U-20 World Athletics: ಲಾಂಗ್ ಜಂಪ್ನಲ್ಲಿ ಬೆಳ್ಳಿ ಗೆದ್ದ ಭಾರತದ ಶೈಲಿ ಸಿಂಗ್! ಕೂದಲೆಳೆ ಅಂತರದಲ್ಲಿ ಕೈತಪ್ಪಿದ ಚಿನ್ನ
U-20 World Athletics: ಶೆಲ್ಲಿ ಮೊದಲ ಸ್ಥಾನದಲ್ಲಿದ್ದರು ಆದರೆ ಸ್ವೀಡನ್‌ನ ಅಕ್ಸಾಗ್, ಶೈಲಿಗೂ ಮೀರಿ ಒಂದು ಮೀಟರ್ ಎತ್ತರಕ್ಕೆ ಜಿಗಿದು ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಚಿನ್ನದ ಪದಕ ಗೆದ್ದರು.
ಭಾರತದ ಮಹಿಳಾ ಲಾಂಗ್ ಜಂಪ್ ಆಟಗಾರ್ತಿ ಶೈಲಿ ಸಿಂಗ್ ಅವರು ಭಾನುವಾರ ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಪದಕ ಗೆದ್ದರು. ಈ ಸಮಯದಲ್ಲಿ ಅವರ ಅತ್ಯುತ್ತಮ ಜಂಪ್ 6.59 ಮೀಟರ್ ಆಗಿತ್ತು. ಮೊದಲ ಪ್ರಯತ್ನದಲ್ಲಿ ಶೈಲಿ 6.34 ಮೀಟರ್ ದೂರವನ್ನು ಕ್ರಮಿಸಿದರು. ಎರಡನೇ ಪ್ರಯತ್ನದಲ್ಲೂ ಅವರು ಅದೇ ದೂರಕ್ಕೆ ಜಿಗಿದರು. ಮೂರನೇ ಪ್ರಯತ್ನದಲ್ಲಿ, ಸ್ವಲ್ಪ ಸುಧಾರಿಸಿ 6.59 ಮೀಟರ್ ದೂರಕ್ಕೆ ಜಿಗಿದರು. ಇದರೊಂದಿಗೆ ಮೊದಲ ಸ್ಥಾನವೂ ಅವರದ್ದಾಗಿತ್ತು. ಆದರೆ ಮಜಾ ಅಕ್ಸಾಗ್ 6.60 ಮೀಟರ್ ಜಿಗಿಯುವ ಮೂಲಕ ತನ್ನ ಮುನ್ನಡೆ ಸಾಧಿಸಿದರು. ಕೊನೆಯ ಪ್ರಯತ್ನದಲ್ಲಿ, ಶೈಲಿ ಸಿಂಗ್ 6.36 ಮೀಟರ್ ಜಿಗಿದು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಚಾಂಪಿಯನ್‌ಶಿಪ್‌ನ ಪ್ರಸಕ್ತ ಋತುವಿನಲ್ಲಿ ಇದು ಭಾರತದ ಮೂರನೇ ಪದಕವಾಗಿದ್ದು ಒಟ್ಟಾರೆ ಏಳನೇ ಪದಕವಾಗಿದೆ.
ಈ ಮೊದಲು ಶೈಲಿ ಸಿಂಗ್ ಅರ್ಹತಾ ಸುತ್ತಿನಲ್ಲಿ ಉತ್ತಮ ಸಾಧನೆ ಮಾಡಿ ಫೈನಲ್‌ಗೆ ಪ್ರವೇಶಿಸಿದ್ದರು. ಶೈಲಿ ಅರ್ಹತಾ ಸುತ್ತಿನಲ್ಲಿ 6.40 ಮೀಟರ್ ಜಿಗಿದು ತನ್ನ ಎರಡೂ ಗುಂಪುಗಳಲ್ಲಿ ಪ್ರಥಮ ಸ್ಥಾನ ಪಡೆದರು. 20 ಆಗಸ್ಟ್ ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ, ಶೈಲಿ ತನ್ನ ಮೂರನೇ ಮತ್ತು ಅಂತಿಮ ಜಿಗಿತದದಲ್ಲಿ 6.40 ಮೀಟರ್ ಜಿಗಿದು ಅರ್ಹತೆ ಪಡೆದರು. ಸ್ವಯಂಚಾಲಿತ ಅರ್ಹತೆಗಾಗಿ, 6.35 ಮೀಟರ್ ದೂರವನ್ನು ಜಿಗಿಯುವುದು ಅಗತ್ಯವಾಗಿತ್ತು. ಮೊದಲ ಪ್ರಯತ್ನದಲ್ಲಿ ಅವರು 6.34 ಮೀಟರ್ ಜಿಗಿದಿದ್ದರೆ, ಎರಡನೇ ಜಿಗಿತದಲ್ಲಿ 5.98 ಮೀಟರ್ ದೂರ ಕ್ರಮಿಸಿದರು. ಕೊನೆಯ ಪ್ರಯತ್ನದಲ್ಲಿ, ಅಗತ್ಯ ದೂರವನ್ನು ಭದ್ರಪಡಿಸುವ ಮೂಲಕ ಶೈಲಿ ಮೊದಲ ಸ್ಥಾನವನ್ನು ಪಡೆದುಕೊಂಡರು.
Third medal for #India at the #WorldAthleticsU20
LONG JUMPER SHAILI SINGH WINSA SILVER MEDAL with a jump of 6.59m
European Champion Maja Askag of Sweden takes home Gold with a leap of 6.60m, a centimetre better!
Super proud of you #ShailiSingh, well done Champ! pic.twitter.com/hkAsQoiPTH
— Athletics Federation of India (@afiindia) August 22, 2021
ಸ್ವೀಡನ್ಗೆ ಚಿನ್ನದ ಪದಕ ಶೆಲ್ಲಿ ಮೊದಲ ಸ್ಥಾನದಲ್ಲಿದ್ದರು ಆದರೆ ಸ್ವೀಡನ್‌ನ ಅಕ್ಸಾಗ್, ಶೈಲಿಗೂ ಮೀರಿ ಒಂದು ಮೀಟರ್ ಎತ್ತರಕ್ಕೆ ಜಿಗಿದು ಅವರನ್ನು ಎರಡನೇ ಸ್ಥಾನಕ್ಕೆ ತಳ್ಳಿ ಚಿನ್ನದ ಪದಕ ಗೆದ್ದರು. ಉಕ್ರೇನ್‌ನ ಮರಿಯಾ ಹೊರಿಲೋವಾ 6.50 ಜಿಗಿತದೊಂದಿಗೆ ಕಂಚಿನ ಪದಕ ಪಡೆದರು.
Published On - 9:18 pm, Sun, 22 August 21