RCB vs RR: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆರ್​ಸಿಬಿ ಗೆಲ್ಲೋದಕ್ಕೆ ಇಲ್ಲಿದೆ ಪ್ರಮುಖ ಮೂರು ಕಾರಣಗಳು

| Updated By: Skanda

Updated on: Apr 23, 2021 | 7:29 AM

ಕನ್ನಡಿಗ ದೇವದತ್​ ಪಡಿಕಲ್​ ಶತಕ ಹಾಗೂ ನಾಯಕ ವಿರಾಟ್​ ಕೊಹ್ಲಿ ಅದ್ಭುತ ಅರ್ಧ ಶತಕದ ನೆರವಿನಿಂದ ರಾಜಸ್ಥಾನ್​ ನೀಡಿದ್ದ 178 ರನ್​ಗಳ ಗುರಿಯನ್ನು ಆರ್​ಸಿಬಿ ಕೇವಲ 16.3 ಓವರ್​ಗಳಲ್ಲೇ ಪೂರ್ಣಗೊಳಿಸಿದೆ.

RCB vs RR: ರಾಜಸ್ಥಾನ್​ ರಾಯಲ್ಸ್​ ವಿರುದ್ಧ ಆರ್​ಸಿಬಿ ಗೆಲ್ಲೋದಕ್ಕೆ ಇಲ್ಲಿದೆ ಪ್ರಮುಖ ಮೂರು ಕಾರಣಗಳು
ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಡೇವಿಡ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.
Follow us on

ಗುರುವಾರ (ಏಪ್ರಿಲ್​ 22) ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 10 ವಿಕೆಟ್​ಗಳ ಅದ್ಭುತ ಗೆಲುವು ಸಾಧಿಸಿದೆ. ಕನ್ನಡಿಗ ದೇವದತ್​ ಪಡಿಕ್ಕಲ್​ ಶತಕ ಹಾಗೂ ನಾಯಕ ವಿರಾಟ್​ ಕೊಹ್ಲಿ ಅದ್ಭುತ ಅರ್ಧ ಶತಕದ ನೆರವಿನಿಂದ ರಾಜಸ್ಥಾನ್​ ನೀಡಿದ್ದ 178 ರನ್​ಗಳ ಗುರಿಯನ್ನು ಆರ್​ಸಿಬಿ ಕೇವಲ 16.3 ಓವರ್​ಗಳಲ್ಲೇ ಪೂರ್ಣಗೊಳಿಸಿದೆ. ಇಂದಿನ ಗೆಲುವಿನಲ್ಲಿ ಮೂರು ವಿಚಾರಗಳು ಪ್ರಮುಖ ಎನಿಸಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಟಾಸ್​ ಗೆದ್ದ ಆರ್​ಸಿಬಿ
ಮುಂಬೈ ಪಿಚ್​ ಬ್ಯಾಟಿಂಗ್​ ಪಿಚ್​. ಅಷ್ಟೇ ಅಲ್ಲ, ಇಲ್ಲಿ ಎರಡನೇ ಬ್ಯಾಟಿಂಗ್​ಗೆ ಇಳಿದವರಿಗೆ ಗೆಲುವು ಒಲಿದಿದ್ದು ಹೆಚ್ಚು. ಎರಡನೇ ಬ್ಯಾಟಿಂಗ್​ ವೇಳೆಗೆ ಪಿಚ್​ ಒದ್ದೆ ಆಗಿರುತ್ತದೆ. ಬಾಲ್​ ಜಾರುವುದರಿಂದ ಬೌಲರ್​ ಅಂದುಕೊಂಡ ಮಟ್ಟಿಗೆ ಬಾಲ್ ಎಸೆಯೋಕೆ ಸಾಧ್ಯ ಆಗುವುದಿಲ್ಲ. ಹೀಗಾಗಿ, ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು ಮಹತ್ವದ ಪಾತ್ರವಹಿಸಿತ್ತು.

ಆರ್​ಸಿಬಿ ಅದ್ಭುತ ಬೌಲಿಂಗ್
ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲು ಬೌಲಿಂಗ್​ಗೆ ಇಳಿಯಿತು. ಮೊಹಮದ್​ ಸಿರಾಜ್​ ಅವರ ಅದ್ಭುತ ಬೌಲಿಂಗ್​ ಪ್ರದರ್ಶನದಿಂದ ಆರ್​ಆರ್​ ಆರಂಭಿಕ ಆಘಾತ ಎದುರಿಸಿತು. ರಾಜಸ್ಥಾನದ ಪ್ರಮುಖ ಬ್ಯಾಟ್ಸ್​ಮನ್​ಗಳಾದ ಜೋಸ್​ ಬಟ್ಲರ್​, ಮಿಲ್ಲರ್​ ಸೇರಿ ಮೂರು ವಿಕೆಟ್​ಗಳನ್ನು ಸಿರಾಜ್​ ಪಡೆದರು. ಬ್ಯಾಟಿಂಗ್​ ಪಿಚ್​ ಆದ ಹೊರತಾಗಿಯೂ ಆರ್​ಆರ್​ 177 ರನ್​ ಮಾತ್ರ ಗಳಿಸಿತ್ತು.

​ಪಡಿಕ್ಕಲ್-ಕೊಹ್ಲಿ ಜತೆಯಾಟ
178ರನ್​ಗಳ ಬೆನ್ನು ಹತ್ತಿದ ಆರ್​ಸಿಬಿ ಉತ್ತಮ ಆರಂಭ ಕಂಡಿತ್ತು. ಕಳೆದ ಎರಡು ಮ್ಯಾಚ್​ಗಳಲ್ಲಿ ಸಾಧಾರಣ ಮೊತ್ತದ ಪರ್ಫಾರ್ಮೆನ್ಸ್​ ನೀಡಿದ್ದ ದೇವದತ್ತ ಸಿಡಿದೆದ್ದರು. ಈ ಮೂಲಕ ಕೇವಲ 51 ಬಾಲ್​ಗಳಲ್ಲಿ ಅವರು ಶತಕ ಬಾರಿಸಿದರು. ಇನ್ನು ವಿರಾಟ್ ಕೊಹ್ಲಿ ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಆರ್​ಸಿಬಿಯನ್ನು ಗೆಲುವಿನ ದಡ ತಲುಪಿಸಿದರು.

ಇದನ್ನೂ ಓದಿ: RCB vs RR , IPL 2021 Match 16 Result: ಕೊಹ್ಲಿ- ಪಡಿಕ್ಕಲ್ ಅಮೋಘ ಜೊತೆಯಾಟ; ಆರ್​ಸಿಬಿಗೆ 10 ವಿಕೆಟ್​ಗಳ ಭರ್ಜರಿ ಗೆಲುವು