AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ATP Rankings: ನಂ.1 ಸ್ಥಾನಕ್ಕೇರಿದ ಮೆಡ್ವೆಡೆವ್! 4 ವರ್ಷದಲ್ಲಿ ಮೊದಲ ಬಾರಿಗೆ ಟಾಪ್ 2 ರಿಂದ ಜೊಕೊವಿಕ್ ಔಟ್

ATP Rankings: ಡೇನಿಯಲ್ ಮೆಡ್ವೆಡೆವ್ ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ. ಸೋಮವಾರ ಬಿಡುಗಡೆಯಾದ ಎಟಿಪಿ ಶ್ರೇಯಾಂಕದಲ್ಲಿ ರಷ್ಯಾದ ಮೆಡ್ವೆಡೆವ್ 7950 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದ್ದಾರೆ.

ATP Rankings: ನಂ.1 ಸ್ಥಾನಕ್ಕೇರಿದ ಮೆಡ್ವೆಡೆವ್! 4 ವರ್ಷದಲ್ಲಿ ಮೊದಲ ಬಾರಿಗೆ ಟಾಪ್ 2 ರಿಂದ ಜೊಕೊವಿಕ್ ಔಟ್
ಡೇನಿಯಲ್ ಮೆಡ್ವೆಡೆವ್
TV9 Web
| Edited By: |

Updated on:Jun 13, 2022 | 8:31 PM

Share

ಡೇನಿಯಲ್ ಮೆಡ್ವೆಡೆವ್ (Daniil Medvedev) ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ಎನಿಸಿಕೊಂಡಿದ್ದಾರೆ. ಸೋಮವಾರ ಬಿಡುಗಡೆಯಾದ ಎಟಿಪಿ ಶ್ರೇಯಾಂಕದಲ್ಲಿ ರಷ್ಯಾದ ಮೆಡ್ವೆಡೆವ್ 7950 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದರೆ, ನೊವಾಕ್ ಜೊಕೊವಿಕ್ (Novak Djokovic) ಎರಡು ಸ್ಥಾನ ಕುಸಿಯುವುದರೊಂದಿಗೆ ನಂಬರ್ ಒನ್ ಸ್ಥಾನ ಕಳೆದುಕೊಂಡರು. ಸರ್ಬಿಯಾದ ಸ್ಟಾರ್ ಜೊಕೊವಿಕ್ ಕೂಡ 4 ವರ್ಷಗಳಲ್ಲಿ ಮೊದಲ ಬಾರಿಗೆ ಟಾಪ್ 2 ರಿಂದ ಹೊರಬಿದ್ದಿದ್ದಾರೆ. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಅದೇ ಸಮಯದಲ್ಲಿ, ಸ್ಪೇನ್ ಸ್ಟಾರ್ ರಾಫೆಲ್ ನಡಾಲ್ (Rafael Nadal) ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ಫ್ರೆಂಚ್ ಓಪನ್ ಫೈನಲಿಸ್ಟ್ ಕ್ಯಾಸ್ಪರ್ ರೂಡ್ ಒಂದು ಸ್ಥಾನ ಜಿಗಿದು 5 ನೇ ಸ್ಥಾನಕ್ಕೆ ತಲುಪಿದ್ದಾರೆ.

ಫೆಬ್ರವರಿಯಲ್ಲೂ ಮೆಡ್ವೆಡೆವ್ ಅಗ್ರಸ್ಥಾನ

ಜೊಕೊವಿಕ್ 373 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದರು. ವಾಸ್ತವವಾಗಿ, ವ್ಯಾಕ್ಸಿನೇಷನ್ ಮಾಡಿಸದಿರುವುದರಿಂದ ಸರ್ಬಿಯಾದ ಸ್ಟಾರ್ ಆಟಗಾರ ಜೊಕೊವಿಕ್ ಈ ವರ್ಷ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ನಂತರ, ಅವರು ಫ್ರೆಂಚ್ ಓಪನ್‌ನಲ್ಲೂ ತಮ್ಮ ಪ್ರಶಸ್ತಿಯನ್ನು ಉಳಿಸುವ ಅವಕಾಶವನ್ನು ಕಳೆದುಕೊಂಡರು. ಇದರಿಂದಾಗಿ ಅವರು ತಮ್ಮ ಕುರ್ಚಿಯನ್ನು ಕಳೆದುಕೊಳ್ಳುವ ಮೂಲಕ ನಷ್ಟವನ್ನು ಅನುಭವಿಸಬೇಕಾಯಿತು. ಈ ವರ್ಷ ಫೆಬ್ರವರಿಯಲ್ಲಿ ಮೆಡ್ವೆಡೆವ್ ನಂಬರ್ ಒನ್ ತಲುಪಿದರು. ಆದರೆ ಮುಂದಿನ ತಿಂಗಳು ಮಾರ್ಚ್‌ನಲ್ಲಿ ಜೊಕೊವಿಕ್ ಮತ್ತೆ ಅಗ್ರಸ್ಥಾನವನ್ನು ತಲುಪಿದ್ದರು.

ಇದನ್ನೂ ಓದಿ
Image
ENG vs NZ: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶ್ವದಾಖಲೆ ಬರೆದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್..!
Image
ICC Awards: ಐಸಿಸಿ ತಿಂಗಳ ಆಟಗಾರ್ತಿ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಯುವ ಮಹಿಳಾ ಕ್ರಿಕೆಟರ್
Image
ರಾಹುಲ್, ಜಡೇಜಾ, ಶ್ರೇಯಸ್ ಔಟ್! ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗನಿಗೆ ಅವಕಾಶ ಕೊಡದ ಗೌತಮ್ ಗಂಭೀರ್

ಇದನ್ನೂ ಓದಿ:Rafael Nadal: ದಾಖಲೆಯ 14ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ರಫೆಲ್ ನಡಾಲ್‌: ಯಾರು ಹೇಗೆ ಪ್ರತಿಕ್ರಿಯಿಸಿದರು?

ಫ್ರೆಂಚ್ ಓಪನ್ ಗೆದ್ದ ನಡಾಲ್

ನಾರ್ವೆಯ ಕಾಸ್ಪರ್ ರೂಡ್ ಅವರನ್ನು ನೇರ ಸೆಟ್‌ಗಳ ಅಂತರದಿಂದ ಮಣಿಸಿದ ಸ್ಪೇನ್ ಸೂಪರ್ ಸ್ಟಾರ್ ರಫೆಲ್ ನಡಾಲ್ 14ನೇ ಬಾರಿ ಫ್ರೆಂಚ್ ಓಪನ್ (French Open) ಪ್ರಶಸ್ತಿಯನ್ನು ಜಯಿಸಿ ದಾಖಲೆ ನಿರ್ಮಿಸಿದ್ದಾರೆ. ರೋಲ್ಯಾಂಡ್‌ ಗ್ಯಾರೋಸ್‌ನ ಫಿಲಿಪ್‌ ಚಾಟ್ರಿಯರ್‌ ಕೋರ್ಟ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ನಡಾಲ್ ಅವರು ಕಾಸ್ಪರ್‌ ರೂಡ್‌ ವಿರುದ್ಧ 6-3, 6-3, 6-0 ರ ನೇರ ಸೆಟ್‌ಗಳ ಅಂತರದಿಂದ ಗೆದ್ದು ಬೀಗಿದರು. ಇದರೊಂದಿಗೆ ಪ್ಯಾರಿಸ್‌ ಫೈನಲ್‌ನಲ್ಲಿ ಅಜೇಯರಾಗಿ ಉಳಿದರು. ಇದು ಸ್ಪೇನಿಗನಿಗೆ ಒಲಿದ 22ನೇ ಗ್ರ್ಯಾನ್‌ಸ್ಲಾಮ್‌ (Grand Slam) ಪ್ರಶಸ್ತಿ. ಇದರೊಂದಿಗೆ ಅವರು ಸಮಕಾಲೀನ ಟೆನಿಸ್‌ ದಿಗ್ಗಜರಾದ ನೊವಾಕ್‌ ಜೊಕೋವಿಕ್‌ ಮತ್ತು ರೋಜರ್‌ ಫೆಡರರ್‌ ಅವರಿಗಿಂತ ಎರಡು ಹೆಜ್ಜೆ ಮುಂದೆ ಸಾಗಿದರು. ಇವರಿಬ್ಬರೂ ತಲಾ 20 ಪ್ರಶಸ್ತಿ ಜಯಿಸಿದ್ದಾರೆ.

ATP ವಿಶ್ವ ಶ್ರೇಯಾಂಕದ ಟಾಪ್ 10 ಆಟಗಾರರು

1. ಡೇನಿಯಲ್ ಮೆಡ್ವೆಡೆವ್ (7,950 ಅಂಕಗಳು)

2. ಅಲೆಕ್ಸಾಂಡರ್ ಜ್ವೆರೆವ್ (7,075)

3. ನೊವಾಕ್ ಜೊಕೊವಿಕ್ (6,770)

4. ರಾಫೆಲ್ ನಡಾಲ್ (6,525)

5. ಕ್ಯಾಸ್ಪರ್ ರೂಡ್ (5,050)

6. ಸ್ಟೆಫಾನೋಸ್ ಸಿಟ್ಸಿಪಾಸ್ (4,945)

7. ಕಾರ್ಲೋಸ್ (4,893)

8. ಆಂಡ್ರೆ ರುಬ್ಲೆವ್ (4,125)

9. ಫೆಲಿಕ್ಸ್ ಆಗರ್-ಅಲಿಯಾಸ್ಸಿಮ್ (3,895)

10. ಮ್ಯಾಟಿಯೊ ಬೆರೆಟ್ಟಿನಿ (3,570)

Published On - 8:31 pm, Mon, 13 June 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ