Kannada News Sports Royal challengers Bangalore and virat kohli massive records in ipl
RCB: ಒಮ್ಮೆಯೂ ಕಪ್ ಗೆಲ್ಲದಿದ್ದರು ಐಪಿಎಲ್‌ನಲ್ಲಿ ಆರ್‌ಸಿಬಿ ಮಾಡಿರುವ ದಾಖಲೆಗಳು ಅಷ್ಟಿಷ್ಟಲ್ಲ..!
Royal Challengers Bangalore: 2008 ರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ಭಾಗವಹಿಸುತ್ತಿದ್ದು, ಇದುವರೆಗು ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. IPL 2022 ರಲ್ಲೂ ಸಹ RCB ಪ್ರಶಸ್ತಿಯನ್ನು ಕಳೆದುಕೊಂಡಿತು.
RCB IPL 2022
Follow us on
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್‌ನಲ್ಲಿ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. 2008 ರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ಭಾಗವಹಿಸುತ್ತಿದ್ದು, ಇದುವರೆಗು ಒಂದೇ ಒಂದು ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. IPL 2022 ರಲ್ಲೂ ಸಹ RCB ಪ್ರಶಸ್ತಿಯನ್ನು ಕಳೆದುಕೊಂಡಿತು. ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದ ಆರ್‌ಸಿಬಿ ಪಡೆ ನಾನಾ ಸರ್ಕಸ್ ಮಾಡಿ 4ರ ಘಟ್ಟ ತಲುಪಿತ್ತು. ನಂತರ ಎಲಿಮಿನೆಟರ್ ಪಂದ್ಯದಲ್ಲಿ ಲಕ್ನೋ ಮಣಿಸಿ, 2ನೇ ಕ್ವಾಲಿಫೈಯರ್ಗೆ ಎಂಟ್ರಿಕೊಟ್ಟಿತ್ತು. ಆದರೆ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ ರಾಜಸ್ಥಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿತ್ತು. ಆದರೆ ಐಪಿಎಲ್‌ನಲ್ಲಿ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲದಿದ್ದರೂ, RCB ಹೆಸರಿನಲ್ಲಿ ಕೆಲವು ದಾಖಲೆಗಳಿವೆ. ಈಗ ಅವು ಯಾವುವೆಂದು ನಾವು ನೋಡೋಣ..
ಐಪಿಎಲ್‌ನಲ್ಲಿ ಗರಿಷ್ಠ 263/5 ಸ್ಕೋರ್ ಗಳಿಸಿದ ತಂಡವಾಗಿ ಆರ್‌ಸಿಬಿ ದಾಖಲೆ ಬರೆದಿದೆ. ಆರ್‌ಸಿಬಿ 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ (PWI) ವಿರುದ್ಧ ಬೆಂಗಳೂರಿನ ತಮ್ಮ ತವರು ಮೈದಾನದಲ್ಲಿ ಈ ಸಾಧನೆ ಮಾಡಿತು. ಆ ಪಂದ್ಯದಲ್ಲಿ ಕ್ರಿಸ್ ಗೇಲ್ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಗಳಿಸಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಎಂಬ ದಾಖಲೆಯನ್ನೂ ಆರ್‌ಸಿಬಿ ಹೊಂದಿದ್ದು, 2016ರಲ್ಲಿ ಗುಜರಾತ್ ಲಯನ್ಸ್ (ಜಿಎಲ್) ವಿರುದ್ಧ 3 ವಿಕೆಟ್‌ಗೆ 248 ರನ್ ಗಳಿಸಿತ್ತು.
ಐಪಿಎಲ್‌ನಲ್ಲಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿದೆ. 23 ಏಪ್ರಿಲ್ 2013 ರಂದು, ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ RCB ಪರ ಕ್ರಿಸ್ ಗೇಲ್ ಕೇವಲ 66 ಎಸೆತಗಳಲ್ಲಿ 175 ರನ್ ಗಳಿಸಿದರು. ಗೇಲ್ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್‌ಗಳನ್ನು ಬಾರಿಸಿದರು.
2016 ರ ಋತುವಿನಲ್ಲಿ, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಗುಜರಾತ್ ಲಯನ್ಸ್ (ಜಿಎಲ್) ವಿರುದ್ಧ ಎರಡನೇ ವಿಕೆಟ್‌ಗೆ ಭವ್ಯವಾದ 229 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ ಗರಿಷ್ಠ ರನ್ ಗಳಿಸಿದ ಜೊತೆಯಾಟವಾಗಿದೆ. ಆ ಪಂದ್ಯದಲ್ಲಿ ಕೊಹ್ಲಿ 109 ಮತ್ತು ಡಿವಿಲಿಯರ್ಸ್ 129 ರನ್ ಗಳಿಸಿದ್ದರು.
RCB ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು (ಒಟ್ಟು 15) ಗಳಿಸಿದೆ. ಆರ್‌ಸಿಬಿ ಪರ ಗೇಲ್ ಮತ್ತು ಕೊಹ್ಲಿ ತಲಾ ಐದು ಶತಕ ಬಾರಿಸಿದರೆ, ಡಿವಿಲಿಯರ್ಸ್ ಎರಡು ಶತಕ ಗಳಿಸಿದರು. ಇದೇ ವೇಳೆ ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟಿದಾರ್ ಶತಕ ಬಾರಿಸಿದರು.
ಇದನ್ನೂ ಓದಿ
ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವುದು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಹೆಸರಿನಲ್ಲಿದೆ. 2016ರಲ್ಲಿ ವಿರಾಟ್ ಕೊಹ್ಲಿ 81.08 ಸರಾಸರಿಯಲ್ಲಿ 973 ರನ್ ಗಳಿಸಿದ್ದರು. ಈ ಋತುವಿನಲ್ಲಿ ಕೊಹ್ಲಿ ನಾಲ್ಕು ಶತಕ ಮತ್ತು ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ.
RCB ಆಟಗಾರ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯನ್ನು ಸಹ ಹೊಂದಿದ್ದಾರೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ 17 ಸಿಕ್ಸರ್‌ಗಳನ್ನು ಸಿಡಿಸಿದ್ದರು. 2008ರಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಮೆಕಲಮ್ 13 ಸಿಕ್ಸರ್ ಸಿಡಿಸಿದ್ದರು. ಇದೇ ವೇಳೆ 2012ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಗೇಲ್ 13 ಸಿಕ್ಸರ್ ಸಿಡಿಸಿದ್ದರು.
ತಂಡವೊಂದರಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಆರ್‌ಸಿಬಿಯನ್ನು ಮಾತ್ರ ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಆರ್‌ಸಿಬಿ ಪರ ಕೊಹ್ಲಿ ಇದುವರೆಗೆ 223 ಪಂದ್ಯಗಳನ್ನು ಆಡಿದ್ದಾರೆ. ಕುತೂಹಲಕಾರಿಯಾಗಿ, 2008 ರ ಋತುವಿನ ನಂತರ ಒಂದೇ ಐಪಿಎಲ್ ತಂಡದಲ್ಲಿ ಆಡಿದ ಏಕೈಕ ಆಟಗಾರ ಕೊಹ್ಲಿ.