AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lionel Messi: ಪಿಎಸ್‌ಜಿಯಲ್ಲಿ ಕೊರೊನಾ ಬಾಂಬ್ ಸ್ಫೋಟ: ಲಿಯೋನೆಲ್ ಮೆಸ್ಸಿ ಸೇರಿದಂತೆ 4 ಆಟಗಾರರಿಗೆ ಸೋಂಕು..!

Lionel Messi: ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ಸೋಂಕು ತಗುಲಿದೆ. ಮೆಸ್ಸಿ ಪ್ರಸ್ತುತ PSG ಕ್ಲಬ್‌ನೊಂದಿಗಿದ್ದು, ಮೆಸ್ಸಿಗೆ ಸೋಂಕು ತಗುಲಿರುವುದನ್ನು ಕ್ಲಬ್ ಖಚಿತ ಪಡಿಸಿದೆ.

Lionel Messi: ಪಿಎಸ್‌ಜಿಯಲ್ಲಿ ಕೊರೊನಾ ಬಾಂಬ್ ಸ್ಫೋಟ: ಲಿಯೋನೆಲ್ ಮೆಸ್ಸಿ ಸೇರಿದಂತೆ 4 ಆಟಗಾರರಿಗೆ ಸೋಂಕು..!
ಲಿಯೋನೆಲ್ ಮೆಸ್ಸಿ
TV9 Web
| Updated By: ಪೃಥ್ವಿಶಂಕರ|

Updated on:Jan 02, 2022 | 6:00 PM

Share

ವಿಶ್ವದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಕೊರೊನಾ ಸೋಂಕು ತಗುಲಿದೆ. ಮೆಸ್ಸಿ ಪ್ರಸ್ತುತ PSG ಕ್ಲಬ್‌ನೊಂದಿಗಿದ್ದು, ಮೆಸ್ಸಿಗೆ ಸೋಂಕು ತಗುಲಿರುವುದನ್ನು ಕ್ಲಬ್ ಖಚಿತ ಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾ ಜಗತ್ತಿನಲ್ಲಿ ಅನೇಕ ಆಟಗಾರರು ಇದಕ್ಕೆ ಬಲಿಯಾಗುತ್ತಿದ್ದಾರೆ, ಅದರಲ್ಲಿ ಹೊಸ ಹೆಸರು ಮೆಸ್ಸಿ. ಮೆಸ್ಸಿ ಹೊರತುಪಡಿಸಿ, ಕ್ಲಬ್‌ನ ಇನ್ನೂ ಮೂರು ಆಟಗಾರರು ಸೋಂಕಿಗೆ ಒಳಗಾಗಿದ್ದಾರೆ. ಎಲ್ಲಾ ಆಟಗಾರರನ್ನು ಪ್ರತ್ಯೇಕಿಸಲಾಗಿದೆ ಮತ್ತು ಪ್ರಸ್ತುತ ಕೊರೊನಾ ಪ್ರೋಟೋಕಾಲ್ ಅನ್ನು ಅನುಸರಿಸುತ್ತಿದ್ದಾರೆ ಎಂದು ಕ್ಲಬ್ ತಿಳಿಸಿದೆ.

PSG ತಂಡವು ಪ್ರಸ್ತುತ ಫ್ರೆಂಚ್ ಕಪ್‌ನಲ್ಲಿ ಭಾಗವಹಿಸುತ್ತಿದೆ, ಅಲ್ಲಿ ಅದು ಸೋಮವಾರ ವ್ಯಾನೆಸ್ ಅನ್ನು ಎದುರಿಸಲಿದೆ. ನಾಲ್ಕು ಕೊರೊನಾವೈರಸ್ ಪ್ರಕರಣಗಳು ಮುನ್ನೆಲೆಗೆ ಬಂದ ನಂತರ ತಂಡದಲ್ಲಿ ಕೋಲಾಹಲ ಉಂಟಾಗಿದೆ. ಆಟಗಾರರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಎಂದು ಕ್ಲಬ್ ಅಧಿಕಾರಿಗಳು ಹೇಳುತ್ತಿದ್ದರೂ, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಮೆಸ್ಸಿ ಕಳೆದ ವರ್ಷ ಬಾರ್ಸಿಲೋನಾ ತೊರೆದು PSG ಸೇರಿದ್ದರು.

ಮೆಸ್ಸಿ ಸೇರಿದಂತೆ ನಾಲ್ವರು ಆಟಗಾರರಿಗೆ ಸೋಂಕು ತಗುಲಿದೆ ತಂಡದ ಸಿಬ್ಬಂದಿಯೊಬ್ಬರು ಸಹ ಸೋಂಕಿಗೆ ಒಳಗಾಗಿದ್ದಾರೆ ಎಂದು PSG ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕ್ಲಬ್ ಮೊದಲಿಗೆ ಆಟಗಾರರ ಹೆಸರನ್ನು ಬಹಿರಂಗಪಡಿಸಲಿಲ್ಲ, ಆದರೆ ವೈದ್ಯಕೀಯ ತಂಡವು ನಂತರ ತಮ್ಮ ಹೇಳಿಕೆಯಲ್ಲಿ ಮೆಸ್ಸಿ ಹೊರತುಪಡಿಸಿ, ಎಡಗೈ ಆಟಗಾರ ಹುವಾ ಬರ್ನೆಟ್, ಬ್ಯಾಕಪ್ ಗೋಲ್ಕೀಪರ್ ಸೆರ್ಗಿಯೋ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನಾಥನ್ ಬಿಟುಮ್ಜಾಲಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದರು. ಇದಕ್ಕೂ ಮೊದಲು ಮೊನಾಕೊ ತಂಡವು ಏಳು ಕೊರೊನಾ ಪ್ರಕರಣಗಳನ್ನು ವರದಿ ಮಾಡಿತ್ತು. ಆದಾಗ್ಯೂ, ಅವರಲ್ಲಿ ಯಾವುದೇ ಗಂಭೀರ ಲಕ್ಷಣಗಳು ಕಂಡುಬಂದಿಲ್ಲ.

ಇಪಿಎಲ್ ಪಂದ್ಯವನ್ನೂ ಮುಂದೂಡಲಾಗಿದೆ ನ್ಯೂಕ್ಯಾಸಲ್ ತಂಡದಲ್ಲಿ ನಿರಂತರ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾದ ನಂತರ ಸೌತಾಂಪ್ಟನ್‌ನಲ್ಲಿ ಭಾನುವಾರ ನಡೆಯಲಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್) ಫುಟ್‌ಬಾಲ್ ಪಂದ್ಯವನ್ನು ಮುಂದೂಡಲಾಗಿದೆ. ಇಪಿಎಲ್ ಈ ಮಾಹಿತಿಯನ್ನು ನೀಡಿದೆ. ಗುರುವಾರ ಎವರ್ಟನ್ ವಿರುದ್ಧ ನ್ಯೂಕ್ಯಾಸಲ್‌ನ ಹಿಂದಿನ ಪಂದ್ಯವನ್ನು ಸಹ ಮುಂದೂಡಲಾಯಿತು. COVID-19 ಪ್ರಕರಣಗಳು ಮತ್ತು ಗಾಯಗಳಿಂದಾಗಿ ಸೇಂಟ್ ಮೇರಿಸ್ ಸ್ಟೇಡಿಯಂನಲ್ಲಿ ಸೌತಾಂಪ್ಟನ್ ಅನ್ನು ಎದುರಿಸಲು ನ್ಯೂಕ್ಯಾಸಲ್ 13 ಆಟಗಾರರನ್ನು ಹೊಂದಿಲ್ಲ ಮತ್ತು ಒಬ್ಬ ಗೋಲ್‌ಕೀಪರ್ ಅನ್ನು ಹೊಂದಿಲ್ಲ ಎಂದು ಪ್ರೀಮಿಯರ್ ಲೀಗ್ ಹೇಳಿದೆ. ಪೀಡಿತ ಕ್ಲಬ್ ಮತ್ತು ಅವರ ಅಭಿಮಾನಿಗಳಿಗೆ ಸ್ಪಷ್ಟತೆ ನೀಡುವ ಸಲುವಾಗಿ, ಅವರು ಪಂದ್ಯದ ಬಗ್ಗೆ ಸಮಯೋಚಿತ ನಿರ್ಧಾರ ತೆಗೆದುಕೊಂಡರು ಎಂದು ಲೀಗ್ ಹೇಳಿಕೆಯಲ್ಲಿ ತಿಳಿಸಿದೆ.

Published On - 5:57 pm, Sun, 2 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ