Pro Kabaddi League (PKL) 2021: ಬುಲ್ಸ್​ ಗುದ್ದಿಗೆ ಪಲ್ಟಿ ಹೊಡೆದ ಪ್ಯಾಂಥರ್ಸ್​

| Updated By: ಝಾಹಿರ್ ಯೂಸುಫ್

Updated on: Jan 06, 2022 | 10:29 PM

Pro Kabaddi League (PKL) 2021: ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಅಂಕಗಳನ್ನು ಪಡೆದರೆ, ಜೈಪುರ ಪಿಂಕ್ ಪ್ಯಾಂಥರ್ಸ್​ 14 ಅಂಕಗಳಿಸಿತು.

Pro Kabaddi League (PKL) 2021: ಬುಲ್ಸ್​ ಗುದ್ದಿಗೆ ಪಲ್ಟಿ ಹೊಡೆದ ಪ್ಯಾಂಥರ್ಸ್​
Pro Kabaddi League (PKL) 2021
Follow us on

ಪ್ರೋ ಕಬಡ್ಡಿ ಲೀಗ್​ನ 37ನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್​ ವಿರುದ್ದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೇ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಮೊದಲ ಐದು ನಿಮಿಷದವರೆಗೆ ಪಿಂಕ್ ಪ್ಯಾಂಥರ್ಸ್​ ಮೇಲುಗೈ ಸಾಧಿಸಿತ್ತು. ಆದರೆ ಆ ಬಳಿಕ ಸತತ ರೈಡಿಂಗ್ ಮೂಲಕ ಪವನ್ ಶೆಹ್ರಾವತ್ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಪಾಯಿಂಟ್​ಗಳನ್ನು ತಂದುಕೊಟ್ಟರು. ಅದರಲ್ಲೂ ಸತತ 13 ರೈಡಿಂಗ್ ಮೂಲಕ 13 ಪಾಯಿಂಟ್​ ಗಳಿಸಿದ ಶೆಹ್ರಾವತ್ ಆರಂಭದಲ್ಲೇ ಬೆಂಗಳೂರು ಬುಲ್ಸ್ ತಂಡಕ್ಕೆ ಉತ್ತಮ ಲೀಡ್ ತಂದುಕೊಟ್ಟರು.

ಅದರಂತೆ ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ ತಂಡವು 20 ಅಂಕಗಳನ್ನು ಪಡೆದರೆ, ಜೈಪುರ ಪಿಂಕ್ ಪ್ಯಾಂಥರ್ಸ್​ 14 ಅಂಕಗಳಿಸಿತು. ಇತ್ತ 6 ಅಂಕಗಳ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಬೆಂಗಳೂರಿಗೆ ಮತ್ತೆ ಪವನ್ ಶೆಹ್ರಾವತ್ ಸೂಪರ್ ಟ್ಯಕಲ್ ಮೂಲಕ ಲೀಡ್ ತಂದುಕೊಟ್ಟರು.

ಒಂದು ಹಂತದಲ್ಲಿ 28-16 ಅಂಕ ಅಂತರ ಹೊಂದಿದ್ದ ಪಿಂಕ್ ಪ್ಯಾಂಥರ್ಸ್ ಅಂತಿಮ ಹಂತದಲ್ಲಿ ಕಂಬ್ಯಾಕ್ ಮಾಡುವ ಪ್ರಯತ್ನ ಮಾಡಿದರು. ಬೆಂಗಳೂರು ಬುಲ್ಸ್ ರಕ್ಷಣಾ ಪಡೆಯನ್ನು ಬೇಧಿಸಿದ ಪಿಂಕ್ ಪ್ಯಾಂಥರ್ಸ್ ರೈಡರ್​ಗಳು ತಂಡದ ಪಾಯಿಂಟ್​ ಅನ್ನು 38-30 ಅಂತರಕ್ಕೆ ತಂದು ನಿಲ್ಲಿಸಿದರು. ಆದರೆ ಅದಾಗಲೇ ಪಂದ್ಯವು ಅಂತಿಮ ಹಂತಕ್ಕೆ ತಲುಪಿದ್ದರಿಂದ ಬೆಂಗಳೂರು ಬುಲ್ಸ್ ಕೂಡ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ. ಅಂತಿಮವಾಗಿ ಬೆಂಗಳೂರು ಬುಲ್ಸ್ ತಂಡವು 38-31 ಅಂತರದಿಂದ ಪಂದ್ಯ ಗೆದ್ದುಕೊಂಡಿತು. 18 ಅಂಕಗಳಿಸುವ ಮೂಲಕ ನಾಯಕ ಪವನ್ ಕುಮಾರ್ ಶೆಹ್ರಾವತ್ ಗೆಲುವಿನ ರೂವಾರಿ ಎನಿಸಿಕೊಂಡರು.  ಈ ಜಯದೊಂದಿಗೆ ಬೆಂಗಳೂರು ಬುಲ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ:  Virat Kohli: ವಿರಾಟ್ ಕೊಹ್ಲಿಯ ಗಾಯ, ರಾಹುಲ್ ದ್ರಾವಿಡ್ ಹೇಳಿಕೆ ಮತ್ತು 100ನೇ ಟೆಸ್ಟ್​..!

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Pro Kabaddi League (PKL) 2021: Bengaluru Bulls Beat Jaipur Pink Panthers)

Published On - 10:20 pm, Thu, 6 January 22