ಈ ಸೋಲು 15 ತೀವ್ರತೆಯ ಭೂಕಂಪದಂತಿದೆ! ಈಗಲೇ ಎಚ್ಚೆತ್ತುಕೊಳ್ಳಿ; ಪಾಕ್ ತಂಡಕ್ಕೆ ಬೆವರಿಳಿಸಿದ ಮಾಜಿ ಪಾಕ್ ಕ್ರಿಕೆಟಿಗ

| Updated By: ಪೃಥ್ವಿಶಂಕರ

Updated on: Jul 11, 2021 | 5:38 PM

ನೀವು ಪಾಕಿಸ್ತಾನದ ಈ ಸರಣಿಯ ಸೋಲನ್ನು ರಿಕ್ಟರ್ ಪ್ರಮಾಣದಲ್ಲಿ ಅಳೆಯುತ್ತಿದ್ದರೆ, ಅದರ ತೀವ್ರತೆಯು 15 ರ ಆಸುಪಾಸಿನಲ್ಲಿರುತ್ತದೆ.

ಈ ಸೋಲು 15 ತೀವ್ರತೆಯ ಭೂಕಂಪದಂತಿದೆ! ಈಗಲೇ ಎಚ್ಚೆತ್ತುಕೊಳ್ಳಿ; ಪಾಕ್ ತಂಡಕ್ಕೆ ಬೆವರಿಳಿಸಿದ ಮಾಜಿ ಪಾಕ್ ಕ್ರಿಕೆಟಿಗ
ಇಂಗ್ಲೆಂಡ್, ಪಾಕ್ ತಂಡ
Follow us on

ಪಾಕಿಸ್ತಾನ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಭರ್ಜರಿ ಸೋಲನ್ನು ಅನುಭವಿಸಿದೆ ಮತ್ತು ಈ ಸೋಲಿನೊಂದಿಗೆ ಸರಣಿಯನ್ನು ಪಾಕ್ ತಂಡ ಕಳೆದುಕೊಂಡಿದೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆಡಿದ ಪಂದ್ಯದಲ್ಲಿ ಇಂಗ್ಲೆಂಡ್ 52 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು ಮತ್ತು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು. ಇಂಗ್ಲೆಂಡ್ ಮೊದಲ ಏಕದಿನ ಪಂದ್ಯವನ್ನು ಒಂಬತ್ತು ವಿಕೆಟ್‌ಗಳಿಂದ ಗೆದಿದ್ದರು. ಈ ಸೋಲು ಪಾಕಿಸ್ತಾನದ ಮಾಜಿ ಆಟಗಾರರಿಗೆ ಮತ್ತೊಮ್ಮೆ ಕೋಪ ತಂದಿದೆ. ಈ ಸೋಲಿನ ನಂತರ ಪಾಕಿಸ್ತಾನ ತಂಡವನ್ನು ಮಾಜಿ ನಾಯಕ ರಮೀಜ್ ರಾಜಾ ತೀವ್ರವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನದ ಸೋಲು ಆಘಾತಕಾರಿ ಸೋಲು ಎಂದು ರಾಜ ಬಣ್ಣಿಸಿದ್ದಾರೆ. ರಾಜಾಗೆ ಬೇಸರಪಡಿಸಿದ ಸಂಗತಿಯೆಂದರೆ, ಇಂಗ್ಲೆಂಡ್‌ನ ಎರಡನೇ ತಂಡವು ತನ್ನ ಅನೇಕ ಪ್ರಮುಖ ಆಟಗಾರರನ್ನು ಒಳಗೊಂಡಿಲ್ಲ. ಆದರೂ ಸಹ ಆ ತಂಡ ಪಾಕಿಸ್ತಾನಕ್ಕೆ ಅಂತಹ ಸೋಲನ್ನು ನೀಡಿದೆ. ಈ ಸರಣಿಯ ಮೊದಲು, ಕೊರೊನಾ ಸೋಂಕು ಇಂಗ್ಲೆಂಡ್ ಪಾಳಯದಲ್ಲಿ ಕಾಣಿಸಿಕೊಂಡಿತು. ಈ ಕಾರಣದಿಂದಾಗಿ ತಂಡವನ್ನು ನಿರ್ಬಂಧಿಸಲಾಯಿತು ಮತ್ತು ಅದಕ್ಕಾಗಿಯೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಹೊಸ ತಂಡವನ್ನು ಆಯ್ಕೆ ಮಾಡಿತು.

ಈ ಸೋಲನ್ನು ರಿಕ್ಟರ್ ಪ್ರಮಾಣದಲ್ಲಿ ಅಳೆದ ಮಾಜಿ ಕ್ರಿಕೆಟಿಗ
ಪಾಕಿಸ್ತಾನದ ಈ ಸೋಲನ್ನು ರಿಕ್ಟರ್ ಪ್ರಮಾಣದಲ್ಲಿ ಲೆಕ್ಕ ಹಾಕಿದರೆ ಅದು 15 ತೀವ್ರತೆಯ ಭೂಕಂಪದಂತಿದೆ ಎಂದು ರಾಜಾ ಹೇಳಿದ್ದಾರೆ. ರಾಜಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡುತ್ತಾ, “ನೀವು ಪಾಕಿಸ್ತಾನದ ಈ ಸರಣಿಯ ಸೋಲನ್ನು ರಿಕ್ಟರ್ ಪ್ರಮಾಣದಲ್ಲಿ ಅಳೆಯುತ್ತಿದ್ದರೆ, ಅದರ ತೀವ್ರತೆಯು 15 ರ ಆಸುಪಾಸಿನಲ್ಲಿರುತ್ತದೆ. ಇದು ಒಂದು ದೊಡ್ಡ ಸೋಲು ಮತ್ತು ಯಾರಾದರೂ ಅದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು ಎಂದು ನನಗೆ ಅರ್ಥವಾಗುತ್ತಿಲ್ಲ. ಪ್ರತಿಭೆಗೆ ಸಂಬಂಧಿಸಿದಂತೆ, ಇದು ಇಂಗ್ಲೆಂಡ್‌ನ ನಂ .2 ತಂಡವಾಗಿದೆ. ಅದರ ಎದುರು ಸೋಲುವುದು ಪಾಕ್ ತಂಡಕ್ಕೆ ಶೋಭೆಯಲ್ಲ ಎಂದಿದ್ದಾರೆ.

ನೀವು ಈಗ ಎಚ್ಚರಗೊಳ್ಳದಿದ್ದರೆ ಕಷ್ಟ
ಇಂಗ್ಲೆಂಡ್ ತಮ್ಮ ಎರಡನೇ ತಂಡವನ್ನು ಆಯ್ಕೆ ಮಾಡಿದಾಗ, ಬಾಬರ್ ಅಜಮ್ ಅವರ ನಾಯಕತ್ವದ ಪಾಕಿಸ್ತಾನ ತಂಡವು ಸರಣಿಯನ್ನು ಗೆಲ್ಲಲು ಪ್ರಬಲ ಸ್ಪರ್ಧಿ ಎಂದು ಎಲ್ಲರೂ ಭಾವಿಸಿದರು. ಆದರೆ ಈಗ ಪರಿಸ್ಥಿತಿ ಏನೆಂದರೆ, ಪಾಕಿಸ್ತಾನ ತಂಡವನ್ನು ಸ್ವಚ್ಚ ಗೊಳಿಸುವ ಹಾದಿಯಲ್ಲಿ ಇಂಗ್ಲೆಂಡ್ ನಿಂತಿದೆ. ಈ ಸೋಲನ್ನು ಸಮರ್ಥಿಸಲಾಗುವುದಿಲ್ಲ. ನೀವು ಈಗ ಎಚ್ಚರಗೊಳ್ಳದಿದ್ದರೆ, ಇನ್ನ್ಯಾವಾಗ ಎಚ್ಚರಗೊಳ್ಳುತ್ತೀರಿ ಎಂದು ನನಗೆ ಗೊತ್ತಿಲ್ಲ. ಇದು ವಿಶ್ವಕಪ್‌ನ ವರ್ಷ, ಇದು ಟಿ 20 ವಿಶ್ವಕಪ್ ಆಗದಿದ್ದರೂ, ಪಾಕಿಸ್ತಾನದ ಅಭಿಮಾನಿಗಳು ಇಂತಹ ಪ್ರಮುಖ ಪಂದ್ಯಾವಳಿಯ ಸೋಲನ್ನು ಸಹಿಸುವುದಿಲ್ಲ ಎಂದು ರಾಜ ತಮ್ಮ ಆಕ್ರೋಶ ಹೊರಹಾಕಿದ್ದರೆ.