Shahrukh Khan IPL 2021 PBKS Team Player: ಮೊದಲ ಆವೃತ್ತಿಯಲ್ಲೇ ದುಬಾರಿ ಹಣ ಪಡೆದ ಶಾರುಕ್​ ಮೇಲೆ ಪಂಜಾಬ್ ಸಾಕಷ್ಟು ನಿರೀಕ್ಷೆ ಇಟ್ಟಿದೆ!

Shahrukh Khan Profile: ಶಾರುಕ್ ಖಾನ್ ಈ ಪಾಟಿ ಅಬ್ಬರಿಸುತ್ತಿರೋದ್ರಿಂದಲೇ, ಪಂಜಾಬ್ ತಂಡದ ಆಟಗಾರರು ಭಾರತದ ಕಿರಾನ್ ಪೊಲ್ಲಾರ್ಡ್ ಎಂದು ಕರೆಯುತ್ತಿದ್ದಾರೆ.

Shahrukh Khan IPL 2021 PBKS Team Player: ಮೊದಲ ಆವೃತ್ತಿಯಲ್ಲೇ ದುಬಾರಿ ಹಣ ಪಡೆದ ಶಾರುಕ್​ ಮೇಲೆ ಪಂಜಾಬ್ ಸಾಕಷ್ಟು ನಿರೀಕ್ಷೆ ಇಟ್ಟಿದೆ!
ಶಾರುಕ್ ಖಾನ್
Updated By: Skanda

Updated on: Apr 12, 2021 | 10:07 AM

ಶಾರುಕ್ ಖಾನ್ ಬಿಡ್ಡಿಂಗ್ಗೆ ಬಂದಿದ್ದೇ ತಡ.. ಪಂಜಾಬ್ ಕಿಂಗ್ಸ್ ತಂಡದ ಸಹ ಒಡತಿ ಪ್ರೀತಿ ಜಿಂಟಾ, ಕೋಟಿ ಮೇಲೆ ಕೋಟಿ ಕೂಗೋಕೆ ಶುರುಮಾಡಿದ್ರು. ಕಡೆಗೂ ಪಟ್ಟು ಸಡಿಲಿಸದ ಪ್ರೀತಿ ಜಿಂಟಾ, 20 ಲಕ್ಷ ಮೂಲ ಬೆಲೆಯ ಶಾರುಕ್ ಖಾನ್​ ಅವರನ್ನ ₹5.25 ಕೋಟಿಗೆ ಖರೀದಿ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದ ಪ್ರೀತಿ ಜಿಂಟಾ, ಬಾಲಿವುಡ್​ ಕಿಂಗ್ ಖಾನ್ಗೆ ಫೋನ್ ಹಚ್ಚಿಯೇ ಬಿಟ್ರು. ನೋಡಿ ನಿಮ್ಮನ್ನ ಖರೀದಿ ಮಾಡಿದ್ವಿ ಎಂದು ತಮಾಷೆ ಮಾಡಿದ್ರು. ಅದಾದ ನಂತರವೇ ಗೊತ್ತಾಗಿದ್ದು, ಶಾರುಕ್ ಖಾನ್ ತಮಿಳುನಾಡಿನ ಕ್ರಿಕೆಟಿಗ ಅನ್ನೋದು. ಇತ್ತ ತಮಿಳುನಾಡು ಕ್ರಿಕೆಟಿಗರೊಂದಿಗೆ ಟೀಮ್ ಬಸ್​ಲ್ಲಿದ್ದ ಶಾರುಕ್ ಖಾನ್, ತಾನು ₹5.25 ಕೋಟಿಗೆ ಬಿಕರಿಯಾಗಿದ್ದನ್ನ ನಂಬೋಕೆ ಸಾಧ್ಯವಾಗದೇ ದಿಗ್ಬ್ರಮೆಗೊಳಗಾಗಿದ್ದರು. ಇದೇ ಶಾರುಕ್ ಖಾನ್ ಈಗ ಐಪಿಎಲ್​ಗೂ ಮುನ್ನ ಹವಾ ಎಬ್ಬಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿಂಗ್
ಪಂಜಾಬ್ ಕಿಂಗ್ಸ್ ತಂಡ ಶಾರುಕ್​ ಅವರನ್ನು ತಮ್ಮ ತಂಡದಲ್ಲಿ ಫಿನಿಶರ್ ಬ್ಯಾಟ್ಸ್‌ಮನ್ ಆಗಿ ಸೇರಿಸಿಕೊಂಡಿದೆ. ಅದೇ ಸಮಯದಲ್ಲಿ, ಶಾರುಕ್ ತಮಿಳುನಾಡು ತಂಡದ ಪರವಾಗಿ ಕೆಳಮಟ್ಟದಲ್ಲಿ ಆಡುತ್ತಿದ್ದಾರೆ. ಈ ರೀತಿಯಾಗಿ, ಶಾರುಕ್ ದೇಶೀಯ ಕ್ರಿಕೆಟ್‌ನಲ್ಲಿ ಕೆಳ ಸ್ಥಾನದಲ್ಲಿ ಆಡುವ ಮೂಲಕ ಸಾಕಷ್ಟು ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಶಾರುಕ್ ಇದುವರೆಗೆ 31 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಅವರ 23 ಇನ್ನಿಂಗ್ಸ್‌ಗಳಲ್ಲಿ 7 ಬಾರಿ ​ಔಟ್​ಆಗದೆ ಒಟ್ಟು 293 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ದೇಶೀಯ ಟಿ 20 ಕ್ರಿಕೆಟ್‌ನಲ್ಲಿ ಒಟ್ಟು 16 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.

ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಹಿಮಾಚಲ ಪ್ರದೇಶ ವಿರುದ್ಧ 19 ಎಸೆತಗಳಲ್ಲಿ 40 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಶಾರುಕ್ ಖಾನ್ ಎಲ್ಲರ ಮನ ಗೆದ್ದರು. ಈ ಪಂದ್ಯದಲ್ಲಿ ಅವರು ಆರನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟವನ್ನು ಬಾಬಾ ಅಪರಾಜಿತ್ ಅವರೊಂದಿಗೆ ಹಂಚಿಕೊಂಡರು. ಟೂರ್ನಿಯ ಸೆಮಿಫೈನಲ್‌ಗೆ ತಮಿಳುನಾಡು ತಂಡವನ್ನು ತರುವಲ್ಲಿ ಶಾರುಕ್ ಪ್ರಮುಖ ಪಾತ್ರ ವಹಿಸಿದ್ದರು.

ವಿಂಡೀಸ್​ನ ಕಿರಾನ್ ಪೊಲ್ಲಾರ್ಡ್​ರಂತೆ​ ಶಾರುಕ್ ಖಾನ್!
ತಮಿಳುನಾಡಿನ 25 ವರ್ಷದ ಶಾರುಕ್ ಖಾನ್ ಪಂಜಾಬ್ ಕಿಂಗ್ಸ್ ಪಾಳಯವನ್ನ ಸೇರಿಕೊಂಡಿದ್ದೇ ತಡ, ತನ್ನ ದೈತ್ಯ ಬ್ಯಾಟಿಂಗ್​ನಿಂದ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ವೆಸ್ಟ್ ಇಂಡೀಸ್​ನ ದೈತ್ಯ ಕಿರಾನ್ ಪೊಲ್ಲಾರ್ಡ್​ರಂತೆ ಬಿಗ್ ಹಿಟ್ಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.

ಶಾರುಕ್ ಖಾನ್ ಈ ಪಾಟಿ ಅಬ್ಬರಿಸುತ್ತಿರೋದ್ರಿಂದಲೇ, ಪಂಜಾಬ್ ತಂಡದ ಆಟಗಾರರು ಭಾರತದ ಕಿರಾನ್ ಪೊಲ್ಲಾರ್ಡ್ ಎಂದು ಕರೆಯುತ್ತಿದ್ದಾರೆ. ಸ್ವತಃ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿರುವ ಅನಿಲ್ ಕುಂಬ್ಳೆ ಕೂಡ, ಶಾರುಕ್​ರನ್ನ ಭಾರತದ ಪೊಲ್ಲಾರ್ಡ್ ಎಂದು ಬಣ್ಣಿಸಿದ್ದರು.