BCCI: ಗಂಗೂಲಿ-ಜೈ ಶಾ ಅಧಿಕಾರಾವಧಿ ಮತ್ತೆ ವಿಸ್ತರಣೆ? ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಬಿಸಿಸಿಐ
BCCI: ಬಿಸಿಸಿಐ 2019 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು, ಇದರಲ್ಲಿ ಬಿಸಿಸಿಐನ ಸಂವಿಧಾನವನ್ನು ತಿದ್ದುಪಡಿ ಮಾಡಲು ಮನವಿ ಮಾಡಲಾಗಿತ್ತು. ಈ ಮನವಿಯಲ್ಲಿ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳ ಕೂಲಿಂಗ್ ಆಫ್ ಅವಧಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇತ್ತು.
ಸದ್ಯ ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಸರಣಿಯ ಎರಡನೇ ಪಂದ್ಯ ಗುರುವಾರ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಿತು. ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಕೂಡ ಪಂದ್ಯ ವೀಕ್ಷಿಸಲು ಬಂದಿದ್ದರು. ಒಂದೆಡೆ ಗಂಗೂಲಿ ಲಂಡನ್‌ನಲ್ಲಿ ಕಾಲ ಕಳೆಯುತ್ತಿದ್ದರೆ, ಮತ್ತೊಂದೆಡೆ ಅವರ ಮಂಡಳಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮಂಡಳಿಯು ತನ್ನ ಅರ್ಜಿಯನ್ನು ಶೀಘ್ರವೇ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಬಿಸಿಸಿಐನ ಸಂವಿಧಾನದಲ್ಲಿ ಅಗತ್ಯ ಬದಲಾವಣೆಗಳನ್ನು ಕೇಳಲಾಗಿದೆ. ವಿಶೇಷವಾಗಿ ಜಯ್ ಶಾ (Jay Shah) ಮತ್ತು ಸೌರವ್ ಗಂಗೂಲಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಈ ಮನವಿಯನ್ನು ಮಾಡಲಾಗಿದೆ.
ಮುಂದಿನ ವಾರ ವಿಚಾರಣೆಗೆ ತೀರ್ಮಾನವಾಗಲಿದೆ
ಹಿರಿಯ ವಕೀಲ ಪಿಎಸ್ ಪಟ್ವಾಲಿಯಾ ಅವರು ಬಿಸಿಸಿಐನ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ರಾಮಣ್ಣ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರ ಮುಂದೆ ಸಲ್ಲಿಸಿದರು. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ವಿಚಾರಣೆಗೆ ಕಾಯುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಾಮಣ್ಣ, ‘ನಾವು ಮಾಡಬಹುದೇ ಅಥವಾ ಇಲ್ಲವೇ ಎಂಬುದನ್ನು ಮುಂದಿನ ವಾರ ನೋಡೋಣ’ ಎಂದರು. ಬಿಸಿಸಿಐ 2019 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು, ಇದರಲ್ಲಿ ಬಿಸಿಸಿಐನ ಸಂವಿಧಾನವನ್ನು ತಿದ್ದುಪಡಿ ಮಾಡಲು ಮನವಿ ಮಾಡಲಾಗಿತ್ತು. ಈ ಮನವಿಯಲ್ಲಿ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳ ಕೂಲಿಂಗ್ ಆಫ್ ಅವಧಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇತ್ತು. ಇದಲ್ಲದೇ ಸಂವಿಧಾನಕ್ಕೆ ಸಂಬಂಧಿಸಿದ ಇತರ ಕೆಲವು ನಿಯಮಗಳ ಬದಲಾವಣೆಗೂ ಅನುಮತಿ ಕೋರಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಈ ಬಾರಿ ಯಾವುದೇ ವಿಚಾರಣೆ ನಡೆದಿಲ್ಲ.
ಗಂಗೂಲಿ ಮತ್ತು ಜಯ್ ಶಾ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ
ಅಕ್ಟೋಬರ್ 2019 ರಲ್ಲಿ, ಸೌರವ್ ಗಂಗೂಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು ಮತ್ತು ಜಯ್ ಶಾ ಅವರು ಮಂಡಳಿಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. 2020 ರಲ್ಲಿ, ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಗಲಿಲ್ಲ. ಈ ಕಾರಣದಿಂದಾಗಿ ಸೌರವ್ ಗಂಗೂಲಿ ಅವರ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲಾಯಿತು. ಅವರ ಅಧಿಕಾರಾವಧಿಯು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳುತ್ತದೆ. ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಸತತ ಆರು ವರ್ಷ ಕೆಲಸ ಮಾಡಿದ ಅಧಿಕಾರಿಗಳು ಕೂಲಿಂಗ್ ಆಫ್ ಪೀರಿಯಡ್ ಕಾನೂನಿನ ಪ್ರಕಾರ ಮುಂದಿನ 3 ವರ್ಷ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಕೆಲಸ ನಿರ್ವಹಿಸುವಂತಿಲ್ಲ.
BCCI ಗಿಂತ ಮೊದಲು, ಜಯ್ ಶಾ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದರು, ಆದರೆ ಸೌರವ್ ಗಂಗೂಲಿ CAB ಅಧ್ಯಕ್ಷರಾಗಿದ್ದರು. ಇಬ್ಬರ ಆರು ವರ್ಷಗಳು ಸೆಪ್ಟೆಂಬರ್ 2022 ರಲ್ಲಿ ಕೊನೆಗೊಳ್ಳುತ್ತಿವೆ. ಈ ನಿಯಮವನ್ನು ಬದಲಾಯಿಸಲು ಮಂಡಳಿಯು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು ಇದರಿಂದ ಇಬ್ಬರ ಅಧಿಕಾರಾವಧಿಯನ್ನು ವಿಸ್ತರಿಸಬಹುದು. ಗಂಗೂಲಿ ಸದ್ಯ ಲಂಡನ್‌ನಲ್ಲಿದ್ದಾರೆ. ಇಲ್ಲಿ ಗಂಗೂಲಿ ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಅವರೊಂದಿಗೆ ಅವರ ಕುಟುಂಬ ಮತ್ತು ಹಳೆಯ ಸ್ನೇಹಿತರು ಹಾಗೂ ಸಚಿನ್ ತೆಂಡೂಲ್ಕರ್ ಮತ್ತು ಜಯ್ ಶಾ ಉಪಸ್ಥಿತರಿದ್ದರು.