ರೋಹಿತ್- ಕೊಹ್ಲಿ, ಈ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಮೊಹಮ್ಮದ್ ಶಮಿ ಒಲವು ಯಾರ ಕಡೆಗೆ ಗೊತ್ತಾ?
ಬೌಲರ್ ಆಗಿ, ನಾನು ಯಾವಾಗಲೂ ಸಲಹೆಗಾಗಿ ರೋಹಿತ್ ಬಳಿ ಹೋಗುತ್ತೇನೆ, ಅವರು ಯಾವಾಗಲೂ ನನಗೆ ಸಕಾರಾತ್ಮಕ ಸಲಹೆಯನ್ನು ನೀಡುತ್ತಾರೆ. ರೋಹಿತ್ ಬೌಲರ್‌ಗಳ ಹಿಂದೆ ಸ್ಥಿರವಾಗಿ ನಿಲ್ಲುತ್ತಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಈ ಇಬ್ಬರಲ್ಲಿ ಅತ್ಯುತ್ತಮ ನಾಯಕರು ಯಾರು? ವಿರಾಟ್-ರೋಹಿತ್ ಅವರ ಅಭಿಮಾನಿಗಳು ಇದನ್ನು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಚರ್ಚಿಸುತ್ತಿರುತ್ತಾರೆ. ವಾಸ್ತವವಾಗಿ, ಕಳೆದ ಕೆಲವು ವರ್ಷಗಳಲ್ಲಿ, ರೋಹಿತ್ ಮತ್ತು ವಿರಾಟ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಆದ್ದರಿಂದ ಇಬ್ಬರು ನಾಯಕತ್ವದ ನಡುವೆ ಯಾವಾಗಲೂ ಘರ್ಷಣೆ ನಡೆಯುತ್ತಲೆ ಇರುತ್ತದೆ. ಆದರೆ ಇದೇ ಪ್ರಶ್ನೆಗೆ ಹಿರಿಯ ಬೌಲರ್ ತನ್ನದೇ ಆದ ರೀತಿಯಲ್ಲಿ ಉತ್ತರಿಸಿದ್ದಾರೆ. ವಿರಾಟ್ ಅಥವಾ ರೋಹಿತ್, ಇಬ್ಬರಲ್ಲಿ ಯಾರು ಉತ್ತಮ ನಾಯಕ? ಎಂಬ ಪ್ರಶ್ನೆಗೆ ಮೊಹಮ್ಮದ್ ಶಮಿ ಉತ್ತರಿಸಿದ್ದಾರೆ. ಈ ಬಾರಿ ಅವರು ರೋಹಿತ್ ಶರ್ಮಾ ಅವರಿಗೆ ಆದ್ಯತೆ ನೀಡುತ್ತಿದ್ದಾರೆ. ಅವರು ರೋಹಿತ್ ಶರ್ಮಾ ಅವರನ್ನು ನೇರವಾಗಿ ಹೆಸರಿಸದಿದ್ದರೂ, ರೋಹಿತ್ ಅವರ ಒಟ್ಟಾರೆ ಪ್ರಶಂಸೆಗೆ ಕಾರಣ ಎಂಬುದು ಸ್ಪಷ್ಟವಾಯಿತು, ಮತ್ತು ರೋಹಿತ್ ಉತ್ತಮ ನಾಯಕ ಎಂದು ಶಮಿ ಭಾವಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
ರೋಹಿತ್ ಪ್ರಶಂಸಿದ ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವೇಗದ ಬೌಲಿಂಗ್‌ಗೆ ಮುಂದಾಗಿರುವ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಶಮಿ, ಭಾರತದ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಅವರನ್ನು ಪ್ರಶಂಸಿಸಿದರು. ಬೌಲರ್ ಆಗಿ, ನಾನು ಯಾವಾಗಲೂ ಸಲಹೆಗಾಗಿ ರೋಹಿತ್ ಬಳಿ ಹೋಗುತ್ತೇನೆ, ಅವರು ಯಾವಾಗಲೂ ನನಗೆ ಸಕಾರಾತ್ಮಕ ಸಲಹೆಯನ್ನು ನೀಡುತ್ತಾರೆ. ರೋಹಿತ್ ಬೌಲರ್‌ಗಳ ಹಿಂದೆ ಸ್ಥಿರವಾಗಿ ನಿಲ್ಲುತ್ತಾರೆ. ಇದಕ್ಕಿಂತ ಬೌಲರ್‌ಗೆ ಇನ್ನೇನು ಬೇಕು? ರೋಹಿತ್ ಬೇರೆದೆ ತರನಾದ ವ್ಯಕ್ತಿ. ಅವರು ಯಾವಾಗಲೂ ಕೂಲ್ ಆಗಿರುತ್ತಾರೆ. ಎಂದು ಶಮಿ ಹೇಳಿಕೊಂಡಿದ್ದಾರೆ.
ವಿರಾಟ್ ಬಗ್ಗೆ ಮೊಹಮ್ಮದ್ ಶಮಿ ಹೇಳಿದ್ದೇನು? ವಿಶೇಷವಾಗಿ ವೇಗದ ಬೌಲರ್‌ಗಳು ಆಕ್ರಮಣಕಾರಿ ಆದರೆ ಭಾರತ ತಂಡವು ಇದಕ್ಕೆ ವಿರುದ್ಧವಾಗಿದೆ. ನಮ್ಮ ನಾಯಕ (ವಿರಾಟ್) ಹೆಚ್ಚು ಆಕ್ರಮಣಕಾರಿ. ನಾನು ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಂದ್ಯದ ಫೋಟೋಗಳನ್ನು ನೋಡುತ್ತೇನೆ. ಆ ಸಮಯದಲ್ಲಿ, ವಿರಾಟ್ ಆಚರಣೆ ನೋಡುವ ನಾನು ಕೆಲವೊಮ್ಮೆ ವಿಕೆಟ್ ತೆಗೆದಿದ್ದು ನಾನಾ ಅಥವಾ ವಿರಾಟ್ ತೆಗೆದುಕೊಂಡಿದ್ದಾ ಎಂದು ಆಶ್ಚರ್ಯ ಪಡುತ್ತೇನೆ. ವಿರಾಟ್ ಬೌಲರ್‌ಗಳಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಸೆಲೆಬ್ರೆಷನ್ ಮಾಡುತ್ತಾರೆ. ಅವರು ಆಕ್ರಮಣಶೀಲತೆಯನ್ನು ಹೊಂದಿದ್ದಾರೆ, ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಾರೆ ಎಂದು ಶಮಿ ವಿರಾಟ್ ಬಗ್ಗೆ ಮಾತಾನಾಡಿದ್ದಾರೆ.