India vs Australia Test Series | ಐತಿಹಾಸಿಕ ಗೆಲುವು; ಟೀಮ್ ಇಂಡಿಯಾಗೆ ಮೋದಿ ಅಭಿನಂದನೆ

ಟೀಮ್ ಇಂಡಿಯಾ ಇಂದು ಸಾಧಿಸಿದ ಸರಣಿ ಗೆಲುವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಮಾಜಿ ಆಟಗಾರರು ಮತ್ತು ಈಪಿಎಲ್​ನಲ್ಲಾಡುವ ಟಾಟೆನ್​ಹ್ಯಾಮ್ ಹಾಟ್ಸ್​ಪುರ್ ಕ್ಲಬ್ಬಿನ ಹ್ಯಾರಿ ಕೇನ್ ಸಹ ಅಭಿನಂದಿಸಿದ್ದಾರೆ. 

India vs Australia Test Series | ಐತಿಹಾಸಿಕ ಗೆಲುವು; ಟೀಮ್ ಇಂಡಿಯಾಗೆ ಮೋದಿ ಅಭಿನಂದನೆ
ಟೀಮ್ ಇಂಡಿಯಾ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 19, 2021 | 7:51 PM

ಬ್ರಿಸ್ಬೇನ್​ನಲ್ಲಿ ಇಂದು ಐತಿಹಾಸಿಕ ಮತ್ತು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಸಾಧನೆ ಮಾಡಿದ ಭಾರತೀಯ ಕ್ರಿಕೆಟ್​ ಟೀಮನ್ನು ಅಭಿನಂದಿಸಿರುವ ಕೋಟ್ಯಾಂತರ ಭಾರತೀಯರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೂ ಒಬ್ಬರಾಗಿದ್ದಾರೆ.

ತಮ್ಮ ಟ್ವೀಟ್​ನಲ್ಲಿ​ ಪ್ರಧಾನಿ ಮೋದಿಯವರು, ‘ಭಾರತದ ಕ್ರಿಕೆಟ್​ ಟೀಮ್ ಆಸ್ಟ್ರೇಲಿಯಾದಲ್ಲಿ ಸಾಧಿಸಿರುವ ಗೆಲುವಿನಿಂದ ನಾವೆಲ್ಲ ಅನಂದತುಂದಿಲರಾಗಿದ್ದೇವೆ. ಅಸಾಧಾರಣ ಉತ್ಸಾಹ ಮತ್ತು ಕ್ರೀಡೆಯೆಡೆಗಿನ ವ್ಯಾಮೋಹ ಸರಣಿಯುದ್ದಕ್ಕೂ ಗೋಚರವಾಯಿತು. ಅದೇ ರೀತಿಯಲ್ಲಿ ಅವರ ವಿಚಲಿತಗೊಳ್ಳದ ಮನಸ್ಥೈರ್ಯ, ದಿಟ್ಟತನ ಮತ್ತು ರಾಜಿಮಾಡಿಕೊಳ್ಳದ ಸಂಕಲ್ಪ ನಮ್ಮೆಲ್ಲರ ಗಮನ ಸೆಳೆದವು. ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆಗಳು ಮತ್ತು ಮುಂಬರುವ ಸರಣಿಗಳಿಗೆ ಶುಭ ಹಾರೈಕೆಗಳು’ ಎಂದು ಹೇಳಿದ್ದಾರೆ.

ಸರಣಿಯ ಮಧ್ಯಭಾಗದಲ್ಲೇ ಪಿತೃತ್ವದ ರಜೆ ಪಡೆದು ಭಾರತಕ್ಕೆ ವಾಪಸ್ಸಾದ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಟ್ವೀಟ್ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

‘ಎಂಥ ಗೆಲುವಿದು!!! Yessssss. ಆಡಿಲೇಡ್ ಪಂದ್ಯದ ನಂತರ ನಮ್ಮನ್ನು ಟೀಕಿದವರೆಲ್ಲ ಈ ಸಾಧನೆಯನ್ನು ಗಮನಿಸಿ. ಇದು ಅಭೂತಪೂರ್ವ ಪ್ರದರ್ಶನ. ಇಡೀ ದಿನ ಟೀಮಿನ ಸದಸ್ಯರು ತೋರಿದ ಸಂಕಲ್ಪ ಮತ್ತು ಧೈರ್ಯ ಅದ್ವಿತೀಯವಾಗಿತ್ತು. ಟೀಮಿನ ಎಲ್ಲ ಸದಸ್ಯರು ಮತ್ತು ಮ್ಯಾನೇಜ್ಮೆಂಟ್ ಚೆನ್ನಾಗಿ ಕಾರ್ಯನಿರ್ವಹಿಸಿತು. ಈ ಐತಿಹಾಸಿಕ ಕ್ಷಣವನ್ನು ಎಂಜಾಯ್ ಮಾಡಿ, ಚಿಯರ್ಸ್​’ ಎಂದು ಕೊಹ್ಲಿ ಟ್ವೀಟ್​ ಮಾಡಿದ್ದಾರೆ.

ಗಾಯಗೊಂಡು ಸರಣಿಯಿಂದ ಹೊರಬಿದ್ದ ಕೆ.ಎಲ್.ರಾಹುಲ್, ‘ಬಾರತೀಯ ಕ್ರಿಕೆಟ್​ ಇತಿಹಾಸದಲ್ಲಿ ಇದು ಶ್ರೇಷ್ಠ ಪ್ರದರ್ಶನ ಮತ್ತು ಗೆಲುವಾಗಿ ದಾಖಲಾಗಲಿದೆ. ಏರಿಳಿತಗಳು ಎದುರಾಗಿದ್ದು ನಿಜವಾದರೂ, ಹುಡುಗರು ಯಾವತ್ತೂ ಸೋಲೊಪ್ಪಿಕೊಳ್ಳಲಿಲ್ಲ. ಮನೆಯಿಂದ ಬಹಳ ದೂರವಿದ್ದು, ಅಸಂಖ್ಯಾತ ಗಾಯಗಳ ಹೊರತಾಗಿಯೂ ನಮಲ್ಲಿನ ಹೋರಾಟದ ಮನೋಭಾವ ಒಂದಿನಿತೂ ಕ್ಷೀಣಿಸಲಿಲ್ಲ. ವೆಲ್ ಡನ್ ಬಾಯ್ಸ್, ನಿಮ್ಮ ಸಾಧನೆ ನಮ್ಮೆಲ್ಲರಲ್ಲಿ ಹೆಮ್ಮೆ ಮೂಡಿಸಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ತಮ್ಮ ಹಾಸ್ಯಭರಿತ ಟ್ವೀಟ್​ಗಳ ಮೂಲಕ ಸದಾ ಸುದ್ದಿಯಲ್ಲಿರುವ ಮಾಜಿ ಆರಂಭ ಆಟಗಾರ ವಿರೇಂದ್ರ ಸೆಹ್ವಾಗ್, ‘ಖುಷಿಯಿಂದ ಹುಚ್ಚನಂತಾಗಿದ್ದೇನೆ. ಹೊಸ ಇಂಡಿಯಾವೆಂದರೆ ಇದು. ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ. ಅಡಿಲೇಡ್​ನಿಂದ ಇಲ್ಲಿಯವರೆಗೆ ನೆನೆಪಿಸಿಕೊಂಡೆರೆ ಈ ಹುಡುಗರು ಇಡೀ ಜೀವಮಾನಕ್ಕಾಗುವವಷ್ಟು ಸಂತೋಷವನ್ನು ನೀಡಿದ್ದಾರೆ. ನಾವು ವಿಶ್ವಕಪ್​ ಗೆದ್ದಿರುವುದು ನಿಜ ಆದರಿದು ಸ್ಪೆಷಲ್. ಪಂತ್ ಎಕ್ಸ್​ಟ್ರಾ ಸ್ಪೆಷಲ್ ಅಗಿರುವುದಕ್ಕೂ ಕಾರಣವಿದೆ’ ಎಂದಿದ್ದಾರೆ.

ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವೀಟ್​ನಲ್ಲಿ ಯುವ ಆಟಗಾರರ ಸಾಧನೆಯನ್ನು ಮನಸಾರೆ ಹೊಗಳಿದ್ದಾರೆ.

‘ಟೀಮ್ ಇಂಡಿಯಾಗಿದು ಐತಿಹಾಸಿಕ ಜಯ. ಗಿಲ್ ಮತ್ತು ಪಂತ್ ಮುಂಚೂಣಿಯಲ್ಲಿದ್ದ ಯುವಕರ ಪಡೆ ತನ್ನ ಸಾಮರ್ಥ್ಯವನ್ನು ಸೂಕ್ತವಾದ ಸಮಯದಲ್ಲಿ ಪ್ರದರ್ಶಿತು. ಟೀಮಿನ ಪ್ರದರ್ಶನದಲ್ಲಾದ ಅಮೂಲಾಗ್ರ ಬದಲಾವಣೆಗೆ ಕಾರಣರಾದ ರವಿ ಶಾಸ್ತ್ರೀ ಮತ್ತು ಇತರ ಸಪೋರ್ಟ್​ ಸ್ಟಾಫ್​ಗೂ ಅಭಿನಂದನೆಗಳು. ಈ ಟೀಮಿನ ಬಗ್ಗೆ ಅತೀವ ಹೆಮ್ಮೆಯೆನಿಸುತ್ತಿದೆ, ದಶಕಗಳವರೆಗೆ ನೆನಪಿನಲ್ಲುಳಿವ ಸಾಧನೆ ಇದು’ ಎಂದು ಲಕ್ಷಣ್ ಹೇಳಿದ್ದಾರೆ.

ಭಾರತದ ಲೆಜೆಂಡರಿ ಬ್ಯಾಟ್ಸ್​ಮನ್ ಸಚಿನ್ ತೆಂಡೂಲ್ಕರ್ ಇದೊಂದು ಅಪ್ರತಿಮ ಗೆಲುವು ಎಂದು ಹೇಳುತ್ತಾ ಟೀಮ್ ಇಂಡಿಯಾದ ಸದಸ್ಯರನ್ನು ಅಭಿನಂದಿಸಿದ್ದಾರೆ.

‘ಪ್ರತಿಯೊಂದು ಸೆಷನ್​ನಲ್ಲಿಯೂ ನಮಗೊಬ್ಬ ಹೀರೊ ಇಂದು ದೊರಕಿದ. ಪೆಟ್ಟು ತಿಂದಾಗಲೆಲ್ಲ ನಾವು ಮೈಕೊಡವಿಕೊಂಡೆದ್ದು ಸವಾಲುಗಳನ್ನು ಎದುರಿಸಿದೆವು. ನಮ್ಮ ನಂಬುಗೆಯ ಸೀಮೆಯನ್ನು ವಿಸ್ತರಿಸುತ್ತಾ ಕೇರ್​ಲೆಸ್ ಕ್ರಿಕೆಟ್ ಆಡದೆ ಫಿಯರ್​ಲೆಸ್ ಕ್ರಿಕೆಟ್ ಆಡಿದೆವು, ಗಾಯ ಮತ್ತು ಅನಿಶ್ಚಿತತೆಯ ಸಮಸ್ಯೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದೆವು. ಇದು ಭಾರತದ ಶ್ರೇಷ್ಠ ಸರಣಿ ಗೆಲುವುಗಳಲ್ಲೊಂದು. ಭಾರತಕ್ಕೆ ಅಭಿನಂದನೆಗಳು’ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

ಆರ್​ಸಿಬಿಗೆ ಆಡುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ರಿಷಭ್ ಪಂತ್ ಬ್ಯಾಟಿಂಗನ್ನು ಶ್ಲಾಘಿಸಿದ್ದಾರೆ. ‘ಎಂಥ ಟೆಸ್ಟ್​ ಮ್ಯಾಚ್! ಭಾರತ ಟೀಮಿನ ಬ್ಯಾಟಿಂಗ್ ಅಳ ಭೀತಿ ಹುಟ್ಟಿಸುವಂತಿದೆ.@RishabhPant17, 17 ನೇ ನಂಬರ್ ಬಹಳ ಸೊಗಸಾಗಿದೆ. ವಲ್ ಪ್ಲೇಯ್ಡ್ ಯಂಗ್ ಮ್ಯಾನ್, #testcricket at its very best, ಅಂತ ಎಬಿಡಿ ಟ್ವೀಟ್​ ಮಾಡಿದ್ದಾರೆ

ಇಂಗ್ಲಿಷ್ ಪ್ರಿಮೀಯರ್​ ಲೀಗಿನಲ್ಲಾಡುವ ಟಾಟೆನ್​ಹ್ಯಾಮ್ ಹಾಟ್ಸ್​ಪುರ್ ಕ್ಲಬ್​ನ ಸ್ತ್ರೈಕರ್ ಹ್ಯಾರಿ ಕೇನ್ ತಮ್ಮ ಟ್ವೀಟ್​ನಲ್ಲಿ ‘@BCCI ನಂಬಲಸಾಧ್ಯವೆನಿಸುವ ರೀತಿಯಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಪ್ರತಿಯೊಂದು ಟೆಸ್ಟ್ ಪಂದ್ಯ ರೋಮಾಂಚಕಾರಿಯಾಗಿತ್ತು’ ಅಂತ ಹೇಳಿದ್ದಾರೆ.

India vs Australia Test series | ಆಸ್ಟ್ರೇಲಿಯಾದಲ್ಲಿ ಹೊಸ ಇಂಡಿಯಾ ಸಾಧಿಸಿತು ದಿಗ್ವಿಜಯ!

Published On - 7:47 pm, Tue, 19 January 21

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ