ವಿಶ್ವ ಕ್ರಿಕೆಟ್‌ನಲ್ಲಿ ‘ಗಾಡ್’ ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಅನುಭವಿ ಬೌಲರ್‌ಗಳನ್ನು ಎದುರಿಸಿದ್ದಾರೆ. ವಾಸಿಮ್ ಅಕ್ರಮ್, ಲಸಿತ್ ಮಾಲಿಂಗ, ಬ್ರೆಟ್ ಲೀ, ಗ್ಲೆನ್ ಮೆಕ್‌ಗ್ರಾತ್‌ನಿಂದ ಡೇಲ್ ಸ್ಟೇನ್, ಮಿಚೆಲ್ ಜಾನ್ಸನ್, ಜೇಮ್ಸ್ ಆಂಡರ್ಸನ್, ಪ್ಯಾಟ್ ಕಮ್ಮಿನ್ಸ್, ಸಚಿನ್ ಬ್ಯಾಟ್‌ನ ಹೊಡೆತಕ್ಕೆ ದಂಗಾಗಿ ಹೋಗಿದ್ದಾರೆ. ಈ ಎಲ್ಲರ ವಿರುದ್ಧ ಸಚಿನ್ ತೆಂಡೂಲ್ಕರ್ ಸಾಕಷ್ಟು ರನ್ ಗಳಿಸಿದರು. ಈ ಅನುಭವಿ ಬೌಲರ್‌ಗಳು ಸಚಿನ್ ಅವರನ್ನು ಕೆಲವೊಮ್ಮೆ ತೊಂದರೆಗೆ ಸಿಲುಕಿಸಿದ್ದಾರೆ. ಆದರೆ ಸಚಿನ್ ಈ ಎಲ್ಲರಲ್ಲೂ ವಿಕ್ನೇಸ್ ಕಂಡುಕೊಂಡರು ಮತ್ತು ಮೈದಾನದ ನಾಲ್ಕು ಮೂಲೆಗಳಲ್ಲಿ ಅವರ ವಿರುದ್ಧ ರನ್ ಗಳಿಸಿದರು. ಆದರೆ ನೀವು ಸಚಿನ್ ಅವರನ್ನು ಕೇಳಿದರೆ ನೀವು ಯಾವ ಬೌಲರ್‌ಗಳಿಗೆ ಹೆದರುತ್ತೀರಿ? ಅಥವಾ ಯಾವ ಬೌಲರ್‌ಗಳನ್ನು ಎದುರಿಸಲು ನಿಮಗೆ ಕಷ್ಟವಾಗುತ್ತದೆ? ಎಂಬುದಕ್ಕೆ ಸಚಿನ್ ಯಾವ ಹೆಸರನ್ನು ಹೇಳಿದ್ದಾರೆ ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ
ಸಚಿನ್‌ನನ್ನು ಯಾರು ಹೆಚ್ಚು ಕಾಡಿದರು?
ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹ್ಯಾನ್ಸಿ ಕ್ರೊಂಜೆ ವಿರುದ್ಧ ತಮ್ಮ 24 ವರ್ಷಗಳ ವೃತ್ತಿಜೀವನದಲ್ಲಿ ಆಡಿದ್ದು ಅತ್ಯಂತ ಅಹಿತಕರವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಜೂನ್ 1, 2002 ರಂದು ನಡೆದ ವಿಮಾನ ಅಪಘಾತದಲ್ಲಿ ಬಲಗೈ ಬೌಲರ್ ಪ್ರಾಣ ಕಳೆದುಕೊಂಡರು. ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೊಂಜೆ ಅವರು ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಕಠಿಣ ಬೌಲರ್ ಎಂದು ಕೆಲವು ವರ್ಷಗಳ ಹಿಂದೆ ತೆಂಡೂಲ್ಕರ್ ಒಪ್ಪಿಕೊಂಡರು.
ಮ್ಯಾಚ್ ಫಿಕ್ಸಿಂಗ್ ಹಗರಣ
ಹ್ಯಾನ್ಸಿ ಕ್ರೊಂಜೆ ದಕ್ಷಿಣ ಆಫ್ರಿಕಾ ಪರ 68 ಟೆಸ್ಟ್ ಮತ್ತು 188 ಏಕದಿನ ಪಂದ್ಯಗಳನ್ನು ಆಡಿದ್ದಾರೆ
2016 ರಲ್ಲಿ, ಈ ವೇಗಿಯ ಬಗ್ಗೆ ಮಾತಾನಾಡಿದ್ದ ಸಚಿನ್ ತೆಂಡೂಲ್ಕರ್, ಹನ್ಸಿ ಕ್ರೊಂಜೆ ಅವರ ಇನ್ಸ್ವಿಂಗ್ ಬಾಲ್ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಗಾಗಿಸುತ್ತಿತ್ತು ಎಂದು ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು 32 ಏಕದಿನ ಪಂದ್ಯಗಳಲ್ಲಿ ಮೂರು ಬಾರಿ ಮತ್ತು 11 ಟೆಸ್ಟ್ ಪಂದ್ಯಗಳಲ್ಲಿ ಐದು ಬಾರಿ ಪೆವಿಲಿಯನ್‌ಗೆ ಕಳುಹಿಸಿದ್ದರು. ಹ್ಯಾನ್ಸಿಯ ವೃತ್ತಿಜೀವನವು ಬಹಳ ದೀರ್ಘವಾಗಿಲ್ಲವಾದರೂ, ಅವರು ಮಧ್ಯಮ ವೇಗಿ ಆಗಿದ್ದರು, ಅವರು ತಮ್ಮ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳನ್ನು ಅನೇಕ ಬಾರಿ ತೊಂದರೆಗೊಳಗಾಗಿಸಿದ್ದರು. ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಹೆಸರಿಸಲ್ಪಟ್ಟ ಹ್ಯಾನ್ಸಿ ಕ್ರೊಂಜೆ ಅವರ ಕ್ರಿಕೆಟ್ ವೃತ್ತಿಜೀವನವು 21 ವರ್ಷಗಳ ಹಿಂದೆ ಕೊನೆಗೊಂಡಿತು.
ಇದನ್ನೂ ಓದಿ:2011ರಲ್ಲಿ ವಿಶ್ವಕಪ್ ಗೆದ್ದಿದ್ದು ಟೀಮ್ ಇಂಡಿಯಾ ಮಾತ್ರ ಅಲ್ಲ, ಇಡೀ ಭಾರತವೇ ಅದನ್ನು ಗೆದ್ದಿತು: ಸಚಿನ್ ತೆಂಡೂಲ್ಕರ್