ಇಂದಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ತಂಡಗಳು ತಮ್ಮ ತಂಡಕ್ಕೆ ಸೂಕ್ತ ಎನಿಸಿಕೊಳ್ಳುವಂಥ ಆಟಗಾರರನ್ನು ತೆಗೆದುಕೊಳ್ಳುತ್ತಿದೆ. ಕೆಲ ಆಟಗಾರರು ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ. ಇನ್ನೂ ಕೆಲ ಆಟಗಾರರು ಹರಾಜಾಗದೆ ಹೊರಗೆ ಉಳಿದಿದ್ದಾರೆ. ಇನ್ನು, ಆರ್‌ಸಿಬಿ ಸದ್ಯ, 2 ಆಟಗಾರರನ್ನು ಮಾತ್ರ ಖರೀದಿ ಮಾಡಿದೆ. ಆದರೆ, ಈ ಇಬ್ಬರು ಆಟಗಾರರಿಗೆ ಬೆಂಗಳೂರು ತಂಡ ಖರ್ಚು ಮಾಡಿದ್ದು ಸರಿಸುಮಾರು 30 ಕೋಟಿ ರೂಪಾಯಿ.
ಆರ್‌ಸಿಬಿ ಜೇಬಿನಲ್ಲಿ ಈ ಬಾರಿ 35.90 ಕೋಟಿ ರೂಪಾಯಿ ಇದೆ. ಆದರೆ, ಎರಡೇ ಆಟಗಾರರಿಗೆ ದೊಡ್ಡ ಮೊತ್ತದ ಹಣವನ್ನು ಆರ್‌ಸಿಬಿ ಖರ್ಚು ಮಾಡಿದೆ. ಗ್ಲೆನ್ ಮ್ಯಾಕ್ಸ್ವೆಲ್ಗೆ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಗ್ಲೆನ್ ಮ್ಯಾಕ್ಸ್ವೆಲ್ ಮೂಲ ಬೆಲೆ 2 ಕೋಟಿ ರೂಪಾಯಿ ಇತ್ತು. ಇವರನ್ನು ಖರೀದಿ ಮಾಡಲು ಚೆನ್ನೈ ಹಾಗೂ ಬೆಂಗಳೂರು ನಡುವೆ ಭಾರೀ ಕಾಂಪಿಟೇಷನ್ ಇತ್ತು. ಕೊನೆಗೆ, 14.25 ಕೋಟಿ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ.
ಕಳೆದ ಬಾರಿ ಪಂಜಾಬ್ ತಂಡದಲ್ಲಿ ನೀರಸ ಪ್ರದರ್ಶನ ತೋರಿದ್ದ ಮ್ಯಾಕ್ಸ್ವೆಲ್ ನಂತರ ಆಸ್ಟ್ರೇಲಿಯಾದಲ್ಲಿ ಆಡುವಾಗ ಅಬ್ಬರಿಸಿದ್ದರು. ಈ ಪ್ರದರ್ಶನವೇ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ. ಸ್ವತಃ ಮ್ಯಾಕ್ಸ್ವೆಲ್ ಆರ್‌ಸಿಬಿ ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದರಿಂದ ಅವರನ್ನು ಬೆಂಗಳೂರು ತಂಡ ಖರೀದಿಸಬಹುದು ಎಂಬ ಮಾತುಗಳು ಹರಿದಾಡುತ್ತಿದ್ದವು. ಕಳೆದ ಬಾರಿ 10.75 ಕೋಟಿಗೆ ಪಂಜಾಬ್ ತಂಡದ ಪಾಲಾಗಿದ್ದರು.
Bold Diaries: RCB gets Glenn Maxwell for 14.25 Cr
Mike Hesson explains the thinking behind getting Maxwell and what to expect of him in #IPL2021. #PlayBold #NowARoyalChallenger #BidForBold #IPLAuction2021 pic.twitter.com/PdBdG90Enb
— Royal Challengers Bangalore (@RCBTweets) February 18, 2021
ಇನ್ನು, ನ್ಯೂಜಿಲೆಂಡ್ನ ಕೈಲ್ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್‌ಸಿಬಿ ಖರೀದಿಸಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ತಂಡದ ನಡುವೆ ಬಿಡ್ಡಿಂಗ್ ವಾರ್ ನಡೆಸಿದ ಆರ್‌ಸಿಬಿ ಭಾರಿ ಪೈಪೋಟಿ ಕೊಟ್ಟು ಕೈಲ್ ಜೇಮಿಸ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
New Zealand ? Kyle Jamieson is #NowARoyalChallenger! ?
A huge warm welcome to the RCB #ClassOf2021. ??
Price: 1️⃣5️⃣CR#PlayBold #BidForBold #WeAreChallengers #IPLAuction pic.twitter.com/AZAn3HeeYx
— Royal Challengers Bangalore (@RCBTweets) February 18, 2021
ಇದನ್ನೂ ಓದಿ: IPL 2021 Auction RCB Players List: ಐಪಿಎಲ್ 2021 ಆರ್‌ಸಿಬಿ ತನ್ನಲ್ಲೇ ಉಳಿಸಿಕೊಂಡ, ಕೈಬಿಟ್ಟ ಆಟಗಾರರು ಯಾರ್ಯಾರು ಗೊತ್ತಾ?
Published On - 7:24 pm, Thu, 18 February 21