AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohan Bopanna Retirement: 22 ವರ್ಷಗಳ ಟೆನಿಸ್ ಬದುಕಿಗೆ ವಿದಾಯ ಹೇಳಿದ ರೋಹನ್ ಬೋಪಣ್ಣ

Rohan Bopanna Retirement: ಭಾರತದ ಟೆನಿಸ್ ತಾರೆ, ಕನ್ನಡಿಗ ರೋಹನ್ ಬೋಪಣ್ಣ ತಮ್ಮ 22 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ಅಂತಿಮ ಪಂದ್ಯವನ್ನಾಡಿದ ಬೋಪಣ್ಣ, ಭಾವನಾತ್ಮಕ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದರು. ಅತ್ಯಂತ ಹಿರಿಯ ವಿಶ್ವ ನಂ. 1 ಆಟಗಾರ ಹಾಗೂ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ವಿಜೇತ ಎಂಬ ಇತಿಹಾಸ ನಿರ್ಮಿಸಿದ್ದ ಬೋಪಣ್ಣ, ಎರಡು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳೊಂದಿಗೆ ತಮ್ಮ ಟೆನಿಸ್ ಪಯಣಕ್ಕೆ ತೆರೆ ಎಳೆದರು.

Rohan Bopanna Retirement: 22 ವರ್ಷಗಳ ಟೆನಿಸ್ ಬದುಕಿಗೆ ವಿದಾಯ ಹೇಳಿದ ರೋಹನ್ ಬೋಪಣ್ಣ
Rohan Bopanna
ಪೃಥ್ವಿಶಂಕರ
|

Updated on:Nov 01, 2025 | 4:39 PM

Share

22 ವರ್ಷಗಳ ಕಾಲ ಟೆನಿಸ್ ಲೋಕದಲ್ಲಿ ಮಿಂಚಿದ್ದ ಕನ್ನಡಿಗ ರೋಹನ್ ಬೋಪಣ್ಣ (Rohan Bopanna) ತಮ್ಮ ಅದ್ಭುತ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಅಂದರೆ ರೋಹನ್ ಬೋಪಣ್ಣ ತಮ್ಮ ವೃತ್ತಿಪರ ಟೆನಿಸ್‌ಗೆ ನಿವೃತ್ತಿ (Tennis Retirement) ಘೋಷಿಸಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್ 1000 ಟೂರ್ನಿಯಲ್ಲಿ ಅಲೆಕ್ಸಾಂಡರ್ ಬುಬ್ಲಿಕ್ ಅವರೊಂದಿಗೆ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದ ಬೋಪಣ್ಣ, ಇದೀಗ ವೃತ್ತಿಜೀವನಕ್ಕೆ ಅಂತ್ಯ ಹಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಬೋಪಣ್ಣ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ವಿಜೇತ ಮತ್ತು ವಿಶ್ವದ ಅತ್ಯಂತ ಹಿರಿಯ ನಂಬರ್ 1 ಆಟಗಾರನಾಗುವ ಮೂಲಕ ಇತಿಹಾಸ ಕೂಡ ನಿರ್ಮಿಸಿದ್ದರು. ಇದೀಗ ವೃತ್ತಿಜೀವನಕ್ಕೆ ತೆರೆ ಎಳೆದಿರುವ ರೋಹನ್ ಬೋಪಣ್ಣ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿವೃತ್ತಿ ಬಗ್ಗೆ ರೋಹನ್ ಬೋಪಣ್ಣ ಹೇಳಿದ್ದೇನು?

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿವೃತ್ತಿ ಘೋಷಿಸಿರುವ ಬೋಪಣ್ಣ, ‘ನಿಮ್ಮ ಜೀವನಕ್ಕೆ ಅರ್ಥ ನೀಡಿದ ವಿಷಯಕ್ಕೆ ನೀವು ಹೇಗೆ ವಿದಾಯ ಹೇಳುತ್ತೀರಿ? 20 ಮರೆಯಲಾಗದ ವರ್ಷಗಳ ಪ್ರವಾಸದ ನಂತರ, ಈಗ ಸಮಯ ಬಂದಿದೆ… ನಾನು ಅಧಿಕೃತವಾಗಿ ನನ್ನ ಟೆನಿಸ್ ರಾಕೆಟ್ ಅನ್ನು ನೇತುಹಾಕುತ್ತಿದ್ದೇನೆ. ಭಾರತವನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಪ್ರತಿ ಬಾರಿ ಕೋರ್ಟ್‌ಗೆ ಕಾಲಿಟ್ಟಾಗಲೂ ಆ ಧ್ವಜಕ್ಕಾಗಿ, ಆ ಭಾವನೆಗಾಗಿ ಮತ್ತು ಆ ಹೆಮ್ಮೆಗಾಗಿ ಆಡಿದ್ದೇನೆ. ಟೆನಿಸ್ ನನಗೆ ಕೇವಲ ಕ್ರೀಡೆಗಿಂತ ಹೆಚ್ಚಿನದಾಗಿದೆ. ನಾನು ಸೋತಾಗ ಅದು ನನಗೆ ಉದ್ದೇಶವನ್ನು ಹಾಗೂ ಶಕ್ತಿ ನೀಡಿತು ಮತ್ತು ಜಗತ್ತು ನನ್ನನ್ನು ಅನುಮಾನಿಸಿದಾಗ ಆತ್ಮವಿಶ್ವಾಸವನ್ನು ನೀಡಿತು. ಪ್ರತಿ ಬಾರಿ ನಾನು ಕೋರ್ಟ್‌ಗೆ ಕಾಲಿಟ್ಟಾಗ ಪರಿಶ್ರಮ, ಮತ್ತೆ ಮೇಲೇರಲು ಸ್ಥಿತಿಸ್ಥಾಪಕತ್ವ ಮತ್ತು ಮತ್ತೆ ಹೋರಾಡಲು ಧೈರ್ಯವನ್ನು ಕಲಿಸಿತು ಎಂದಿದ್ದಾರೆ.

ರೋಹನ್ ಬೋಪಣ್ಣ ಮೈಲಿಗಲ್ಲು

45 ವರ್ಷದ ಬೋಪಣ್ಣ ತಮ್ಮ ವೃತ್ತಿಜೀವನವನ್ನು ಎರಡು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳೊಂದಿಗೆ ಕೊನೆಗೊಳಿಸಿದ್ದಾರೆ. 2024 ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ (ಮ್ಯಾಥ್ಯೂ ಎಬ್ಡೆನ್ ಜೊತೆ) ಮತ್ತು 2017 ರ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ (ಗೇಬ್ರಿಯೆಲಾ ಡಬ್ರೋವ್ಸ್ಕಿ ಜೊತೆ) ಗೆಲ್ಲುವ ಮೂಲಕ ತಮ್ಮ ವರ್ಣರಂಜಿತ ವೃತ್ತಿಜೀವನಕ್ಕೆ ಫುಲ್​ಸ್ಟಾಪ್ ಇಟ್ಟಿದ್ದಾರೆ. ಇದನ್ನು ಹೊರತುಪಡಿಸಿ ತಮ್ಮ ವೃತ್ತಿಜೀವನಕದಲ್ಲಿ ಬೋಪಣ್ಣ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳನ್ನು ಆಡಿದ್ದಾರೆ.

2020 ರ ಯುಎಸ್ ಓಪನ್‌ನಲ್ಲಿ ಐಸಾಮ್-ಉಲ್-ಹಕ್ ಖುರೇಷಿ ಜೊತೆ ಮತ್ತು 2023 ರ ಯುಎಸ್ ಓಪನ್‌ನಲ್ಲಿ ಎಬ್ಡೆನ್ ಜೊತೆ ಎರಡು ಬಾರಿ ಪುರುಷರ ಡಬಲ್ಸ್‌ನ ಫೈನಲ್​ ಆಡಿರುವ ಬೋಪಣ್ಣ, ಎರಡು ಮಿಶ್ರ ಡಬಲ್ಸ್ ಫೈನಲ್‌ಗಳನ್ನು ಸಹ ಆಡಿದ್ದಾರೆ. 2018 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಟೈಮಾ ಬಾಬೋಸ್ ಜೊತೆ ಮತ್ತು 2023 ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸಾನಿಯಾ ಮಿರ್ಜಾ ಜೊತೆ ಬೋಪಣ್ಣ ಮಿಶ್ರ ಡಬಲ್ಸ್ ಫೈನಲ್‌ ಆಡಿದ್ದರು. ಇದಲ್ಲದೆ ರೋಹನ್ ಬೋಪಣ್ಣ 2012 ಮತ್ತು 2015 ರಲ್ಲಿ ಮಹೇಶ್ ಭೂಪತಿ ಮತ್ತು ಫ್ಲೋರಿನ್ ಮೆರ್ಗೆಯಾ ಅವರೊಂದಿಗೆ ಎಟಿಪಿ ಫೈನಲ್ ಕೂಡ ಆಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Sat, 1 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ