Women’s Hockey World Cup 2022: ಕ್ವಾರ್ಟರ್‌ಫೈನಲ್ ರೇಸ್‌ನಿಂದ ಹೊರಬಿದ್ದ ಭಾರತ; ವಿಶ್ವಕಪ್ ಗೆಲ್ಲುವ ಕನಸು ಭಗ್ನ
Women's Hockey World Cup 2022: ಕ್ರಾಸ್‌ಓವರ್ ಪಂದ್ಯದಲ್ಲಿ ಭಾರತ 0-1 ಗೋಲುಗಳಿಂದ ಸ್ಪೇನ್ ವಿರುದ್ಧ ಸೋಲು ಅನುಭವಿಸಿತು. ಜುಲೈ 13 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ಈಗ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
FIH ಮಹಿಳಾ ಹಾಕಿ ವಿಶ್ವಕಪ್ 2022 (Women’s Hockey World Cup 2022)ರ ಪ್ರಶಸ್ತಿ ರೇಸ್‌ನಿಂದ ಭಾರತೀಯ ಮಹಿಳಾ ತಂಡ ಹೊರಬಿದ್ದಿದೆ. ಸ್ಪೇನ್ ಭಾರತದ ಕನಸನ್ನು ಭಗ್ನಗೊಳಿಸಿತು. ಈ ಪಂದ್ಯವನ್ನು ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿತ್ತು, ಆದರೆ ತಂಡವು ನಿರ್ಣಾಯಕ ಕ್ಷಣವನ್ನು ಕಳೆದುಕೊಂಡಿತು. ಕ್ರಾಸ್‌ಓವರ್ ಪಂದ್ಯದಲ್ಲಿ ಭಾರತ 0-1 ಗೋಲುಗಳಿಂದ ಸ್ಪೇನ್ ವಿರುದ್ಧ ಸೋಲು ಅನುಭವಿಸಿತು. ಜುಲೈ 13 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್ ಈಗ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಆದರೆ ಭಾರತ, ಕೆನಡಾವನ್ನು ರ‍್ಯಾಂಕಿಂಗ್ ನಿರ್ಧರಿಸಲು ಎದುರಿಸಲಿದೆ. ಭಾರತ ತನ್ನ ಅಂತಿಮ ಪೂಲ್ ಬಿ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-4 ಅಂತರದಿಂದ ಸೋತಿತು, ಕ್ವಾರ್ಟರ್-ಫೈನಲ್ ತಲುಪಲು ಸ್ಪೇನ್ ವಿರುದ್ಧ ಕ್ರಾಸ್ ಓವರ್ ಗೆಲುವಿನ ಅಗತ್ಯವಿತ್ತು.
Even after the tense opening frame at Terrassa! ?
ಇದನ್ನೂ ಓದಿStay tuned for another exhilarating half!
ESP 0:0 IND #HockeyIndia #IndiaKaGame #HWC2022 #HockeyInvites #HockeyEquals #ChakDeIndia #MatchDay @CMO_Odisha @sports_odisha @IndiaSports @Media_SAI pic.twitter.com/1cOdbnqzRT
— Hockey India (@TheHockeyIndia) July 10, 2022
ಕ್ರಾಸ್ ಓವರ್ ವಿನ್ನರ್ ನೇರವಾಗಿ ಕ್ವಾರ್ಟರ್ ಫೈನಲ್‌ಗೆ
ಇದಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಚೀನಾ ವಿರುದ್ಧ ಭಾರತ ಡ್ರಾ ಮಾಡಿಕೊಂಡಿತ್ತು. ಪಂದ್ಯಾವಳಿಯ ಸ್ವರೂಪದ ಪ್ರಕಾರ, ಎಲ್ಲಾ ತಂಡಗಳನ್ನು ನಾಲ್ಕು ಪೂಲ್‌ಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ಪೂಲ್‌ಗಳಲ್ಲಿ ಅಗ್ರ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದವು. ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಕ್ರಾಸ್‌ಓವರ್ ಆಡಬೇಕಾಗುತ್ತದೆ. ಕ್ರಾಸ್‌ಓವರ್ ಪಂದ್ಯಗಳಲ್ಲಿ ಗೆಲ್ಲುವ ತಂಡವು ಕ್ವಾರ್ಟರ್ ಫೈನಲ್‌ಗೆ ಮುನ್ನಡೆಯುತ್ತದೆ.
ಕೊನೆಯ ಕ್ಷಣದಲ್ಲಿ ರೋಚಕ ಪಂದ್ಯ
ಕ್ರಾಸ್ ಓವರ್ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಕೊನೆಯವರೆಗೂ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಅರ್ಧ ಸಮಯ ಗೋಲುರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ, ಕೊನೆಯ ಹೂಟರ್ ಆಡುವ ಕೆಲವು ನಿಮಿಷಗಳ ಮೊದಲು, ಸ್ಪೇನ್‌ನ ಮಾರ್ಟಾ ಸೆಗು ರಿಬೌಂಡ್ ಗೋಲು ಗಳಿಸುವ ಮೂಲಕ ತನ್ನ ತಂಡಕ್ಕೆ ಮುನ್ನಡೆ ನೀಡಿದರು. ಅದನ್ನು ಸ್ಪೇನ್ ಕೊನೆಯವರೆಗೂ ಉಳಿಸಿಕೊಂಡಿತು. ಕೊನೆಯ ನಿಮಿಷಗಳಲ್ಲಿ ಸ್ಕೋರ್ ಅನ್ನು ಸಮಬಲಗೊಳಿಸಲು ಸ್ಪೇನ್ ಭಾರತಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಸ್ಪೇನ್ ಕೇವಲ 9 ಆಟಗಾರರೊಂದಿಗೆ ಆಡುತ್ತಿತ್ತು. ಗ್ರೇಸಿಯಾ ಹಳದಿ ಕಾರ್ಡ್ ಪಡೆದರೆ, ಸೇಗು ಗ್ರೀನ್ ಕಾರ್ಡ್ ಪಡೆದರು.