಲ್ಲ. ತಮಿಳುನಾಡಿನ ಈ ಆಟಗಾರ ಬ್ಯಾಟಿಂಗ್​ನಲ್ಲಿ ಜಾಸ್ತಿ ಮಿಂಚಿದರೂ ಉತ್ತಮ ಬೌಲಿಂಗ್ ಅಕ್ರಮಣ ನಡೆಸಿದರು. ಸ್ವದೇಶಕ್ಕೆ ವಾಪಸ್ಸಾದ ನಂತರ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್​ ಸರಣಿಗೆ ಜಡೇಜಾ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿರದಿದ್ದ ಕಾರಣ ಒಬ್ಬ ಎಡಗೈ ಸ್ಪಿನ್ನರ್​ನ ಅವಶ್ಯಕತೆಯಿತ್ತು. ಹಾಗಾಗೇ, ಬರೋಡಾದ ನೀಳಕಾಯದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದರು.

ತಮಗೆ ದೊರೆತ ಅವಕಾಶವನ್ನು ಪಟೇಲ್ ಉಪಯೋಗಿಸಿಕೊಂಡಿದ್ದಾದರೂ ಹೇಗೆ? ಎರಡು ಟೆಸ್ಟ್​ಗಳಲ್ಲಿ ಮೂರು ಬಾರಿ 5 ವಿಕೆಟ್​ ಪಡೆಯುವ ಸಾಧನೆ ! ಯಾವ ಬೌಲರ್ ತಾನೆ ಇಂಥ ಆರಂಭ ಟೆಸ್ಟ್​ ಕ್ರಿಕೆಟ್​ನಲ್ಲಿ ಸಿಕ್ಕೀತೆಂದು ಕನಸು ಕಂಡಾನು? ಸುಂದರ್ ಮತ್ತು ಅಕ್ಷರ್ ತಮಗೆ ನೀಡಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಾಳಲು ಬಂದಿದ್ದೇವೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

Axar Patel

ಅಕ್ಷರ್ ಪಟೇಲ್

ಪರಿಸ್ಥಿತಿ ಹೀಗಿರುವಾಗ ಜಡೇಜಾ ಗತಿಯೇನು? ಅವರು ಟೀಮಿಗೆ ವಾಪಸ್ಸಾಗುವುದು ಯಾವಾಗ? ಅವರ ಗಾಯ ಇನ್ನೂ ವಾಸಿಯಾಗಿಲ್ಲವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಇದೇ ಪ್ರಶ್ನೆಯನ್ನು ಭಾರತದ ಮಾಜಿ ಲೆಜಂಡರಿ ಆರಂಭ ಆಟಗಾರ ಸುನಿಲ್ ಗವಾಸ್ಕರ್ ಅವರನ್ನು ಕೇಳಿದಾಗ ಗಲಿಬಿಲಿಗೊಳಗಾದರು. ಕ್ರೀಡಾ ಚಾನೆಲ್​ನಲ್ಲಿ ಕ್ರಿಕೆಟ್​ ಬಗ್ಗೆ ಮಾತುಕತೆ ನಡೆಯುತ್ತಿದ್ದ ಸಮಯದಲ್ಲಿ ಈ ಪ್ರಶ್ನೆಯನ್ನು ಅವರ ಮುಂದಿಡಲಾಗಿತ್ತು.

‘ತನ್ನ ಹೆಬ್ಬಟ್ಟಿಗೆ ಅಂಥದ್ದೇನಾಗಿರಬಹುದೆಂದು ಜಡೇಜಾ ಯೋಚಿಸುತ್ತಿಬಹುದು. ಹೆಬ್ಬಟ್ಟಿಗಾದ ಗಾಯ ಮಾಯಲು ಎರಡು ತಿಂಗಳು ಬೇಕೇ? ಅಬ್ಬಾ ನಾ ಕಾಣೆ! ನಿಮಗೆ ನೆನಪಿರಬಹುದು, ಅವರು (ಜಡೇಜಾ) ಗಾಯಗೊಂಡಿದ್ದು ಜನೆವರಿ 10 ರಂದು. ಆಂದರೆ, ಅದು ಸಂಭವಿಸಿ ಹೆಚ್ಚು ಕಡಿಮೆ ಎರಡು ತಿಂಗಳಾಗಿದೆ, ಅವರ ಗಾಯದ ಸ್ವರೂಪ ನನಗಂತೂ ಅರ್ಥವಾಗುತ್ತಿಲ್ಲ’ ಎಂದು ಸನ್ನಿ ಹೇಳಿದರು.

ಅದೇ ಚರ್ಚೆಯಲ್ಲಿ ಭಾಗಿಯಾಗಿದ್ದ ಇಂಗ್ಲೆಂಡ್​ನ ಮಾಜಿ ಸ್ಪಿನ್ನರ್ ಮತ್ತು ಈಗ ಕಾಮೆಂಟರಿ ಪ್ಯಾನೆಲ್​ನಲ್ಲಿರುವ ಗ್ರಹಾಂ ಸ್ವ್ಯಾನ್ ಅವರು ಅಕ್ಷರ್ ಇಂಗ್ಲೆಂಡ್​ ತಂಡಕ್ಕೆ ಸಾಕಷ್ಟು ಹಾನಿ ಮಾಡಿಯಾಗಿದೆ. ಅವರೀಗ ರಜೆ ಮೇಲೆ ಹೋಗುವುದು ಒಳಿತು ಎಂದಿದ್ದಾರೆ.

‘ನೀವೇನೇ ಹೇಳಿ, ನಾನಂತೂ ಜಡೇಜಾ ಅವರ ಅತಿದೊಡ್ಡ ಫ್ಯಾನ್, ಅಕ್ಸರ್​ ಪಟೇಲ್ ಪರ್ಫಾರ್ಮ್​ ಮಾಡುತ್ತಿರುವುದನ್ನು ನೋಡಿದರೆ, ಅವರು ಒಂದು ವಾರದ ಮಟ್ಟಿಗೆ ರಜೆ ಮೇಲೆ ಹೋಗಬೇಕು, ಹಾಗಾದರೆ ಮಾತ್ರ ಜಡೇಜಾಗೆ ಆಡುವ ಅವಕಾಶ ಸಿಗುತ್ತದೆ. ಮತ್ತೊಂದು ಐಡಿಯಾ ನನಗೆ ಹೊಳೆಯುತ್ತಿದೆ. ಜಡೇಜಾ ಅವರು ಇಂಗ್ಲೆಂಡ್ ಪರ ಆಡಬಹುದು!’ ಎಂದು ಸ್ವ್ಯಾನ್ ಹೇಳಿದ್ದಾರೆ.

ಇದನ್ನೂ ಓದಿIndia vs England Test Series: ಮೊಟೆರಾದ ಪಿಚ್ ಅನ್ನು ಅಕ್ಷರ್ ಪಟೇಲ್​ರಂತೆ ಇಂಗ್ಲೆಂಡ್​ನ ಜ್ಯಾಕ್ ಲೀಚ್ ಅರ್ಥ ಮಾಡಿಕೊಳ್ಳಲಿಲ್ಲ: ತೆಂಡೂಲ್ಕರ್

Published On - 7:40 pm, Tue, 2 March 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ