Tokyo Olympics: ಭಾರತದ ಸ್ಪರ್ಧಿಗಳಿಗಾಗಿ ಮೋದಿ ಅಭಿಯಾನ; ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಟೀಮ್ ಇಂಡಿಯಾ ಕ್ರಿಕೆಟಿಗರು
Tokyo Olympics: ಟ್ವಿಟರ್ ಹ್ಯಾಂಡಲ್‌ನಲ್ಲಿ ಶನಿವಾರ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಿಥಾಲಿ, ರೋಹಿತ್, ವಿರಾಟ್ ಕೊಹ್ಲಿ, ಜೆಮಿಮಾ ರೊಡ್ರಿಗಸ್, ಅಜಿಂಕ್ಯ ರಹಾನೆ, ಹಾರ್ಲೀನ್ ಡಿಯೋಲ್ ಅವರಂತಹ ಆಟಗಾರರು ಭಾರತಕ್ಕೆ ಮೆರಗು ನೀಡಿ ಎಂದು ಹೇಳಿಕೊಂಡಿದ್ದಾರೆ.
ಭಾರತೀಯ ಕ್ರೀಡಾಪಟುಗಳು ಕೆಲವೇ ದಿನಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲಿದ್ದಾರೆ. ಹೀಗಾಗಿ ಇಡೀ ದೇಶವೇ ಭಾರತದ ಆಟಗಾರರನ್ನು ಹುರಿದುಂಬಿಸುತ್ತಿದೆ. ಪಿಎಂ ನರೇಂದ್ರ ಮೋದಿ ಅವರು ಆಟಗಾರರ ಉತ್ಸಾಹವನ್ನು ಹೆಚ್ಚಿಸಲು ಚೀಯರ್ 4 ಇಂಡಿಯಾ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಭಾರತೀಯ ಕ್ರಿಕೆಟಿಗರೂ ಈ ಅಭಿಯಾನಕ್ಕೆ ಕೈಜೋಡಿಸಿದ್ದು ಆಟಗಾರರಿಗೆ ಹಾರೈಸಿದರು. ಭಾರತದ 100 ಕ್ಕೂ ಹೆಚ್ಚು ಕ್ರೀಡಾಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಕಳೆದ ವರ್ಷ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೊರೊನಾದ ಕಾರಣ ಅದನ್ನು ಒಂದು ವರ್ಷಕ್ಕೆ ಮುಂದೂಡಲಾಯಿತು.
ಈಗ ಈ ಆಟ ಜುಲೈ 23 ರಿಂದ ಪ್ರಾರಂಭವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಹಾಕಿ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ಭಾರತದ ಧ್ವಜ ಧಾರಕರಾಗಲಿದ್ದಾರೆ. ಆಗಸ್ಟ್ 8 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಗ್ರ ಕುಸ್ತಿಪಟು ಭಜರಂಗ್ ಪುನಿಯಾ ಅವರನ್ನು ದೇಶದ ಧ್ವಜ ಧಾರಕರನ್ನಾಗಿ ಮಾಡಲಾಗಿದೆ.
ಕ್ರಿಕೆಟಿಗರು ಆಟಗಾರರನ್ನು ಹುರಿದುಂಬಿಸಿದರು ಬಿಸಿಸಿಐ ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಆಟಗಾರರನ್ನು ಅಭಿನಂದಿಸಿದೆ. ಟೋಕಿಯೊ ಒಲಿಂಪಿಕ್ಸ್‌ಗಾಗಿ ಭಾರತದ ಕ್ರೀಡಾಪಟುಗಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ನೀಡುವಲ್ಲಿ ಭಾರತದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಿಸಿಸಿಐ ಹೆಮ್ಮೆಯಿಂದ ತೊಡಗಿಸಿಕೊಂಡಿದೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಕ್ರೀಡಾಪಟುಗಳು ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಮತ್ತು ಹೋಗಲು ಉತ್ಸುಕರಾಗಿದ್ದಾರೆ. ನಾವು ಅವರನ್ನು ಒಟ್ಟಿಗೆ ಹುರಿದುಂಬಿಸೋಣ ಎಂದು ಬರದುಕೊಂಡಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಶನಿವಾರ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಿಥಾಲಿ, ರೋಹಿತ್, ವಿರಾಟ್ ಕೊಹ್ಲಿ, ಜೆಮಿಮಾ ರೊಡ್ರಿಗಸ್, ಅಜಿಂಕ್ಯ ರಹಾನೆ, ಹಾರ್ಲೀನ್ ಡಿಯೋಲ್ ಅವರಂತಹ ಆಟಗಾರರು ಭಾರತಕ್ಕೆ ಮೆರಗು ನೀಡಿ ಎಂದು ಹೇಳಿಕೊಂಡಿದ್ದಾರೆ.
The BCCI proudly joins the Honourable Prime Minister of India Shri @narendramodi in extending our wholehearted support to the Team India Athletes @Tokyo2020
They have trained hard and are raring to go.
Let us get together and #Cheer4India | @JayShah | @IndiaSports pic.twitter.com/KDDr5wA28S
— BCCI (@BCCI) July 10, 2021
ಐಸೊಎಗೆ ಬಿಸಿಸಿಐ 10 ಕೋಟಿ ರೂ ಆಟಗಾರರ ತಯಾರಿ ಮತ್ತು ತರಬೇತಿಗಾಗಿ 10 ಕೋಟಿ ರೂ. ನೀಡುವುದಾಗಿ ಬಿಸಿಸಿಐ ಇತ್ತೀಚೆಗೆ ಘೋಷಿಸಿತ್ತು. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ನಮ್ಮ ಉನ್ನತ ಆಟಗಾರರ ತಯಾರಿ ಮತ್ತು ಇತರ ಉದ್ದೇಶಗಳಿಗಾಗಿ ಈ ನಿಧಿಯನ್ನು ಬಳಸಲಾಗುವುದು ಎಂದು ಮಂಡಳಿಯ ಅಧಿಕಾರಿ ತಿಳಿಸಿದ್ದಾರೆ. ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ ಸಂಘದೊಂದಿಗೆ ಮಾತನಾಡಿದ ನಂತರ ಪಾವತಿ ವಿಧಾನವನ್ನು ನಿರ್ಧರಿಸಲಾಗುತ್ತದೆ.