SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!

17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಅಟ್ಯಾಕ್​ಗೆ ಇಳಿದಿದ್ದರು. ಮೊದಲ ಬಾಲ್​ನಲ್ಲೇ ಜಾನಿ ಬೇರ್​ಸ್ಟೋ ಔಟ್​ ಆದರೆ, ನಂತರದ ಬಾಲ್​ನಲ್ಲಿ ಮನೀಶ್ ಪಾಂಡೆಯನ್ನು ಪೆವಿಲಿಯನ್​ಗೆ ಕಳುಹಿಸಿದರು.

SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!
ಶಹಬಾಜ್​ ಅಹ್ಮದ್​

Updated on: Apr 14, 2021 | 11:40 PM

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸುಲಭ ಮ್ಯಾಚ್​ ಅನ್ನು ಸೋಲುವ ಮೂಲಕ ಹೈದರಾಬಾದ್​ ಆರನೇ ಸ್ಥಾನಕ್ಕೆ ಕುಸಿದಿದೆ. ಕೈ ತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್ ನೀಡಿದ್ದು ಶಹಬಾಜ್​ ಅಹ್ಮದ್​ ಮಾಡಿದ ಆ ಒಂದು ಓವರ್.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ಆರ್​ಸಿಬಿ ಕಳಪೆ ಆರಂಭ ಕಂಡಿತ್ತು. ದೇವದತ್​ ಪಡಿಕ್ಕಲ್​ (11), ಶಹಬಾಜ್​ ಅಹ್ಮದ್ (14)​, ವಿರಾಟ್​ ಕೊಹ್ಲಿ (33) ರನ್​ಗಳಿಗೆ ಔಟ್​ ಆದರು. ನಂತರ ಬಂದ ಮ್ಯಾಕ್ಸ್​ವೆಲ್​ ಹೊರತುಪಡಿಸಿ ಯಾರೂ ಅಷ್ಟು ಉತ್ತಮವಾಗಿ ಬ್ಯಾಟ್ ಬೀಸಿಲ್ಲ. ಮ್ಯಾಕ್ಸ್​ವೆಲ್​ 41 ಬಾಲ್​​ಗಳಿಗೆ 59 ರನ್​ ಸಿಡಿಸಿ ತಂಡದ ಮೊತ್ತವನ್ನು 149ರನ್​ ಗಡಿ ಮುಟ್ಟಿಸಿದರು.

ಸಾಮಾನ್ಯ  ಗುರಿ ಬೆನ್ನು ಹತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿತ್ತು. ವೃದ್ಧಿಮಾನ್​ ಸಹಾ ಕೇವಲ ಒಂದು ರನ್​ಗೆ ಔಟ್​ ಆದರು. ನಂತರ ಜತೆಯಾದ ಡೇವಿಡ್​ ವಾರ್ನರ್​ ಹಾಗೂ ಮನೀಶ್​ ಪಾಂಡೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. 96 ರನ್​ಗಳಿಸಿ ಆಡುವಾಗ ವಾರ್ನರ್​ ಔಟ್​ ಆದರು. ನಂತರ ಆಗಿದ್ದು ಮಾತ್ರ ಮ್ಯಾಜಿಕ್​.

17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಅಟ್ಯಾಕ್​ಗೆ ಇಳಿದರು. ಮೊದಲ ಬಾಲ್​ನಲ್ಲೇ ಜಾನಿ ಬೇರ್​ಸ್ಟೋ ಔಟ್​ ಆದರೆ, ನಂತರದ ಬಾಲ್​ನಲ್ಲಿ ಮನೀಶ್ ಪಾಂಡೆಯನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದೇ ಓವರ್​ನ ಕೊನೆಯ ಬಾಲ್​ಗೆ ಅಬ್ದುಲ್​ ಸಮಾದ್ ಔಟ್​ ಆದರು. ಒಂದೇ ಓವರ್​ನಲ್ಲಿ ಮೂರು ವಿಕೆಟ್​ ಕೀಳುವ ಮೂಲಕ ಶಹಬಾಜ್​ ತಂಡದ ಗತಿಯನ್ನೇ ಬದಲಿಸಿ ಬಿಟ್ಟರು. ಅಂತಿಮವಾಗಿ ಆರ್​ಸಿಬಿ 6 ರನ್​ಗಳ ಗೆಲುವು ಕಂಡಿತು. ಆರ್​ಸಿಬಿ ಪರ ಹರ್ಷಲ್​ ಪಟೇಲ್​ 2, ಮೊಹ್ಮದ್​ ಸಿರಾಜ್​ 2 ಹಾಗೂ ಜೇಮಿಸನ್​ ಒಂದು ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ: Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​

Published On - 11:34 pm, Wed, 14 April 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us