ರೋಜರ್ ಫೆಡರರ್ ಜೊತೆ ಊಟ ಮಾಡುವ ಬಯಕೆ ಹೊರಹಾಕಿದ ಟೀಂ ಇಂಡಿಯಾ ಕ್ರಿಕೆಟರ್; ವಿಡಿಯೋ ನೋಡಿ
ರೋಜರ್ ಫೆಡರರ್ ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತದಲ್ಲೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟಿಗರು ಕೂಡ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ.
ರೋಜರ್ ಫೆಡರರ್ (Roger Federer.) ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಭಾರತದಲ್ಲೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಕ್ರಿಕೆಟಿಗರು ಕೂಡ ಅವರ ದೊಡ್ಡ ಅಭಿಮಾನಿಗಳಾಗಿದ್ದಾರೆ. ಇತ್ತೀಚೆಗೆ, ಭಾರತದ ಹಿರಿಯ ಕ್ರಿಕೆಟಿಗರೊಬ್ಬರು ರೋಜರ್ ಫೆಡರರ್ ಅವರನ್ನು ಊಟಕ್ಕೆ ಕರೆದೊಯ್ಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಫೆಡರರ್ ಅವರನ್ನು ಊಟಕ್ಕೆ ಕರೆದೊಯ್ಯಲು ಬಯಸಿದ ಭಾರತೀಯ ಆಟಗಾರ ಬೇರ್ಯಾರು ಅಲ್ಲ. ಅವರೇ ಟೀಂ ಇಂಡಿಯಾದ ಅತ್ಯುತ್ತಮ ಫಿನಿಶರ್ ದಿನೇಶ್ ಕಾರ್ತಿಕ್. ಫೆಡರರ್ ಅವರನ್ನು ಊಟಕ್ಕೆ ಕರೆದೊಯ್ಯಲು ಬಯಸುವುದಾಗಿ ದಿನೇಶ್ ಕಾರ್ತಿಕ್ (Dinesh karthik ) ಹೇಳಿಕೊಂಡಿದ್ದಾರೆ. ಬಿಸಿಸಿಐ (BCCI) ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ಕಾರ್ತಿಕ್ ತಮಾಷೆಯ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಈ ಪ್ರಶ್ನೋತ್ತರ ಅವಧಿಯಲ್ಲಿ ಕಾರ್ತಿಕ್ಗೆ, ನೀವು ಊಟಕ್ಕೆ ಯಾರನ್ನು ಕರೆದೊಯ್ಯಲು ಬಯಸುತ್ತೀರಿ, ಚಲನಚಿತ್ರ ತಾರೆ ಅಥವಾ ಕ್ರೀಡಾ ತಾರೆ ಎಂಬ ಪ್ರಶ್ನೆಯನ್ನ ಕೇಳಲಾಗಿದೆ.
ಈ ಪ್ರಶ್ನೆಗೆ ಉತ್ತರವಾಗಿ ಕಾರ್ತಿಕ್ ರೋಜರ್ ಫೆಡರರ್ ಹೆಸರನ್ನು ತೆಗೆದುಕೊಂಡಿದ್ದಾರೆ. ಮೈದಾನದ ಒಳಗೂ ಮತ್ತು ಹೊರಗೂ ಫೆಡರರ್ ಇರುವ ರೀತಿಗೆ ನಾನು ಅವರ ಅಭಿಮಾನಿಯಾಗಿದ್ದೇನೆ ಎಂದು ಕಾರ್ತಿಕ್ ಉತ್ತರಿಸಿದ್ದಾರೆ. ಕಾರ್ತಿಕ್, ಸ್ವಿಸ್ ಟೆನಿಸ್ ತಾರೆ ಫೆಡರರ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವುದು ಇದರಿಂದ ಖಚಿತವಾಗುತ್ತದೆ. ಮತ್ತೊಂದು ಪ್ರಶ್ನೆಗೆ ಉತ್ತರವಾಗಿ ಕಾರ್ತಿಕ್, ಮತ್ತೆ ಫೆಡರರ್ ಹೆಸರನ್ನೇ ತೆಗೆದುಕೊಂಡಿದ್ದಾರೆ. ವಾಸ್ತವವಾಗಿ, ಫೆಡರರ್ ಮತ್ತು ರಾಫೆಲ್ ನಡಾಲ್ ನಡುವೆ ನಿಮಗೆ ಯಾರು ಫೆವರೆಟ್ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಫೆಡರರ್ ಅವರನ್ನು ಆಯ್ಕೆ ಮಾಡಿದ್ದಾರೆ.
Mountain ⛰️ or Beach ?️
Federer or Nadal ?
Tea ? or Coffee ☕️
???? ?? ???? – Do not miss this fun segment with @DineshKarthik! ? ? #TeamIndia | #INDvSA | @Paytm pic.twitter.com/QHCsiLsLLq
— BCCI (@BCCI) June 12, 2022
ಅತ್ಯುತ್ತಮ ಫಾರ್ಮ್‌ನಲ್ಲಿ ಕಾರ್ತಿಕ್
ಕಾರ್ತಿಕ್ 3 ವರ್ಷಗಳ ನಂತರ ಟಿ20 ಕ್ರಿಕೆಟ್‌ಗೆ ಮರಳಿದ್ದಾರೆ. ಐಪಿಎಲ್ 2022 ರಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಅವರು ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ 20 ಪಂದ್ಯಗಳ ಸರಣಿಯಲ್ಲಿ ನಿರತರಾಗಿದ್ದಾರೆ. ಐಪಿಎಲ್‌ನ ಈ ಋತುವಿನಲ್ಲಿ ಕಾರ್ತಿಕ್ 16 ಪಂದ್ಯಗಳಲ್ಲಿ 183.33 ಸ್ಟ್ರೈಕ್ ರೇಟ್‌ನಲ್ಲಿ 330 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕಾರ್ತಿಕ್ 1 ರನ್ ಗಳಿಸಿ ಅಜೇಯರಾಗಿ ಉಳಿದರೆ, ಎರಡನೇ ಪಂದ್ಯದಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಸಮಯದಲ್ಲಿ ಕಾರ್ತಿಕ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಅವರ ಫಾರ್ಮ್ ಅನ್ನು ನೋಡುತ್ತಿದ್ದರೆ, ಅವರು ಈ ವರ್ಷ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.