Swiss Open 2022: ಭಾರತಕ್ಕೆ ಸಿಹಿ- ಕಹಿ; ಸ್ವಿಸ್ ಓಪನ್ ಸೆಮಿಫೈನಲ್‌ ತಲುಪಿದ ಪಿವಿ ಸಿಂಧು- ಎಚ್‌ಎಸ್ ಪ್ರಣಯ್

| Updated By: ಪೃಥ್ವಿಶಂಕರ

Updated on: Mar 25, 2022 | 10:34 PM

Swiss Open 2022: ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತೆ ಸಿಂಧುಗೆ ಮಿಚೆಲ್‌ರನ್ನು ಸೋಲಿಸಲು ಅಷ್ಟೊಂದು ತೊಂದರೆಯಾಗಲಿಲ್ಲ. ಕೇವಲ 36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ಕೆನಡಾ ಆಟಗಾರ್ತಿಯನ್ನು 21-10, 21-19 ಸೆಟ್‌ಗಳಿಂದ ಸೋಲಿಸಿದರು.

Swiss Open 2022: ಭಾರತಕ್ಕೆ ಸಿಹಿ- ಕಹಿ; ಸ್ವಿಸ್ ಓಪನ್ ಸೆಮಿಫೈನಲ್‌ ತಲುಪಿದ ಪಿವಿ ಸಿಂಧು- ಎಚ್‌ಎಸ್ ಪ್ರಣಯ್
ಪಿವಿ ಸಿಂಧು
Follow us on

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ಸ್ವಿಸ್ ಓಪನ್ ಟೂರ್ನಮೆಂಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲೀ ಅವರನ್ನು ಸೋಲಿಸುವ ಮೂಲಕ ರಿಯೊ ಒಲಿಂಪಿಕ್ಸ್-2016 ರ ಬೆಳ್ಳಿ ಪದಕ ವಿಜೇತೆ ಮತ್ತು ಟೋಕಿಯೊ ಒಲಿಂಪಿಕ್ಸ್-2020 ಕಂಚಿನ ಪದಕ ವಿಜೇತೆ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿದರು. ಪುರುಷರ ಸಿಂಗಲ್ಸ್‌ನಲ್ಲೂ ಭಾರತಕ್ಕೆ ಶುಭ ಸುದ್ದಿ ಬಂದಿದೆ. ಎಚ್‌ಎಸ್ ಪ್ರಣಯ್ (HS Prannoy) ಕೂಡ ಸೆಮಿಫೈನಲ್‌ಗೆ ಪ್ರವೇಶಿಸಿದರೆ, ಸಮೀರ್ ವರ್ಮಾ ಸೋಲನ್ನು ಎದುರಿಸಬೇಕಾಯಿತು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕಿತೆ ಸಿಂಧುಗೆ ಮಿಚೆಲ್‌ರನ್ನು ಸೋಲಿಸಲು ಅಷ್ಟೊಂದು ತೊಂದರೆಯಾಗಲಿಲ್ಲ. ಕೇವಲ 36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ಕೆನಡಾ ಆಟಗಾರ್ತಿಯನ್ನು 21-10, 21-19 ಸೆಟ್‌ಗಳಿಂದ ಸೋಲಿಸಿದರು. ಸಿಂಧು ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಸುಪಾನಿಡಾ ಕಟೆಥಾಂಗ್‌ರನ್ನು ಎದುರಿಸಲಿದ್ದಾರೆ. ಈ ಆಟಗಾರ್ತಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಕಿಸೋನಾ ಸೆಲ್ವದುರೆ ಅವರನ್ನು 21-11, 21-12 ಸೆಟ್‌ಗಳಿಂದ ಸೋಲಿಸಿ ಕೊನೆಯ-4ಕ್ಕೆ ಲಗ್ಗೆ ಇಟ್ಟರು.

ಪ್ರಣಯ್ ಉತ್ತಮ ಪ್ರದರ್ಶನ
ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪ್ರಣಯ್ ಅವರು ದೇಶವಾಸಿ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಪರುಪಳ್ಳಿ ಕಶ್ಯಪ್ ಅವರನ್ನು ಸೋಲಿಸಿದರು. 43 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಪ್ರಣಯ್ 21-16, 21-16 ರಿಂದ ಗೆದ್ದರು. ಮುಂದಿನ ಸುತ್ತಿನಲ್ಲಿ ಈ ಆಟಗಾರ ಇಂಡೋನೇಷ್ಯಾದ ಆಂಥೋನಿ ಸಿನಿಸುಕಾ ಗಿಂಟಿಕ್ ಅವರನ್ನು ಎದುರಿಸಲಿದ್ದಾರೆ. ಇಂಡೋನೇಷ್ಯಾದ ಈ ಆಟಗಾರ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸಮೀರ್ ವರ್ಮಾ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಕಾಲಿಟ್ಟಿದ್ದಾರೆ. ಕೇವಲ 39 ನಿಮಿಷಗಳ ಪಂದ್ಯದಲ್ಲಿ ಆಂಟನಿ ಪಂದ್ಯವನ್ನು 21-17, 21-14 ರಿಂದ ಗೆದ್ದುಕೊಂಡರು

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮತ್ತೊಬ್ಬ ಆಟಗಾರ ಕಿಡಂಬಿ ಶ್ರೀಕಾಂತ್ ಇನ್ನೂ ಅಂಗಳಕ್ಕೆ ಬರಬೇಕಿದೆ. ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಆಂಡ್ರೆಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಡಬಲ್ಸ್‌
ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಜೋಡಿ ಸೋಲು ಕಂಡಿದೆ. ಭಾರತದ ಈ ಜೋಡಿಯನ್ನು ಮಲೇಷ್ಯಾದ ಹು ವಿವಿಯನ್ ಮತ್ತು ಲಿಮ್ ಚೆವ್ ಸೇನ್ ಜೋಡಿ ಸೋಲಿಸಿತು. ಮಲೇಷ್ಯಾ ಜೋಡಿಯು ಭಾರತದ ಜೋಡಿಯನ್ನು 22-20, 23-21 ರಿಂದ ಕಠಿಣ ಪಂದ್ಯದಲ್ಲಿ ಸೋಲಿಸಿತು. ರೋಚಕವಾಗಿದ್ದ ಈ ಪಂದ್ಯ ಕೊನೆಯವರೆಗೂ ಮಲೇಷ್ಯಾ ಜೋಡಿಗೆ ಸುಲಭವಾಗಿ ಪಾಯಿಂಟ್ಸ್ ಪಡೆಯಲು ಭಾರತದ ಜೋಡಿ ಬಿಡಲಿಲ್ಲ. ಈ ಪಂದ್ಯ 54 ನಿಮಿಷಗಳ ಕಾಲ ನಡೆಯಿತು. ಮತ್ತೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್ ಎರಡನೇ ಸುತ್ತಿನ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದರು.

ಇದನ್ನೂ ಓದಿ:IPL 2022: ಚೆನ್ನೈ- ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಬರೆಯಲ್ಲಿರುವ ದಾಖಲೆಗಳಿವು..!