ಅಶ್ವಿನ್-ಮಂಜ್ರೇಕರ್ ವಿವಾದ: ಮಾಜಿ ಬ್ಯಾಟ್ಸ್​ಮನ್ ಪರ ವಹಿಸಿದ ಆಂಬ್ರೋಸ್ ಅವರು ಅತ್ಯುತ್ತಮ ಆಟಗಾರರಾಗಿದ್ದರೆಂದರು!

ವೆಸ್ಟ್ ಇಂಡೀಸ್ ಪರ 98 ಟೆಸ್ಟ್​ಗಳನ್ನಾಡಿ 405 ಮತ್ತು 176 ಓಡಿಐಗಳಲ್ಲಿ 225 ವಿಕೆಟ್​ ಪಡೆದ ಆಂಬ್ರೋಸ್ ತಮ್ಮ ಯುಗದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿದ್ದರು. ಅವರ ಮತ್ತು ಕರ್ಟ್ನೀ ವಾಲ್ಷ್ ಜೋಡಿಯ ವೇಗದ ಆಕ್ರಮಣವು ಎದುರಾಳಿ ಬ್ಯಾಟ್ಸ್​ಮನ್​ಗಳ ಎದೆಯಲ್ಲಿ ನಡುಕ ಹುಟ್ಟಿಸುತಿತ್ತು.

ಅಶ್ವಿನ್-ಮಂಜ್ರೇಕರ್ ವಿವಾದ: ಮಾಜಿ ಬ್ಯಾಟ್ಸ್​ಮನ್ ಪರ ವಹಿಸಿದ ಆಂಬ್ರೋಸ್ ಅವರು ಅತ್ಯುತ್ತಮ ಆಟಗಾರರಾಗಿದ್ದರೆಂದರು!
ರವಿಚಂದ್ರನ್ ಅಶ್ವಿನ್ ಮತ್ತು ಸಂಜಯ ಮಂಜ್ರೇಕರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 12, 2021 | 12:41 AM

ರವಿಚಂದ್ರನ್ ಅಶ್ವಿನ್ ಅವರನ್ನು ಸರ್ವಕಾಲಿಕ ಶ್ರೇಷ್ಠರೆಂದು ನಾನು ಪರಿಗಣಿಸುವುದಿಲ್ಲ ಎಂದು ಮಾಜಿ ಆಟಗಾರ ಮತ್ತು ಹಾಲಿ ಕಾಮೆಂಟೇಟರ್ ಸಂಜಯ ಮಂಜ್ರೇಕರ್ ಹೇಳಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮಂಜ್ರೇಕರ್​ ಅವರನ್ನು ತರಾಟೆಗೆ ತೆಗೆಕೊಂಡಿದ್ದಾರೆ. ಹಲವಾರು ಮಾಜಿ ಮತ್ತು ಹಾಲಿ ಆಟಗಾರರು ಸಹ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಲಿಸ್ಟಿಗೆ ಹೊಸ ಸೇರ್ಪಡೆ ಎಂದರೆ ತಾನಾಡುತ್ತಿದ್ದ ಜಮಾನಾದಲ್ಲಿ ವಿಶ್ವದ ಭಯಾನಕ ಮತ್ತ ಶ್ರೇಷ್ಠ ಬೌಲರ್ ಅನಿಸಿಕೊಂಡಿದ್ದ ವೆಸ್ಟ್​ಇಂಡೀಸ್​ನ ಕರ್ಟ್ಲೀ ಅಂಬ್ರೋಸ್. ಈ ದೈತ್ಯ ಕೆರೀಬಿಯನ್ ಮಂಜ್ರೇಕರ್​ ಅವರ ಪರ ವಹಿಸಿರುವುದು ಮಾತ್ರವಲ್ಲ ತಾವಾಡುತ್ತಿದ್ದ ದಿನಗಳಲ್ಲಿ ಅವರು ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರಾಗಿದ್ದರು ಅಂತಲೂ ಹೇಳಿದ್ದಾರೆ.

‘ಎಲ್ಲರೂ ಒಂದೇ ತೆರನಾದ ಅಭಿಪ್ರಾಯ ಹೊಂದಿರುವುದು ಸಾಧ್ಯವಿಲ್ಲ. ಒಬ್ಬ ಆಟಗಾರನ ಶ್ರೇಷ್ಠತೆಯನ್ನು ನಾವು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುತ್ತೇವೆ. ತಾನಾಡುತ್ತಿದ್ದ ದಿನಗಳಲ್ಲಿ ಸಂಜಯ ಮಂಜ್ರೇಕರ್​ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್ ಆಗಿದ್ದರು. ಅವರು ತಮ್ಮ ಅಭಿಪ್ರಾಯವನ್ನು ಹೊಂದಲು ಸ್ವತಂತ್ರರಾಗಿದ್ದಾರೆ, ಹಾಗೆಯೇ ನಾವೆಲ್ಲ ಭಿನ್ನವಾದ ಅಭಿಪ್ರಾಯಗಳನ್ನು ಹೊಂದಿದ್ದೇವೆ, ಆದರೆ ಬಹಳ ಮುಖ್ಯವಾದ ಪ್ರಶ್ನೆಯೆಂದರೆ, ಶ್ರೇಷ್ಠತೆಯನ್ನು ನಾವು ಹೇಗೆ ವ್ಯಾಖ್ಯಾನಿಸುತ್ತೇವೆ ಅನ್ನೋದು,’ ಎಂದು ಅಂಬ್ರೋಸ್ ಕ್ರೀಡಾ ನಿರೂಪಕಿ ಕರಿಷ್ಮಾ ಕೊಟಕ್ ಅವರ ಯೂಟ್ಯೂಬ್ ಕಾರ್ಯಕ್ರಮ, ‘ದಿ ಕರ್ಟ್ಲೀ ಅಂಡ್ ಕರಿಷ್ಮಾ ಶೋ,’ ನಲ್ಲಿ ಕರಿಷ್ಮಾ ಜೊತೆ ಮಾತಾಡುತ್ತಾ ಹೇಳಿದ್ದಾರೆ.

‘ಯಾಕೆಂದರೆ, ವಾಸ್ತವದಲ್ಲಿ ಕೆಲವು ಸಲ ನಾವು ಶ್ರೇಷ್ಠ ಪದವನ್ನು ಬಹಳ ಹಗುರವಾಗಿ ಬಳಸುತ್ತೇವೆ. ಹಾಗಾಗಿ ಶ್ರೇಷ್ಠತೆಯನ್ನು ಬಹಳ ಎಚ್ಚರಿಕೆಯಿಂದ ವ್ಯಾಖ್ಯಾನಿಸಬೇಕು. ನನ್ನ ದೃಷ್ಟಿಯಲ್ಲಿಶ್ರೇಷ್ಠತೆಯೆಂದರೆ, ಒಬ್ಬ ಆಟಗಾರ ನಿರಂತರವಾಗಿ ಹಲವಾರು ವರ್ಷಗಳ ಸ್ಥಿರ ಪ್ರದರ್ಶನಗಳನ್ನು ನೀಡುವುದು. ಒಂದೆರಡು ವರ್ಷಗಳ ಕಾಲ ಉತ್ತಮ ಪ್ರದರ್ಶನಗಳನ್ನು ನೀಡುವುದು ಶ್ರೇಷ್ಠತೆ ಅನಿಸಿಕೊಳ್ಳುವುದಿಲ್ಲ,’ ಎಂದು ಆಂಬ್ರೋಸ್ ಹೇಳಿದ್ದಾರೆ.

Curtly Ambrose

ಕರ್ಟ್ಲೀ ಅಂಬ್ರೋಸ್

ವೆಸ್ಟ್ ಇಂಡೀಸ್ ಪರ 98 ಟೆಸ್ಟ್​ಗಳನ್ನಾಡಿ 405 ಮತ್ತು 176 ಓಡಿಐಗಳಲ್ಲಿ 225 ವಿಕೆಟ್​ ಪಡೆದ ಆಂಬ್ರೋಸ್ ತಮ್ಮ ಯುಗದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿದ್ದರು. ಅವರ ಮತ್ತು ಕರ್ಟ್ನೀ ವಾಲ್ಷ್ ಜೋಡಿಯ ವೇಗದ ಆಕ್ರಮಣವು ಎದುರಾಳಿ ಬ್ಯಾಟ್ಸ್​ಮನ್​ಗಳ ಎದೆಯಲ್ಲಿ ನಡುಕ ಹುಟ್ಟಿಸುತಿತ್ತು. ಒಬ್ಬ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ನಂತರ ಅವನ ಒಟ್ಟಾರೆ ಬೆಳವಣಿಗೆಯ ಮೇಲೆ ಶ್ರೇಷ್ಠತೆ ಅವಲಂಬಿತವಾಗಿರುತ್ತದೆ ಎಂದು ಅಂಬ್ರೋಸ್ ಹೇಳುತ್ತಾರೆ.

‘ಅಶ್ವಿನ್ ವಿಷಯದಲ್ಲಿ ಹೇಳುವುದಾದರೆ ಅವರು 11 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದು ಟೆಸ್ಟ್​ಗಳಲ್ಲಿ 409 ವಿಕೆಟ್ ಪಡೆದಿದ್ದಾರೆ. ಭಾರತ ಪರ ಅತಿಹೆಚ್ಚು ವಿಕೆಟ್​ ಪಡೆದಿರುವವರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಅಶ್ವಿನ್ ನಿಸ್ಸಂದೇಹವಾಗಿ ಭಾರತದ ಸರ್ವಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್​ಗಳಲ್ಲಿ ಇನ್ನಿಂಗ್ಸ್​ ಒಂದರಲ್ಲಿ 5ಕ್ಕಿಂತ ಹೆಚ್ಚು ವಿಕೆಟ್​ ಪಡೆಯುವ ಸಾಧನೆಯನ್ನು ಅಶ್ವಿನ್ 30ಬಾರಿ ಮಾಡಿದ್ದಾರೆ. ಕೇವಲ ಅನಿಲ್ ಕುಂಬ್ಳೆ (35) ಮಾತ್ರ ಅಶ್ವಿನ್​ಗಿಂತ ಹೆಚ್ಚುಸಲ ಈ ಸಾಧನೆ ಮಾಡಿದ್ದಾರೆ,’ ಎಂದು ಆಂಬ್ರೋಸ್​ ಹೇಳಿದ್ದಾರೆ.

‘ಕೆಲ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿ ಒಂದೆರಡು ವರ್ಷದವರೆಗೆ ಜನ ನಿಬ್ಬೆರಗಾಗುವಂಥ ಪ್ರದರ್ಶನಗಳನ್ನು ನೀಡುತ್ತಾರೆ, ಆದರೆ ನಂತರದ ಆರೇಳು ವರ್ಷಗಳಲ್ಲಿ ಅವರಿಂದ ಹೇಳಿಕೊಳ್ಳುವ ಸಾಧನೆಯೇ ಬರುವುದಿಲ್ಲ. ಅ ಒಂದೆರಡು ವರ್ಷಗಳ ಪ್ರದರ್ಶನದ ಆಧಾರದ ಮೇಲೆ ಅವನ ಶ್ರೇಷ್ಠತೆಯನ್ನು ಅಳೆಯಲಾಗದು. ಹಲವು ವರ್ಷಗಳ ಅವಧಿಯಲ್ಲಿ, ಅಥವಾ ಅವನ ಇಡೀ ಕರೀಯರ್ ಮುಕ್ತಾಯಗೊಂಡ ನಂತರ ಅವನು ಶ್ರೇಷ್ಠನೋ, ಉತ್ತಮನೋ ಅಥವಾ ಸಾಧಾರಣ ಆಟಗಾರನೋ ಎನ್ನುವುದನ್ನು ನಿರ್ಣಯಿಸಬಹುದು,’ ಎಂದು ಆಂಬ್ರೋಸ್ ಹೇಳಿದರು.

ಇದನ್ನೂ ಓದಿ: Ravichandran Ashwin Profile: ಭಾರತದಲ್ಲಿ ಆಂಗ್ಲರ ವಿರುದ್ಧ ಮಿಂಚಿದ್ದ ಅಶ್ವಿನ್ ಅವರ ನೆಲದಲ್ಲಿ ಭಾರತಕ್ಕೆ ನೆರವಾಗುತ್ತಾರಾ?

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ