Singapore Open 2022: ಸೆಮಿಫೈನಲ್‌ನಲ್ಲಿ ಸಿಂಧುಗೆ ಸುಲಭ ಜಯ; ಚಾಂಪಿಯನ್ ಪಟ್ಟಕ್ಕೇರಲು ಇನ್ನೊಂದೆ ಮೆಟ್ಟಿಲು ಬಾಕಿ

| Updated By: ಪೃಥ್ವಿಶಂಕರ

Updated on: Jul 16, 2022 | 2:36 PM

Singapore Open 2022: ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಶಟ್ಲರ್ ಪಿವಿ ಸಿಂಧು ಸಿಂಗಾಪುರ ಓಪನ್‌ನ ಫೈನಲ್‌ನಲ್ಲಿ ಕೆಳ ಶ್ರೇಯಾಂಕದ ಜಪಾನ್‌ನ ಸೈನಾ ಕವಾಕಮಿ ವಿರುದ್ಧ ಅದ್ಭುತ ಜಯ ಸಾಧಿಸಿದರು.

Singapore Open 2022: ಸೆಮಿಫೈನಲ್‌ನಲ್ಲಿ ಸಿಂಧುಗೆ ಸುಲಭ ಜಯ; ಚಾಂಪಿಯನ್ ಪಟ್ಟಕ್ಕೇರಲು ಇನ್ನೊಂದೆ ಮೆಟ್ಟಿಲು ಬಾಕಿ
ಪಿವಿ ಸಿಂಧು
Follow us on

ಶನಿವಾರ ನಡೆದ ಸಿಂಗಾಪುರ ಓಪನ್‌ನ(Singapore Open 2022) ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಶಟ್ಲರ್ ಪಿವಿ ಸಿಂಧು (PV Sindhu) ಕೆಳ ಶ್ರೇಯಾಂಕದ ಜಪಾನ್‌ನ ಸೈನಾ ಕವಾಕಮಿ ವಿರುದ್ಧ ಅದ್ಭುತ ಜಯ ಸಾಧಿಸಿದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾಗಿರುವ ಸಿಂಧು ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 32 ನಿಮಿಷಗಳ ಕಾಲ ನಡೆದ ಸೆಮಿಫೈನಲ್‌ನಲ್ಲಿ ಅವರು 21-15, 21-7 ಅಂತರದ ಜಯ ದಾಖಲಿಸಿದರು. ಈಗ ಅವರು 2022 ರ ಸೀಸನ್​ನ ತನ್ನ ಮೊದಲ ಸೂಪರ್ 500 ಪ್ರಶಸ್ತಿಯಿಂದ ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ.

ಸಿಂಧು ಅದ್ಭುತ ಆಟ

ಜಪಾನ್ ಆಟಗಾರ್ತಿಯ ವಿರುದ್ಧ ಸಿಂಧು ಅವರ ಪೂರ್ವ-ಪಂದ್ಯದ ಗೆಲುವಿನ ದಾಖಲೆ 2-0 ಆಗಿತ್ತು. ಇಬ್ಬರ ನಡುವಿನ ಕೊನೆಯ ಪಂದ್ಯವು 2018 ರ ಚೀನಾ ಓಪನ್‌ನಲ್ಲಿ ನಡೆದಿತ್ತು. ಮಾಜಿ ವಿಶ್ವ ಚಾಂಪಿಯನ್ ಸಿಂಧು ವಿಶ್ವದ 38ನೇ ಶ್ರೇಯಾಂಕಿತ ಕವಾಕಮಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು. ಈ ಏಕಪಕ್ಷೀಯ ಪಂದ್ಯದಲ್ಲಿ ಕವಾಕಮಿ ಹಲವು ತಪ್ಪುಗಳನ್ನು ಮಾಡಿದರು. ಸಿಂಧು ಆರಂಭದಿಂದಲೇ ಪ್ರಬಲ ಸ್ಮ್ಯಾಷ್‌ಗಳೊಂದಿಗೆ ಆರಂಭಿಸಿದರು ಮತ್ತು ವಿರಾಮದವರೆಗೂ ಭಾರತದ ಆಟಗಾರ್ತಿ ಮೂರು ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು.

ಇದನ್ನೂ ಓದಿ
BCCI: ಗಂಗೂಲಿ-ಜೈ ಶಾ ಅಧಿಕಾರಾವಧಿ ಮತ್ತೆ ವಿಸ್ತರಣೆ? ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬಿಸಿಸಿಐ
Cristiano Ronaldo: ಅಬ್ಬಬ್ಬಾ…! ರೊನಾಲ್ಡೊ ಒಂದು ಸಹಿಯಿಂದ ಗಳಿಸುವ ಆದಾಯ ಬರೋಬ್ಬರಿ 2400 ಕೋಟಿ..!
Singapore Open: ಭಾರತಕ್ಕೆ ಸಿಹಿ- ಕಹಿ; ಸೆಮಿಫೈನಲ್‌ಗೆ ಸಿಂಧು ಎಂಟ್ರಿ! ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ಸೈನಾ

ಸಿಂಧು ಸ್ಮ್ಯಾಶ್‌ಗೆ ಅವರ ಬಳಿ ಉತ್ತರವಿರಲಿಲ್ಲ

ಈ ಅವಧಿಯಲ್ಲಿ ಸಿಂಧು ಎರಡು ವಿಡಿಯೋ ರೆಫರಲ್‌ಗಳನ್ನು ಗೆದ್ದು 18-14ಕ್ಕೆ ಮುನ್ನಡೆದರು. ನಂತರ ಕವಾಕಮಿ ಅವರ ಪ್ರಬಲ ಸ್ಮ್ಯಾಶ್ ಮತ್ತು ಎರಡು ಸರಳ ತಪ್ಪುಗಳು ಸಿಂಧು ಆರಂಭಿಕ ಗೇಮ್ ಅನ್ನು ಸುಲಭವಾಗಿ ಗೆಲ್ಲಲು ನೆರವಾದವು. ಕವಾಕಮಿ ಅವರ ಹೋರಾಟವು ಎರಡನೇ ಗೇಮ್‌ನಲ್ಲಿ ಮುಂದುವರಿಯಿತು, ಆದರೆ ಸಿಂಧು ತಂತ್ರವನ್ನು ಅರಿಯಲು ಸಾಧ್ಯವಾಗದೆ 0-5 ಇಂದ ಹಿನ್ನಡೆ ಅಅನುಭವಿಸಿದರು. 11-4ರ ವಿರಾಮದ ನಂತರ ಸಿಂಧು 17-5 ರಿಂದ ಮುನ್ನಡೆ ಸಾಧಿಸಿದರು. ಸಿಂಧು ಅವರ ಫೋರ್‌ಹ್ಯಾಂಡ್‌ಗೆ ಜಪಾನ್ ಆಟಗಾರ್ತಿಯ ಬಳಿ ಉತ್ತರವಿರಲಿಲ್ಲ, ಇದು ಭಾರತದ ಆಟಗಾರ್ತಿ 19-6 ಮುನ್ನಡೆ ಸಾಧಿಸಲು ಅನುವು ಮಾಡಿಕೊಟ್ಟಿತು.

ಕಾಮನ್‌ವೆಲ್ತ್ ಗೇಮ್ಸ್‌ಗೂ ಮುನ್ನ ಸಿಂಧು ಗೆಲುವು ಬಹಳ ಮುಖ್ಯ

ಸಿಂಗಾಪುರ ಓಪನ್ ಸೂಪರ್ 500 ಟೂರ್ನಿಯ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯದಲ್ಲಿ ಚೀನಾದ ಹಾನ್ ಯುಯಿ ಅವರನ್ನು ಸೋಲಿಸುವ ಮೂಲಕ ಪಿವಿ ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದರು. 17. 21, 21 ಸೆಟ್‌ಗಳನ್ನು ಕಳೆದುಕೊಂಡ ನಂತರ ವಿಶ್ವದ 7 ನೇ ಶ್ರೇಯಾಂಕದ ಆಟಗಾರ್ತಿ ಬಳಿಕ 11, 21 19ರಿಂದ ಪಂದ್ಯ ಗೆದ್ದರು. ಸಿಂಧು ಮೇನಲ್ಲಿ ಥಾಯ್ಲೆಂಡ್ ಓಪನ್ ನಂತರ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದಾರೆ. ಈಗ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ಸಿಂದು ಪ್ರಶಸ್ತಿ ಗೆಲ್ಲಬಹುದೇ ಎಂಬುದನ್ನು ಕಾದು ನೋಡಬೇಕಿದೆ.

Published On - 2:26 pm, Sat, 16 July 22