ASBC Youth & Junior Boxing Championships: ಎರಡನೇ ದಿನವೂ ಅಬ್ಬರಿಸಿ ಭಾರತೀಯ ಬಾಕ್ಸರ್‌ಗಳು; ನಾಲ್ಕು ಪದಕ ಖಚಿತ
ASBC Youth & Junior Boxing Championships: ಭಾರತದ ಯುವ ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ದಿನದಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು.
ಭಾರತದ ಯುವ ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಎರಡನೇ ದಿನದಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರು. ಜೊತೆಗೆ ಭಾನುವಾರ ನಾಲ್ಕು ಪದಕಗಳನ್ನು ಪಡೆದುಕೊಂಡಿದ್ದಾರೆ. ಬಿಸ್ವಾಮಿತ್ರಾ ಚೋಂಗ್ಥಮ್ (51 ಕೆಜಿ), ಅಭಿಮನ್ಯು ಲಾರಾ (92 ಕೆಜಿ), ದೀಪಕ್ (75 ಕೆಜಿ) ಮತ್ತು ಪ್ರೀತಿ (57 ಕೆಜಿ) ಸೆಮಿಫೈನಲ್‌ಗೆ ತಲುಪಿದರು ಮತ್ತು ಇದರೊಂದಿಗೆ ಅವರೆಲ್ಲರೂ ತಮ್ಮ ತಮ್ಮ ಪದಕಗಳನ್ನು ಖಚಿತಪಡಿಸಿಕೊಂಡರು. ಮೊದಲ ದಿನ ಭಾರತದ ರೋಹಿತ್ ಚಮೋಲಿ (48 ಕೆಜಿ), ಅಂಕುಶ್ (66 ಕೆಜಿ) ಮತ್ತು ಗೌರವ್ ಸೈನಿ (70 ಕೆಜಿ) ಸೆಮಿಫೈನಲ್ ತಲುಪಿದ್ದರು ಮತ್ತು ಮೂವರೂ ಪದಕಗಳನ್ನು ಖಚಿತ ಪಡಿಸಿದ್ದರು.
ವಿಶ್ವ ಯುವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ಬಿಸ್ವಾಮಿತ್ರಾ ಏಕಪಕ್ಷೀಯ ಸ್ಪರ್ಧೆಯಲ್ಲಿ ಕಜಕಿಸ್ತಾನದ ಕೆಂಜೆ ಮುರತುಲ್ ಅವರನ್ನು 5-0 ಅಂತರದಿಂದ ಸೋಲಿಸಿದರು. ಮಿಡಲ್ ವೇಟ್ ಕ್ವಾರ್ಟರ್ ಫೈನಲ್ನಲ್ಲಿ ದೀಪಕ್ ಆರಂಭದಿಂದಲೂ ಇರಾಕ್ನ ದುರ್ಗಮ್ ಕರೀಮ್ ವಿರುದ್ಧ ಪ್ರಾಬಲ್ಯ ಮೆರೆದರು. ಮೂರನೇ ಸುತ್ತಿನಲ್ಲಿ, ದೀಪಕ್ ಕರೀಮ್ಗೆ ದಾಳಿ ನಡೆಸಿದರು, ಕರೀಮ್ ನಂತರ ರೆಫರಿಯನ್ನು ಪಂದ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಅಭಿಮನ್ಯುಗೂ ಜಯ ರಾಷ್ಟ್ರೀಯ ಚಾಂಪಿಯನ್ ಹರಿಯಾಣದ ಅಭಿಮನ್ಯು ಕೂಡ ಏಕಪಕ್ಷೀಯ ಪಂದ್ಯದಲ್ಲಿ ಕಿರ್ಗಿಸ್ತಾನದ ಟೆನಿಬೆಕೊವ್ ಸಂಜರ್ ಅವರನ್ನು ಸೋಲಿಸುವ ಮೂಲಕ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆದರು. ಎರಡನೇ ಸುತ್ತಿನಲ್ಲೇ ಪಂದ್ಯವನ್ನು ನಿಲ್ಲಿಸಿದ ನಂತರ ರೆಫರಿ ಅಭಿಮನ್ಯುವನ್ನು ವಿಜೇತರಾಗಿ ಘೋಷಿಸಿದರು. ಮಹಿಳಾ ವಿಭಾಗದಲ್ಲಿ, ಪ್ರೀತಿ ಎರಡನೇ ಸುತ್ತಿನ ಪಂದ್ಯದಲ್ಲಿ ಮಂಗೋಲಿಯಾದ ತುಗ್‌ಜರ್ಗಲ್ ನಾಮಿನನ್ನು ಸೋಲಿಸಿ ಸೆಮಿಫೈನಲ್ ತಲುಪಿದರು. ಪ್ರೀತಿಯ ಪ್ರಾಬಲ್ಯವನ್ನು ಕಂಡು ರೆಫರಿ ಪಂದ್ಯವನ್ನು ನಿಲ್ಲಿಸಿ ಅವರನ್ನು ವಿಜೇತರಾಗಿ ಘೋಷಿಸಿದರು. ಮತ್ತೊಂದೆಡೆ, ಆದಿತ್ಯ ಜಂಘು (86 ಕೆಜಿ ತೂಕ ವಿಭಾಗ) ಎರಡನೇ ದಿನ ಸೋಲಿಸಲ್ಪಟ್ಟ ಏಕೈಕ ಭಾರತೀಯ ಬಾಕ್ಸರ್. ಕ್ವಾರ್ಟರ್ ಫೈನಲ್ನಲ್ಲಿ ಕಜಕಿಸ್ತಾನ ತಮೆರ್ಲಾನ್ ಮುಕಟಾಯೆವ್ ಕೈಯಲ್ಲಿ ಅವರು ಸೋಲನ್ನು ಎದುರಿಸಬೇಕಾಯಿತು.
6 ಭಾರತೀಯರು ಮೂರನೇ ದಿನ ಕಣಕ್ಕೆ ಇಳಿಯಲಿದ್ದಾರೆ ಆರು ಭಾರತೀಯ ಬಾಕ್ಸರ್‌ಗಳು ಮೂರನೇ ದಿನ ಸವಾಲನ್ನು ಎದುರಿಸಲಿದ್ದಾರೆ. ಕ್ರಿಶ್ ಪಾಲ್ (46 ಕೆಜಿ), ಆಶಿಶ್ (54 ಕೆಜಿ), ಅನ್ಶುಲ್ (57 ಕೆಜಿ), ಪ್ರೀತ್ ಮಲಿಕ್ (63 ಕೆಜಿ) ಮತ್ತು ಭರತ್ ಜೂನ್ (81 ಕೆಜಿಗಿಂತ ಮೇಲ್ಪಟ್ಟವರು) ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದರೆ, ಗೌರವ್ ಸೈನಿ (70 ಕೆಜಿ) ಕ್ವಾರ್ಟರ್ ಫೈನಲ್ ಪ್ರವೇಶಿಸಲಿದ್ದಾರೆ.
ಪ್ರಸ್ತುತ ಏಷ್ಯನ್ ಚಾಂಪಿಯನ್‌ಶಿಪ್ ಏಷ್ಯನ್ ಮಟ್ಟದಲ್ಲಿ ಉದಯೋನ್ಮುಖ ಯುವ ಪ್ರತಿಭಾನ್ವಿತ ಬಾಕ್ಸರ್‌ಗಳು ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ಎರಡು ವರ್ಷಗಳ ನಂತರ ಸ್ಪರ್ಧಾತ್ಮಕ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿದೆ. ಯುವ ವಯಸ್ಸಿನ ಚಿನ್ನದ ಪದಕ ವಿಜೇತರು $ 6,000 ಮತ್ತು ಬೆಳ್ಳಿ ಪದಕ ಮತ್ತು ಕಂಚಿನ ಪದಕ ವಿಜೇತರು ಕ್ರಮವಾಗಿ $ 3,000 ಮತ್ತು $ 1,500 ಪಡೆಯುತ್ತಾರೆ. ಜೂನಿಯರ್ ಚಾಂಪಿಯನ್‌ಶಿಪ್‌ನ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ವಿಜೇತರು ಕ್ರಮವಾಗಿ $ 4,000, 2,000 ಮತ್ತು $ 1,000 ರೂ ಪ್ರೋತ್ಸಾಹ ಧನ ಪಡೆಯುತ್ತಾರೆ.