ವಿಶ್ವದ ಪ್ರಮುಖ ಲೀಗ್ಗಳಲ್ಲಿ ಆಡುತ್ತಿರುವ RCB ತಂಡದ ನೆಟ್ ಬೌಲರ್..!
Royal Challengers Bangalore: ಆರ್ಸಿಬಿ ತಂಡದ ನೆಟ್ ಬೌಲರ್ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್ನನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯೇ ಖರೀದಿಸಲಿದೆಯಾ ಕಾದು ನೋಡಬೇಕಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನೆಟ್ ಬೌಲರ್ ಆಗಿದ್ದ ಯುವ ಆಟಗಾರನ ಅದೃಷ್ಟ ಖುಲಾಯಿಸಿದೆ. ಒಂದೇ ಒಂದು ಸೀಸನ್ ಐಪಿಎಲ್ನಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದ ಯುವ ಸ್ಪಿನ್ನರ್ ಇಝ್ರಾಉಲ್ ಹಕ್ ನವೀದ್ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶಗಳು ದೊರೆಯುತ್ತಿದೆ. ಅಫ್ಘಾನಿಸ್ತಾನದ 18 ವರ್ಷದ ನವೀದ್ ಐಪಿಎಲ್ 2022 ರಲ್ಲಿ ಆರ್ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಯುವ ಸ್ಪಿನ್ನರ್ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣಿಟ್ಟಿದ್ದವು.
ಅದರಂತೆ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸೇಂಟ್ ಕಿಟ್ಸ್ ಮತ್ತು ಪೇಟ್ರಿಯಾಟ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್ನಲ್ಲೂ ಅವಕಾಶ ಪಡೆದಿದ್ದಾರೆ. ಬಿಬಿಎಲ್ 2022 ರ ಡ್ರಾಫ್ಟ್ ಆಯ್ಕೆಗಳ ಮೂಲಕ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅನ್ನು ಸಿಡ್ನಿ ಸಿಕ್ಸರ್ಸ್ ತಂಡವು ಖರೀದಿಸಿದೆ. ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ನಂತಹ ಸ್ಟಾರ್ ಆಟಗಾರರಿಗೆ ಅಭ್ಯಾಸದ ವೇಳೆ ಸ್ಪಿನ್ ಮೋಡಿದ್ದ ನವೀದ್ಗೆ ಇದೀಗ ಬ್ಯಾಕ್ ಟು ಬ್ಯಾಕ್ ಅವಕಾಶ ದೊರೆಯಲಾರಂಭಿಸಿದೆ.
ವಿಶೇಷ ಎಂದರೆ ಇಝ್ರಾಉಲ್ ಹಕ್ ನವೀದ್ ಇನ್ನೂ ಕೂಡ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡಿಲ್ಲ. ಅಂದರೆ ಕೇವಲ ಅಫ್ಘಾನಿಸ್ತಾನ್ ಅಂಡರ್ 19 ಟೀಮ್ ಮತ್ತು ಆರ್ಸಿಬಿ ತಂಡದ ನೆಟ್ ಬೌಲರ್ ಆಗಿಯೇ ಹೆಸರು ಮಾಡಿದ್ದಾರೆ. ಇದರ ಫಲವಾಗಿ ಇದೀಗ ಯುವ ಸ್ಪಿನ್ನರ್ಗೆ ಟಿ20 ಲೀಗ್ನ ಪ್ರಮುಖ ಫ್ರಾಂಚೈಸಿಗಳು ಮಣೆಹಾಕುತ್ತಿದ್ದಾರೆ. ಹೀಗಾಗಿಯೇ ಮುಂಬರುವ ಐಪಿಎಲ್ ಹರಾಜಿಗೂ ಇಝ್ರಾಉಲ್ ಹಕ್ ನವೀದ್ ಹೆಸರು ನೀಡುವುದರಲ್ಲಿ ಅನುಮಾನವೇ ಇಲ್ಲ.
View this post on Instagram
ಇತ್ತ ಈಗಾಗಲೇ ಆರ್ಸಿಬಿ ತಂಡದ ನೆಟ್ ಬೌಲರ್ ಆಗಿ ಗಮನ ಸೆಳೆದಿರುವ ಯುವ ಸ್ಪಿನ್ನರ್ನನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯೇ ಖರೀದಿಸಲಿದೆಯಾ ಕಾದು ನೋಡಬೇಕಿದೆ.