ಟೆನಿಸ್ ಸೂಪರ್ ಸ್ಟಾರ್ ರೋಜರ್ ಫೆಡರರ್ (Roger Federer) ತನ್ನ ವೃತ್ತಿ ಬದುಕಿಗೆ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಈ ಮೂಲಕ ತಮ್ಮ ಅಸಂಖ್ಯಾತ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇಂಜುರಿ ಸಮಸ್ಯೆಯಿಂದ ಒಂದು ವರ್ಷಗಳಿಂದ ಆಟದಿಂದ ದೂರವಿರುವ ರೋಜರ್ ಫೆಡರರ್ ತನ್ನ ವೃತ್ತಿ ಬದುಕಿಗೆ ವಿದಾಯ ಹೇಳುವ ಮುನ್ಸೂಚನೆ ನೀಡಿದ್ದಾರೆ. ವಾಸ್ತವವಾಗಿ ವಿಂಬಲ್ಡನ್ 2022 (Wimbledon 2022)ರಲ್ಲಿ ಟೆನಿಸ್‌ಗೆ ಅಧಿಕೃತವಾಗಿ ಮರಳಲು ನಿರ್ಧರಿಸಲಾಗಿತ್ತು. ಆದರೆ ಈ ವರ್ಷದ ಲೇವರ್ ಕಪ್‌ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದರು. ಜೊತೆಗೆ ಪ್ರಪಂಚದಾದ್ಯಂತದ ಅಭಿಮಾನಿಗಳು ಅವರ ವಾಪಸಾತ್ತಿಗೆ ಕಾಯುತ್ತಿರುವಾಗ, ಫೆಡರರ್ ಆಘಾತಕಾರಿ ನಿವೃತ್ತಿ ಬಾಂಬ್ ಹಾಕಿದ್ದಾರೆ.
ಫೆಡರರ್ ಕೊನೆಯದಾಗಿ ಒಂದು ವರ್ಷದ ಹಿಂದೆ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಟೂರ್ನಿಯಲ್ಲಿ ಫೆಡರರ್ ಕ್ವಾರ್ಟರ್‌ಫೈನಲ್‌ನಲ್ಲಿ ಹಬರ್ಟ್ ಹರ್ಕಾಜ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದಿದ್ದರು. ಸೋಲಿನ ನಂತರ, ಫೆಡರರ್ ಮೊಣಕಾಲಿನ ಚಿಕಿತ್ಸೆಗೆ ಒಳಗಾದರು, ಅದು ಅವರನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಸೈಡ್‌ಲೈನ್‌ನಲ್ಲಿ ಇರಿಸಿತು. ಆದರೆ ಈಗ ಗಾಯಕ್ಕೆ ಉಪ್ಪು ಸುರಿದಂತೆ, 25 ವರ್ಷಗಳಲ್ಲಿ ಮೊದಲ ಬಾರಿಗೆ ATP ಶ್ರೇಯಾಂಕದಲ್ಲಿ ಅಗ್ರ 1000 ಆಟಗಾರರಿಂದ ಫೆಡರರ್ ಹೊರಬಿದ್ದಿದ್ದಾರೆ.
ಡಚ್ ಪತ್ರಿಕೆ ಅಲ್ಗೆಮಿನ್ ಡಾಗ್ಬ್ಲಾಡ್ ಜೊತೆ ಮಾತನಾಡಿದ ಫೆಡರರ್, ತಮ್ಮ ಸುಪ್ರಸಿದ್ಧ ವೃತ್ತಿಜೀವನಕ್ಕೆ ತೆರೆ ಎಳೆಯುವ ಸಮಯ ಹತ್ತಿರದಲ್ಲಿದೆ ಎಂದು ಸುಳಿವು ನೀಡಿದರು. ಈ ಬಗ್ಗೆ ಮಾತನಾಡಿದ ಫೆಡರರ್, ನಾನು ವಿಜೇತ ಪ್ರೇಮಿ, ಆದರೆ ಒಮ್ಮೆ ನಿಮಗೆ ಆಡುವುದು ಕಷ್ಟವೆನಿಸಿದ್ದರೆ, ಆ ಆಟವನ್ನು ನಿಲ್ಲಿಸುವುದು ಉತ್ತಮ. ಹಾಗಾಗಿ ನನಗೆ ಟೆನಿಸ್ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನನ್ನ ಮಗ ಏನನ್ನಾದರೂ ಸರಿಯಾಗಿ ಮಾಡಿದಾಗ ಮತ್ತು ನನ್ನ ಮಗಳು ಉತ್ತಮ ಅಂಕಗಳೊಂದಿಗೆ ಮನೆಗೆ ಬಂದಾಗ ನಾನು ಆ ಸಣ್ಣ ವಿಷಯಗಳಲ್ಲಿ ಸಂತೋಷಪಡುತ್ತೇನೆ.
ನಿಜ.. ಟೆನಿಸ್ ಒಂದು ನನ್ನ ಜೀವನದ ಭಾಗವಾಗಿದೆ, ಆದರೆ ಅದು ನನ್ನ ಸಂಪೂರ್ಣ ಗುರುತಲ್ಲ. ನಾನು ಯಾವಾಗಲು ಯಶಸ್ವಿಯಾಗಲು ಬಯಸುತ್ತೇನೆ. ಜೊತೆಗೆ ವ್ಯವಹಾರಕ್ಕೆ ಹೆಚ್ಚಿನ ಶಕ್ತಿಯನ್ನು ಹಾಕಲು ಬಯಸುತ್ತೇನೆ. ಬಹುಶಃ ನಾನು ಕೆಲವೊಮ್ಮೆ ನನ್ನ ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ಆದರೆ ಇದನ್ನು ಕ್ರೀಡೆಯ ಹೊರಗೆ ಕೂಡ ಮಾಡಬಹುದು. ವೃತ್ತಿಪರ ವೃತ್ತಿಜೀವನವು ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ ಎಂದು ಫೆಡರರ್ ಹೇಳಿದ್ದಾರೆ.
1999 ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ನಲ್ಲಿ ಆಡಿದ್ದ ಫೆಡರರ್, ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ವಿಂಬಲ್ಡನ್ ಅನ್ನು ತಪ್ಪಿಸಿಕೊಂಡರು. ಈ ವರ್ಷ ವಿಂಬಲ್ಡನ್ ಆಡದಿರುವುದು ಮತ್ತು ಟಿವಿಯಲ್ಲಿ ವೀಕ್ಷಿಸುವುದು ನನಗೆ ತುಂಬಾ ವಿಚಿತ್ರವಾಗಿದೆ, ಏಕೆಂದರೆ ನಾನು 1998 ರಿಂದ ಪ್ರತಿ ಬಾರಿ ಆಡಿದ್ದೇನೆ ಎಂದು ಫೆಡರರ್ ಹೇಳಿಕೊಂಡಿದ್ದಾರೆ.
Published On - 10:59 pm, Mon, 11 July 22