ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಇಷ್ಟು ಬಲಿಷ್ಠಗೊಳ್ಳಲು ಈ ಸ್ಟೋಟಕ ಓಪನರ್ ಕಾರಣ; ಪಾಕ್ ಮಾಜಿ ಕ್ರಿಕೆಟಿಗ

ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಇಷ್ಟು ಬಲಿಷ್ಠಗೊಳ್ಳಲು ಈ ಸ್ಟೋಟಕ ಓಪನರ್ ಕಾರಣ; ಪಾಕ್ ಮಾಜಿ ಕ್ರಿಕೆಟಿಗ
ಪಾಕಿಸ್ತಾನದ ಮಾಜಿ ಆಫ್ ಸ್ಪಿನ್ನರ್ ಸಕ್ಲೈನ್ ​​ಮುಷ್ತಾಕ್

ಸೆಹ್ವಾಗ್ ಇಡೀ ಕ್ರಿಕೆಟ್ ಪ್ರಪಂಚದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅವರು ಆಡುತ್ತಿದ್ದ ಶೈಲಿ, ಅವರು ಆಡುತ್ತಿದ್ದ ಕ್ರಿಕೆಟ್ ಬ್ರಾಂಡ್, ಭಾರತದ ಅನೇಕ ಆಟಗಾರರಿಗೆ ಪ್ರಯೋಜನವನ್ನು ನೀಡಿದೆ.

pruthvi Shankar

| Edited By: Skanda

Jun 03, 2021 | 8:39 AM

ಪಾಕಿಸ್ತಾನದ ಮಾಜಿ ಆಫ್ ಸ್ಪಿನ್ನರ್ ಸಕ್ಲೈನ್ ​​ಮುಷ್ತಾಕ್ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಹೊಗಳಿ ಮಾತನಾಡಿದ್ದಾರೆ. ಸೆಹ್ವಾಗ್ ತಮ್ಮ ಬ್ಯಾಟಿಂಗ್ ಶೈಲಿಯಿಂದ ಭಾರತದ ಬ್ಯಾಟಿಂಗ್ ಅನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಭಾರತಕ್ಕಾಗಿ ಟೆಸ್ಟ್ ಪಂದ್ಯಗಳಲ್ಲಿ ಸೆಹ್ವಾಗ್ ಎರಡು ಟ್ರಿಪಲ್ ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಲ್ಲಿ ಅವರನ್ನು ಎಣಿಸಲಾಗಿದೆ. ಸೆಹ್ವಾಗ್ ಅವರ ಶೈಲಿಯು ಆಕ್ರಮಣಕಾರಿಯಾಗಿತ್ತು ಮತ್ತು ಟೆಸ್ಟ್ ಪಂದ್ಯಗಳಲ್ಲೂ ಅವರು ಅದೇ ಆಕ್ರಮಣಶೀಲತೆಯಿಂದ ಬ್ಯಾಟಿಂಗ್ ಮಾಡಿದರು ಮತ್ತು ಕ್ರಿಕೆಟ್​ನಲ್ಲಿ ತಮ್ಮದೇ ಆದ ಗುರುತನ್ನು ಮಾಡಿಕೊಂಡರು ಎಂದಿದ್ದಾರೆ.

ಟೆಸ್ಟ್ ಪಂದ್ಯಗಳಲ್ಲಿ ಸೆಹ್ವಾಗ್ ಅವರ ಸ್ಟ್ರೈಕ್ ರೇಟ್ 82.2 ಆಗಿದ್ದರೆ, ಏಕದಿನ ಪಂದ್ಯಗಳಲ್ಲಿ ಸ್ಟ್ರೈಕ್ ರೇಟ್ 104.3 ಇದ್ದು, ಟಿ 20 ಯಲ್ಲಿ ಸ್ಟ್ರೈಕ್ ರೇಟ್ 145.3 ಆಗಿದೆ. ಇಂದಿನ ಯುಗದಲ್ಲಿ ಭಾರತೀಯ ಬ್ಯಾಟಿಂಗ್ ಈ ಸ್ಥಾನಕ್ಕೆ ತಲುಪಿಲು ಸೆಹ್ವಾಗ್ ಅವರ ಪಾತ್ರವೂ ಇದೆ ಎಂದು ಸಕ್ಲೈನ್ ​​ನಂಬಿದ್ದಾರೆ. ಸೆಹ್ವಾಗ್, ಸಕ್ಲೈನ್ ಅವರ ಚೆಂಡನ್ನು ಸಿಕ್ಸರ್‌ ಹೊಡೆಯುವ ಮೂಲಕ ತಮ್ಮ ಮೊದಲ ಟ್ರಿಪಲ್ ಶತಕವನ್ನು ಗಳಿಸಿದರು ಎಂಬುದು ಗಮನಾರ್ಹ.

ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲವಾಯಿತು ಸಕ್ಲೇನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ಸೆಹ್ವಾಗ್ ಇಡೀ ಕ್ರಿಕೆಟ್ ಪ್ರಪಂಚದ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅವರು ಆಡುತ್ತಿದ್ದ ಶೈಲಿ, ಅವರು ಆಡುತ್ತಿದ್ದ ಕ್ರಿಕೆಟ್ ಬ್ರಾಂಡ್, ಭಾರತದ ಅನೇಕ ಆಟಗಾರರಿಗೆ ಪ್ರಯೋಜನವನ್ನು ನೀಡಿದೆ. ಅವರು ಇಡೀ ಜಗತ್ತಿಗೆ ತೋರಿಸಿದ ಬ್ಯಾಟಿಂಗ್ ಭಾರತೀಯ ಕ್ರಿಕೆಟ್‌ನ ಮನಸ್ಥಿತಿಯನ್ನು ಮತ್ತು ಅನೇಕ ಕ್ರಿಕೆಟಿಗರ ಮನಸ್ಥಿತಿಯನ್ನು ಬದಲಾಯಿಸಿತು ಎಂದು ಹೇಳಿದ್ದಾರೆ.

ರೋಹಿತ್‌ರನ್ನು ಸೆಹ್ವಾಗ್‌ಗೆ ಹೋಲಿಕೆ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಅವರನ್ನು ಸಕ್ಲೈನ್ ​​ಹೋಲಿಕೆ ಮಾಡಿ ಮಾತನಾಡಿದ್ದಾರೆ. ರೋಹಿತ್ ಅವರ ದಾಖಲೆಯು ನಿಸ್ಸಂದೇಹವಾಗಿ ಸೆಹ್ವಾಗ್ ಗಿಂತ ಸ್ವಲ್ಪ ಉತ್ತಮವಾಗಿದೆ. ಆದರೆ ಸೆಹ್ವಾಗ್ ಅವರ ಹೆಜ್ಜೆಗಳನ್ನು ಅನುಸರಿಸದೆ ಇದು ರೋಹಿತ್​ಗೆ ಸಾಧ್ಯವಾಗುತ್ತಿರಲಿಲ್ಲ. ಸೆಹ್ವಾಗ್ ಆಡಿದ ರೀತಿಯ ಕ್ರಿಕೆಟ್ ಅನ್ನು ಆಡಲು ಕೆಲವೇ ಜನರು ಸಮರ್ಥರಾಗಿದ್ದಾರೆ ಎಂದು ಸಕ್ಲೈನ್ ​​ನಂಬಿದ್ದಾರೆ.

ಸೆಹ್ವಾಗ್ ತಮ್ಮ ಆತ್ಮವಿಶ್ವಾಸದಿಂದ ಇತರರಿಗೆ ದಾರಿ ತೋರಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಸೆಹ್ವಾಗ್ ದ್ವಿಶತಕ ಬಾರಿಸಿದರು, ಆದ್ದರಿಂದ ರೋಹಿತ್ ಶರ್ಮಾ ಸೆಹ್ವಾಗ್ ಅವರಿಂದ ಪ್ರಭಾವಿತರಾಗಿ ದ್ವಿಶತಕ ಬಾರಿಸಿದ್ದರು. ರೋಹಿತ್ ಅವರು ಸೆಹ್ವಾಗ್ ಅವರನ್ನು ನೋಡುವ ಮೂಲಕ ಸಾಕಷ್ಟು ಕಲಿತಿರಬೇಕು. ರೋಹಿತ್ ಅವರ ಅಂಕಿ ಅಂಶಗಳು ನಿಸ್ಸಂದೇಹವಾಗಿ ಸೆಹ್ವಾಗ್​​ಗಿಂತ ಉತ್ತಮವಾಗಿರಬಹುದು, ಆದರೆ ಇದರ ಹಿಂದೆ ಸೆಹ್ವಾಗ್ ಪಾತ್ರವಿದೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: 7 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್; ಟೆಸ್ಟ್ ಜರ್ಸಿ ಕಂಡು ಭಾವುಕರಾದ ಭಾರತದ ವನಿತೆಯರ ತಂಡ 

ಭಾರತದ ಈ ಒಬ್ಬ ಕ್ರಿಕೆಟಿಗನಿಂದಾಗಿ ನಾನು ಟೆಸ್ಟ್​ ಕ್ರಿಕೆಟ್​ ನೋಡುತ್ತಿದ್ದೇನೆ; ಇಂಗ್ಲೆಂಡ್ ಕ್ರಿಕೆಟಿಗ ಟೈಮಲ್ ಮಿಲ್ಸ್

Follow us on

Related Stories

Most Read Stories

Click on your DTH Provider to Add TV9 Kannada