ಮದುವೆ ಆಲೋಚನೆಯಲ್ಲಿ.. ಸಲ್ಮಾನ್ ಖಾನ್ ಹಾದಿ ತುಳಿಯುತ್ತಾರಾ ರಶೀದ್ ಖಾನ್?

T20 ಕ್ರಿಕೆಟ್​ನ ನಂ.1 ಬೌಲರ್ ಆಗಿರೋ ಅಫ್ಘಾನಿಸ್ತಾನ ತಂಡದ ರಶೀದ್​ ಖಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಆಗ್ತಿದ್ದಾರೆ. ಯಾಕಾದ್ರೂ ಅಂಥದ್ದೊಂದು ಹೇಳಿಕೆ ನೀಡದ್ನೋ ಅಂತಾ ರಶೀದ್ ಹಣೆಹಣೆ ಚೆಚ್ಚುಕೊಳ್ಳೋ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ರಶೀದ್ ಖಾನ್ ಹೇಳಿದ್ದೇನು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ರಶೀದ್ ಖಾನ್ ತಮ್ಮ ಮದುವೆ ವಿಚಾರದ ಬಗ್ಗೆ ಆಡಿದ ಮಾತುಗಳೇ ಇದೀಗ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುವಂತೆ ಆಗಿರೋದು. ನಾನು ಪ್ರೀತಿ ಮಾಡೋದು ಅಥವಾ ಮದುವೆಯಾಗೋ ಬಗ್ಗೆ ಯೋಚಿಸೋದು ನನ್ನ ತಂಡ […]

ಮದುವೆ ಆಲೋಚನೆಯಲ್ಲಿ.. ಸಲ್ಮಾನ್ ಖಾನ್ ಹಾದಿ ತುಳಿಯುತ್ತಾರಾ ರಶೀದ್ ಖಾನ್?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 13, 2020 | 2:33 PM

T20 ಕ್ರಿಕೆಟ್​ನ ನಂ.1 ಬೌಲರ್ ಆಗಿರೋ ಅಫ್ಘಾನಿಸ್ತಾನ ತಂಡದ ರಶೀದ್​ ಖಾನ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್ ಆಗ್ತಿದ್ದಾರೆ. ಯಾಕಾದ್ರೂ ಅಂಥದ್ದೊಂದು ಹೇಳಿಕೆ ನೀಡದ್ನೋ ಅಂತಾ ರಶೀದ್ ಹಣೆಹಣೆ ಚೆಚ್ಚುಕೊಳ್ಳೋ ಪರಿಸ್ಥಿತಿ ಎದುರಾಗಿದೆ.

ಅಷ್ಟಕ್ಕೂ ರಶೀದ್ ಖಾನ್ ಹೇಳಿದ್ದೇನು ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ ರಶೀದ್ ಖಾನ್ ತಮ್ಮ ಮದುವೆ ವಿಚಾರದ ಬಗ್ಗೆ ಆಡಿದ ಮಾತುಗಳೇ ಇದೀಗ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುವಂತೆ ಆಗಿರೋದು. ನಾನು ಪ್ರೀತಿ ಮಾಡೋದು ಅಥವಾ ಮದುವೆಯಾಗೋ ಬಗ್ಗೆ ಯೋಚಿಸೋದು ನನ್ನ ತಂಡ ವಿಶ್ವಕಪ್ ಗೆದ್ದ ಬಳಿಕವೇ ಎಂದು ಹೇಳಿಕೊಂಡಿದ್ದಾರೆ. ರಶೀದ್ ಖಾನ್ ನೀಡಿದ ಇದೇ ಹೇಳಿಕೆ ಇದೀಗ  ಆತ ಟ್ರೋಲ್​ ಆಗುವಂತೆ ಮಾಡಿರೋದು. ಜೊತೆಗೆ, ಅವರ ಹೇಳಿಕೆಗೆ ಕ್ರಿಕೆಟ್ ಅಭಿಮಾನಿಗಳು ರಶೀದ್​ ಇದೀಗ ಸಲ್ಮಾನ್ ಖಾನ್ ಅಭಿಮಾನಿಯಾಗಿದ್ದಾರೆ ಅನ್ಸುತ್ತೆ ಅಂತಾ ಕಾಲೆಳೆದಿದ್ದಾರೆ.

ಇನ್ನು ಕೆಲವರು ಅಫ್ಘಾನಿಸ್ತಾನ ತಂಡ ವಿಶ್ವಕಪ್ ಗೆಲ್ಲೋ ತನಕ ಮದುವೆಯಾಗಲ್ಲ ಅಂತಿದ್ದೀರಾ ? ಒಂದು ವೇಳೆ ವಿಶ್ವಕಪ್ ಗೆಲ್ಲದಿದ್ರೆ ಏನ್ ಮಾಡ್ತೀರಾ ಅಂತಾ ಅವರಿಗೆ ಮರು ಪ್ರಶ್ನೆ ಹಾಕುವ ಮೂಲಕ ಟ್ರೋಲ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅಫ್ಘಾನಿಸ್ತಾನ ತಂಡ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ ನಿಜ. ಆದ್ರೆ ಅಫ್ಘಾನಿಸ್ತಾನ ತಂಡದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿರುವಂಥ ಸ್ಟಾರ್ ಆಟಗಾರರಿದ್ದಾರೆ ಅನ್ನೋದನ್ನ ಅಲ್ಲಗಳೆಯೋ ಹಾಗಿಲ್ಲ. ಹೀಗಾಗಿ ಅವರು ಮುಂದಿನ ವಿಶ್ವಕಪ್​ಗೂ ಮುನ್ನ ಬಲಿಷ್ಠ ತಂಡವಾಗಿ ರೂಪಗೊಂಡು ವಿಶ್ವಕಪ್ ಗೆದ್ರೇ, ರಶೀದ್​ಗೆ ಶಾದಿ ಭಾಗ್ಯ ಸಿಗಲಿದೆ. ಇಲ್ಲಾ ಅಂದ್ರೆ, ರಶೀದ್ ಖಾನ್ ಮಾತಿಗೆ ತಪ್ಪಿ ಮದುವೆಯಾದ್ರೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಟ್ರೋಲ್ ಆಗೋದ್ರಲ್ಲೇ ಡೌಟೇ ಇಲ್ಲ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್