ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತದ ಖಾತೆಗೆ ಇದೀಗ ಟೆನಿಸ್‌ನಿಂದಲೂ ಚಿನ್ನದ ಪದಕ ಬಂದು ಬಿದ್ದಿದೆ. ಶನಿವಾರ ನಡೆದ ಮಿಶ್ರ ಡಬಲ್ಸ್‌ನಲ್ಲಿ ( Mixed Doubles) ಭಾರತದ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ (Rohan Bopanna, Rutuja Bhosale) ಜೋಡಿಯು ಚೈನೀಸ್ ತೈಪೆ ಜೋಡಿಯನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಭಾರತದ ಈ ಜೋಡಿಯು ಫೈನಲ್‌ನಲ್ಲಿ ಆನ್ ಶುವೊ ಲಿಯಾಂಗ್ ಮತ್ತು ತ್ಸುಂಗ್ ಹಾವೊ ಹುವಾಂಗ್ ಜೋಡಿಯನ್ನು 2-6, 6-3, (10-4) ಅಂತರದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಚೈನೀಸ್ ತೈಪೆ ಜೋಡಿ ಭಾರತದ ಜೋಡಿಗೆ ತೀವ್ರ ಪೈಪೋಟಿ ನೀಡಿತ್ತಾದರೂ ಟೈ ಬ್ರೇಕರ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಜೋಡಿಗಳು ಚಿನ್ನದ ಪದಕಕ್ಕೆ ಕೊರಳೊಡ್ಡಿವೆ.
43 ವಯಸ್ಸಿನ ರೋಹನ್ ಬೋಪಣ್ಣ ಅವರಿಗೆ ಇದು ಕೊನೆಯ ಏಷ್ಯನ್ ಗೇಮ್ಸ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ಭಾರತದ ಈ ಟೆನಿಸ್ ಲೆಜೆಂಡ್ ಚಿನ್ನದ ಪದಕದೊಂದಿಗೆ ತಮ್ಮ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ ಎಂತಲೇ ಹೇಳಬಹಿದಾಗಿದೆ. ಬೋಪಣ್ಣ ಇತ್ತೀಚೆಗಷ್ಟೇ ತಮ್ಮ ಕೊನೆಯ ಡೇವಿಸ್ ಕಪ್ ಅನ್ನು ಆಡಿದ್ದರು. ಅಂದಿನಿಂದ ಅವರು ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
Many congratulations to @rohanbopanna and @RutujaBhosale12 on winning the #GoldMedal in the Tennis Mixed Doubles event!
Let’s #Cheer4india 🇮🇳#WeAreTeamIndia | #IndiaAtAG22 pic.twitter.com/jQS9SzNWEo
— Team India (@WeAreTeamIndia) September 30, 2023
ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಸೋಲು ಅನುಭವಿಸಬೇಕಾಯಿತು. ಮೊದಲ ಸೆಟ್‌ನಲ್ಲಿ ಬೋಪಣ್ಣ ಮತ್ತು ರುತುಜಾ ಜೋಡಿಯನ್ನು ಚೈನೀಸ್ ತೈಪೆ ಜೋಡಿಯು 6-2 ರಿಂದ ಸುಲಭವಾಗಿ ಸೋಲಿಸಿತು. ಆದರೆ ಬೋಪಣ್ಣ ತಮ್ಮ ಅನುಭವವನ್ನು ಬಳಸಿಕೊಂಡು ಕಮ್ ಬ್ಯಾಕ್ ಮಾಡಿ, ಎರಡನೇ ಸೆಟ್ ಅನ್ನು 6-3 ಅಂತರದಲ್ಲಿ ಜಯ ಸಾಧಿಸಿದರು. ಮೂರನೇ ಸೆಟ್‌ನಲ್ಲಿ ಎರಡೂ ತಂಡಗಳು ಅತ್ಯುತ್ತಮ ಆಟ ಪ್ರದರ್ಶಿಸಿದವು. ಈ ಸೆಟ್ ಎಷ್ಟು ಕಠಿಣವಾಗಿತ್ತು ಎಂದರೆ ಟೈ ಬ್ರೇಕರ್‌ನಲ್ಲಿ ವಿಜೇತರನ್ನು ನಿರ್ಧಾರಿಸಬೇಕಾಯಿತು. ಅಲ್ಲಿ ಭಾರತದ ಜೋಡಿ ಗೆದ್ದು ಭಾರತಕ್ಕೆ ಪದಕವನ್ನು ಗೆದ್ದುಕೊಟ್ಟಿತು. ಬೋಪಣ್ಣ ತನ್ನ ಅನುಭವದ ಲಾಭವನ್ನು ಪಡೆದರೆ, ರುತುಜಾ ಸಹ ಕಾಲಕಾಲಕ್ಕೆ ತನ್ನ ಆಟವನ್ನು ಸುಧಾರಿಸುವ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡಿದರು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಪುರುಷರಿಗೆ ಬಂಗಾರ
ಈ ವರ್ಷ ಟೆನಿಸ್‌ನಲ್ಲಿ ಭಾರತ ಕೇವಲ ಎರಡು ಪದಕಗಳನ್ನು ಗೆದ್ದಿದೆ. ಇದು 2002ರ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಟೆನಿಸ್‌ನಲ್ಲಿ ಭಾರತದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. 2002 ರಲ್ಲಿ, ಬುಸಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಟೆನಿಸ್ ತಂಡವು ನಾಲ್ಕು ಪದಕ ಗೆದ್ದಿತ್ತು. 2006 ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ನಾಲ್ಕು ಪದಕಗಳನ್ನು ಗೆದ್ದಿತ್ತು. ಹಾಗೆಯೇ 2010ರಲ್ಲಿ ಆಡಿದ ಏಷ್ಯನ್ ಗೇಮ್ಸ್‌ನಲ್ಲಿ ಈ ಸಂಖ್ಯೆ ಐದಕ್ಕೆ ಏರಿತು. 2014ರಲ್ಲಿ ಭಾರತ ಟೆನಿಸ್‌ನಲ್ಲಿ ಐದು ಮತ್ತು 2018ರಲ್ಲಿ ಜಕಾರ್ತದಲ್ಲಿ ಮೂರು ಪದಕಗಳನ್ನು ಗೆದ್ದಿತ್ತು. ಈ ಬಾರಿ ಭಾರತ ಡಬಲ್ಸ್‌ನಲ್ಲಿ ಪದಕಗಳನ್ನು ಗೆದ್ದಿದೆ. ಆದರೆ ಸಿಂಗಲ್ಸ್‌ನಲ್ಲಿ ಭಾರತದ ಯಾವ ಆಟಗಾರನೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ನಿರಾಸೆ ಅನುಭವಿಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Sat, 30 September 23