ನಾವು ಈ ಹಿಂದೆ ಚರ್ಚಿಸಿರುವಂತೆ ಭಾರತದ ಸ್ಟಾರ್ ಕ್ರಿಕೆಟ್ ಆಟಗಾರರಿಗೆ ಪಾಕಿಸ್ತಾನದಲ್ಲಿ ಲಕ್ಷಾಂತರ ಆಭಿಮಾನಿಗಳಿದ್ದಾರೆ. ಅಲ್ಲಿನ ಖ್ಯಾತ ಆಟಗಾರರು ಸಹ ಟೀಮ್ ಇಂಡಿಯಾದ ಆಟಗಾರರನ್ನು ಮೊದಲಿನಿಂದಲೂ ಪ್ರಶಂಸಿಸುತ್ತಾ ಬಂದಿದ್ದಾರೆ. ಜಹೀರ್ ಅಬ್ಬಾಸ್, ವಾಸಿಮ್ ಆಕ್ರಮ್, ವಕಾರ್ ಯೂನಿಸ್, ಇಂಜಮಾಮ್ ಉಲ್ ಹಕ್, ಯೂನಿಸ್ ಖಾನ್, ಆ ದೇಶದ ಈಗಿನ ಬ್ಯಾಟಿಂಗ್ ಸೆನ್ಸೇಷನ್ ಬಾಬರ್ ಆಜಂ, ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ನಾವೀಗ ಚರ್ಚಿಸುತ್ತಿರು
‘‘ಭಾರತದ ಮೂರು ಪ್ರಮುಖ ಆಟಗಾರರು-ವಿರಾಟ್ ಕೊಹ್ಹಿ, ರೊಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರ ಸೇವೆಯನ್ನು ಇಂಡಿಯಾ ಟೀಮು ಮಿಸ್ ಮಾಡಿಕೊಳ್ಳಲಿದೆ. ವಿರಾಟ್, ಮೊದಲ ಟೆಸ್ಟ್ ಮಾತ್ರ ಆಡಿ ಸ್ವದೇಶಕ್ಕೆ ಮರಳಲಿದ್ದಾರೆ. ರೋಹಿತ್ ಮತ್ತು ಇಶಾಂತ್ ಮೊದಲೆರಡು ಟೆಸ್ಟ್ಗಳನ್ನು ಅಡಲಾರರೆಂದು ಬಿಸಿಸಿಐ ಹೇಳಿದೆ. ಆವರು ಕೊನೆಯೆರಡು ಟೆ್ಸ್ಗಳಿಗೂ ಲಭ್ಯರಾಗುವ ಬಗ್ಗೆ ಗ್ಯಾರಂಟಿಯಿಲ್ಲ. ಅವರ ಅನುಪಸ್ಥಿತಿ ಇಂಡಿಯಾ ಟೆಸ್ಟ್ ಸರಣಿ ಗೆಲ್ಲುವ ಪ್ರಯತ್ನದ ಮೇಲೆ ಪ್ರಭಾವ ಬೀರಲಿದೆ,’’ ಎಂದು ವಕಾರ್ ಹೇಳಿದ್ದಾರೆ.
ಆದರೆ, ಈ ತ್ರಿವಳಿಗಳ ಗೈರುಹಾಜರಿಯ ಬಗ್ಗೆ ಇಂಡಿಯನ್ ಟೀಮು ಹೆಚ್ಚು ಯೋಚಿಸಬಾರದೆಂದು ವಕಾರ್ ಸಲಹೆ ನೀಡುತ್ತಾರೆ. ಚೇತೇಶ್ವರ್ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ಕ್ಲಾಸ್ ಬ್ಯಾಟ್ಸ್ಮನ್ಗಳೆಂದು ಹೇಳುವ ವಕಾರ್, ಈ ಜೋಡಿಯು ತಮ್ಮ ಬ್ಯಾಟಿಂಗ್ ಬಲದಿಂದ ಟೀಮಿನ ಇತರ ಆಟಗಾರರಲ್ಲಿ ಅವರು ಸ್ಫೂರ್ತಿ ತುಂಬಲಿದ್ದಾರೆ ಎನ್ನುತ್ತಾರೆ.
‘‘ವಿರಾಟ್ ಕೊಹ್ಲಿ, ರೊಹಿತ್ ಶರ್ಮ ಮತ್ತು ಇಶಾಂತ್ ಶರ್ಮ ಅವರ ಅನುಪಸ್ಥಿತಿ ಟೀಮ್ ಇಂಡಿಯಾ ಪರ್ಫರ್ಮಾನ್ಸ್ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಅವರಿಲ್ಲದೆ ಸರಣಿ ಗೆಲ್ಲುವುದು ಕಷ್ಡವಾಗಬಹುದು. ಆದರೆ, ಕೊಹ್ಲಿ ಮತ್ತು ರೋಹಿತ್ ಹೊರತಾಗಿಯೂ ಇಂಡಿಯಾ ಟೀಮಿನ ಬ್ಯಾಟಿಂಗ್ ಇಂಪ್ರೆಸ್ಸಿವ್ ಆಗಿದೆ. ಚೇತೇಶ್ವರ್ ಪೂಜಾರಾ ಮತ್ತು ಅಜಿಂಕ್ಯಾ ರಹಾನೆ ನೊಟೇಬಲ್ ಪರ್ಫಾರ್ಮರ್ಗಳು. ಕಳೆದ ಸಾಲಿನಲ್ಲಿ ಪೂಜಾರಾ 500 ಕ್ಕಿಂತ ಜಾಸ್ತಿ ರನ್ ಬಾರಿಸಿದ್ದರು. ಇಂಡಿಯಾದ ಆಟಗಾರರು ಧೃತಿಗೆಡದೆ ಆಡುವ ಅವಶ್ಯತೆಯಿದೆ, ಅದನ್ನವರು ಖಂಡಿತವಾಗಿಯೂ ಮಾಡಲಿದ್ದಾರೆ,’’ ಎಂದು ವಕಾರ್ ಹೇಳಿದ್ದಾರೆ.
ಸಚಿನ್ ಅವರಂತೆ, ವಕಾರ್ ಕೂಡ, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಟೀಮಿಗೆ ಮರಳಿರುವುದು ಆಸ್ಟ್ರೇ
Published On - 6:01 pm, Wed, 25 November 20