RR vs DC, IPL 2021 Match 7 Result: ಮಿಲ್ಲರ್-ಮಾರಿಸ್ ಭರ್ಜರಿ ಬ್ಯಾಟಿಂಗ್; ರೋಚಕ ಪಂದ್ಯದಲ್ಲಿ ಗೆದ್ದ ರಾಜಸ್ಥಾನ್ ರಾಯಲ್ಸ್

| Updated By: ganapathi bhat

Updated on: Sep 05, 2021 | 10:46 PM

RR vs DC Live Score in Kannada: ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ, ಐಪಿಎಲ್ 2021 ಟೂರ್ನಿಯ ಏಳನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

RR vs DC, IPL 2021 Match 7 Result: ಮಿಲ್ಲರ್-ಮಾರಿಸ್ ಭರ್ಜರಿ ಬ್ಯಾಟಿಂಗ್; ರೋಚಕ ಪಂದ್ಯದಲ್ಲಿ ಗೆದ್ದ ರಾಜಸ್ಥಾನ್ ರಾಯಲ್ಸ್
ಡೇವಿಡ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್

ಮುಂಬೈ: ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್​ಗಳ ಗೆಲುವು ದಾಖಲಿಸಿದೆ. ಡೇವಿಡ್ ಮಿಲ್ಲರ್ ಹಾಗೂ ಕ್ರಿಸ್ ಮಾರಿಸ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಮಿಲ್ಲರ್ 62(43) ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದು ಔಟ್ ಆದರೆ, ಕೊನೆಗೆ ಬಂದ ಮಾರಿಸ್ 36(18), 4 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಡೆಲ್ಲಿ ಬೌಲರ್​ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದರು. ಅವೇಶ್ ಖಾನ್ 3, ವೋಕ್ಸ್ ಹಾಗೂ ರಬಾಡ ತಲಾ 2 ವಿಕೆಟ್ ಕಬಳಿಸಿದ್ದರು. ಆದರೆ, ಅಂತಿಮ ಓವರ್​ಗಳಲ್ಲಿ ರಾಯಲ್ಸ್ ಬ್ಯಾಟಿಂಗ್ ಕಟ್ಟಿಹಾಕಲು ವಿಫಲರಾದರು. ಮಿಲ್ಲರ್-ಮಾರಿಸ್ ಆಟಕ್ಕೆ ಡೆಲ್ಲಿ ಬೌಲರ್​ಗಳು ಸುಸ್ತಾದರು. ಈ ಮೂಲಕ ರಾಜಸ್ತಾನ್ ತಂಡ ಮೊದಲ ಗೆಲುವನ್ನು ಕಂಡಿತು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿತ್ತು. ರಾಜಸ್ಥಾನ್ ರಾಯಲ್ಸ್​ಗೆ 148 ರನ್​ಗಳ ಟಾರ್ಗೆಟ್ ನೀಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಭ್ ಪಂತ್ 51(32) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಉಳಿದಂತೆ ಅಗ್ರಕ್ರಮಾಂಕದ ದಾಂಡಿಗರು ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು. ಪೃಥ್ವಿ ಶಾ, ಧವನ್, ಸ್ಟಾಯಿನಸ್, ರಹಾನೆ ಒಂದಂಕಿ ದಾಟದೆ ಬ್ಯಾಟಿಂಗ್ ವಿಭಾಗ ವಿಫಲಗೊಂಡಿತ್ತು.

ರಾಜಸ್ಥಾನ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಉನಾದ್ಕತ್ 4 ಓವರ್​ಗೆ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದರು. ಮಾರಿಸ್ ಹಾಗೂ ತೆವಾಟಿಯಾ ದುಬಾರಿಯಾಗಿದ್ದು ಬಿಟ್ಟರೆ ಉಳಿದ ಬೌಲರ್​ಗಳು ಡೆಲ್ಲಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಮುಸ್ತಫಿಜುರ್ 2 ವಿಕೆಟ್ ಪಡೆದಿದ್ದರು.

LIVE NEWS & UPDATES

The liveblog has ended.
  • 15 Apr 2021 11:20 PM (IST)

    3 ವಿಕೆಟ್​ಗಳ ಗೆಲುವು ದಾಖಲಿಸಿದ ರಾಜಸ್ಥಾನ್ ರಾಯಲ್ಸ್

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿದೆ.

  • 15 Apr 2021 11:16 PM (IST)

    ಮಾರಿಸ್ ಸಿಕ್ಸರ್; ರಾಜಸ್ಥಾನ್ ರಾಯಲ್ಸ್​ಗೆ ಜಯ

    ಕೊನೆಯ ಓವರ್​ನಲ್ಲಿ ಎರಡು ಬಾಲ್​ನ್ನು ಸಿಕ್ಸರ್ ಬಾರಿಸಿದ ಮಾರಿಸ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಾರೆ. ಕುರ್ರನ್ ಬಾಲ್​ಗೆ ಸಿಕ್ಸರ್ ಬಾರಿಸುವ ಮೂಲಕ ರಾಜಸ್ಥಾನ್ ರಾಯಲ್ಸ್ ಜಯಗಳಿಸಿದೆ. ಮಾರಿಸ್ 18 ಬಾಲ್​ಗೆ 36 ರನ್ ಗಳಿಸಿದ್ದಾರೆ.


  • 15 Apr 2021 11:13 PM (IST)

    ರಾಯಲ್ಸ್ ಗೆಲ್ಲಲು 4 ಬಾಲ್​ಗೆ 4!

    ರಾಜಸ್ಥಾನ್ ರಾಯಲ್ಸ್ ಪರ ಮಾರಿಸ್ ಮತ್ತೊಂದು ಸಿಕ್ಸರ್ ಸಿಡಿಸಿದ್ದಾರೆ. ತಂಡ ಗೆಲ್ಲಲು 4 ಬಾಲ್​ಗೆ 4 ರನ್ ಬೇಕಾಗಿದೆ.

  • 15 Apr 2021 11:11 PM (IST)

    ಮಾರಿಸ್ ಸಿಕ್ಸರ್; ಆರ್​ಆರ್​ ಗೆಲ್ಲಲು 6 ಬಾಲ್​ಗೆ 12 ರನ್

    ಕ್ರಿಸ್ ಮಾರಿಸ್ ರಬಾಡ ಬಾಲ್​ಗೆ ಎರಡು ಸಿಕ್ಸರ್ ಬಾರಿಸಿದ್ದಾರೆ. ರಾಜಸ್ಥಾನ್ ಗೆಲ್ಲಲು 6 ಬಾಲ್​ಗೆ 12 ರನ್ ಬೇಕಿದೆ. ಮಾರಿಸ್ 22 (14) ಕಣದಲ್ಲಿದ್ದಾರೆ. ರಾಜಸ್ಥಾನ್ ತಂಡದ ಮೊತ್ತ 19 ಓವರ್​ಗೆ 136/7 ಆಗಿದೆ.

  • 15 Apr 2021 11:00 PM (IST)

    ರಾಯಲ್ಸ್ ಗೆಲುವಿಗೆ 18 ಬಾಲ್​ಗೆ 34

    ರಾಜಸ್ಥಾನ್ ರಾಯಲ್ಸ್ 17 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 114 ರನ್ ದಾಖಲಿಸಿದೆ. 18 ಬಾಲ್​ಗೆ 34 ರನ್ ಬೇಕಿದೆ.

  • 15 Apr 2021 10:54 PM (IST)

    ರಾಜಸ್ಥಾನ್ ರಾಯಲ್ಸ್ 105/7 (16 ಓವರ್)

    15 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ ಕಳೆದುಕೊಂಡು 105 ರನ್ ದಾಖಲಿಸಿದೆ. ರಾಜಸ್ಥಾನ್ ರಾಯಲ್ಸ್ ಗೆಲ್ಲಲು 24 ಬಾಲ್​ಗೆ 43 ರನ್ ಬೇಕಿದೆ. ತಂಡದ ಪರ ಕ್ರಿಸ್ ಮಾರಿಸ್ ಹಾಗೂ ಜಯದೇವ್ ಉನಾದ್ಕತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 15 Apr 2021 10:52 PM (IST)

    ಸ್ಫೋಟಕ ಆಟಕ್ಕೆ ಮುಂದಾದ ಮಿಲ್ಲರ್ ಔಟ್!

    ಡೇವಿಡ್ ಮಿಲ್ಲರ್ 43 ಬಾಲ್​ಗೆ 62 ರನ್ ದಾಖಲಿಸಿ ಅವೇಶ್ ಖಾನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಅವೇಶ್ ಖಾನ್ 3 ಹಾಗೂ 4ನೇ ಬಾಲ್​ಗೆ ಸಿಕ್ಸರ್ ಸಿಡಿಸಿದ ಮಿಲ್ಲರ್ ನಂತರದ ಎಸೆತವನ್ನೂ ಸಿಕ್ಸರ್​ಗೆ ಅಟ್ಟುವ ಪ್ರಯತ್ನ ಮಾಡಿದ್ದು, ಅದು ವಿಫಲವಾಗಿದೆ. ಲಲಿತ್ ಯಾದವ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಾಜಸ್ಥಾನ್ ಗೆಲುವು ಈಗ ಮಾರಿಸ್ ಆಟದ ಮೇಲೆ ಅವಲಂಬಿತವಾಗಿದೆ.

  • 15 Apr 2021 10:49 PM (IST)

    ಮಿಲ್ಲರ್ ಸಿಕ್ಸರ್

    ರಾಜಸ್ಥಾನ್ ರಾಯಲ್ಸ್ ಪರ ತಂಡ ಗೆಲ್ಲಿಸುವ ಪ್ರದರ್ಶನ ನೀಡುತ್ತಿರುವ ಡೇವಿಡ್ ಮಿಲ್ಲರ್ 2 ಸಿಕ್ಸರ್ ಸಿಡಿಸಿದ್ದಾರೆ. ಅವೇಶ್ ಖಾನ್ 3 ಹಾಗೂ 4ನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ್ದಾರೆ.

  • 15 Apr 2021 10:46 PM (IST)

    ರಾಜಸ್ಥಾನ್ ರಾಯಲ್ಸ್ 90/6 (15 ಓವರ್)

    15 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ ಕಳೆದುಕೊಂಡು 90 ರನ್ ದಾಖಲಿಸಿದೆ. ಈ ಮಧ್ಯೆ ರಾಜಸ್ಥಾನ್ ರಾಯಲ್ಸ್ ಪರ ಡೇವಿಡ್ ಮಿಲ್ಲರ್ ಅರ್ಧಶತಕ ದಾಖಲಿಸಿದ್ದಾರೆ. 40 ಬಾಲ್​ಗೆ 7 ಬೌಂಡರಿ ಸಹಿತ 50 ರನ್ ನೀಡಿದ್ದಾರೆ. ಮಿಲ್ಲರ್-ಮಾರಿಸ್ ಜೋಡಿ ಪ್ರದರ್ಶನದ ಮೇಲೆ ತಂಡ ಒತ್ತಡ ಹಾಕಿದೆ.

  • 15 Apr 2021 10:44 PM (IST)

    ತೆವಾಟಿಯಾ ಔಟ್

    ರಾಹುಲ್ ತೆವಾಟಿಯಾ 17 ಬಾಲ್​ಗೆ 19 ರನ್ ಗಳಿಸಿ ಔಟ್ ಆಗಿದ್ದಾರೆ. ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಮಿಲ್ಲರ್ ಜೊತೆಗೆ ಮಾರಿಸ್ ಕ್ರೀಸ್​ಗೆ ಇಳಿದಿದ್ದಾರೆ.

  • 15 Apr 2021 10:39 PM (IST)

    ರಾಜಸ್ಥಾನ್ ರಾಯಲ್ಸ್ 85/5 (14 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 14 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 85 ರನ್ ದಾಖಲಿಸಿದೆ. ತಂಡ ಗೆಲ್ಲಲು 36 ಬಾಲ್​ಗೆ 63 ರನ್ ಬೇಕಿದೆ. ಮಿಲ್ಲರ್ 47 (37) ಹಾಗೂ ತೆವಾಟಿಯಾ 16 (14) ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 15 Apr 2021 10:34 PM (IST)

    ರಾಜಸ್ಥಾನ್ ಗೆಲ್ಲಲು 42 ಬಾಲ್​ಗೆ 75 ಬೇಕು

    ರಾಜಸ್ಥಾನ್ ರಾಯಲ್ಸ್ 13 ಓವರ್​ಗೆ 5 ವಿಕೆಟ್ ಕಳೆದುಕೊಂಡು 73 ರನ್ ಗಳಿಸಿದೆ. ರಾಜಸ್ಥಾನ್ ಪರ ಮಿಲ್ಲರ್ ಉತ್ತಮ ಆಟ ಆಡುತ್ತಿದ್ದಾರೆ. 35 ಬಾಲ್​ಗೆ 7 ಬೌಂಡರಿ ಸಹಿತ 45 ರನ್ ಗಳಿಸಿ ಕ್ರೀಸ್​ನಲ್ಲಿ ಇದ್ದಾರೆ.

  • 15 Apr 2021 10:30 PM (IST)

    ರಾಜಸ್ಥಾನ್ ರಾಯಲ್ಸ್ 58/5 (12 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 12 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 58 ರನ್ ದಾಖಲಿಸಿದೆ. ಗೆಲ್ಲಲು 48 ಬಾಲ್​ಗೆ 90 ರನ್ ಬೇಕಿದೆ. ಡೇವಿಡ್ ಮಿಲ್ಲರ್ ಕೊಂಚ ಆಶಾದಾಯಕ ಆಟ ಆಡುತ್ತಿದ್ದಾರೆ.

  • 15 Apr 2021 10:21 PM (IST)

    ರಾಜಸ್ಥಾನ್ ರಾಯಲ್ಸ್ 52/5 (10 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 10 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 52 ರನ್ ದಾಖಲಿಸಿದೆ. ಆರ್​ಆರ್​ ಗೆಲುವಿಗೆ 60 ಬಾಲ್​ಗೆ 96 ರನ್ ಬೇಕಿದೆ. ಮಿಲ್ಲರ್ 27 ಬಾಲ್​ಗೆ 31 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ತೆವಾಟಿಯಾ ಮಿಲ್ಲರ್ ಜೊತೆಯಾಟ ತಂಡವನ್ನು ಕಾಯಬೇಕಿದೆ.

  • 15 Apr 2021 10:18 PM (IST)

    ರಿಯಾನ್ ಪರಾಗ್ ಔಟ್!

    ರಾಜಸ್ಥಾನ ತನ್ನ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ರಿಯಾನ್ ಪರಾಗ್ 5 ಬಾಲ್​ಗೆ 2 ರನ್ ಮಾಡಿ ಔಟ್ ಆಗಿದ್ದಾರೆ. ಅವೇಶ್ ಖಾನ್ ಎಸೆತವನ್ನು ಸಿಕ್ಸರ್ ಬಾರಿಸಲು ಹೋಗಿ ಎಡವಿದ್ದಾರೆ. ಶಿಖರ್ ಧವನ್​ಗೆ ಕ್ಯಾಚ್ ನೀಡಿ್ದ್ದಾರೆ.

  • 15 Apr 2021 10:14 PM (IST)

    ರಾಜಸ್ಥಾನ್ ರಾಯಲ್ಸ್ 41/4 (9 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 9 ಓವರ್ ಅಂತ್ಯಕ್ಕೆ ಕೇವಲ 41 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ತಂಡ ಗೆಲ್ಲಲು 66 ಬಾಲ್​ಗೆ 107 ರನ್ ಬೇಕಿದೆ. ತೆವಾಟಿಯಾ, ಮಾರಿಸ್ ಆಡಲು ಬಾಕಿ ಇದ್ದಾರೆ. ಆದರೆ, ವಿಕೆಟ್ ಕಳೆದುಕೊಳ್ಳದೆ ಆಡುವ ಅನಿವಾರ್ಯತೆ ರಾಜಸ್ಥಾನ್ ತಂಡಕ್ಕಿದೆ.

  • 15 Apr 2021 10:11 PM (IST)

    ರಾಜಸ್ಥಾನ್ ರಾಯಲ್ಸ್ 36/4 (8 ಓವರ್)

    8 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 36 ರನ್ ಗಳಿಸಿದೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ. ರಾಯಲ್ಸ್ ಗೆಲ್ಲಲು 72 ಬಾಲ್​ಗೆ 112 ರನ್ ಬೇಕಿದೆ.

  • 15 Apr 2021 10:09 PM (IST)

    ಆರ್​ಆರ್​ ದಾಂಡಿಗ ದುಬೆ ಔಟ್

    ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಆಘಾತ ಎದುರಾಗಿದೆ. ಶಿವಮ್ ದುಬೆ 7 ಬಾಲ್​ಗೆ 2 ರನ್ ಮಾಡಿ ವಿಕೆಟ್ ಒಪ್ಪಿಸಿದ್ದಾರೆ. ಅವೇಶ್ ಖಾನ್ ಬಾಲ್​ನ್ನು ಶಿಖರ್ ಧವನ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಮಿಲ್ಲರ್ ಹಾಗೂ ರಿಯಾನ್ ಪರಾಗ್ ಬ್ಯಾಟ್ ಮಾಡುತ್ತಿದ್ದಾರೆ.

  • 15 Apr 2021 10:06 PM (IST)

    ರಾಜಸ್ಥಾನ್ ರಾಯಲ್ಸ್ 31/3 (7 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 7 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 31 ರನ್ ದಾಖಲಿಸಿದೆ.

  • 15 Apr 2021 10:01 PM (IST)

    ಪವರ್​ಪ್ಲೇ ಅಂತ್ಯಕ್ಕೆ 26/3

    ರಾಜಸ್ಥಾನ್ ರಾಯಲ್ಸ್ ತಂಡ ಪವರ್​ಪ್ಲೇ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 26 ರನ್ ದಾಖಲಿಸಿದೆ. ತಂಡ ಗೆಲ್ಲಲು 84 ಬಾಲ್​ಗೆ 122 ರನ್ ಬೇಕಿದೆ. ಶಿವಮ್ ದುಬೆ ಹಾಗೂ ಡೇವಿಡ್ ಮಿಲ್ಲರ್ ಮೇಲೆ ಉತ್ತಮ ಬ್ಯಾಟಿಂಗ್ ನಿರೀಕ್ಷೆ ಇದೆ.

  • 15 Apr 2021 09:57 PM (IST)

    ರಾಜಸ್ಥಾನ್ ರಾಯಲ್ಸ್ 21/3 (5 ಓವರ್)

    5 ಓವರ್​ಗಳ ಅಂತ್ಯಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ ಕಳೆದುಕೊಂಡು 21 ರನ್ ದಾಖಲಿಸಿದೆ. ತಂಡದ ಪರ ಡೇವಿಡ್ ಮಿಲ್ಲರ್ ಹಾಗೂ ಶಿವಮ್ ದುಬೆ ಕ್ರಿಸ್​ನಲ್ಲಿದ್ದಾರೆ.

  • 15 Apr 2021 09:53 PM (IST)

    ರಾಜಸ್ಥಾನ್ ರಾಯಲ್ಸ್ 18/3 (4 ಓವರ್)

    ರಾಜಸ್ಥಾನ್ ರಾಯಲ್ಸ್ ತಂಡ 4 ಓವರ್​ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 18 ರನ್ ಕಲೆಹಾಕಿದೆ. ಡೆಲ್ಲಿ ಬೌಲರ್​ಗಳ ದಾಳಿಗೆ ರಾಯಲ್ಸ್ ಅಗ್ರಕ್ರಮಾಂಕ ಕುಸಿದಿದೆ. ಮೊದಲ ಮೂರು ವಿಕೆಟ್​ಗಳು ಬೇಗನೇ ಪತನಗೊಂಡಿವೆ. ಆರ್​ಆರ್​ ಪರ ದುಬೆ ಹಾಗೂ ಮಿಲ್ಲರ್ ಕಣದಲ್ಲಿದ್ದಾರೆ.

  • 15 Apr 2021 09:51 PM (IST)

    ಸಂಜು ಸ್ಯಾಮ್ಸನ್ ಔಟ್!!

    ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಅಲ್ಪಮೊತ್ತಕ್ಕೆ ಔಟ್ ಆಗಿದ್ದಾರೆ. 3 ಬಾಲ್​ಗೆ 4 ರನ್ ಪಡೆದು ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಸ್ಕೋರ್ 3.3 ಓವರ್​ಗೆ 17/3 ಆಗಿದೆ.

  • 15 Apr 2021 09:49 PM (IST)

    ರಾಜಸ್ಥಾನ್ ರಾಯಲ್ಸ್ 13/2 (3 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 3 ಓವರ್​ಗಳ ಅಂತ್ಯಕ್ಕೆ 13 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿದೆ. ನಾಯಕ ಸಂಜು ಸ್ಯಾಮ್ಸನ್ ಹಾಗೂ ಶಿವಂ ದುಬೆ ಕ್ರೀಸ್​ನಲ್ಲಿದ್ದಾರೆ.

  • 15 Apr 2021 09:47 PM (IST)

    ರಾಜಸ್ಥಾನ್​ಗೆ ಮತ್ತೆ ಆಘಾತ; ಬಟ್ಲರ್ ಔಟ್

    ರಾಜಸ್ಥಾನ್ ಪರ ಬ್ಯಾಟ್ಸ್​ಮನ್ ಜೋಸ್ ಬಟ್ಲರ್ ಕೂಡ ವಿಕೆಟ್ ಒಪ್ಪಿಸಿದ್ದಾರೆ. 7 ಬಾಲ್​ಗೆ 2 ರನ್ ಗಳಿಸಿ ವೋಕ್ಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ವೋಕ್ಸ್ 2 ಓವರ್​ಗೆ 10 ರನ್ ನೀಡಿ 2 ವಿಕೆಟ್ ಕಬಳಿಸಿದ್ದಾರೆ.

  • 15 Apr 2021 09:45 PM (IST)

    ಮನನ್ ವೋಹ್ರಾ ಔಟ್

    148 ರನ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್​ಗೆ ಆರಂಭಿಕ ಆಘಾತ ಉಂಟಾಗಿದೆ. ಮನನ್ ವೋಹ್ರಾ 11 ಬಾಲ್​ಗೆ 9 ರನ್ ಗಳಿಸಿ ಔಟ್ ಆಗಿದ್ದಾರೆ. ವೋಕ್ಸ್ ಬಾಲ್​ಗೆ ರಬಾಡಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

  • 15 Apr 2021 09:18 PM (IST)

    ಡೆಲ್ಲಿ ಕ್ಯಾಪಿಟಲ್ಸ್ 147/8 (20 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ತಂಡದ ಪರ ವೋಕ್ಸ್ ಹಾಗೂ ರಬಾಡ ನಾಟ್ ಔಟ್ ಆಗಿ ನಿರ್ಗಮಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್​ಗೆ ಗೆಲ್ಲಲು 148 ರನ್ ಗುರಿ ನೀಡಿದೆ.

  • 15 Apr 2021 09:12 PM (IST)

    ಮತ್ತೊಂದು ರನೌಟ್! ಡೆಲ್ಲಿ ಕ್ಯಾಪಿಟಲ್ಸ್ 136/8 (19 ಓವರ್)

    ರವಿಚಂದ್ರನ್ ಅಶ್ವಿನ್ ಔಟ್ ಆಗಿದ್ದಾರೆ. 4 ಬಾಲ್​ಗೆ 7 ರನ್ ನೀಡಿ, ಅವಸರದ ಓಟಕ್ಕೆ ರನ್ ಔಟ್ ಆಗಿ ನಿರ್ಗಮಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 136 ರನ್ ದಾಖಲಿಸಿದೆ.

  • 15 Apr 2021 09:09 PM (IST)

    ಕುರ್ರನ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಟಾಮ್ ಕುರ್ರನ್ ಮುಸ್ತಫಿಜುರ್ ರಹಮಾನ್ ಬಾಲ್​ಗೆ ಬೌಲ್ಡ್ ಆಗಿದ್ದಾರೆ. ಕುರ್ರನ್ 16 ಬಾಲ್​ಗೆ 21 ರನ್ ನೀಡಿ ನಿರ್ಗಮಿಸಿದ್ದಾರೆ. ಕ್ರಿಸ್ ವೋಕ್ಸ್​ಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆಯಾಗಿದ್ದಾರೆ. ಮುಸ್ತಫಿಜುರ್ ರಹಮಾನ್​ಗೆ ಇದು ಇನ್ನಿಂಗ್ಸ್​ನ ಎರಡನೇ ವಿಕೆಟ್ ಆಗಿದೆ.

  • 15 Apr 2021 09:02 PM (IST)

    ಡೆಲ್ಲಿ ಕ್ಯಾಪಿಟಲ್ಸ್ 115/6 (17 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 17 ಓವರ್​ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿದೆ. ತಂಡದ ಪರ ಕುರ್ರನ್ ಹಾಗೂ ವೋಕ್ಸ್ ಬ್ಯಾಟ್ ಬೀಸುತ್ತಿದ್ದಾರೆ.

  • 15 Apr 2021 08:56 PM (IST)

    ಡೆಲ್ಲಿ ಕ್ಯಾಪಿಟಲ್ಸ್ 107/6 (16 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 16 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 107 ರನ್ ದಾಖಲಿಸಿದೆ. ಡೆಲ್ಲಿ ಆಟಗಾರರು ಒಬ್ಬರ ಹಿಂದೆ ಮತ್ತೊಬ್ಬರು ಔಟ್ ಆಗುತ್ತಿದ್ದು, ರಾಜಸ್ಥಾನ್ ಬೌಲಿಂಗ್​ಗೆ ಸುಸ್ತಾಗಿದ್ದಾರೆ. ಟಾಮ್ ಕುರ್ರನ್ ಹಾಗೂ ಕ್ರಿಸ್ ವೋಕ್ಸ್ ಕ್ರೀಸ್​ನಲ್ಲಿ ಇದ್ದಾರೆ.

  • 15 Apr 2021 08:52 PM (IST)

    ಲಲಿತ್ ಯಾದವ್ ಔಟ್

    ರಿಷಭ್ ಪಂತ್​ಗೆ ಸಾತ್ ನೀಡಿದ್ದ ಲಲಿತ್ ಯಾದವ್ ಕೂಡ ಔಟ್ ಆಗಿದ್ದಾರೆ. 24 ಬಾಲ್​ಗೆ 20 ರನ್ ಗಳಿಸಿ ಮಾರಿಸ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಕುರ್ರನ್ ಕ್ರೀಸ್​ನಲ್ಲಿದ್ದಾರೆ. ವೋಕ್ಸ್ ಜೊತೆಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 15 ಓವರ್​ಗೆ 6 ವಿಕೆಟ್ ಕಳೆದುಕೊಂಡು 102 ರನ್ ದಾಖಲಿಸಿದೆ.

  • 15 Apr 2021 08:46 PM (IST)

    ಡೆಲ್ಲಿ ಕ್ಯಾಪಿಟಲ್ಸ್ 95/5 (14 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 95 ರನ್ ದಾಖಲಿಸಿದೆ. ಡೆಲ್ಲಿ ಪರ ಲಲಿತ್ ಯಾದವ್ ಹಾಗೂ ಟಾಮ್ ಕುರ್ರನ್ ಆಡುತ್ತಿದ್ದಾರೆ.

  • 15 Apr 2021 08:43 PM (IST)

    ಡೆಲ್ಲಿ ಕ್ಯಾಪಿಟಲ್ಸ್ 93/5 (13 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಓವರ್​ಗಳ ಅಂತ್ಯಕ್ಕೆ 93 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. ರಿಷಭ್ ಪಂತ್ ಹೊರತುಪಡಿಸಿ ಉಳಿದ ಆಟಗಾರರು ಇನ್ನಿಂಗ್ಸ್ ಕಟ್ಟುವಲ್ಲಿ ಎಡವುತ್ತಿದ್ದಾರೆ.

  • 15 Apr 2021 08:41 PM (IST)

    ಅರ್ಧಶತಕ ಪೂರೈಸಿದ ಪಂತ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ಪರ ನಾಯಕ ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ನಿರ್ಗಮಿಸಿದ್ದಾರೆ. 32 ಬಾಲ್​ಗೆ 51 ರನ್ ದಾಖಲಿಸಿ ರಿಯಾನ್ ಪರಾಗ್ ಡೈರೆಕ್ಟ್ ಹಿಟ್​ಗೆ ರನೌಟ್ ಆಗಿದ್ದಾರೆ. ಪಂತ್ ಬಳಿಕ ಕುರ್ರನ್ ಕ್ರೀಸ್​ಗೆ ಬಂದಿದ್ದು, ಲಲಿತ್​ಗೆ ಜೊತೆಯಾಗಿದ್ದಾರೆ.

  • 15 Apr 2021 08:31 PM (IST)

    ಪಂತ್ ವೇಗದ ಆಟ; ಫೋರ್ ಫೋರ್!

    ರಾಹುಲ್ ತೆವಾಟಿಯಾ ಓವರ್​ನಲ್ಲಿ ಡೆಲ್ಲಿ ನಾಯಕ ಪಂತ್ ಫೋರ್ ಮೇಲೆ ಫೋರ್ ಬಾರಿಸಿದ್ದಾರೆ. ಒಟ್ಟು 4 ಫೋರ್ ಸಿಡಿಸಿದ ಪಂತ್ ಎರಡು ಬಾರಿ ಡಬಲ್ ರನ್ ಓಡಿ, ತಂಡದ ಮೊತ್ತ ಹೆಚ್ಚಿಸಿದ್ದಾರೆ. ಕೊನೆಯ ಓವರ್​ನಲ್ಲಿ ಒಟ್ಟು 20 ರನ್ ದಾಖಲಾಗಿದೆ. ಡೆಲ್ಲಿ 11 ಓವರ್​ಗೆ 4 ವಿಕೆಟ್ ಕಳೆದುಕೊಂಡು 77 ರನ್ ದಾಖಲಿಸಿದೆ.

  • 15 Apr 2021 08:26 PM (IST)

    ಡೆಲ್ಲಿ ಕ್ಯಾಪಿಟಲ್ಸ್ 56/4 (10 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 56 ರನ್ ದಾಖಲಿಸಿದೆ. ಕೊನೆಯ ಓವರ್​ನ್ನು ಉನಾದ್ಕತ್ ಬಾಲ್ ಮಾಡಿದ್ದಾರೆ. ಈ ಮೂಲಕ ತಮ್ಮ 4 ಓವರ್​ಗಳನ್ನು ಮುಕ್ತಾಯಗೊಳಿಸಿದ್ದಾರೆ. ರಾಜಸ್ಥಾನ್ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಉನಾದ್ಕತ್ 4 ಓವರ್​ಗೆ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದ್ದಾರೆ.

  • 15 Apr 2021 08:22 PM (IST)

    ಡೆಲ್ಲಿ ಕ್ಯಾಪಿಟಲ್ಸ್ 54/4 (9 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ಓವರ್​ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 54 ರನ್ ಕಲೆಹಾಕಿದೆ. ರನ್ ಗತಿ ನಿಧಾನವಾಗಿದ್ದು, ವಿಕೆಟ್ ಉಳಿಸುವ, ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಅವಶ್ಯಕತೆ ಡೆಲ್ಲಿ ಆಟಗಾರರಿಗಿದೆ.

  • 15 Apr 2021 08:16 PM (IST)

    ಡೆಲ್ಲಿ ಕ್ಯಾಪಿಟಲ್ಸ್ 46/4 (8 ಓವರ್)

    8 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ವಿಕೆಟ್ ಕಳೆದುಕೊಂಡು 46 ರನ್ ಗಳಿಸಲಷ್ಟೇ ಶಕ್ತವಾಗಿದೆ. ಲಲಿತ್ ಯಾದವ್ ಹಾಗೂ ಡೆಲ್ಲಿ ನಾಯಕ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂದು ಸರಣಿಯ ಮೊದಲ ಪಂದ್ಯ ಆಡಿದ ಉನಾದ್ಕತ್ 3 ವಿಕೆಟ್ ಪಡೆದು ಮಿಂಚಿದ್ದಾರೆ. ಡೆಲ್ಲಿ ಅಗ್ರ ಕ್ರಮಾಂಕ ಕುಸಿತ ಕಂಡಿದೆ. ರಾಜಸ್ಥಾನ್​ಗೆ ಶಿಸ್ತಿನ ಟಾರ್ಗೆಟ್ ನೀಡಲು ಡೆಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಬೇಕಿದೆ.

  • 15 Apr 2021 08:09 PM (IST)

    ಸ್ಟಾಯಿನಿಸ್ ಔಟ್

    ಮುಸ್ತಾಫಿಜುರ್ ರಹಮಾನ್ ಬಾಲ್​ಗೆ ಸ್ಟಾಯಿನಿಸ್ ಕೂಡ ಔಟ್ ಆಗಿದ್ದಾರೆ. 5 ಬಾಲ್​ಗೆ ಸೊನ್ನೆ ರನ್​ಗೆ ಸ್ಟಾಯಿನಿಸ್ ವಿಕೆಟ್ ಒಪ್ಪಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ 7 ಓವರ್ ಅಂತ್ಯಕ್ಕೆ 4 ವಿಕೆಟ್ ಕ:ಳೆದುಕೊಂಡು 37 ರನ್ ದಾಖಲಿಸಿದೆ. ಪಂತ್ ಮತ್ತು ಲಲಿತ್ ಬ್ಯಾಟ್ ಮಾಡುತ್ತಿದ್ದಾರೆ.

  • 15 Apr 2021 08:07 PM (IST)

    ಡೆಲ್ಲಿ ಕ್ಯಾಪಿಟಲ್ಸ್ 36/3 (6 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ಓವರ್​ಗಳ ಅಂತ್ಯಕ್ಕೆ ಪ್ರಮುಖ 3 ವಿಕೆಟ್ ಪಡೆದುಕೊಂಡು 36 ರನ್ ದಾಖಲಿಸಿದೆ. ರಹಾನೆ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ಪಂತ್ ಹಾಗೂ ಸ್ಟಾಯಿನಿಸ್ ಕ್ರೀಸ್​ನಲ್ಲಿದ್ದಾರೆ.

  • 15 Apr 2021 08:01 PM (IST)

    ಉನಾದ್ಕತ್​ಗೆ 3ನೇ ವಿಕೆಟ್

    ಅಜಿಂಕ್ಯಾ ರಹಾನೆ 8 ಬಾಲ್​ಗೆ 8 ರನ್ ಆಟವಾಡಿ ಔಟ್ ಆಗಿದ್ದಾರೆ. ಉನಾದ್ಕತ್​ ಪಂದ್ಯದ ಮೂರನೇ ವಿಕೆಟ್ ಪಡೆದಿದ್ದಾರೆ. ನಿಧಾನ ಬಾಲ್​ನ್ನು ಹೊಡೆಯಲು ಹೋಗಿ, ಜಡ್ಜ್​ಮೆಂಟ್ ತಪ್ಪಿ ಉನಾದ್ಕತ್​ಗೆ ಕ್ಯಾಚ್ ನೀಡಿ ರಹಾನೆ ಔಟ್ ಆಗಿದ್ದಾರೆ. ಡೆಲ್ಲಿ 36/3 ಬ್ಯಾಟ್ ಮಾಡುತ್ತಿದೆ.

  • 15 Apr 2021 07:59 PM (IST)

    ಡೆಲ್ಲಿ ಕ್ಯಾಪಿಟಲ್ಸ್ 31/2 (5 ಓವರ್)

    5 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ ಕಳೆದುಕೊಂಡು 31 ರನ್ ದಾಖಲಿಸಿದೆ. ಕ್ರಿಸ್ ಮಾರಿಸ್ ಬಾಲ್ ಮಾಡಿದ ಕೊನೆಯ ಓವರ್​ನಲ್ಲಿ ಡೆಲ್ಲಿ 11 ರನ್ ಬಾರಿಸಿದೆ. ರಹಾನೆ ಹಾಗೂ ನಾಯಕ ಪಂತ್ ಕಣದಲ್ಲಿದ್ದಾರೆ.

  • 15 Apr 2021 07:51 PM (IST)

    ಡೆಲ್ಲಿ ಕ್ಯಾಪಿಟಲ್ಸ್ 20/2 (4 ಓವರ್)

    4 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ತಂಡ 2 ಮುಖ್ಯ ವಿಕೆಟ್ ಕಳೆದುಕೊಂಡು 20 ರನ್ ಕಲೆಹಾಕಿದೆ. ತಂಡದ ಪರ ಅಜಿಂಕ್ಯ ರಹಾನೆ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 15 Apr 2021 07:48 PM (IST)

    ಉನಾದ್ಕತ್​ಗೆ ಮತ್ತೊಂದು ವಿಕೆಟ್

    ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಓವರ್​ನಲ್ಲಿ ಎರಡು ಫೋರ್ ಸಿಡಿಸಿ, ಉತ್ತಮ ಆಟದ ಭರವಸೆ ನೀಡಿದ್ದ ಶಿಖರ್ ಧವನ್ ಔಟ್ ಆಗಿದ್ದಾರೆ. 11 ಬಾಲ್​ಗೆ 9 ರನ್ ಕಲೆಹಾಕಿ ಉನಾದ್ಕತ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಉನಾದ್ಕತ್ ಈ ಸರಣಿಯ ಮೊದಲ ಪಂದ್ಯ ಆಡುತ್ತಿದ್ದು, 2 ವಿಕೆಟ್ ಕಬಳಿಸಿ ಮಿಂಚುತ್ತಿದ್ದಾರೆ.

  • 15 Apr 2021 07:45 PM (IST)

    ಡೆಲ್ಲಿ ಕ್ಯಾಪಿಟಲ್ಸ್ 16/1 (3 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 3 ಓವರ್​ಗೆ 16 ರನ್ ಗಳಿಸಿ, 1 ವಿಕೆಟ್ ಕಳೆದುಕೊಂಡಿದೆ. ತಂಡದ ಪರ ಶಿಖರ್ ಧವನ್ ಎರಡು ಫೋರ್ ಬಾರಿಸಿದ್ದಾರೆ. ಸಕರಿಯಾ 2ನೇ ಓವರ್​ನ ಮೊದಲ ಬಾಲ್ ಹಾಗೂ ಕೊನೆಯ ಬಾಲ್​​ಗೆ ಧವನ್ ಬೌಂಡರಿ ಸಿಡಿಸಿದ್ದಾರೆ.

  • 15 Apr 2021 07:43 PM (IST)

    ಡೆಲ್ಲಿ ಕ್ಯಾಪಿಟಲ್ಸ್ 5/1 (2 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 2 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 5 ರನ್ ಕಲೆಹಾಕಿದೆ. ರಾಜಸ್ಥಾನ್ ಪರ 2ನೇ ಓವರ್​ನಲ್ಲಿ ಉನಾದ್ಕತ್ ಕೇವಲ 3 ರನ್ ನೀಡಿ, 1 ವಿಕೆಟ್ ಕಿತ್ತಿದ್ದಾರೆ. ಅಜಿಂಕ್ಯ ರಹಾನೆ ಕ್ರೀಸ್​ಗೆ ಬಂದಿದ್ದಾರೆ.

  • 15 Apr 2021 07:40 PM (IST)

    ಪೃಥ್ವಿ ಶಾ ಔಟ್

    ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಉನಾದ್ಕತ್​ಗೆ ವಿಕೆಟ್ ಒಪ್ಪಿಸಿದ್ದಾರೆ. 5 ಬಾಲ್​ಗೆ 2 ರನ್ ನೀಡಿ ನಿರ್ಗಮಿಸಿದ್ದಾರೆ.

  • 15 Apr 2021 07:36 PM (IST)

    ಡೆಲ್ಲಿ ಕ್ಯಾಪಿಟಲ್ಸ್ 2-0 (1 ಓವರ್)

    ಬ್ಯಾಟಿಂಗ್ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ಓವರ್​ನ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 2 ರನ್ ದಾಖಲಿಸಿದೆ. ಡೆಲ್ಲಿ ಪರ ಶಿಖರ್ ಧವನ್ ಹಾಗೂ ಪೃಥ್ವಿ ಶಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಾಜಸ್ಥಾನ್ ಪರ ಸಕರಿಯಾ ಕೇವಲ 2 ರನ್ ಬಿಟ್ಟುಕೊಟ್ಟು ಉತ್ತಮ ಆರಂಭ ಒದಗಿಸಿದ್ದಾರೆ.

  • 15 Apr 2021 07:19 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್ (ನಾಯಕ), ಅಜಿಂಕ್ಯ ರಹಾನೆ, ಮಾರ್ಕಸ್ ಸ್ಟೋಯಿನಿಸ್, ಕ್ರಿಸ್ ವೋಕ್ಸ್, ರವಿಚಂದ್ರನ್ ಅಶ್ವಿನ್, ಲಲಿತ್ ಯಾದವ್, ಕಗಿಸೊ ರಬಾಡ, ಟಾಮ್ ಕುರ್ರನ್, ಅವೇಶ್ ಖಾನ್

    ಬದಲಾವಣೆಗಳು:
    ಅಮಿತ್ ಮಿಶ್ರಾ ಬದಲಾಗಿ ಲಲಿತ್ ಯಾದವ್ ಹಾಗೂ ಹೆಟ್ಮಿಯರ್ ಬದಲಾಗಿ ಕಗಿಸೊ ರಬಾಡ ತಂಡದಲ್ಲಿ ಆಡಲಿದ್ದಾರೆ.

  • 15 Apr 2021 07:16 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

    ಮನನ್ ವೊಹ್ರಾ, ಸಂಜು ಸ್ಯಾಮ್ಸನ್ (ನಾಯಕ), ಡೇವಿಡ್ ಮಿಲ್ಲರ್, ಜೋಸ್ ಬಟ್ಲರ್, ಶಿವಮ್ ದುಬೆ, ರಿಯಾನ್ ಪರಾಗ್, ರಾಹುಲ್ ತೇವಟಿಯಾ, ಕ್ರಿಸ್ ಮೋರಿಸ್, ಚೇತನ್ ಸಕರಿಯಾ, ಜಯದೇವ್ ಉನಾದ್ಕಟ್, ಮುಸ್ತಾಫಿಜುರ್ ರಹಮಾನ್

    ಬದಲಾವಣೆಗಳು:
    ಗಾಯಗೊಂಡು ನಿರ್ಗಮಿಸಿರುವ ಸ್ಟೋಕ್ಸ್ ಬದಲು ಮಿಲ್ಲರ್ ಆಡುತ್ತಿದ್ದಾರೆ. ಜಯದೇವ್ ಉನಾದ್ಕತ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆದಿದ್ದಾರೆ.

  • 15 Apr 2021 07:03 PM (IST)

    ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್

    ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟ್ ಮಾಡಲಿದ್ದಾರೆ.

  • 15 Apr 2021 06:57 PM (IST)

    ಇಂದೂ ಗೆಲ್ಲುತ್ತಾ ಡೆಲ್ಲಿ?

    ಲೀಗ್​ನ ಮೊದಲ ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿ ಇರುವ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ವಿರುದ್ಧ ಘರ್ಜಿಸಲು ತಯಾರಾಗಿದೆ. ಚೆನ್ನೈ ತಂಡವನ್ನು ಸೋಲಿಸಿದ ವಿಶ್ವಾಸ ಡೆಲ್ಲಿ ಆಟಗಾರರ ಪ್ಲಸ್ ಪಾಯಿಂಟ್.

  • 15 Apr 2021 06:54 PM (IST)

    ಮೊದಲ ಗೆಲುವು ಕಾಣಲು ಆರ್​ಆರ್​ ತಯಾರಿ

    ಐಪಿಎಲ್ 2021ರ ಮೊದಲ ಗೆಲುವು ಕಾಣಲು ರಾಜಸ್ಥಾನ್ ರಾಯಲ್ಸ್ ತಂಡ ಭರಪೂರ ತಯಾರಿ ಮಾಡಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರ ಪ್ರಾಕ್ಟೀಸ್ ವಿಡಿಯೋವನ್ನು ತಂಡ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದೆ.

  • 15 Apr 2021 06:51 PM (IST)

    ಕ್ರೀಡಾಂಗಣ ಸಜ್ಜು

    ಇಂದು 7.30ಕ್ಕೆ ನಡೆಯಲಿರುವ ಡೆಲ್ಲಿ- ರಾಜಸ್ಥಾನ್ ಪಂದ್ಯಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. 7 ಗಂಟೆಗೆ ಟಾಸ್ ನಡೆಯಲಿದೆ.

  • 15 Apr 2021 06:50 PM (IST)

    ರಾಜಸ್ಥಾನ್-ಡೆಲ್ಲಿ ಸಮಬಲ!

    ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಾವು ಮುಖಾಮುಖಿಯಾಗಿರುವ ಪಂದ್ಯಗಳಲ್ಲಿ 11 ಪಂದ್ಯವನ್ನು ಆರ್​ಆರ್​ ಗೆದ್ದರೆ, 11 ಪಂದ್ಯವನ್ನು ಡಿಸಿ ಗೆದ್ದಿದೆ. ಎರಡೂ ತಂಡಗಳ ಬಲಾಬಲ ಸಮಾನಾಗಿದೆ.

Published On - 7:07 pm, Tue, 27 April 21

Follow us on