RR vs SRH, IPL 2021 Match 28 Result: ಮತ್ತೆ ಸೋತ ಸನ್ರೈಸರ್ಸ್; ರಾಜಸ್ಥಾನ್ ರಾಯಲ್ಸ್ಗೆ ಗೆಲುವು
RR vs SRH Scorecard: ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ 2021 ಟೂರ್ನಿಯ 28ನೇ ಪಂದ್ಯದ ಲೈವ್ ಅಪ್ಡೇಟ್ಗಳು ಇಲ್ಲಿ ಸಿಗಲಿದೆ.
ದೆಹಲಿ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 55 ರನ್ಗಳ ಗೆಲುವು ದಾಖಲಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮಾತ್ರವಲ್ಲದೆ, ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿ ಸನ್ರೈಸರ್ಸ್ ತಂಡವನ್ನು ಕಟ್ಟಿಹಾಕಿದೆ. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡ ಮತ್ತೆ ಸೋಲುಂಡಿದೆ. ರಾಜಸ್ಥಾನ್ ಪರ ಮುಸ್ತಾಫಿಜುರ್ ರಹಮಾನ್ 4 ಓವರ್ಗೆ 20 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಕ್ರಿಸ್ ಮಾರಿಸ್ 4 ಓವರ್ಗೆ 29 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಸನ್ರೈಸರ್ಸ್ ಪರ ಆರಂಭಿಕರಾದ ಮನೀಶ್ ಪಾಂಡೆ 31 ಮತ್ತು ಬೇರ್ಸ್ಟೋ 30 ರನ್ ದಾಖಲಿಸಿದ್ದು ಹೊರತುಪಡಿಸಿ ಉಳಿದವರು ಉತ್ತಮ ಆಟ ಆಡಿಲ್ಲ.
ನಿಗದಿತ 20 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ 3 ವಿಕೆಟ್ ಕಳೆದುಕೊಂಡು 220 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ ಗೆಲ್ಲಲು 221 ರನ್ಗಳ ಗುರಿ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್ ಅದ್ಭುತ ಪ್ರದರ್ಶನ ತೋರಿದ್ದರು. 64 ಬಾಲ್ಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 124 ರನ್ ಕಲೆಹಾಕಿದ್ದರು. ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಕೂಡ ಉತ್ತಮ ಆಟವಾಡಿದ್ದರು. 33 ಬಾಲ್ಗೆ 48 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಿದ್ದರು. ಅಂತಿಮ ಓವರ್ಗಳಲ್ಲಿ ರಿಯಾನ್ ಪರಾಗ್ 15 (8) ಮತ್ತು ಡೇವಿಡ್ ಮಿಲ್ಲರ್ 7 (3) ರನ್ ಗಳಿಸಿ ರನ್ ವೇಗ ಕುಸಿಯಲು ಬಿಟ್ಟಿರಲಿಲ್ಲ.
ಸನ್ರೈಸರ್ಸ್ ಪರವಾಗಿ ಬೌಲರ್ಗಳು ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿರಲಿಲ್ಲ. ರಶೀದ್ ಖಾನ್ 4 ಓವರ್ಗೆ 24 ರನ್ ನೀಡಿ, 1 ವಿಕೆಟ್ ಪಡೆದು ರನ್ ನಿಯಂತ್ರಿಸಿದ್ದರು. ಉಳಿದಂತೆ ಯಾವೊಬ್ಬ ಬೌಲರ್ ಕೂಡ ರನ್ ಕಟ್ಟಿಹಾಕಲು ಯಶಸ್ವಿಯಾಗಿರಲಿಲ್ಲ. ಪಂದ್ಯದ ಸಂಪೂರ್ಣ ಮಾಹಿತಿ ಈ ಕೆಳಗಿದೆ.
LIVE NEWS & UPDATES
-
ರಾಜಸ್ಥಾನ್ ರಾಯಲ್ಸ್ಗೆ ಗೆಲುವು
ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ 55 ರನ್ಗಳ ಗೆಲುವು ದಾಖಲಿಸಿದೆ. 221 ರನ್ಗಳ ಗುರಿ ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಗಿದೆ.
An all-round effort. Two big points. ??#HallaBol | #RoyalsFamily | #RRvSRH | #IPL2021 pic.twitter.com/sbfesYzJnQ
— Rajasthan Royals (@rajasthanroyals) May 2, 2021
-
ಏಳು ವಿಕೆಟ್ ಕಳೆದುಕೊಂಡು ಸನ್ರೈಸರ್ಸ್
ಸನ್ರೈಸರ್ಸ್ ಹೈದರಾಬಾದ್ ತಂಡ 142 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿದೆ. ತಂಡದ ಗೆಲುವಿಗೆ 18 ಬಾಲ್ಗೆ 79 ರನ್ ಬೇಕಿದೆ. ಸನ್ರೈಸರ್ಸ್ ಸೋಲು ಬಹುತೇಕ ಖಚಿತವಾಗಿದೆ. ಮೂರು ಓವರ್ಗಳಲ್ಲಿ ಬೃಹತ್ ಮೊತ್ತ ಬೆನ್ನತ್ತಲು ವಿಕೆಟ್ ಕೂಡ ಉಳಿದಿಲ್ಲ.
-
ಸನ್ರೈಸರ್ಸ್ ಹೈದರಾಬಾದ್ 129/5 (15 ಓವರ್)
ಸನ್ರೈಸರರ್ಸ್ ಗೆಲ್ಲಲು 30 ಬಾಲ್ಗೆ 86 ರನ್ ಬೇಕಿದೆ. ತಂಡದ ಮೊತ್ತ 15 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 129 ರನ್ ಆಗಿದೆ. ತಂಡ ತನ್ನೆಲ್ಲಾ ಮುಖ್ಯ ಬ್ಯಾಟ್ಸ್ಮನ್ಗಳ ವಿಕೆಟ್ ಕಳೆದುಕೊಂಡು ಸೊರಗಿದೆ. ಕೇದಾರ್ ಜಾಧವ್ ಹಾಗೂ ಅಬ್ದುಲ್ ಸಮದ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ಔಟ್; ಸನ್ರೈಸರ್ಸ್ಗೆ ಸಂಕಷ್ಟ!
ಸನ್ರೈಸರ್ಸ್ ಹೈದರಾಬಾದ್ ತಂಡ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದೆ. ಸನ್ರೈಸರ್ಸ್ ನಾಯಕ ಕೇನ್ ವಿಲಿಯಮ್ಸನ್ 21 ಬಾಲ್ಗೆ 20 ರನ್ ಗಳಿಸಿ ನಿರ್ಗಮಿಸಿದ್ದಾರೆ.
ಸನ್ರೈಸರ್ಸ್ ಗೆಲ್ಲಲು 48 ಬಾಲ್ಗೆ 121 ರನ್ ಬೇಕು
ಸನ್ರೈಸರ್ಸ್ ಹೈದರಾಬಾದ್ ಗೆಲ್ಲಲು 48 ಬಾಲ್ಗೆ 121 ರನ್ ಬೇಕಾಗಿದೆ. ಕೇನ್ ವಿಲಿಯಮ್ಸನ್ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಮಾಡುತ್ತಿದ್ದಾರೆ. 12 ಓವರ್ಗೆ ತಂಡದ ಮೊತ್ತ 100/3 ಆಗಿದೆ.
ವಿಜಯ್ ಶಂಕರ್ ಔಟ್
ಕ್ರಿಸ್ ಮಾರಿಸ್ ಬೌಲಿಂಗ್ಗೆ ಮಿಲ್ಲರ್ಗೆ ಕ್ಯಾಚ್ ನೀಡಿ ವಿಜಯ್ ಶಂಕರ್ ಕೂಡ ಔಟ್ ಆಗಿದ್ದಾರೆ. ಸನ್ರೈಸರ್ಸ್ ತಂಡದ ಮೂರನೇ ವಿಕೆಟ್ ಪತನವಾಗಿದೆ. ಅವರು 8 ಬಾಲ್ಗೆ 8 ರನ್ ಗಳಿಸಿ ನಿರ್ಗಮಿಸಿದ್ದಾರೆ. ಸನ್ರೈಸರ್ಸ್ ತಂಡದ ಮೊತ್ತ 11 ಓವರ್ಗೆ 89/3 ಆಗಿದೆ.
ಬೇರ್ಸ್ಟೋ ಔಟ್
ಸನ್ರೈಸರ್ಸ್ ಹೈದರಾಬಾದ್ ತಂಡದ ಎರಡನೇ ವಿಕೆಟ್ ಪತನವಾಗಿದೆ. 21 ಬಾಲ್ಗೆ 30 ರನ್ ಗಳಿಸಿ ಜಾನಿ ಬೇರ್ಸ್ಟೋ ಕೂಡ ಔಟ್ ಆಗಿದ್ದಾರೆ. ಕೇನ್ ವಿಲಿಯಮ್ಸನ್ಗೆ ವಿಜಯ್ ಶಂಕರ್ ಜೊತೆಯಾಗಿದ್ದಾರೆ. 9 ಓವರ್ನ ಅಂತ್ಯಕ್ಕೆ ಸನ್ರೈಸರ್ಸ್ ತಂಡದ ಸ್ಕೋರ್ 72/2 ಆಗಿದೆ.
ಮನೀಶ್ ಪಾಂಡೆ ಔಟ್
ಸನ್ರೈಸರ್ಸ್ಗೆ ಉತ್ತಮ ಆರಂಭ ನೀಡಿದ್ದ ಮನೀಶ್ ಪಾಂಡೆ ವಿಕೆಟ್ ಒಪ್ಪಿಸಿದ್ದಾರೆ. 20 ಬಾಲ್ಗೆ 31 ರನ್ ಗಳಿಸಿ ಪಾಂಡೆ ನಿರ್ಗಮಿಸಿದ್ದಾರೆ. ಕೇನ್ ವಿಲಿಯಮ್ಸನ್ ಹಾಗೂ ಜಾನಿ ಬೇರ್ಸ್ಟೋ ಕ್ರೀಸ್ನಲ್ಲಿದ್ದಾರೆ. ತಂಡದ ಮೊತ್ತ 7 ಓವರ್ಗೆ 61ಕ್ಕೆ 1 ಆಗಿದೆ.
ಪವರ್ಪ್ಲೇ ಅಂತ್ಯಕ್ಕೆ 57/0
ಸನ್ರೈಸರ್ಸ್ ಹೈದರಾಬಾದ್ ತಂಡ 6 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಮನೀಶ್ ಪಾಂಡೆ ಹಾಗೂ ಜಾನಿ ಬೇರ್ಸ್ಟೋ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದಾರೆ. ಪಾಂಡೆ 31 ಹಾಗೂ ಬೇರ್ಸ್ಟೋ 24 ರನ್ ಗಳಿಸಿ ಇನ್ನಿಂಗ್ಸ್ ಕಟ್ಟಲು ನೆರವಾಗಿದ್ದಾರೆ. ತಂಡ ಗೆಲ್ಲಲು 84 ಬಾಲ್ಗೆ 164 ರನ್ ಬೇಕಿದೆ.
No wickets in the Powerplay and #SRH are 57-0. They need 164 runs in 84 balls. https://t.co/7vPWWkuPYu #RRvSRH #VIVOIPL pic.twitter.com/45SESHQuK4
— IndianPremierLeague (@IPL) May 2, 2021
ಬ್ಯಾಟಿಂಗ್ ಆರಂಭಿಸಿದ ಸನ್ರೈಸರ್ಸ್
ಸನ್ರೈಸರ್ಸ್ ಹೈದರಾಬಾದ್ ತಂಡ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಮನೀಶ್ ಪಾಂಡೆ ಹಾಗೂ ಜಾನಿ ಬೇರ್ಸ್ಟೋ ಆರಂಭಿಕರಾಗಿ ಕ್ರೀಸ್ಗೆ ಇಳಿದಿದ್ದಾರೆ. 2ನೇ ಓವರ್ನ ಅಂತ್ಯಕ್ಕೆ ಸನ್ರೈಸರ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 11 ರನ್ ದಾಖಲಿಸಿದೆ.
ರಾಜಸ್ಥಾನ್ ರಾಯಲ್ಸ್ 220/3 (20 ಓವರ್)
ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 220 ರನ್ ದಾಖಲಿಸಿದೆ. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ ಗೆಲ್ಲಲು 221 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
Big chase coming up.
RR – 220/3 (20)? – 221 runs#RRvSRH #OrangeOrNothing #OrangeArmy #IPL2021 pic.twitter.com/2e0RoIlDvu
— SunRisers Hyderabad (@SunRisers) May 2, 2021
200 ರನ್ ಗಡಿ ದಾಟಿದ ಆರ್ಆರ್; ಬಟ್ಲರ್ ಔಟ್
ರಾಜಸ್ಥಾನ್ ರಾಯಲ್ಸ್ ಬಟ್ಲರ್ ಆಟದ ನೆರವಿನಿಂದ 200 ರನ್ಗಳ ಗಡಿ ದಾಟಿದೆ. 19ನೇ ಓವರ್ಗೆ 3 ವಿಕೆಟ್ ಕಳೆದುಕೊಂಡು 209 ರನ್ ದಾಖಲಿಸಿದೆ. ಇದೇ ವೇಳೆ ಕೊನೆಯ ಎಸೆತದಲ್ಲಿ ಬಟ್ಲರ್ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದ್ದಾರೆ. 64 ಬಾಲ್ಗೆ 124 ರನ್ ಗಳಿಸಿ ನಿರ್ಗಮಿಸಿದ್ದಾರೆ. ಕೊನೆಯ ಒಂದು ಓವರ್ ಉಳಿದಿರುವಂತೆ ರಿಯಾನ್ ಪರಾಗ್ ಹಾಗೂ ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಶತಕ ಸಿಡಿಸಿದ ಜಾಸ್ ಬಟ್ಲರ್
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಜಾಸ್ ಬಟ್ಲರ್ ಆಸರೆಯಾಗಿದ್ದಾರೆ. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 56 ಬಾಲ್ಗೆ 100 ರನ್ ದಾಖಲಿಸಿದ್ದಾರೆ. 5 ಸಿಕ್ಸರ್ ಹಾಗೂ 10 ಬೌಂಡರಿ ಸಿಡಿಸಿ ಮಿಂಚಿದ್ದಾರೆ. ರಾಜಸ್ಥಾನ್ ತಂಡದ ಮೊತ್ತ 17ನೇ ಓವರ್ಗೆ 172/2 ಆಗಿದೆ.
1️⃣0️⃣0️⃣???@josbuttler brings up his maiden #VIVOIPL century in just 56 balls (10×4, 5×6). He is the 2nd @rajasthanroyals to get to triple figures this season!https://t.co/7vPWWkMqQ2 #RRvSRH #VIVOIPL pic.twitter.com/Kh3Aa2Du6J
— IndianPremierLeague (@IPL) May 2, 2021
ಅರ್ಧಶತಕದ ಹೊಸ್ತಿಲಲ್ಲಿ ಸಂಜು ಔಟ್
ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ 33 ಬಾಲ್ಗೆ 48 ರನ್ ಗಳಿಸಿ ಔಟ್ ಆಗಿದ್ದಾರೆ. ವಿಜಯ್ ಶಂಕರ್ ಬೌಲಿಂಗ್ಗೆ ಅಬ್ದುಲ್ ಸಮದ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಶತಕದ ಅಂಚಿನಲ್ಲಿ ಅಬ್ಬರಿಸುತ್ತಿರುವ ಜಾಸ್ ಬಟ್ಲರ್ಗೆ ರಿಯಾನ್ ಪರಾಗ್ ಜೊತೆಯಾಗಿದ್ದಾರೆ.
ಬಟ್ಲರ್ ಬ್ಯಾಟಿಂಗ್ ಅಬ್ಬರ!
ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟ್ಲರ್ ಅಬ್ಬರಿಸುತ್ತಿದ್ದಾರೆ. ಮೊಹಮ್ಮದ್ ನಬಿ ಬೌಲಿಂಗ್ನ ಓವರ್ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದಾರೆ. ತಂಡದ ಮೊತ್ತ 15 ಓವರ್ಗೆ 146/1 ಆಗಿದೆ. 50 ಬಾಲ್ಗೆ 7 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 84 ರನ್ ಕಲೆಹಾಕಿ ಬಟ್ಲರ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
#SRH have introduced Mohammad Nabi into the attack and Buttler hits him for 2×4, 2×6. Nabi concedes 21 in his first over. #RR now move to 146-1. https://t.co/7vPWWkMqQ2 #RRvSRH #VIVOIPL pic.twitter.com/A3FoGqizkg
— IndianPremierLeague (@IPL) May 2, 2021
ಸಂಜು- ಬಟ್ಲರ್ ಉತ್ತಮ ಜೊತೆಯಾಟ
ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ಹಾಗೂ ಜಾಸ್ ಬಟ್ಲರ್ ಉತ್ತಮ ಜೊತೆಯಾಟ ಆಡುತ್ತಿದ್ದಾರೆ. ಮೊದಲ ವಿಕೆಟ್ ಬಳಿಕ ಶಿಸ್ತುಬದ್ಧ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. 14 ಓವರ್ಗಳ ಅಂತ್ಯಕ್ಕೆ ರಾಜಸ್ಥಾನ್ 1 ವಿಕೆಟ್ ಕಳೆದುಕೊಂಡು 125 ರನ್ ಪೇರಿಸಿದೆ.
ಜಾಸ್ ಬಟ್ಲರ್ ಅರ್ಧಶತಕ
ರಾಜಸ್ಥಾನ್ ರಾಯಲ್ಸ್ ಪರ ಜಾಸ್ ಬಟಲ್ರ್ ಅರ್ಧಶತಕ ದಖಲಿಸಿದ್ದಾರೆ. ಇದು ಬಟಲ್ರ್ 12ನೇ ಐಪಿಎಲ್ ಅರ್ಧಶತಕವಾಗಿದೆ. ತಂಡದ ಮೊತ್ತ 13 ಓವರ್ಗೆ 1 ವಿಕೆಟ್ ಕಳೆದುಕೊಂಡು 111 ರನ್ ಆಗಿದೆ. ಸಂಜು ಸ್ಯಾಮ್ಸನ್ 33 ರನ್ ಗಳಿಸಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.
Scoop flavour of the day: Orange ?#HallaBol | #RoyalsFamily | #IPL2021 | #RRvSRH pic.twitter.com/lmPxX7Hzg4
— Rajasthan Royals (@rajasthanroyals) May 2, 2021
ಸಂಜು ಸ್ಯಾಮ್ಸನ್ ವೇಗದ ಆಟ
ರಾಜಸ್ಥಾನ್ ರಾಯಲ್ಸ್ ಪರ ನಾಯಕ ಸಂಜು ಸ್ಯಾಮ್ಸನ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ಎರಡು ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದ್ದಾರೆ. 7ನೇ ಓವರ್ಗೆ ರಾಜಸ್ಥಾನ್ 1 ವಿಕೆಟ್ ಕಳೆದುಕೊಂಡು 60 ರನ್ ದಾಖಲಿಸಿದೆ.
ಪವರ್ಪ್ಲೇ ಅಂತ್ಯಕ್ಕೆ 42/1
ರಾಜಸ್ಥಾನ್ ರಾಯಲ್ಸ್ ತಂಡ 6 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 42 ರನ್ ದಾಖಲಿಸಿದೆ. ನಾಯಕ ಸಂಜು ಸ್ಯಾಮ್ಸನ್ ಮತ್ತು ಬಟ್ಲರ್ ಇನ್ನಿಂಗ್ಸ್ ಕಟ್ಟಬೇಕಿದೆ.
End of powerplay.
RR – 42/1 (6)#RRvSRH #OrangeOrNothing #OrangeArmy #IPL2021
— SunRisers Hyderabad (@SunRisers) May 2, 2021
ರಾಜಸ್ಥಾನ್ ರಾಯಲ್ಸ್ 33/1 (5 ಓವರ್)
ರಾಜಸ್ಥಾನ್ ರಾಯಲ್ಸ್ ತಂಡ 5 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 33 ರನ್ ದಾಖಲಿಸಿದೆ. ಸಂಜು ಸ್ಯಾಮ್ಸನ್ 8 ಹಾಗೂ ಬಟ್ಲರ್ 12 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಅನುಜ್ ರಾವತ್, ರಾಹುಲ್ ತೆವಾಟಿಯಾ ಹಾಗೂ ಕ್ರಿಸ್ ಮಾರಿಸ್ ಬ್ಯಾಟಿಂಗ್ಗೆ ಬಾಕಿ ಇದ್ದಾರೆ.
ಮೊದಲ ವಿಕೆಟ್ ಕಳೆದುಕೊಂಡ ಆರ್ಆರ್
ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ಯಶಸ್ವಿ ಜೈಸ್ವಾಲ್ ರಶೀದ್ ಖಾನ್ ಬೌಲಿಂಗ್ಗೆ ಎಲ್ಬಿಡ್ಬ್ಲ್ಯುಗೆ ಔಟ್ ಆಗಿದ್ದಾರೆ. 13 ಬಾಲ್ಗೆ 12 ರನ್ ಗಳಿಸಿ ನಿರ್ಗಮಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಮೊತ್ತ 3 ಓವರ್ಗೆ 1 ವಿಕೆಟ್ ಕಳೆದುಕೊಂಡು 17 ರನ್ ಆಗಿದೆ. ಜಾಸ್ ಬಟ್ಲರ್ಗೆ ನಾಯಕ ಸಂಜು ಸ್ಯಾಮ್ಸನ್ ಜೊತೆಯಾಗಿದ್ದಾರೆ.
ಬ್ಯಾಟಿಂಗ್ ಆರಂಭಿಸಿ ರಾಜಸ್ಥಾನ್
ರಾಜಸ್ಥಾನ್ ರಾಯಲ್ಸ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಜಾಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. 1 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 2 ರನ್ ದಾಖಲಾಗಿದೆ. ಮೊದಲ ಓವರ್ನ್ನು ಭುವನೇಶ್ವರ್ ಕುಮಾರ್ ಬೌಲ್ ಮಾಡಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್
ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಮನೀಶ್ ಪಾಂಡೆ, ಕೇದಾರ್ ಜಾಧವ್, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಖಲೀಲ್ ಅಹ್ಮದ್
Today's Playing XI: Bairstow (wk), Kane (c), Pandey, Shankar, Nabi, Jadhav, Samad, Rashid, Sandeep, Bhuvi, Khaleel.#RRvSRH #OrangeOrNothing #OrangeArmy #IPL2021
— SunRisers Hyderabad (@SunRisers) May 2, 2021
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ/ ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ರಿಯಾನ್ ಪರಾಗ್, ಅನುಜ್ ರಾವತ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಕಾರ್ತಿಕ್ ತ್ಯಾಗಿ, ಚೇತನ್ ಸಕರಿಯಾ, ಮುಸ್ತಾಫಿಜುರ್ ರಹಮಾನ್
An IPL debut for @AnujRawat_1755, and a comeback for @tyagiktk! ?
Happy with our XI for #RRvSRH? ?#RoyalsFamily | #HallaBol | @Dream11 pic.twitter.com/Xw3QEtVwql
— Rajasthan Royals (@rajasthanroyals) May 2, 2021
ಟಾಸ್ ಗೆದ್ದ ಸನ್ರೈಸರ್ಸ್ ಬೌಲಿಂಗ್ ಆಯ್ಕೆ
ಸನ್ರೈಸರ್ಸ್ ಹೈದರಾಬಾದ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಮಾಡಲಿದೆ.
Match 28. Sunrisers Hyderabad win the toss and elect to field https://t.co/MK5XU4ASi5 #RRvSRH #VIVOIPL #IPL2021
— IndianPremierLeague (@IPL) May 2, 2021
Published On - May 02,2021 7:22 PM