Pro Kabaddi 2022: ಬೆಂಗಳೂರಿನಲ್ಲಿ ಇಂದಿನಿಂದ ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಮೊದಲ ದಿನವೇ ಬುಲ್ಸ್ ಫೈಟ್..!

| Updated By: ಪೃಥ್ವಿಶಂಕರ

Updated on: Oct 07, 2022 | 5:51 PM

Pro Kabaddi 2022: ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 7 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ಮೊದಲ ಮೂರು ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ. ಲೀಗ್‌ನಲ್ಲಿ ಭಾಗವಹಿಸುವ ಎಲ್ಲಾ 12 ತಂಡಗಳು ಈ ಮೂರು ದಿನಗಳಲ್ಲಿ ಆಡಲಿವೆ.

Pro Kabaddi 2022: ಬೆಂಗಳೂರಿನಲ್ಲಿ ಇಂದಿನಿಂದ ಪ್ರೊ ಕಬಡ್ಡಿ ಸೀಸನ್‌-9 ಆರಂಭ; ಮೊದಲ ದಿನವೇ ಬುಲ್ಸ್ ಫೈಟ್..!
Pro Kabaddi 2022
Follow us on

ಇಂದಿನಿಂದ ಭಾರತದಲ್ಲಿ ಕಬಡ್ಡಿ ಹಬ್ಬ ಆರಂಭವಾಗಲಿದ್ದು, ಸುಮಾರು ಒಂದು ತಿಂಗಳ ಕಾಲ ಕಬಡ್ಡಿ ಪ್ರಿಯರನ್ನು ರಂಜಿಸಲಿದೆ. ಶುಕ್ರವಾರದಿಂದ PKL ಸೀಸನ್ 9 ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಕೆಸಿ ಹಾಗೂ ಮಾಜಿ ಚಾಂಪಿಯನ್ ಯು ಮುಂಬಾ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ಕೋವಿಡ್‌ನಿಂದಾಗಿ ಹಿಂದಿನ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುತ್ತಿತ್ತು, ಆದರೆ ಮೂರು ಸೀಸನ್‌ಗಳ ನಂತರ ಮೊದಲ ಬಾರಿಗೆ, ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನೀಡಲಾಗುತ್ತಿದೆ. ಈ ಸೀಸನ್​ನ ಎಲ್ಲಾ FTUS ಲೀಗ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಆ ಬಳಿಕ ಉಳಿದ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.

ಮೊದಲ ದಿನ ಮೂರು ಪಂದ್ಯಗಳು ನಡೆಯಲಿದ್ದು, ದಬಾಂಗ್ ಡೆಲ್ಲಿ ಮತ್ತು ಯು ಮುಂಬಾ ಪಂದ್ಯದ ನಂತರ ತೆಲುಗು ಟೈಟಾನ್ಸ್ ಮತ್ತು ಬೆಂಗಳೂರು ಬುಲ್ಸ್ ನಡುವೆ ಮತ್ತೊಂದು ಪಂದ್ಯ ನಡೆಯಲಿದೆ. ಮೂರನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಯುಪಿ ಯೋಧಾಸ್ ಮುಖಾಮುಖಿಯಾಗಲಿವೆ. ಈ ಬಾರಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿರುವ 12 ತಂಡಗಳೆಂದರೆ, ತೆಲುಗು ಟೈಟಾನ್ಸ್, ಯು ಮುಂಬಾ, ದಬಾಂಗ್ ಡೆಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್, ಯುಪಿ ಯೋಧಾಸ್, ಹರಿಯಾಣ ಸ್ಟೀಲರ್ಸ್, ಪುಣೇರಿ ಫಾಲ್ಟನ್, ತಮಿಳ್ ತಲೈವಾಸ್, ಗುಜರಾತ್ ಜೈಂಟ್ಸ್, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಪಾಟ್ನಾ ಪೈರೇಟ್ಸ್.

ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 7 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ಮೊದಲ ಮೂರು ದಿನ ತಲಾ ಮೂರು ಪಂದ್ಯಗಳು ನಡೆಯಲಿವೆ. ಲೀಗ್‌ನಲ್ಲಿ ಭಾಗವಹಿಸುವ ಎಲ್ಲಾ 12 ತಂಡಗಳು ಈ ಮೂರು ದಿನಗಳಲ್ಲಿ ಆಡಲಿವೆ. ಅದರ ನಂತರ ಇಡೀ ಸೀಸನ್​ನಲ್ಲಿ ದಿನಕ್ಕೆ ಎರಡು ಪಂದ್ಯಗಳು ನಡೆಯಲಿವೆ. ಆದಾಗ್ಯೂ, ಸೀಸನ್ ಉದ್ದಕ್ಕೂ ಶುಕ್ರವಾರ ಮತ್ತು ಶನಿವಾರ ಮೂರು ಪಂದ್ಯಗಳು ಇರುತ್ತವೆ. ಈ ಬಾರಿ ಪಿಕೆಎಲ್ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಟ್‌ಸ್ಟಾರ್ ಒಟಿಟಿಯಲ್ಲಿ ವೀಕ್ಷಿಸಬಹುದು. ಮೂರು ಪಂದ್ಯಗಳ ಮೊದಲ ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಎರಡನೇ ಪಂದ್ಯ 8.30ಕ್ಕೆ ಆರಂಭವಾಗಲಿದ್ದು, ಮೂರನೇ ಪಂದ್ಯ 9.30ಕ್ಕೆ ಆರಂಭವಾಗಲಿದೆ.

Published On - 5:51 pm, Fri, 7 October 22